ದೇಶ
India ದ ರಾಜಕಾರಣವನ್ನು ತಲೆಕೆಳಗಾಗಿಸಲಿರುವ Gen-Z!
ನವದೆಹಲಿ: India ದ ರಾಜಕೀಯದಲ್ಲಿ ಹೊಸ ಯುಗ ಆರಂಭವಾಗುವ ಸೂಚನೆಗಳು ಗೋಚರಿಸುತ್ತಿವೆ. ಉದ್ಯೋಗ, ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ತನ್ನ ಪ್ರಭಾವವನ್ನು ತೋರಿಸುತ್ತಿದ್ದ Gen-Z ಈಗ ರಾಜಕೀಯದಲ್ಲೂ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. 2029ರ ಲೋಕಸಭೆ ಚುನಾವಣೆಯ ವೇಳೆಗೆ ಸುಮಾರು 40 ಕೋಟಿ ಯುವ ಮತದಾರರು ದೇಶದ ರಾಜಕೀಯ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿರಲಿದ್ದಾರೆ ಎಂಬ ವಿಶ್ಲೇಷಣೆಗಳು ಗಮನ ಸೆಳೆಯುತ್ತಿವೆ.
ಭಾರತ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ 14ರಿಂದ 29 ವರ್ಷದೊಳಗಿನ ಸುಮಾರು 39.1 Crores ಯುವಕರು ಇದ್ದಾರೆ. ಕೆಲವು ಅಂತರರಾಷ್ಟ್ರೀಯ ಅಧ್ಯಯನಗಳ ಪ್ರಕಾರ ಈ ಸಂಖ್ಯೆ 40.7 ಕೋಟಿ (407 Million) ತಲುಪಿದೆ. ಈ ಸಂಖ್ಯೆಯು ಜಗತ್ತಿನ ಯಾವುದೇ ದೇಶಕ್ಕಿಂತ ಹೆಚ್ಚಾಗಿದೆ. ಹೀಗಾಗಿ ಯುವ ಮತದಾರರನ್ನು ಸೆಳೆಯುವುದು 2029ರ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಪ್ರಮುಖ ಸವಾಲಾಗಲಿದೆ.
ಜೆನ್-ಜಿ ಜನಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ, ಚೀನಾ 26.4 ಕೋಟಿ, ಪಾಕಿಸ್ತಾನ 7.9 ಕೋಟಿ, ಅಮೆರಿಕ 7.3 ಕೋಟಿ, ಬಾಂಗ್ಲಾದೇಶ 5.2 ಕೋಟಿ ಹಾಗೂ ರಷ್ಯಾ 2.5 ಕೋಟಿ ಯುವ ಮತದಾರರನ್ನು ಹೊಂದಿವೆ. ಒಟ್ಟು ಸಂಖ್ಯೆಯಲ್ಲಿ ಭಾರತವೇ ವಿಶ್ವದ ಅತಿದೊಡ್ಡ ಯುವ ರಾಷ್ಟ್ರವಾಗಿ ಗುರುತಿಸಿಕೊಂಡಿದೆ.
ರಾಜ್ಯವಾರು ಅಂಕಿಅಂಶಗಳ ಪ್ರಕಾರ ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ದೇಶದ ಒಟ್ಟು ಜೆನ್-ಜಿ ಮತದಾರರ ಸುಮಾರು 37 ಶೇಕಡಾ ಜನಸಂಖ್ಯೆ ವಾಸಿಸುತ್ತಿದೆ. ಈ ಮೂರು ರಾಜ್ಯಗಳ ವ್ಯಾಪ್ತಿಯಲ್ಲೇ 234 ಲೋಕಸಭಾ ಕ್ಷೇತ್ರಗಳು ಇರುವುದರಿಂದ, ಯುವ ಮತದಾರರ ನಿರ್ಧಾರ ರಾಷ್ಟ್ರ ರಾಜಕೀಯದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ಇನ್ನೂ ಏಳು ರಾಜ್ಯಗಳಲ್ಲಿ ಸುಮಾರು 30 ಶೇಕಡಾ ಜೆನ್-ಜಿ ಮತದಾರರಿದ್ದು, ಒಟ್ಟು 212 ಲೋಕಸಭಾ ಕ್ಷೇತ್ರಗಳು ಈ ಪ್ರದೇಶಗಳಿಗೆ ಸೇರಿವೆ. ಮತ್ತೊಂದೆಡೆ, ಕೇರಳ (22.2%) ಮತ್ತು ತಮಿಳುನಾಡು (22.6%) ರಾಜ್ಯಗಳಲ್ಲಿ ಜೆನ್-ಜಿ ಮತದಾರರ ಪ್ರಮಾಣ ದೇಶದಲ್ಲೇ ಕಡಿಮೆ ಇದೆ.
ದಕ್ಷಿಣ ಭಾರತದಲ್ಲೂ ಯುವ ಮತದಾರರ ಸಂಖ್ಯೆ ಗಮನಾರ್ಹವಾಗಿದೆ. ಕರ್ನಾಟಕದಲ್ಲಿ ಸುಮಾರು 1.7 ಕೋಟಿ, ತಮಿಳುನಾಡಿನಲ್ಲಿ 1.8 ಕೋಟಿ, ಆಂಧ್ರಪ್ರದೇಶದಲ್ಲಿ 1.3 ಕೋಟಿ, ತೆಲಂಗಾಣದಲ್ಲಿ 1 ಕೋಟಿ ಹಾಗೂ ಕೇರಳದಲ್ಲಿ 80 ಲಕ್ಷ ಜೆನ್-ಜಿ ಯುವಕರು ಇದ್ದಾರೆ. ಈ ಕಾರಣದಿಂದ ದಕ್ಷಿಣ ರಾಜ್ಯಗಳಲ್ಲಿಯೂ ರಾಜಕೀಯ ಪಕ್ಷಗಳು ಯುವಜನರನ್ನು ಸೆಳೆಯುವ ತಂತ್ರಗಳಿಗೆ ಹೆಚ್ಚಿನ ಒತ್ತು ನೀಡುತ್ತಿವೆ.
ತಜ್ಞರ ಅಭಿಪ್ರಾಯದಂತೆ, ಜೆನ್-ಜಿ ಮತದಾರರು ಉದ್ಯೋಗ, ಶಿಕ್ಷಣ, ಸ್ಟಾರ್ಟ್‌ಅಪ್‌ಗಳು, ಡಿಜಿಟಲ್ ಆರ್ಥಿಕತೆ, ಪರಿಸರ ಸಂರಕ್ಷಣೆ, ಸಾಮಾಜಿಕ ನ್ಯಾಯ ಹಾಗೂ ತಂತ್ರಜ್ಞಾನ ಆಧಾರಿತ ಆಡಳಿತದಂತಹ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಆದ್ದರಿಂದ ಮುಂಬರುವ ಚುನಾವಣೆಗಳಲ್ಲಿ ಸಾಂಪ್ರದಾಯಿಕ ರಾಜಕೀಯದ ಜೊತೆಗೆ ಯುವಕೇಂದ್ರಿತ ನೀತಿಗಳೇ ಪಕ್ಷಗಳ ಯಶಸ್ಸಿನ ಪ್ರಮುಖ ಅಸ್ತ್ರವಾಗುವ ಸಾಧ್ಯತೆ ಇದೆ.
ಸ್ವಾಮಿ ವಿವೇಕಾನಂದರು ಯುವಜನತೆಗೆ ನೀಡಿದ್ದ “ಏಳಿ, ಎದ್ದೇಳಿ” ಎಂಬ ಸಂದೇಶ ಇಂದಿನ ರಾಜಕೀಯ ವಾತಾವರಣದಲ್ಲೂ ಹೊಸ ಅರ್ಥ ಪಡೆದುಕೊಳ್ಳುತ್ತಿದೆ. 2029ರ ಲೋಕಸಭೆ ಚುನಾವಣೆಯಲ್ಲಿ ಜೆನ್-ಜಿ ಮತದಾರರ ನಿರ್ಧಾರವೇ ದೇಶದ ಮುಂದಿನ ರಾಜಕೀಯ ಚಿತ್ರಣವನ್ನು ರೂಪಿಸಬಹುದೇ ಎಂಬ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ.
ಬೆಂಗಳೂರು
Bengaluru ಸ್ವಚ್ಛತೆಗೆ ಹೊಸ ಪ್ಲ್ಯಾನ್? 5 ನಗರ ಪಾಲಿಕೆಗಳಿಗೆ ಅಧಿಕಾರ ಹಂಚಿಕೆ ಯಾಕೆ?
ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ (GBA) ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಮಹತ್ವದ ಆಡಳಿತಾತ್ಮಕ ಬದಲಾವಣೆಯನ್ನು ಜಾರಿಗೆ ತರಲಾಗಿದೆ. ಘನತ್ಯಾಜ್ಯದ ಪ್ರಾಥಮಿಕ ಸಂಗ್ರಹಣೆ ಮತ್ತು ಸಾಗಣೆ ಜವಾಬ್ದಾರಿಯನ್ನು ಐದು ನಗರ ಪಾಲಿಕೆಗಳು ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ (BSWML) ನಡುವೆ ಹಂಚಿಕೆ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಜಿಬಿಎ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಬಿಬಿಎಂಪಿ (BBMP) ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಘನತ್ಯಾಜ್ಯ ನಿರ್ವಹಣೆಯ ಸಂಪೂರ್ಣ ಹೊಣೆಗಾರಿಕೆಯನ್ನು ಪಾಲಿಕೆಯೇ ನಿರ್ವಹಿಸುತ್ತಿತ್ತು. ನಂತರ ಗ್ರೇಟರ್ ಬೆಂಗಳೂರು ಆಡಳಿತ (GBA) ರಚನೆಯಾದ ಬಳಿಕ ಈ ಜವಾಬ್ದಾರಿಯನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮಕ್ಕೆ (BSWML) ವಹಿಸಲಾಗಿತ್ತು. ಇದೀಗ ಹೊಸ ಆದೇಶದಂತೆ, ಘನತ್ಯಾಜ್ಯ ನಿರ್ವಹಣಾ ಉಪಕರ (SWM Cess) ಹಾಗೂ ಬಳಕೆದಾರರ ಸೇವಾ ಶುಲ್ಕವನ್ನು ನಗರ ಪಾಲಿಕೆಗಳೇ ಸಂಗ್ರಹಿಸುತ್ತಿರುವುದರಿಂದ, ಕಾರ್ಯನಿರ್ವಹಣೆಯ ಹೊಣೆಗಾರಿಕೆಯನ್ನೂ ಸಮಾನವಾಗಿ ಹಂಚಿಕೆ ಮಾಡಲಾಗಿದೆ.
ಪಾಲಿಕೆಗಳೇ ಭರಿಸಲಿವೆ ಬಿಲ್ ವೆಚ್ಚ
ಹೊಸ ವ್ಯವಸ್ಥೆಯಡಿ ನಗರ ಪಾಲಿಕೆಗಳು ಸಂಗ್ರಹಿಸುವ SWM ಸೆಸ್ ಮತ್ತು ಸೇವಾ ಶುಲ್ಕದಿಂದಲೇ ಮಾಸಿಕ ಕಾರ್ಯಾಚರಣೆ ಬಿಲ್‌ಗಳನ್ನು ಪಾವತಿಸಬೇಕಾಗುತ್ತದೆ. ಇದರಿಂದ ಆರ್ಥಿಕ ಹೊಣೆಗಾರಿಕೆಯೂ ಪಾಲಿಕೆಗಳ ಮೇಲೆಯೇ ಹೆಚ್ಚಾಗಿ ಕೇಂದ್ರೀಕರಿಸಲಾಗುತ್ತದೆ.
ಜಂಟಿ ಆಯುಕ್ತ ಮಟ್ಟದ ಅಧಿಕಾರಿಗಳ ನೇಮಕ
ಈ ಕಾರ್ಯದ ಸಮರ್ಪಕ ನಿರ್ವಹಣೆಗಾಗಿ ಪ್ರತಿಯೊಂದು ನಗರ ಪಾಲಿಕೆಯಲ್ಲಿ ಜಂಟಿ ಆಯುಕ್ತರ ಹುದ್ದೆಗಿಂತ ಕಡಿಮೆಯಿಲ್ಲದ ಅಧಿಕಾರಿಯನ್ನು ಕಾರ್ಯಾಚರಣೆ, ಮೇಲ್ವಿಚಾರಣೆ ಮತ್ತು ಬಿಲ್ ಪಾವತಿ ಜವಾಬ್ದಾರಿಗಾಗಿ ನೇಮಕ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಇನ್ನೊಂದೆಡೆ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ (BSWML) ತನ್ನ ಸ್ವಂತ ಸಂಪನ್ಮೂಲಗಳನ್ನು ಬಳಸಿ ಪ್ರಾಥಮಿಕ ಸಂಗ್ರಹಣೆ ಹಾಗೂ ದ್ವಿತೀಯ ಹಂತದ ತ್ಯಾಜ್ಯ ಸಾಗಣೆ ಕಾರ್ಯಾಚರಣೆಯನ್ನು ಮುಂದುವರಿಸಲಿದೆ.
ಆರೋಗ್ಯ ಮತ್ತು ನೈರ್ಮಲ್ಯ ಸಿಬ್ಬಂದಿಗೆ ಹೊಸ ಆಡಳಿತ ವ್ಯವಸ್ಥೆ
ಆಯಾ ನಗರ ಪಾಲಿಕೆಗಳ ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ಆರೋಗ್ಯ ಮೇಲ್ವಿಚಾರಕರು, ಹಿರಿಯ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕರು, ಮಾರ್ಷಲ್‌ಗಳು, ಸಂಪರ್ಕ ಕಾರ್ಯಕರ್ತೆಯರು ಮತ್ತು ಸಮುದಾಯ ಸಂಚಾಲಕರು ಇನ್ನು ಮುಂದೆ ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಅಥವಾ ಕಾರ್ಯಪಾಲಕ ಅಭಿಯಂತರರ ಅಧೀನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ತ್ಯಾಜ್ಯ ನಿರ್ವಹಣೆಗೆ ಹೊಸ ದಿಕ್ಕು
ಈ ಹೊಸ ಆಡಳಿತ ವ್ಯವಸ್ಥೆಯಿಂದ ಘನತ್ಯಾಜ್ಯ ನಿರ್ವಹಣೆಯಲ್ಲಿ ಜವಾಬ್ದಾರಿಗಳ ಸ್ಪಷ್ಟ ಹಂಚಿಕೆ ಸಾಧ್ಯವಾಗಲಿದ್ದು, ನಗರ ಸ್ವಚ್ಛತೆ, ಸೇವೆಗಳ ವೇಗ ಹಾಗೂ ಹಣಕಾಸು ನಿರ್ವಹಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆ ಬರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ರಾಜ್ಯ
BIG NEWS Karnataka Cabinet Expansion 2026 ಶಾಸಕರಿಗೆ ಸಚಿವ ಸ್ಥಾನ; ಟಿ.ಬಿ. ಜಯಚಂದ್ರ ಸ್ಪೀಕರ್, ಇಂದು ಪ್ರಮಾಣವಚನ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದ D K Shiv Kumar ನೇತೃತ್ವದ Karnataka Cabinet Expansion 2026 ಗೆ ಕೊನೆಗೂ ತೆರೆ ಬಿದ್ದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ಅಂತಿಮ ಪಟ್ಟಿ ಅನುಮೋದನೆಗೊಂಡಿದೆ. ಈ ಹಿನ್ನೆಲೆಯಲ್ಲಿ 20 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದರ ಜೊತೆಗೆ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಸ್ಥಾನಕ್ಕೆ ಆರ್.ವಿ. ದೇಶಪಾಂಡೆ ಹಾಗೂ ದಿನೇಶ್ ಗುಂಡೂರಾವ್ ಅವರ ಹೆಸರುಗಳೂ ಕೇಳಿಬಂದಿದ್ದರೂ, ಅಂತಿಮವಾಗಿ ಹೈಕಮಾಂಡ್ ಟಿ.ಬಿ. ಜಯಚಂದ್ರ ಅವರಿಗೆ ಅವಕಾಶ ನೀಡಿದೆ.
ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ರಾಜ್ಯಪಾಲರ ಸಮ್ಮುಖದಲ್ಲಿ ಸಚಿವರು ಅಧಿಕಾರ ಸ್ವೀಕರಿಸಲಿದ್ದಾರೆ.
ಸಚಿವ ಸಂಪುಟ ಸೇರಿರುವ 20 ನಾಯಕರು
ಸಚಿವ ಸ್ಥಾನ ಪಡೆದಿರುವವರಲ್ಲಿ ಲಕ್ಷ್ಮಣ ಸವದಿ (ಅಥಣಿ), ಎಚ್.ಸಿ. ಬಾಲಕೃಷ್ಣ (ಮಾಗಡಿ), ವಿಜಯಾನಂದ ಕಾಶಪ್ಪನವರ್ (ಹುನಗುಂದ), ಶಿವರಾಜ್ ತಂಗಡಗಿ (ಕನಕಗಿರಿ), ಎಸ್.ಎಸ್. ಮಲ್ಲಿಕಾರ್ಜುನ (ದಾವಣಗೆರೆ ಉತ್ತರ), ಪುಟ್ಟರಂಗಶೆಟ್ಟಿ (ಚಾಮರಾಜನಗರ), ಸಂತೋಷ್ ಲಾಡ್ (ಕಲಘಟಗಿ), ಡಾ. ಅಜಯ್ ಸಿಂಗ್ (ಜೇವರ್ಗಿ), ಗಾಯತ್ರಿ ಶಾಂತೇಗೌಡ (ಮೇಲ್ಮನೆ ಸದಸ್ಯೆ), ರಿಜ್ವಾನ್ ಅರ್ಷದ್ (ಶಿವಾಜಿನಗರ), ಜಮೀರ್ ಅಹ್ಮದ್ ಖಾನ್ (ಚಾಮರಾಜಪೇಟೆ), ರುದ್ರಪ್ಪ ಲಮಾಣಿ, ಶಿವಲಿಂಗೇಗೌಡ (ಅರಸೀಕೆರೆ), ಚೆಲುವರಾಯಸ್ವಾಮಿ (ನಾಗಮಂಗಲ), ಬಸವರಾಜ ರಾಯರೆಡ್ಡಿ (ಯಲಬುರ್ಗಾ), ಟಿ. ರಘುಮೂರ್ತಿ (ಚಳ್ಳಕೆರೆ), ಬಿ. ನಾಗೇಂದ್ರ (ಬಳ್ಳಾರಿ ಗ್ರಾಮೀಣ), ಮಂಕಾಳು ವೈದ್ಯ, ಬಸವಂತಪ್ಪ (ಮಾಯಕೊಂಡ) ಹಾಗೂ ಮಧು ಬಂಗಾರಪ್ಪ (ಸೊರಬ) ಸೇರಿದ್ದಾರೆ.
ಪ್ರಾದೇಶಿಕ ಮತ್ತು ಸಾಮಾಜಿಕ ಸಮತೋಲನಕ್ಕೆ ಒತ್ತು
ಈ ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ, ಕಲ್ಯಾಣ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಜೊತೆಗೆ ವಿವಿಧ ಸಮುದಾಯಗಳಿಗೆ ಸಮಾನ ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ಸಮತೋಲನ ಕಾಯ್ದುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಪ್ರಯತ್ನಿಸಿದೆ ಎನ್ನಲಾಗಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಹೊಸ ಬಲ
ಸಚಿವ ಸಂಪುಟ ವಿಸ್ತರಣೆಯೊಂದಿಗೆ ಆಡಳಿತಕ್ಕೆ ಹೊಸ ಚೈತನ್ಯ ಸಿಗುವ ನಿರೀಕ್ಷೆಯಿದ್ದು, ವಿವಿಧ ಇಲಾಖೆಗಳ ಜವಾಬ್ದಾರಿಗಳನ್ನು ಶೀಘ್ರದಲ್ಲೇ ಹಂಚಿಕೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಆಡಳಿತದ ವೇಗ ಹೆಚ್ಚಿಸುವ ಜೊತೆಗೆ ಅಭಿವೃದ್ಧಿ ಯೋಜನೆಗಳಿಗೆ ಹೊಸ ಉತ್ತೇಜನ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ.
ದೇಶ
SIIMA 2026ಕ್ಕೆ ಕೌಂಟ್‌ಡೌನ್! ಬೆಂಗಳೂರಿನಲ್ಲಿ ಅದ್ಧೂರಿ ಘೋಷಣೆ – ಶ್ರೀಮುರಳಿ ಹೇಳಿದ್ದೇನು?
ಬೆಂಗಳೂರು: ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭಗಳಲ್ಲಿ ಒಂದಾದ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) 2026ಕ್ಕೆ ಅಧಿಕೃತ ಚಾಲನೆ ದೊರೆತಿದೆ. 14ನೇ ಆವೃತ್ತಿಯ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 11 ಮತ್ತು 12ರಂದು ಅದ್ಧೂರಿಯಾಗಿ ನಡೆಯಲಿದ್ದು, ಈ ಕುರಿತು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಯೋಜಕರು ಮಹತ್ವದ ಮಾಹಿತಿ ಹಂಚಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಸೈಮಾ ಅಧ್ಯಕ್ಷೆ Brinda Prasad, ಕನ್ನಡ ನಟ Sri Murali , ನಟಿಯರಾದ ಪ್ರಣೀತಾ ಸುಭಾಷ್, ಶಾನ್ವಿ ಶ್ರೀವಾಸ್ತವ ಹಾಗೂ ಫಾರಿಯಾ ಅಬ್ದುಲ್ಲಾ ಉಪಸ್ಥಿತರಿದ್ದರು. ಈ ವರ್ಷದ ಸೈಮಾ ಸಮಾರಂಭವನ್ನು ಮತ್ತಷ್ಟು ವೈಭವಯುತವಾಗಿ ಆಯೋಜಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಅವರು ತಿಳಿಸಿದರು.
ಈ ವೇಳೆ ಮಾತನಾಡಿದ ನಟ ಶ್ರೀಮುರಳಿ, “ಈ ಬಾರಿ ಸೈಮಾ ಪರವಾಗಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ನನಗೆ ಹೆಮ್ಮೆಯ ವಿಷಯ. ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಈ ಕಾರ್ಯಕ್ರಮ ಪ್ರತಿಯೊಬ್ಬ ಕಲಾವಿದನಿಗೂ ವಿಶೇಷವಾಗಿದೆ. ಈ ವರ್ಷದ ಸಮಾರಂಭವೂ ಅದ್ಧೂರಿಯಾಗಿ ನಡೆಯಲಿದೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.
ತಮ್ಮ ಕುಟುಂಬ ಮತ್ತು ಸೈಮಾ ನಡುವಿನ ಸಂಬಂಧವನ್ನು ಸ್ಮರಿಸಿದ ಶ್ರೀಮುರಳಿ, “ಕಳೆದ 14 ವರ್ಷಗಳಿಂದ ನಮ್ಮ ಕುಟುಂಬಕ್ಕೂ ಸೈಮಾಗೂ ವಿಶೇಷ ಬಾಂಧವ್ಯವಿದೆ. ನನ್ನ ಕಸಿನ್ ಡಾ. ಪುನೀತ್ ರಾಜ್‌ಕುಮಾರ್ (ಅಪ್ಪು) ನಾಲ್ಕು ಬಾರಿ, ಡಾ. ಶಿವರಾಜ್‌ಕುಮಾರ್ ಮೂರು ಬಾರಿ ಸೈಮಾ ಪ್ರಶಸ್ತಿ ಪಡೆದಿದ್ದಾರೆ. ನನ್ನ ಅಣ್ಣ ವಿಜಯ್ ರಾಘವೇಂದ್ರ ಎರಡು ಬಾರಿ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ. ನನಗೂ ಮಫ್ತಿ ಚಿತ್ರದ ಅಭಿನಯಕ್ಕಾಗಿ ‘ಬೆಸ್ಟ್ ಲೀಡ್ (ಕ್ರಿಟಿಕ್ಸ್)’ ಪ್ರಶಸ್ತಿ ದೊರೆತಿತ್ತು. ಇದು ನನ್ನ ಜೀವನದ ಮರೆಯಲಾಗದ ಕ್ಷಣ” ಎಂದು ಭಾವುಕರಾದರು.
“ಸಾಮಾನ್ಯವಾಗಿ ಅಭಿಮಾನಿಗಳು ಸಿನಿಮಾ ತಾರೆಯರನ್ನು ಬೆಳ್ಳಿತೆರೆಯಲ್ಲಷ್ಟೇ ನೋಡುತ್ತಾರೆ. ಆದರೆ ಸೈಮಾ ಎಲ್ಲಾ ಭಾಷೆಗಳ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ ಅಭಿಮಾನಿಗಳಿಗೆ ವಿಶೇಷ ಅನುಭವ ನೀಡುತ್ತದೆ. ಒಬ್ಬ ಕಲಾವಿದನಿಗೆ ಪ್ರಶಸ್ತಿ ಎನ್ನುವುದು ಕೇವಲ ಗೌರವವಲ್ಲ, ಅವರ ಪರಿಶ್ರಮಕ್ಕೆ ಸಿಗುವ ದೊಡ್ಡ ಮಾನ್ಯತೆ” ಎಂದು ಅವರು ಹೇಳಿದರು.
ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್ ಮಾತನಾಡಿ, “ಸೈಮಾ ಸಂಸ್ಥೆ ನಂಬಿಕೆ, ಬದ್ಧತೆ ಮತ್ತು ನಿರಂತರತೆಯ ಆಧಾರದ ಮೇಲೆ ಬೆಳೆದಿದೆ. ಇಂದು ಇದು ದಕ್ಷಿಣ ಭಾರತಕ್ಕಷ್ಟೇ ಸೀಮಿತವಾಗದೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರತಿಷ್ಠಿತ ಪ್ರಶಸ್ತಿ ವೇದಿಕೆಯಾಗಿದೆ” ಎಂದು ಹೇಳಿದರು.
“ನಮ್ಮ ಬೆಳವಣಿಗೆಯಲ್ಲಿ ಪಾಲುದಾರರು, ಚಿತ್ರರಂಗದ ಗಣ್ಯರು, ಮಾಧ್ಯಮ ಮಿತ್ರರು ಹಾಗೂ ಅಭಿಮಾನಿಗಳ ಪಾತ್ರ ಅತ್ಯಂತ ಮಹತ್ವದ್ದು. ಈ ವರ್ಷವೂ Maruti Suzuki NEXA ಸತತ ನಾಲ್ಕನೇ ವರ್ಷ ಸಹಭಾಗಿತ್ವ ವಹಿಸಿರುವುದು ಸಂತಸದ ಸಂಗತಿ. ಅವರ ಬೆಂಬಲದಿಂದ ಈ ವರ್ಷದ ಕಾರ್ಯಕ್ರಮವನ್ನು ಮತ್ತಷ್ಟು ಭವ್ಯವಾಗಿ ಆಯೋಜಿಸಲಾಗುತ್ತಿದೆ” ಎಂದು ತಿಳಿಸಿದರು.
ಈ ವರ್ಷದ ಸೈಮಾ ಸಮಾರಂಭದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ತಾರೆಯರು, ತಾಂತ್ರಿಕ ತಜ್ಞರು ಮತ್ತು ಸಾವಿರಾರು ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ. ದಕ್ಷಿಣ ಭಾರತೀಯ ಚಿತ್ರರಂಗದ ಸಾಧನೆಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವ ಪ್ರಮುಖ ವೇದಿಕೆಯಾಗಿರುವ ಸೈಮಾ ಮತ್ತೊಮ್ಮೆ ಸಿನಿಪ್ರಿಯರ ಗಮನ ಸೆಳೆಯಲು ಸಜ್ಜಾಗಿದೆ.
-
ದೇಶ18 ಗಂಟೆಗಳು agoಪ್ರತಿ ಶಿಕ್ಷಣ ಸಂಸ್ಥೆ ‘Drug Free Campus’ ಆಗಲಿ; Governor Thawarchand Gehlot
-
ದೇಶ1 ಗಂಟೆ agoWorld War ದ ಭೀತಿ ತಪ್ಪಿತೇ? ಇರಾನ್ ಮೇಲಿನ ದಾಳಿಯನ್ನು ಕೊನೇ ಕ್ಷಣದಲ್ಲಿ ರದ್ದು
-
ದೇಶ17 ಗಂಟೆಗಳು agoNEET ಪ್ರತಿಭಟನೆ ವಿವಾದಕ್ಕೆ ಹೊಸ ಟ್ವಿಸ್ಟ್! ಪ್ರಧಾನಿ ಮೋದಿಗೆ ತಾಯಿಯ ಭಾವನಾತ್ಮಕ ಸಂದೇಶ ವೈರಲ್
-
ದೇಶ2 ಗಂಟೆಗಳು agoClimate ಸಂಕಷ್ಟಕ್ಕೆ ಪರಿಹಾರ ಹುಡುಕಿದ ನಾಯಕರು! ಕೃಷಿ, ವಿಮೆ, AI ಬಗ್ಗೆ ದೆಹಲಿಯಲ್ಲಿ ಚರ್ಚೆ
-
ರಾಜ್ಯ3 ಗಂಟೆಗಳು agoCauvery ವಿವಾದ: ಸರ್ವಪಕ್ಷ ಸಭೆಯಲ್ಲಿ ಮೇಕೆದಾಟಿಗೆ ಒಮ್ಮತ; ರಾಜ್ಯ ಹಿತಕ್ಕಾಗಿ ಪಕ್ಷಾತೀತ ಹೋರಾಟಕ್ಕೆ ನಿರ್ಧಾರ
-
ದೇಶ18 ಗಂಟೆಗಳು agoCommonwealth Games ನಲ್ಲಿ ಭಾರತದ ನಕ್ಷೆ ಎಡವಟ್ಟು! ಲೊವ್ಲಿನಾ ಬೊರ್ಗೊಹೈನ್ ಆಕ್ರೋಶ
-
ದೇಶ17 ಗಂಟೆಗಳು agoIndonesia ದಲ್ಲಿ ದೋಣಿ ದುರಂತ; ಬೆಂಕಿ ಹೊತ್ತಿಕೊಂಡು ಭಸ್ಮ, 225 ಮಂದಿಯ ರಕ್ಷಣೆ
-
ರಾಜ್ಯ31 ನಿಮಿಷಗಳು agoBIG NEWS Karnataka Cabinet Expansion 2026 ಶಾಸಕರಿಗೆ ಸಚಿವ ಸ್ಥಾನ; ಟಿ.ಬಿ. ಜಯಚಂದ್ರ ಸ್ಪೀಕರ್, ಇಂದು ಪ್ರಮಾಣವಚನ
