ಕ್ರೀಡೆ
ಲೀಡ್ಸ್‌ನಲ್ಲಿ ಭಾರತ ಗೆದ್ದಿದ್ದೆಷ್ಟು? ಇಲ್ಲಿ ಯಾರು ಬಲಿಷ್ಠ?

- /home/u521927855/domains/hosasuddi.in/public_html/wp-content/plugins/mvp-social-buttons/mvp-social-buttons.php on line 27
https://hosasuddi.in/wp-content/uploads/2025/06/test-match-1000x600.jpg&description=ಲೀಡ್ಸ್‌ನಲ್ಲಿ ಭಾರತ ಗೆದ್ದಿದ್ದೆಷ್ಟು? ಇಲ್ಲಿ ಯಾರು ಬಲಿಷ್ಠ?', 'pinterestShare', 'width=750,height=350'); return false;" title="Pin This Post">
- Share
- Tweet /home/u521927855/domains/hosasuddi.in/public_html/wp-content/plugins/mvp-social-buttons/mvp-social-buttons.php on line 72
https://hosasuddi.in/wp-content/uploads/2025/06/test-match-1000x600.jpg&description=ಲೀಡ್ಸ್‌ನಲ್ಲಿ ಭಾರತ ಗೆದ್ದಿದ್ದೆಷ್ಟು? ಇಲ್ಲಿ ಯಾರು ಬಲಿಷ್ಠ?', 'pinterestShare', 'width=750,height=350'); return false;" title="Pin This Post">
ಭಾರತ-ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದು ಶುರುವಾಗಲಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025-2027ರ ಋತು ಕೂಡಾ ಪ್ರಾರಂಭವಾಗುತ್ತದೆ. ಉಭಯ ತಂಡಗಳ ನಡುವಿನ ಮಹತ್ವದ ಹಣಾಹಣಿಗೆ ಲೀಡ್ಸ್‌ನ ಹೆಡಿಂಗ್ಲಿ ಮೈದಾನ ಆತಿಥ್ಯ ವಹಿಸಿದೆ.
ಭಾರತ ಕೊನೆಯ ಬಾರಿಗೆ 2007ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿತ್ತು. ಆ ಬಳಿಕ ಒಮ್ಮೆಯೂ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ ಗಿಲ್ ನಾಯಕತ್ವದಲ್ಲಿ ಟೆಸ್ಟ್ ಸರಣಿ ಗೆಲ್ಲಲು ತವಕಿಸುತ್ತಿದೆ.
ಲೀಡ್ಸ್ ಮೈದಾನದಲ್ಲಿ ಉಭಯ ತಂಡಗಳ ದಾಖಲೆ ಹೇಗಿದೆ?. ಇಲ್ಲಿ ಇದುವರೆಗೂ ಆಡಿರುವ ಪಂದ್ಯಗಳೆಷ್ಟು? ಯಾರು ಹೆಚ್ಚು ಗೆಲುವು ಸಾಧಿಸಿದ್ದಾರೆ? ಎಂಬುದನ್ನು ಈಗ ತಿಳಿಯೋಣ.
ಹೆಡಿಂಗ್ಲೆ ಮೈದಾನದ ಇತಿಹಾಸ: ಹೆಡಿಂಗ್ಲೆ ಮೈದಾನದಲ್ಲಿ ಇದುವರೆಗೂ 81 ಟೆಸ್ಟ್ ಪಂದ್ಯಗಳು ನಡೆದಿವೆ. ಮೊಟ್ಟಮೊದಲ ಪಂದ್ಯ 1899ರಲ್ಲಿ ನಡೆದಿತ್ತು. ಅಂದಿನಿಂದಲೂ ಈ ಮೈದಾನ ಕೆಲವು ಅದ್ಭುತ ಪ್ರದರ್ಶನಗಳಿಗೆ ಸಾಕ್ಷಿಯಾಗಿದೆ, , ಇಲ್ಲಿ ಇಂಗ್ಲೆಂಡ್ 37 ಪಂದ್ಯಗಳನ್ನು ಗೆದ್ದರೆ, ಪ್ರವಾಸಿ ತಂಡಗಳು ಕೇವಲ 25 ಪಂದ್ಯಗಳನ್ನು ಗೆದ್ದಿವೆ. ಟಾಸ್ ಗೆದ್ದಿರುವ ತಂಡಗಳೇ ಹೆಚ್ಚು ಗೆಲುವು ಸಾಧಿಸಿರುವ ದಾಖಲೆಗಳಿವೆ. ಹಾಗಾಗಿ, ಟಾಸ್ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 29 ಪಂದ್ಯಗಳನ್ನು ಗೆದ್ದುಕೊಂಡಿದ್ದರೆ, ಚೇಸಿಂಗ್ ತಂಡಗಳು 37 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ.
ಲೀಡ್ಸ್‌ನಲ್ಲಿ ಭಾರತದ ಸೋಲು-ಗೆಲುವg: ಭಾರತ 1952ರಲ್ಲಿ ಲೀಡ್ಸ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಆಡಿತ್ತು. ಆದರೆ ಈ ಪಂದ್ಯದಲ್ಲಿ 7 ವಿಕೆಟ್ಗಳ ಸೋಲು ಕಂಡಿತ್ತು. 1986ರಲ್ಲಿ ಕಪಿಲ್ ದೇವ್ ಮತ್ತು 2002ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಮಾತ್ರ ಗೆದ್ದಿದೆ. ಕೊನೆಯದಾಗಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2021ರಲ್ಲಿ ಟೆಸ್ಟ್ ಪಂದ್ಯವನ್ನಾಡಿ 76 ರನ್ಗಳಿಂದ ಸೋಲುಂಡಿತ್ತು.
ಇಂಗ್ಲೆಂಡ್ ದಾಖಲೆ: ಇಂಗ್ಲೆಂಡ್ ಇಲ್ಲಿ ಭಾರತದ ವಿರುದ್ಧ ಒಟ್ಟು 4 ಬಾರಿ (1952, 1959, 1967 ಮತ್ತು 2021) ಗೆದ್ದಿದೆ. ಉಭಯ ತಂಡಗಳ ನಡುವೆ 1979ರಲ್ಲಿ ನಡೆದ ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು
ಕ್ರೀಡೆ
ಭಾರತೀಯ ತಂಡದ ಕೋಚ್ ಗೌತಮ್ ಗಂಭೀರ್ ವಿರುದ್ಧ ಟೀಕೆ, ಬಿಸಿಸಿಐ ಸಹಾಯಕ ಕೋಚ್ ಮಾರ್ನೆ ಮಾರ್ಕೆಲ್-ಟೆನ್ ಡೊಶ್ಕಾಟೆ ಬದಲಾವಣೆ ಸಾಧ್ಯತೆ

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಭೀರ್ ಅವರ ಕೋಚಿಂಗ್ ಶೈಲಿಯನ್ನು ಮಾಜಿ ಕ್ರಿಕೆಟಿಗರು ಸೇರಿದಂತೆ ಸುನಿಲ್ ಗವಾಸ್ಕರ್, ರಿಕಿ ಪಾಂಟಿಂಗ್ ಸೇರಿದಂತೆ ಹಲವು ಹಿರಿಯರು ಭಾರೀ ಟೀಕೆ ಮಾಡಿದ್ದಾರೆ. ಈ ಟೀಕೆಗಳಿಗೆ ಸಂಬಂಧಿಸಿ, ಗಂಭೀರ್ ಮನವಿ ಮಾಡಿಕೊಂಡ ಸಹಾಯಕ ಕೋಚ್‌ಗಳಾದ ಮಾರ್ನೆ ಮಾರ್ಕೆಲ್ (ಬೌಲಿಂಗ್ ಕೋಚ್) ಮತ್ತು ರ್ಯಾನ್ ಟೆನ್ ಡೊಶ್ಕಾಟೆ ಶೀಘ್ರದಲ್ಲೇ ತಮ್ಮ ಹುದ್ದೆಯಿಂದ ವಜಾಗೊಳ್ಳುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತಿವೆ.
ಕಳೆದ ವರ್ಷ ಜುಲೈನಲ್ಲಿ ಗಂಭೀರ್ ಭಾರತದ ಕೋಚ್ ಆಗಿ ನೇಮಕಗೊಂಡಿದ್ದರು. ಅವರ ಮನವಿ ಮೇರೆಗೆ ಐಪಿಎಲ್ ತಂಡಗಳಲ್ಲಿ ಕಾರ್ಯನಿರ್ವಹಿಸಿದ್ದ ಅಭಿಷೇಕ್ ನಾಯರ್, ಮಾರ್ಕೆಲ್ ಮತ್ತು ಡೊಶ್ಕಾಟೆ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದರು. ಆದರೆ, ನ್ಯೂಜಿಲೆಂಡ್ ವಿರುದ್ಧ ವೈಟ್ ವಾಷ್ ಹಾಗೂ ಆಸ್ಟ್ರೇಲಿಯಾ ತಂಡದ ಸೋಲುಗಳು ಬಿಸಿಸಿಐನಲ್ಲಿ ಅಸಮಾಧಾನ ಮೂಡಿಸಿದ ಕಾರಣ, ಮೊದಲನೆಯದಾಗಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಹುದ್ದೆಯಿಂದ ವಜಾಗೊಂಡಿದ್ದರು.
ಇದೇ ಹಿನ್ನೆಲೆಯಲ್ಲಿ, ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಮತ್ತು ರ್ಯಾನ್ ಟೆನ್ ಡೊಶ್ಕಾಟೆ ಸಹ ಇನ್ನೂ ಸಹ ಹುದ್ದೆಯಿಂದ ವಜಾಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ತಂಡದ ಆಯ್ಕೆ ಪ್ರಕ್ರಿಯೆ, ಆಟಗಾರರ ಕಾರ್ಯದೊತ್ತಡ, ಪಿಚ್ ಅನ್ವಯ 11 ಆಟಗಾರರ ಆಯ್ಕೆ ಮತ್ತು ಸಮತೋಲನ ಕಾಯ್ದುಕೊಳ್ಳುವ ವಿಚಾರದಲ್ಲಿ ಕೋಚ್‌ಗಳ ಕಾರ್ಯವೈಖರಿಗೆ ಬಿಸಿಸಿಐ ಅತೃಪ್ತಿ ವ್ಯಕ್ತಪಡಿಸಿದೆ.
ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸ್ಥಾನಕ್ಕೂ ಸವಾಲು ಎದುರಾಗಿದೆ. 2023ರ ಜುಲೈನಲ್ಲಿ ನೇಮಕಗೊಂಡ ಈ ಸಮಿತಿ ಮುಖ್ಯಸ್ಥರ ನೇತೃತ್ವದಲ್ಲಿ ಭಾರತ ತಂಡದ ಪ್ರದರ್ಶನ ಕಳೆದ ಒಂದು ವರ್ಷದಿಂದ ತೀರಾ ಕಳಪೆಯಾಗಿದ್ದು, ಸಮರ್ಥ ಆಟಗಾರರ ಆಯ್ಕೆಯಲ್ಲಿ ನಿರಂತರ ಎಡವಾಟಗಳು ನಡೆದಿವೆ ಎಂದು ವಿಶ್ಲೇಷಣೆಗಳು ತಿಳಿಸುತ್ತಿವೆ.
ಕ್ರೀಡೆ
ಕನ್ನಡಿಗ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಮಹಾರಾಜ ಟ್ರೋಫಿ ಟಿ20 ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟ

ಕರ್ನಾಟಕದ ಪ್ರತಿಭಾವಂತ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಮಹಾರಾಜ ಟ್ರೋಫಿ ಟಿ20 ಹರಾಜಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅವರು ‘ಹುಬ್ಬಳ್ಳಿ ಟೈಗರ್ಸ್’ ತಂಡಕ್ಕೆ 13.20 ಲಕ್ಷ ರೂಪಾಯಿಗೆ ಮಾರಾಟ ಆಗಿದ್ದು, ಈ ಮೊತ್ತವು ಮಹಾರಾಜ ಟ್ರೋಫಿಯ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಯಾಗಿದೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಉತ್ತಮ ಪ್ರದರ್ಶನ ನೀಡಿ, ಅವರು ಈ ಯಶಸ್ಸಿಗೆ ಪಾತ್ರರಾಗಿದ್ದಾರೆ.
ಕಳೆದ ಐಪಿಎಲ್ ಪಂದ್ಯಾವಳಿಯಲ್ಲಿ ಗಾಯದಿಂದ ಕೆಲವು ಪಂದ್ಯಗಳಿಂದ ದೂರ ಉಳಿದರೂ, ದೇವದತ್ ಪಡಿಕ್ಕಲ್ ಅವರ ಸಾಮರ್ಥ್ಯ ಎಲ್ಲರ ಮನಸ್ಸಿಗೆ ತಲುಪಿತ್ತು. 2024ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ನಿಂದ ಹೊರಬಂದ ಬಳಿಕ ಆರ್‌ಸಿಬಿ ತಂಡವು ಅವರನ್ನು 3.20 ಕೋಟಿ ರೂಪಾಯಿಗೆ ಖರೀದಿಸಿದೆ. ಇದೀಗ ಮಹಾರಾಜ ಟ್ರೋಫಿ ಟಿ20 ಹರಾಜಿನಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು 13.20 ಲಕ್ಷ ರೂಪಾಯಿಗೆ ದೇವದತ್ ಪಡಿಕ್ಕಲ್ ಅವರನ್ನು ಪಡೆದಿದ್ದು, ಇದು ಟೂರ್ನಿಯ ದಾಖಲೆಯ ಬೆಲೆಯಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಜುಲೈ 15ರಂದು ಬೆಂಗಳೂರಿನಲ್ಲಿ ಆಯೋಜಿಸಿದ ಈ ಹರಾಜಿನಲ್ಲಿ ದೇವದತ್ ಪಡಿಕ್ಕಲ್ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಕನ್ನಡಿಗ ಕ್ರಿಕೆಟಿಗರಾಗಿದ್ದಾರೆ. ಮಹಾರಾಜ ಟ್ರೋಫಿಯಲ್ಲಿ ಪ್ರತಿ ಫ್ರಾಂಚೈಸಿಯು ಕನಿಷ್ಠ ಇಬ್ಬರು ಸ್ಥಳೀಯ ಆಟಗಾರರನ್ನು ತಂಡದಲ್ಲಿ ಇರಿಸಬೇಕು ಎಂಬ ನಿಯಮವಿದ್ದು, ಇದರಿಂದ ಸ್ಥಳೀಯ ಪ್ರತಿಭೆಗಳ ಪ್ರೋತ್ಸಾಹಕ್ಕೆ ದೊಡ್ಡ ಅವಕಾಶ ಸಿಗುತ್ತದೆ.
ಈ ವರ್ಷದ ಪಂದ್ಯಗಳು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಭಿಮಾನಿಗಳಿಗೆ ಮೈದಾನದಲ್ಲಿ ವೀಕ್ಷಣೆಗೆ ಅವಕಾಶ ಇಲ್ಲ. ಆದರೂ ದೇವದತ್ ಪಡಿಕ್ಕಲ್ ಅವರ ಸಾಧನೆ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ ಮತ್ತು ಯುವ ಕ್ರಿಕೆಟಿಗರಿಗೆ ಪ್ರೇರಣೆಯಾಗಿದೆ.
ಕ್ರೀಡೆ
ಮಹಾರಾಜ ಟ್ರೋಫಿ ಸೀಸನ್ 4 ಹರಾಜು ಪ್ರಕ್ರಿಯೆ! ಕಣದಲ್ಲಿ ಆರ್ಸಿಬಿಯ 109 ಸಿಕ್ಸರ್ಗಳ ಸ್ಫೋಟಕ ಹಿಟ್ಟರ್!

ಬೆಂಗಳೂರು: ಮಹಾರಾಜ ಟ್ರೋಫಿ ಕೆಎಸ್‌ಸಿಎ T-20ಯ 4ನೇ ಸೀಸನ್‌ನ ಆಟಗಾರರ ಹರಾಜು ಇಂದು ಬೆಂಗಳೂರಿನಲ್ಲಿ ನಡೆಯಲಿದೆ. ಕಳೆದ ಋತುವಿನ ರನ್ನರ್-ಅಪ್ ಹುಬ್ಳಿ ಟೈಗರ್ಸ್ ಫ್ರಾಂಚೈಸಿ 41.50 ಲಕ್ಷಗಳ ಗರಿಷ್ಠ ಹಣದೊಂದಿಗೆ ಹರಾಜಿಗೆ ಆಗಮಿಸುತ್ತಿದ್ದರೆ, ಗುಲ್ಬರ್ಗಾ ಮಿಸ್ಟಿಕ್ಸ್ 24.05 ಲಕ್ಷಗಳ ಕಡಿಮೆ ಹಣದೊಂದಿಗೆ ಹರಾಜಿಗೆ ಬರುತ್ತಿದೆ.
ಹರಾಜಿನಲ್ಲಿ ಎ ವರ್ಗದಲ್ಲಿ ಭಾರತ ಅಥವಾ ಐಪಿಎಲ್ ತಂಡವನ್ನ ಪ್ರತಿನಿಧಿಸಿರುವ ಕ್ರಿಕೆಟಿಗರು ಇರಲಿದ್ದಾರೆ. ಕಳೆದ ಋತುವಿನಲ್ಲಿ 2ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಅಭಿನವ್ ಮನೋಹರ್, ಟೂರ್ನಿಯ 2ನೇ ಸೀಸನ್‌ನಲ್ಲಿ ಹುಬ್ಳಿ ಟೈಗರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ನಾಯಕ ಮನೀಶ್ ಪಾಂಡೆ ಎ ವರ್ಗದ ಹರಾಜಿನಲ್ಲಿದ್ದಾರೆ. ಅವರೊಂದಿಗೆ ಕಳೆದ ವರ್ಷ ಗುಲ್ಬರ್ಗ ಮಿಸ್ಟಿಕ್ಸ್ ತಂಡದಲ್ಲಿದ್ದ ದೇವದತ್ ಪಡಿಕ್ಕಲ್, ಮೈಸೂರು ವಾರಿಯರ್ಸ್‌ನ ವಿಜಯದ ಭಾಗವಾಗಿದ್ದ ಶ್ರೇಯಸ್ ಗೋಪಾಲ್ ಮತ್ತು ಕೆ. ಗೌತಮ್ ಕೂಡ ಎ ವರ್ಗದಲ್ಲಿದ್ದಾರೆ.
ಕಳೆದ ವರ್ಷದ ಹರಾಜಿನಲ್ಲಿ ಅತ್ಯಂತ ದುಬಾರಿ (8.60 ಲಕ್ಷ) ಬೆಲೆಗೆ ಹರಾಜಾಗಿದ್ದ ಚೇತನ್.ಎಲ್.ಆರ್ ಹರಾಜಿನ ಬಿ ವರ್ಗದಲ್ಲಿದ್ದು, ಮತ್ತೊಮ್ಮೆ ಗಮನ ಸೆಳೆಯುವ ನಿರೀಕ್ಷೆಯಿದೆ. ಕಳೆದ ವರ್ಷ ಮೈಸೂರು ವಾರಿಯರ್ಸ್ ಪರ 16 ವಿಕೆಟ್‌ಗಳೊಂದಿಗೆ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ವಿದ್ಯಾಧರ್ ಪಾಟೀಲ್, ಮಂಗಳೂರು ಡ್ರಾಗನ್ಸ್ ಪರ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಾಗಿದ್ದ ಕೆ.ವಿ. ಸಿದ್ಧಾರ್ಥ್ ಮತ್ತು ನಿಕಿನ್ ಜೋಸ್, ರೋಹನ್ ಪಾಟೀಲ್, ಅನೀಶ್ ಕೆ.ವಿ. ಮತ್ತು ಮೊಹಮ್ಮದ್ ತಹಾ ಹಾಗೂ ವೇಗಿ ದರ್ಶನ್ ಎಂ.ಬಿ ಬಿ ವರ್ಗದಲ್ಲಿ ಸೇರಿದ್ದಾರೆ.
ಕಳೆದ ಋತುವಿನಲ್ಲಿ 17 ವಿಕೆಟ್‌ಗಳೊಂದಿಗೆ ವಿಕೆಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಕುಮಾರ್ ಎಲ್.ಆರ್, ಭಾರತದ ಅಂಡರ್ 19 ವೇಗಿ ಸಮರ್ಥ್ ನಾಗರಾಜ್, ಸಮಿತ್ ದ್ರಾವಿಡ್, ವಿಕೆಟ್ ಕೀಪರ್-ಬ್ಯಾಟರ್ ಹರ್ಷಿಲ್ ಧರ್ಮಾನಿ ಮತ್ತು ಕಳೆದ ಋತುವಿನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಪರ 14 ವಿಕೆಟ್‌ಗಳನ್ನು ಕಬಳಿಸಿದ್ದ ಎಂ.ಕ್ರಾಂತಿ ಕುಮಾರ್ ಸಿ ವರ್ಗದಲ್ಲಿದ್ದಾರೆ.
ಏತನ್ಮಧ್ಯೆ, ಕೆಎಸ್‌ಸಿಎಯ ಎಲ್ಲಾ ನೋಂದಾಯಿತ ಆಟಗಾರರಿಗೆ ಡಿ ವರ್ಗವನ್ನ ಕಾಯ್ದಿರಿಸಲಾಗಿದೆ. ಈ ಗುಂಪಿನಲ್ಲಿ ಕಳೆದ ವರ್ಷ ಬೆಂಗಳೂರು ಬ್ಲಾಸ್ಟರ್ಸ್ ಪರ 16 ವಿಕೆಟ್‌ಗಳೊಂದಿಗೆ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ ಲವೀಶ್ ಕೌಶಲ್ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಹರಾಜಿನಲ್ಲಿ ಪ್ರತಿ ತಂಡಕ್ಕೆ 50.00 ಲಕ್ಷ ರೂ.ಗಳ ಮೊತ್ತವನ್ನು ಪಡೆಯಲು ಅವಕಾಶವಿದೆ. ತಲಾ 4 ಆಟಗಾರರನ್ನು ಉಳಿಸಿಕೊಂಡ ಬಳಿಕ ಹುಬ್ಳಿ ಟೈಗರ್ಸ್ 41.50 ಲಕ್ಷ ರೂ ಮೊತ್ತದೊಂದಿಗೆ ಹರಾಜಿಗೆ ಪ್ರವೇಶಿಸುತ್ತದೆ, ಅವರ ನಂತರದಲ್ಲಿ 37.70 ಲಕ್ಷ ರೂ.ಗಳೊಂದಿಗೆ ಮಂಗಳೂರು ಡ್ರಾಗನ್ಸ್, 36.50 ಲಕ್ಷ ರೂ.ಗಳೊಂದಿಗೆ ಮೈಸೂರು ವಾರಿಯರ್ಸ್, 30.80 ಲಕ್ಷ ರೂ.ಗಳೊಂದಿಗೆ ಶಿವಮೊಗ್ಗ ಲಯನ್ಸ್, 28.40 ಲಕ್ಷ ರೂ.ಗಳೊಂದಿಗೆ ಬೆಂಗಳೂರು ಬ್ಲಾಸ್ಟರ್ಸ್ ಮತ್ತು 24.05 ಲಕ್ಷ ರೂ.ಗಳೊಂದಿಗೆ ಗುಲ್ಬರ್ಗಾ ಮಿಸ್ಟಿಕ್ಸ್ ಹರಾಜಿಗೆ ಪ್ರವೇಶಿಸುತ್ತಿವೆ.
ಮೈಸೂರು ವಾರಿಯರ್ಸ್: ಕರುಣ್ ನಾಯರ್ (INR 6.8L), ಪ್ರಸಿದ್ಧ್ ಕೃಷ್ಣ (INR 2L), ಕಾರ್ತಿಕ್ ಎಸ್.ಯು (INR 0.5L), ಕಾರ್ತಿಕ್ ಸಿ.ಎ (INR 4.2L)
ಬೆಂಗಳೂರು ಬ್ಲಾಸ್ಟರ್ಸ್: ಮಯಾಂಕ್ ಅಗರವಾಲ್ (INR 14L), ಶುಭಾಂಗ್ ಹೆಗ್ಡೆ (INR 4.3L), ಸೂರಜ್ ಅಹುಜಾ (INR 1L), ನವೀನ್ ಎಂ.ಜಿ (INR 2.3L)
ಹುಬ್ಬಳ್ಳಿ ಟೈಗರ್ಸ್: ಮನ್ವಂತ್ ಕುಮಾರ್.ಎಲ್ (INR 1L), ಶ್ರೀಜಿತ್ ಕೆ.ಎಲ್ (INR 2.1L), ಕಾರಿಯಪ್ಪ ಕೆ.ಸಿ (INR 4.2L), ಕಾರ್ತಿಕೇಯ ಕೆ.ಪಿ (INR 1.2L)
ಗುಲ್ಬರ್ಗಾ ಮಿಸ್ಟಿಕ್ಸ್: ಲವ್ನಿತ್ ಸಿಸೋಡಿಯಾ (INR 7.2L), ಪ್ರವೀಣ್ ದುಬೆ (INR 6.8L), ವೈಶಾಕ್.ವಿ (INR 8.8L), ಸ್ಮರನ್.ಆರ್ (INR 3.15L)
ಶಿವಮೊಗ್ಗ ಲಯನ್ಸ್: ಕೌಶಿಕ್.ವಿ (INR 5.9L), ನಿಹಾಲ್ ಉಳ್ಳಾಲ್ (INR 2.1L), ಹಾರ್ದಿಕ್ ರಾಜ್ (INR 5.8L), ಅವಿನಾಶ್.ಡಿ (INR 5.4L)
ಮಂಗಳೂರು ಡ್ರಾಗನ್ಸ್ : ಅಭಿಲಾಷ್ ಶೆಟ್ಟಿ (INR 6.3L), ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ (INR 5L), ಪರಸ್ ಗುರ್ಬೌಕ್ಸ್ ಆರ್ಯ (INR 0.5L), ಲೋಚನ್ ಎಸ್ ಗೌಡ (INR 0.5L)
ಹರಾಜು ಪ್ರಕ್ರಿಯೆ ಸಮಯ ಬೆಳಿಗ್ಗೆ : 9ಕ್ಕೆ
ನೇರ ಪ್ರಸಾರ :- ಫ್ಯಾನ್ ಕೋಡ್
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು1 year ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ