ದೇಶ
3 ದಶಕಗಳಿಂದ ಅಮೆರಿಕಾಗೋಸ್ಕರ ಈ ಕೊಳಕು ಕೆಲಸ ಮಾಡ್ತಿದ್ದೇವೆ: ಪಾಕ್ ಸಚಿವ ಬಾಂಬ್
ಇಸ್ಲಾಮಾಬಾದ್: ಪಹಲ್ಗಾಮ್ ದಾಳಿಯ (Pahalgam Terrorist Attack)) ಬಳಿಕ ಪಾಕ್‌ನ ಒಂದೊಂದೇ ಮುಖವಾಡಗಳು ಬಯಲಾಗುತ್ತಿವೆ. ಅಮೆರಿಕದ ಕೈಕಾಲು ಹಿಡಿದು ಭಾರತವನ್ನು ಒಪ್ಪಿಸಿ ಕದನ ವಿರಾಮ ಪಡೆದ ಪಾಕ್, ಅಮೆರಿಕ ವಿರುದ್ಧವೇ ಗುಟುರು ಹಾಕಿದೆ. ಪಾಕಿಸ್ತಾನ ಸಚಿವ ಖವಾಜಾ ಆಸಿಫ್ (Khwaja Asif), ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಉಗ್ರ ಸಂಘಟನೆಗಳ ಪೋಷಣೆಯಲ್ಲಿ ಅಮೆರಿಕದ ಪಾತ್ರವನ್ನು ಬಹಿರಂಗಗೊಳಿಸಿದ್ದಾರೆ.
ಉಗ್ರರಿಗೆ ಹಣಕಾಸು ನೆರವು ಯಾರು ನೀಡುತ್ತಾರೆ? ಪಾಕ್ ಸರ್ಕಾರ ಉಗ್ರರನ್ನು (Terrorists) ಪೋಷಿಸುತ್ತಿದೆಯಾ? ಅನ್ನೋ ಪ್ರಶ್ನೆಗೆ ಉತ್ತರಿಸಿದ ಸಚಿವ, ಭಯೋತ್ಪಾದಕ ಸಂಘಟನೆಗಳಿಗೆ ತರಬೇತಿ ನೀಡುವ ಮತ್ತು ಹಣಕಾಸು ಒದಗಿಸುವ ಕೆಲಸವನ್ನು ಪಾಕಿಸ್ತಾನ ಮಾಡುತ್ತಿಲ್ಲ. ಕಳೆದ ಮೂರು ದಶಕಗಳಿಂದಲೂ ಅಮೆರಿಕಾಗೋಸ್ಕರ (USA) ಈ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ ಎಂದು ಬಾಂಬ್ ಸಿಡಿಸಿದ್ದಾರೆ.
ಇನ್ನೂ ಪಾಕ್‌ನಲ್ಲಿ ಉಗ್ರರು ಅಥವಾ ಉಗ್ರ ನಾಯಕರು ಇದ್ದಾರಾ ಅನ್ನೋ ಪ್ರಶ್ನೆಗೆ ಉತ್ತರಿಸಿ, ಪಾಕಿಸ್ತಾನವು ಸಕ್ರಿಯ ಭಯೋತ್ಪಾದಕರು ಅಥವಾ ಭಯೋತ್ಪಾದಕ ಸಂಘಟನೆಗಳಿಗೆ ಇನ್ಮುಂದೆ ಆಶ್ರಯ ನೀಡುವುದಿಲ್ಲ. ಉಗ್ರ ನಾಯಕರು ಬದುಕಿದ್ದಾರೆ, ಆದ್ರೆ ಇನ್ಮುಂದೆ ಅವರು ಪಾಕಿಸ್ತಾನದಲ್ಲಾಗಲಿ ಅಥವಾ ಭಾರತದ ಗಡಿಯಾಚೆ ಆಗಲಿ ಉಗ್ರ ಕೃತ್ಯಗಳನ್ನು ಎಸಗುವುದಿಲ್ಲ ಎಂದು ಹೇಳಿದ್ದಾರೆ.
ಕಳೆದ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದ ಮೂರ್ನಾಲ್ಕು ದಿನಗಳ ಬಳಿಕ ಪಾಕ್ ಸಚಿವ ಖವಾಜಾ ಆಸಿಫ್ ಅವರ ಸಂದರ್ಶನ ನಡೆಸಲಾಗಿತ್ತು. ಆದ್ರೆ ಈಗ ಈ ಕುರಿತ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ದೇಶ
Shiradi Ghat ಭೂಕುಸಿತ ತೆರವು ಯಶಸ್ವಿ: ಶಿರಾಡಿ ಘಾಟ್ ರೈಲು ಮಾರ್ಗ ಮತ್ತೆ ತೆರೆದ ರೈಲ್ವೆ
ಸುಬ್ರಮಣ್ಯ/ದಕ್ಷಿಣ ಕನ್ನಡ:Shiradi Ghat ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಸಂಭವಿಸಿದ್ದ ಭೂಕುಸಿತದ ಪರಿಣಾಮ ಸ್ಥಗಿತಗೊಂಡಿದ್ದ ಮೈಸೂರು ವಿಭಾಗದ ಶಿರಿಬಾಗಿಲು–ಎಡಕುಮಾರಿ ನಡುವಿನ ಶಿರಾಡಿ ಘಾಟ್ ರೈಲು ಮಾರ್ಗದಲ್ಲಿ ಸೋಮವಾರ ಸಂಜೆ ರೈಲು ಸಂಚಾರವನ್ನು ಅಧಿಕೃತವಾಗಿ ಪುನರಾರಂಭಿಸಲಾಗಿದೆ. ಕಳೆದ ಮೂರು ದಿನಗಳಿಂದ ಸ್ಥಗಿತಗೊಂಡಿದ್ದ ರೈಲು ಸೇವೆ ಆರಂಭವಾಗಿರುವುದರಿಂದ ಕರಾವಳಿ ಕರ್ನಾಟಕ ಮತ್ತು ಬೆಂಗಳೂರು ನಡುವಿನ ಸಾವಿರಾರು ಪ್ರಯಾಣಿಕರಿಗೆ ದೊಡ್ಡ ನೆಮ್ಮದಿ ದೊರೆತಿದೆ.
ದಕ್ಷಿಣ ಪಶ್ಚಿಮ ರೈಲ್ವೆ ನೀಡಿರುವ ಮಾಹಿತಿ ಪ್ರಕಾರ, ಭೂಕುಸಿತದಿಂದ ಹಳಿಯ ಮೇಲೆ ಬಿದ್ದಿದ್ದ ಮಣ್ಣು, ಕಲ್ಲು ಹಾಗೂ ಮರದ ಅವಶೇಷಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸುರಕ್ಷತಾ ಪರಿಶೀಲನೆ ನಡೆಸಿದ ಬಳಿಕ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ನೈಋತ್ಯ ರೈಲ್ವೆಯ ಬುಲೆಟಿನ್-10 ಪ್ರಕಾರ, ಆಗಸ್ಟ್ 3ರಂದು ಸಂಜೆ 7.25ಕ್ಕೆ ಹಳಿ ಸುರಕ್ಷತಾ ಪರಿಶೀಲನೆ ಪೂರ್ಣಗೊಂಡಿದ್ದು, ಬಳಿಕ ರೈಲುಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ.
ಮಾರ್ಗ ಪುನರಾರಂಭವಾದ ನಂತರ ರೈಲು ಸಂಖ್ಯೆ 17378 ಭೂಕುಸಿತ ಪೀಡಿತ ಪ್ರದೇಶವನ್ನು ಸುರಕ್ಷಿತವಾಗಿ ದಾಟಿದ ಮೊದಲ ರೈಲಾಗಿ ದಾಖಲಾಗಿದೆ. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆರಂಭಿಕ ಹಂತದಲ್ಲಿ ಈ ವಿಭಾಗದಲ್ಲಿ ರೈಲುಗಳಿಗೆ ಗಂಟೆಗೆ 10 ಕಿ.ಮೀ. ತಾತ್ಕಾಲಿಕ ವೇಗ ಮಿತಿ ವಿಧಿಸಲಾಗಿದೆ. ಎಲ್ಲಾ ಲೋಕೋಪೈಲೆಟ್‌ಗಳು ಹಾಗೂ ರೈಲ್ವೆ ಸಿಬ್ಬಂದಿಗೆ ಹೆಚ್ಚಿನ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸುವಂತೆ ಸೂಚಿಸಲಾಗಿದೆ.
ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಶಾಶ್ವತ ಪುನಃಸ್ಥಾಪನಾ ಕಾಮಗಾರಿಗಳು ಇನ್ನೂ ಮುಂದುವರಿದಿದ್ದು, ತಜ್ಞರ ತಂಡ ನಿರಂತರವಾಗಿ ಸ್ಥಳದ ಮೇಲ್ವಿಚಾರಣೆ ನಡೆಸುತ್ತಿದೆ. ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಭೂಕುಸಿತದ ಕಾರಣ ಕರಾವಳಿ ಕರ್ನಾಟಕ ಮತ್ತು ಬೆಂಗಳೂರಿನ ನಡುವೆ ಸಂಚರಿಸುತ್ತಿದ್ದ ಹಲವು ರೈಲುಗಳನ್ನು ರದ್ದುಗೊಳಿಸಲಾಗಿತ್ತು ಹಾಗೂ ಕೆಲವು ರೈಲುಗಳ ಮಾರ್ಗವನ್ನು ಬದಲಿಸಲಾಗಿತ್ತು. ಇದೀಗ ರೈಲು ಸಂಚಾರ ಪುನರಾರಂಭಗೊಂಡಿರುವುದರಿಂದ ಪ್ರಯಾಣಿಕರಲ್ಲಿ ಸಂತಸ ಮೂಡಿದೆ. ಆದರೆ ಆರಂಭಿಕ ದಿನಗಳಲ್ಲಿ ವೇಗ ಮಿತಿಯ ಕಾರಣ ಕೆಲವು ರೈಲುಗಳು ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಪ್ರಯಾಣಿಕರು ಪ್ರಯಾಣಕ್ಕೂ ಮುನ್ನ ತಮ್ಮ ರೈಲುಗಳ ತಾಜಾ ಮಾಹಿತಿಯನ್ನು NTES ಹಾಗೂ ಭಾರತೀಯ ರೈಲ್ವೆಯ ಅಧಿಕೃತ ಮಾಹಿತಿ ವ್ಯವಸ್ಥೆಗಳ ಮೂಲಕ ಪರಿಶೀಲಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ಅವರು, ಪ್ರಯಾಣಿಕರ ಸುರಕ್ಷತೆಯೇ ಇಲಾಖೆಯ ಮೊದಲ ಆದ್ಯತೆಯಾಗಿದ್ದು, ಸುರಕ್ಷಿತ ಹಾಗೂ ವಿಶ್ವಾಸಾರ್ಹ ರೈಲು ಸೇವೆ ಒದಗಿಸಲು ಇಲಾಖೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ದೇಶ
Cabinet ಸ್ಥಾನ ಸಿಗಲಿಲ್ಲವೇ? ‘ನನಗೂ ಸಿಕ್ಕಿರಲಿಲ್ಲ’ ಎಂದ ಡಿಕೆ ಶಿವಕುಮಾರ್; ಅಸಮಾಧಾನಿತ ಶಾಸಕರಿಗೆ ಸಂದೇಶ
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಳಿಕ Cabinet Berth ಕೈತಪ್ಪಿದ ಶಾಸಕರ ಅಸಮಾಧಾನ ತೀವ್ರಗೊಂಡಿರುವ ನಡುವೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅಸಮಾಧಾನಿತ ಶಾಸಕರಿಗೆ ತಾಳ್ಮೆಯ ಸಂದೇಶ ನೀಡಿದ್ದಾರೆ. “2004ರಲ್ಲಿ ನನಗೂ ಮಂತ್ರಿಗಿರಿ ಸಿಕ್ಕಿರಲಿಲ್ಲ. ತಾಳ್ಮೆಯಿಂದ ಇದ್ದರೆ ಎಲ್ಲರಿಗೂ ಅವಕಾಶ ಸಿಗುತ್ತದೆ” ಎಂದು ಅವರು ಹೇಳಿದ್ದಾರೆ.
ಸೋಮವಾರ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ರಾಜೀನಾಮೆಗೆ ಮುಂದಾಗಿರುವ ಶಾಸಕರು ಹಾಗೂ ಪ್ರತಿಭಟನೆ ನಡೆಸುತ್ತಿರುವ ಬೆಂಬಲಿಗರಿಗೆ ಪರೋಕ್ಷವಾಗಿ ಸಂದೇಶ ನೀಡಿದರು.
“ಲೋಕಭವನಕ್ಕೆ ನೂತನ ಸಚಿವರ ಪಟ್ಟಿಯನ್ನು ಕಳುಹಿಸಿದ್ದೇವೆ. 2004ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ನನಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ನಂತರ ಸಿದ್ದರಾಮಯ್ಯ ಅವರ ಮೊದಲ ಸಂಪುಟದಲ್ಲಿಯೂ ನನಗೆ ಅವಕಾಶ ಇರಲಿಲ್ಲ. ನಾವು ತಾಳ್ಮೆಯಿಂದ ಕಾಯಲಿಲ್ಲವೇ? ಅದೇ ರೀತಿ ಎಲ್ಲರೂ ಸಹ ತಾಳ್ಮೆಯಿಂದ ಇದ್ದರೆ ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸುತ್ತೇವೆ,” ಎಂದು ಸಿಎಂ ಹೇಳಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಹಿನ್ನೆಲೆಯಲ್ಲಿ ಇಂದು ಸಂಜೆ 5 ಗಂಟೆಗೆ 20 ಮಂದಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಲಿದ್ದು, ಹೊಸ ಸಚಿವರ ಹೆಸರುಗಳು ಈಗಾಗಲೇ ಪ್ರಕಟವಾಗಿವೆ. ಆದರೆ ಯಾರಿಗೆ ಯಾವ ಖಾತೆ ಸಿಗಲಿದೆ ಎಂಬ ಕುತೂಹಲ ಇನ್ನೂ ಮುಂದುವರಿದಿದೆ.
ಹೈಕಮಾಂಡ್ ಅಂತಿಮಗೊಳಿಸಿದ ಪಟ್ಟಿಯಲ್ಲಿ ಜಾತಿ, ಧರ್ಮ, ಪ್ರಾದೇಶಿಕ ಸಮತೋಲನ ಹಾಗೂ ವಿವಿಧ ಸಾಮಾಜಿಕ ವರ್ಗಗಳಿಗೆ ಆದ್ಯತೆ ನೀಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದಿನ ಸಂಪುಟದಲ್ಲಿದ್ದ ಆರು ಮಂದಿಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡಲಾಗಿದೆ.
ಆದರೆ ಹಲವು ಹಿರಿಯ ಹಾಗೂ ಆಕಾಂಕ್ಷಿ ಶಾಸಕರಿಗೆ ಸಚಿವ ಸ್ಥಾನ ಕೈತಪ್ಪಿರುವುದು ಕಾಂಗ್ರೆಸ್ ಒಳಗೆ ಅಸಮಾಧಾನಕ್ಕೆ ಕಾರಣವಾಗಿದೆ. ಕೆಲವೆಡೆ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಕೆಲವು ಶಾಸಕರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತಾಳ್ಮೆಯ ಸಂದೇಶ ಅಸಮಾಧಾನಿತ ನಾಯಕರನ್ನು ಸಮಾಧಾನಪಡಿಸುವ ಪ್ರಯತ್ನವೆಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಈಗ ಎಲ್ಲರ ಗಮನ ನೂತನ ಸಚಿವರಿಗೆ ಯಾವ ಖಾತೆ ಹಂಚಿಕೆಯಾಗಲಿದೆ ಹಾಗೂ ಅಸಮಾಧಾನವನ್ನು ಕಾಂಗ್ರೆಸ್ ಹೈಕಮಾಂಡ್ ಹೇಗೆ ನಿಭಾಯಿಸಲಿದೆ ಎಂಬುದರತ್ತ ನೆಟ್ಟಿದೆ.
ದೇಶ
Sonakshi Sinha ಗೆ Kangana ಪರೋಕ್ಷ ಟೀಕೆ? ಇನ್‌ಸ್ಟಾಗ್ರಾಂ ವಿಡಿಯೋ ಭಾರಿ ಚರ್ಚೆ!
ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ (CJP) ನೇತೃತ್ವದಲ್ಲಿ ನಡೆದ ನೀಟ್ (NEET) ಪ್ರತಿಭಟನೆಗಳು ಕೊನೆಗೊಂಡ ನಂತರ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ (Kangana Ranaut) ನೀಡುತ್ತಿರುವ ಹೇಳಿಕೆಗಳು ಮತ್ತೆ ರಾಜಕೀಯ ಹಾಗೂ ಬಾಲಿವುಡ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಈ ಬಾರಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದ ಬಾಲಿವುಡ್ ನಟಿಯೊಬ್ಬರನ್ನು ಹೆಸರು ಹೇಳದೇ ಟೀಕಿಸಿರುವ ಕಂಗನಾ, ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ನೆಟ್ಟಿಗರ ಪ್ರಕಾರ, ಕಂಗನಾ ಪರೋಕ್ಷವಾಗಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.
ಸೋಮವಾರ ಸಂಸತ್ತಿಗೆ ತೆರಳುವ ಮುನ್ನ ಕಂಗನಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, “ಚಿತ್ರರಂಗದಲ್ಲಿ ನಮಗೆ ಪರಿಚಯವಿರುವ ಅನೇಕ ಹಿಂದೂ ಹುಡುಗಿಯರಿಗೆ ರಾಜಕೀಯ ಅಥವಾ ಧರ್ಮದ ವಿಚಾರದಲ್ಲಿ ಸ್ಪಷ್ಟ ಸಿದ್ಧಾಂತ ಇರುವುದಿಲ್ಲ. ಆದರೆ ಅವರು ಬೇರೆ ಧರ್ಮದ ವ್ಯಕ್ತಿಯೊಂದಿಗೆ ಸ್ನೇಹ ಅಥವಾ ಸಂಬಂಧ ಬೆಳೆಸಿದ ಬಳಿಕ ಅವರ ಚಿಂತನೆ ಬದಲಾಗುತ್ತದೆ. ಅವರು ಎಡಪಂಥೀಯ ವಿಚಾರಧಾರೆಯತ್ತ ವಾಲುತ್ತಾರೆ” ಎಂದು ಹೇಳಿದ್ದಾರೆ.
ಇದೇ ವೇಳೆ, “ಭಾರತದ ಸಂವಿಧಾನ ಪ್ರತಿಯೊಬ್ಬರಿಗೂ ತಮ್ಮ ಇಚ್ಛೆಯ ಧರ್ಮ ಮತ್ತು ಸಿದ್ಧಾಂತವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಿದೆ. ನಾನು ಮೊದಲು ಉದಾರವಾದಿ ಹಿಂದೂ ಆಗಿದ್ದೆ. ಈಗ ನಾನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸಿದ್ಧಾಂತವನ್ನು ಸ್ವೀಕರಿಸಿ ಜಾಗೃತ ಹಿಂದೂ ಆಗಲು ಬಯಸುತ್ತೇನೆ” ಎಂದು ಕಂಗನಾ ಹೇಳಿದ್ದಾರೆ.
ಇದರ ಜೊತೆಗೆ ಮತ್ತೊಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕಂಗನಾ, ಹೆಸರು ಉಲ್ಲೇಖಿಸದೇ ನಟಿಯೊಬ್ಬರ ಉಡುಗೆ ಹಾಗೂ ವರ್ತನೆ ಕುರಿತು ಟೀಕಿಸಿದ್ದಾರೆ. “ಇತ್ತೀಚೆಗೆ ಅರ್ಧ ಪ್ಯಾಂಟ್ ಹಾಗೂ ತಲೆಕೆಳಗಾದ ಕ್ಯಾಪ್ ಧರಿಸಿ ಪಿಕ್‌ಪಾಕೆಟ್‌ನಂತೆ ಕಾಣುವ ನಟಿಯೊಬ್ಬರು ಪ್ರತಿಭಟನಾಕಾರರನ್ನು ಪ್ರೋತ್ಸಾಹಿಸುತ್ತಿರುವುದನ್ನು ನೋಡಿದೆ. ನೀವು ಧರಿಸುವ ಉಡುಗೆ ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ನಿಮ್ಮ ಅಭಿಪ್ರಾಯಗಳು ನಿಮ್ಮದೇ ಆಗಿರಲಿ, ಆದರೆ ಸ್ಟೈಲಿಂಗ್‌ನಲ್ಲಿ ಸುಧಾರಣೆ ಅಗತ್ಯ. ಸಹಾಯ ಬೇಕಾದರೆ ನಾನು ಯಾವಾಗಲೂ ಸಿದ್ಧ” ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಕಂಗನಾ ಟೀಕಿಸಿರುವುದು ಸೋನಾಕ್ಷಿ ಸಿನ್ಹಾ ಅವರನ್ನು ಉದ್ದೇಶಿಸಿಯೇ ಎಂಬ ಚರ್ಚೆ ಜೋರಾಗಿದೆ. ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದ ಪ್ರಮುಖ ಬಾಲಿವುಡ್ ನಟಿಯರಲ್ಲಿ ಸೋನಾಕ್ಷಿ ಸಿನ್ಹಾ ಕೂಡ ಒಬ್ಬರಾಗಿದ್ದರು. ಆದರೆ ಕಂಗನಾ ತಮ್ಮ ಪೋಸ್ಟ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ.
ಕಂಗನಾ ಹೇಳಿಕೆಗಳ ಪರ ಹಾಗೂ ವಿರೋಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಕೆಲವರು ಇದು ವೈಯಕ್ತಿಕ ಅಭಿಪ್ರಾಯ ಎಂದು ಬೆಂಬಲ ವ್ಯಕ್ತಪಡಿಸುತ್ತಿದ್ದರೆ, ಮತ್ತಷ್ಟು ಮಂದಿ ಯಾವುದೇ ವ್ಯಕ್ತಿಯ ಹೆಸರಿಲ್ಲದೆ ಇಂತಹ ಹೇಳಿಕೆ ನೀಡುವುದು ಅನಗತ್ಯ ವಿವಾದಕ್ಕೆ ಕಾರಣವಾಗುತ್ತದೆ ಎಂದು ಟೀಕಿಸುತ್ತಿದ್ದಾರೆ.
ಇದೇ ವೇಳೆ ಕಂಗನಾ ರಣಾವತ್ ರಾಜಕೀಯ ಮತ್ತು ಚಿತ್ರರಂಗ ಎರಡರಲ್ಲೂ ಸಕ್ರಿಯರಾಗಿದ್ದು, ಇತ್ತೀಚೆಗೆ ಬಿಡುಗಡೆಯಾದ ‘ಭಾರತ್ ಭಾಗ್ಯ ವಿಧಾತ’ ಚಿತ್ರದಲ್ಲಿಯೂ ನಟಿಸಿದ್ದಾರೆ. ಅವರ ಹೊಸ ಹೇಳಿಕೆಗಳು ಮತ್ತೊಮ್ಮೆ ಬಾಲಿವುಡ್ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.
-
ಕ್ರೀಡೆ22 ಗಂಟೆಗಳು agoVinesh Phogat ‘ಇಡೀ ವ್ಯವಸ್ಥೆಯೇ ಅವರನ್ನು ರಕ್ಷಿಸಿತು’! Brij Bhushan Sharan Singh ತೀರ್ಪಿಗೆ ವಿನೇಶ್ ಫೋಗಟ್ ಪ್ರತಿಕ್ರಿಯೆ
-
ದೇಶ23 ಗಂಟೆಗಳು agoKarnataka Cabinet Expansion 2026 ಸಚಿವರ ಪಟ್ಟಿಯಲ್ಲಿ ಕೊನೇ ಕ್ಷಣದ ಮಹಾ ಟ್ವಿಸ್ಟ್! ಗಾಯತ್ರಿ, ಮಾಂಕಾಳು ಔಟ್ – ಹೊಸ ಹೆಸರು ಎಂಟ್ರಿ
-
ದೇಶ22 ಗಂಟೆಗಳು agoArtificial Intelligence Model Distillation ಎಂದರೇನು? ಅಮೆರಿಕ-ಚೀನಾ ಎಐ ಯುದ್ಧದ ಹಿಂದಿನ ತಂತ್ರಜ್ಞಾನ ಯಾವುದು?
-
ದೇಶ24 ಗಂಟೆಗಳು ago‘ಪಕ್ಷ ವಿರೋಧಿಗಳಿಗೆ ಮಂತ್ರಿ ಸ್ಥಾನ’ : MLA Tanveer Sait
-
ರಾಜ್ಯ23 ಗಂಟೆಗಳು agoRaghavendra Hitnal ಗೆ ಸಚಿವ ಸ್ಥಾನ ಕೈತಪ್ಪಿದ್ದೇಕೆ? ಕೊಪ್ಪಳದಲ್ಲಿ ಟೈರ್ ಸುಟ್ಟು ಕಾಂಗ್ರೆಸ್ ವಿರುದ್ಧ ಆಕ್ರೋಶ
-
ದೇಶ23 ಗಂಟೆಗಳು agoLalbagh Flower Show 2026 ಪ್ರದರ್ಶನಕ್ಕೆ ದಿನಗಣನೆ! ಗಂಗರ ವೈಭವ ಅನಾವರಣ – ಟಿಕೆಟ್ ದರ, ದಿನಾಂಕ, ಪ್ರಮುಖ ಆಕರ್ಷಣೆಗಳ ಸಂಪೂರ್ಣ ಮಾಹಿತಿ
-
ರಾಜ್ಯ21 ಗಂಟೆಗಳು agoCongress ಗೆ ಮತ್ತೊಂದು ಆಘಾತ? ಸಚಿವ ಸ್ಥಾನ ವಂಚಿತ ಶಾಸಕ ಯಶವಂತ ರಾಯಗೌಡ ಪಾಟೀಲ್ ರಾಜೀನಾಮೆ
-
ದೇಶ21 ಗಂಟೆಗಳು agoSonakshi Sinha ಗೆ Kangana ಪರೋಕ್ಷ ಟೀಕೆ? ಇನ್‌ಸ್ಟಾಗ್ರಾಂ ವಿಡಿಯೋ ಭಾರಿ ಚರ್ಚೆ!
