Pavan Kalyan ಬಿಡುಗಡೆಯಕ್ಕೂ ಮುನ್ನವೇ ರೆಕಾರ್ಡ್ ಮಾಡಿದ ಪವನ್ ಕಲ್ಯಾಣ್ ‘ಓಜಿ’ ಸಿನಿಮಾ ಟಿಕೆಟ್ — ಅಭಿಮಾನಿಯಿಂದ ₹1.29 ಲಕ್ಷ ಖರೀದಿ! | Hosa Suddi

ರಾಜ್ಯ

Pavan Kalyan ಬಿಡುಗಡೆಯಕ್ಕೂ ಮುನ್ನವೇ ರೆಕಾರ್ಡ್ ಮಾಡಿದ ಪವನ್ ಕಲ್ಯಾಣ್ ‘ಓಜಿ’ ಸಿನಿಮಾ ಟಿಕೆಟ್ — ಅಭಿಮಾನಿಯಿಂದ ₹1.29 ಲಕ್ಷ ಖರೀದಿ!

Published

on

ಹೈದರಾಬಾದ್: ಪವನ್ ಕಲ್ಯಾಣ್ ಅಭಿಮಾನಿಯೊಬ್ಬನು ಒಂದು ಚಿತ್ರ ಟಿಕೆಟ್ ಗೆ ₹1,29,999 ರೂಪಾಯಿ ಕೊಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಪವರ್ ಸ್ಟಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಓಜಿ’ (OG) ಟ್ರೈಲರ್ ಬಿಡುಗಡೆ ಕಾರ್ಯಕ್ರಮದ ಪ್ರಯುಕ್ತ ಈ ಟಿಕೆಟ್ ಹರಾಜು ಮಾಡಲಾಗಿತ್ತು.

ಚೌಟುಪ್ಪಲ್‌ನ ಅಮುದಲ ಪರಮೇಶ್ ಎಂಬ ಅಭಿಮಾನಿಯು ಈ ಟಿಕೆಟ್ ಖರೀದಿ ಮಾಡಿ ಪವನ್ ಮೇಲಿನ ತನ್ನ ಭಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾನೆ. ಈ ಟಿಕೆಟ್‌ನ ಮೂಲ ಬೆಲೆ ಕೇವಲ ₹800 ರೂಪಾಯಿ ಮಾತ್ರವಿದ್ದು, ಲಕ್ಷಕ್ಕಿಂತ ಅಧಿಕ ಹಣ ಕೊಟ್ಟು ಈ ಟಿಕೆಟ್ ಖರೀದಿಸಲಾಗಿದೆ.

ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನಟನಿಗಾಗಿ ಫ್ಲೆಕ್ಸ್‌, ಕಟ್‌ಔಟ್‌, ಬ್ಯಾನರ್ ಹಾಕುತ್ತಾರೆ. ಆದರೆ, ಪವನ್ ಕಲ್ಯಾಣ್ ಅಭಿಮಾನಿಗಳು ಅಷ್ಟರಲ್ಲಿ ನಿಂತಿಲ್ಲ — ಪ್ರೀತಿಗೆ ಬೆಲೆ ಇಲ್ಲ ಅನ್ನೋ ಮಾತಿಗೆ ನಿಜವಾದ ಉದಾಹರಣೆಯಾಗಿದೆ ಈ ಘಟನೆ.

ಇನ್‌ಸ್ಟಾಗ್ರಾಂ ಮತ್ತು X (Twitter) ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಪರಮೇಶ್‌ ಅವರನ್ನು “ರಿಯಲ್ ಫ್ಯಾನ್” ಎಂದು ಹೊಗಳುತ್ತಿದ್ದಾರೆ.

Trending

Exit mobile version