ಆರೋಗ್ಯ
ಉಪವಾಸವೂ ಬೇಕಿಲ್ಲ, ಜಿಮ್ ಕೂಡ ಅಗತ್ಯವಿಲ್ಲ: ಊಟದ ಬಳಿಕ ಈ ಕೆಲಸ ಮಾಡಿದ್ರೆ ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಕರಗುತ್ತೆ!

ತೂಕ ಇಳಿಕೆಗಾಗಿ ಜನರು ಪ್ರಿಯ ಆಹಾರಗಳನ್ನು ತ್ಯಜಿಸುವ ಜೊತೆಗೆ ಜಿಮ್, ವ್ಯಾಯಾಮ ಎಂದು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಾರೆ.
ದಿನ ನಿತ್ಯ ಜಿಮ್ ಗೆ ಹೋಗಿ ಗಂಟೆಗಟ್ಟಲೆ ದೇಹವನ್ನು ದಣಿಸಿದರೂ ಸಹ ತೂಕ ಇಳಿಕೆ ಆಗುತ್ತಲೇ ಇಲ್ಲ, ಡೊಳ್ಳು ಹೊಟ್ಟೆ ನೇತಾಡುತ್ತಲೇ ಇದೆ ಎಂಬುದು ಹಲವರ ಬೇಸರಕ್ಕೆ ಪ್ರಮುಖ ಕಾರಣವಾಗಿರುತ್ತದೆ, ಆದರೆ, ತೂಕ ಇಳಿಸಿ ಸ್ಥೂಲಕಾಯತೆಯಿಂದ ಪರಿಹಾರ ಪಡೆಯಲು ಡಯಟ್, ಜಿಮ್, ಕಠಿಣ ದಿನಚರಿ ಏನೂ ಬೇಕಿಲ್ಲ. ಬದಲಿಗೆ ಒಂದು ಟ್ರಿಕ್ ಅನುಸರಿಸಿದರೆ ಸಾಕು ಡೊಳ್ಳು ಹೊಟ್ಟೆ ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ.
ಆರೋಗ್ಯ ತಜ್ಞರ ಪ್ರಕಾರ, ಊಟ ತಿಂಡಿಯಾದ ಬಳಿಕ 10 ನಿಮಿಷಗಳ ಕಾಲ ‘ವಜ್ರಾಸನ’ದಲ್ಲಿ ಕುಳಿತುಕೊಳ್ಳುವುದರಿಂದ ಹೊಟ್ಟೆ ಮತ್ತು ತೊಡೆಯ ಭಾಗದಲ್ಲಿ ಶೇಖರವಾಗಿರುವ ಅನಗತ್ಯ ಕೊಬ್ಬು ಕರಗುತ್ತದೆ. ಕ್ರಮೇಣ ಅತ್ಯಧಿಕ ತೂಕವೂ ಕಡಿಮೆಯಾಗುತ್ತದೆ.
ನಿತ್ಯ ವಜ್ರಾಸನ ಮಾಡುವುದರಿಂದ ಮಂಡಿ ನೋವು, ಬೆನ್ನು ನೋವು ಕಡಿಮೆಯಾಗುವುದರ ಜೊತೆಗೆ ಹೊಟ್ಟೆಯ ಕೊಬ್ಬು ಕರಗುತ್ತದೆ. ಅಷ್ಟೇ ಅಲ್ಲ, ಇದು ಏಕಾಗ್ರತೆಯನ್ನು ಕೂಡ ಹೆಚ್ಚಿಸುತ್ತದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Hosa Suddi ಇದನ್ನು ಖಚಿತಪಡಿಸುವುದಿಲ್ಲ.