ಬೆಂಗಳೂರು

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನಿಂದ ವಿಮಾನ ಹಾರಾಟ ಆರಂಭ*

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಟರ್ಮಿನಲ್ 2ನಲ್ಲಿ ಇಂದಿನಿಂದ ವಿಮಾನಗಳ ಹಾರಾಟ ಆರಂಭ.ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ನವೆಂಬರ್ 11 ರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಉದ್ಘಾಟನೆ ಮಾಡಿದ್ದರು ಆದರೆ ವಿಮಾನಗಳ ಹಾರಾಟ ಆರಂಭವಾಗಿರಲಿಲ್ಲ.ಈ ಟರ್ಮಿನಲ್ 2 ಹೆಚ್ಚುವರಿಯಾಗಿ 2.5 ಕೋಟಿ ವೈಮಾನಿಕ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದು, ಅತಿ ದೊಡ್ಡ ಟರ್ಮಿನಲ್ ಗಳ ಪೈಕಿ ಇದು ಒಂದಾಗಿದೆ.ಏಷ್ಯಾದಲ್ಲಿ ಮೊದಲ ಹ್ಯಾಂಗಿಂಗ್ ಗಾರ್ಡನ್ ಇರುವ ಟರ್ಮಿನಲ್ ಆಗಿದೆ.13 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಟರ್ಮಿನಲ್ ಮೂಲಕ ಇಂದಿನಿಂದ ಅಂತರಾಷ್ಟ್ರೀಯ ವಿಮಾನಗಳು ಹಾರಾಟ ಆರಂಭಿಸಿವೆ.ಇಂದು ಬೆಳಿಗ್ಗೆ 10.45 ರಿಂದ ಕಾರ್ಯಾಚರಣೆ ಆರಂಭವಾಗಿದ್ದು.ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನಗಳ ಮಾಹಿತಿ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ.ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಿಲ್ದಾಣಗಳಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಒಂದಾಗಿದೆ.ಭಾರತದಲ್ಲೇ ಇದು ಅತಿ ಹೆಚ್ಚು ವಿಸ್ತಾರವಾಗಿರುವ ವಿಮಾನ ನಿಲ್ದಾಣವಾಗಿದೆ.ಇಂದಿನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿ ವಿಮಾನ ಕಾರ್ಯಾಚರಣೆ ಆರಂಭಿಸಿದೆ ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್2 ನಲ್ಲಿ ಬಿಎಂಟಿಸಿ ಬಸ್ ಗಳ ಸೇವೆ ಕೂಡ ಆರಂಭವಾಗಿದೆ…

Trending

Exit mobile version