ಕಾಂತಾರ ಚಾಪ್ಟರ್ 1 ಚಿತ್ರ ವೀಕ್ಷಣೆ ವೇಳೆ ಹುಚ್ಚಾಟ; ರಿಷಬ್ ಶೆಟ್ಟಿ ಅಭಿಮಾನಿಗಳಿಗೆ ಎಚ್ಚರಿಕೆ | Hosa Suddi

ದೇಶ

ಕಾಂತಾರ ಚಾಪ್ಟರ್ 1 ಚಿತ್ರ ವೀಕ್ಷಣೆ ವೇಳೆ ಹುಚ್ಚಾಟ; ರಿಷಬ್ ಶೆಟ್ಟಿ ಅಭಿಮಾನಿಗಳಿಗೆ ಎಚ್ಚರಿಕೆ

Published

on

ಬೆಂಗಳೂರು: ಕಾಂತಾರ ಚಾಪ್ಟರ್ 1 (Kantara: Chapter 1) ಸಿನಿಮಾ ಇತ್ತೀಚಿಗಷ್ಟೇ ಬಿಡುಗಡೆಯಾಗಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರ ಕನ್ನಡ ಚಿತ್ರರಂಗದ ಮೇಲೆ ಭಾರಿ ಪ್ರಭಾವ ಬೀರಿದ್ದು, ದೈವರಾಧನೆಯ ಹಿನ್ನೆಲೆ ಹೊಂದಿರುವ ಕರಾವಳಿಯ ಕಥಾನಕವನ್ನು ಚಿತ್ರಿಸುತ್ತದೆ.

ಆದರೆ ಚಿತ್ರ ವೀಕ್ಷಣೆ ವೇಳೆ ಕೆಲವರ ಅತಿರೇಕ ವರ್ತನೆ ತುಳುವರ ಭಾವನೆಗೆ ಧಕ್ಕೆಯಾಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ಪ್ರೇಕ್ಷಕರು ದೈವದ ವೇಷ ಧರಿಸಿ ಚಿತ್ರಮಂದಿರಗಳಲ್ಲಿ ಓಡಾಟ, ಕಿರುಚಾಟ ನಡೆಸುತ್ತಿರುವುದು ನಂಬಿಕೆಯನ್ನು ಗೌರವಿಸುವವರಿಗೆ ತೊಂದರೆ ಉಂಟುಮಾಡಿದೆ.

ಈ ಹಿನ್ನೆಲೆ, ಬೆಂಗಳೂರು ತುಳುಕೂಟವು ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಗೆ ಪತ್ರ ಕಳುಹಿಸಿ, ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ನೀಡುವಂತೆ ಮನವಿ ಮಾಡಿದೆ. ಪತ್ರದಲ್ಲಿ, ಈ ರೀತಿಯ ವರ್ತನೆ ತೋರಬಾರದು, ಮತ್ತು ಜನರಿಗೆ ಕೂಡಲೇ ತಿಳಿಸಬೇಕು ಎಂದು ಉಲ್ಲೇಖಿಸಲಾಗಿದೆ.

ತುಳುಕೂಟ ಹಿಂದಿನ ಕಾಂತಾರ ಮೊದಲ ಭಾಗ ಬಿಡುಗಡೆಯಾಗಿದ್ದಾಗಲೂ ಇದೇ ರೀತಿಯ ಸಮಸ್ಯೆಗಳನ್ನು ಕಂಡು, ಪೊಲೀಸ್ ಆಯುಕ್ತರಿಗೆ ಮನವಿ ಮಾಡಿತ್ತು. ಈಗ ಚಾಪ್ಟರ್ 1 ಬಿಡುಗಡೆ ನಂತರ ಪುನಾರಾವೃತ್ತಿ ಕಂಡುಬಂದಿದ್ದು, ತುಳುಕೂಟ ಕಾನೂನು ಕ್ರಮಕ್ಕೆ ಮುಂದಾಗಲು ನಿರ್ಧರಿಸಿದೆ.

Trending

Exit mobile version