Connect with us

ಸಿನಿಮಾ

ಬಿ.ಸರೋಜಾದೇವಿ- ಎಸ್.ಎಂ.ಕೃಷ್ಣ ಪ್ರೇಮ್ ಕಹಾನಿ: ಮದುವೆವರೆಗೂ ಬಂದಿದ್ದ ಸಂಬಂಧ ಮುರಿದು ಬಿದ್ದಿದ್ದೇಕೆ?

Published

on

ಬೆಂಗಳೂರು: ನಟಿ ಸರೋಜಾ ದೇವಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಡುವೆ ಒಂದು ಕಾಲದಲ್ಲಿ ಪ್ರೀತಿ ಅರಳಿತ್ತು. ರಾಜಕೀಯ ರಂಗಕ್ಕೆ ಆಗಷ್ಟೇ ಎಸ್‌.ಎಂ. ಕೃಷ್ಣ ಅವರು ಪಾದಾರ್ಪಣೆ ಮಾಡಿದ್ದರು. ತಮ್ಮ ಬುದ್ದಿವಂತಿಕೆ, ಶಾಂತ ಚಿತ್ತದ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಕೃಷ್ಣ ಅವರು ಕರ್ನಾಟಕದ ಜನತೆಯ ಮನಸ್ಸನ್ನು ಮಾತ್ರವಲ್ಲ ಸರೋಜಾ ದೇವಿಯವರ ಹೃದಯವನ್ನೂ ಗೆದ್ದಿದ್ದರು. ಇವರಿಬ್ಬರ ನಡುವಿನ ಪ್ರೀತಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು.

ರಾಜಕೀಯ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಎಸ್‌.ಎಂ. ಕೃಷ್ಣ ಯುವ ನಾಯಕರಾಗಿದ್ದಾಗ ಬಿ. ಸರೋಜಾದೇವಿ ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರರಂಗದ ಖ್ಯಾತ ನಟಿಯಾಗಿ ಬೆಳೆದಿದ್ದರು. ಅವರ ಸೌಂದರ್ಯ ಮತ್ತು ಅಭಿನಯ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿತ್ತು. ಎಸ್ ಎಂ ಕೃಷ್ಣ ಮತ್ತು ಸರೋಜಾದೇವಿ ಅವರ ನಡುವೆ ಪ್ರೇಮಾಂಕುರವಾಗಿತ್ತು, ಈ ವಿಷಯ ಮದುವೆವರೆಗೂ ಬಂದು ನಂತರ ಮುರಿದು ಬಿದ್ದಿದ್ದು ಇತಿಹಾಸ.

ಎಸ್. ಎಂ. ಕೃಷ್ಣ ಕುಟುಂಬ ಹಾಗೂ ಬಿ.ಸರೋಜಾದೇವಿ ಕುಟುಂಬಗಳ ನಡುವೆ ಪ್ರಾಥಮಿಕ ಮಾತುಕತೆ ನಡೆದಿದೆ. ಆದರೆ, ಇಬ್ಬರ ವಿವಾಹಕ್ಕೆ 2 ಕುಟುಂಬಗಳಲ್ಲಿ ಅಂತಿಮ ಒಪ್ಪಿಗೆ ಸಿಗಲಿಲ್ಲ. ಜೊತೆಗೆ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದ ಬಿ.ಸರೋಜಾದೇವಿ ಅವರನ್ನು ತಮ್ಮ ಮನೆಗೆ ಸೊಸೆಯನ್ನಾಗಿ ಮಾಡಿಕೊಳ್ಳಲು ಎಸ್.ಎಂ.ಕೃಷ್ಣ ಕುಟುಂಬದ ಹಿರಿಯರು ಕೂಡ ಒಲವು ತೋರಲಿಲ್ಲ. ಹೀಗಾಗಿ ಬಿ.ಸರೋಜಾ ದೇವಿ ಹಾಗೂ ಎಸ್.ಎಂ.ಕೃಷ್ಣ ನಡುವೆ ವಿವಾಹ ಸಂಬಂಧ ಏರ್ಪಡಲಿಲ್ಲ ಎಂದು ಎಸ್‌.ಎಂ.ಕೃಷ್ಣ ಸೋದರ ಎಸ್. ಎಂ. ಶಂಕರ್ ಹಿಂದೆ ಹೇಳಿದ್ದರು.

ರಾಜಕಾರಣಿ ಹಾಗೂ ಬರಹಗಾರ ಎಚ್‌.ವಿಶ್ವನಾಥ್ ಅವರು, ಅವರ ಆತ್ಮಕಥನ “ಹಳ್ಳಿ ಹಕ್ಕಿಯ ಹಾಡು” ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ಎಸ್‌.ಎಂ ಕೃಷ್ಣ ಹಾಗೂ ಬಿ. ಸರೋಜಾ ದೇವಿ ಅವರ ಪ್ರೇಮ ಪ್ರಸಂಗದ ಬಗ್ಗೆ ವಿಶ್ವನಾಥ್ ಅವರು ಉಲ್ಲೇಖಿಸಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಸರೋಜಾ ದೇವಿ ಅವರು ಈ ವಿಷಯವನ್ನು ಪ್ರಸ್ತಾಪಿಸದ್ದಕ್ಕೆ ತುಸು ಗರಂ ಆಗಿದ್ದರು.

ಇನ್ನೂ ಹಳ್ಳಿ ಹಕ್ಕಿ ಹಾಡು ಪುಸ್ತಕದ ಬಗ್ಗೆ ವಿವಾದ ಎದ್ದಾಗ, ಎಸ್.ಎಂ.ಕೃಷ್ಣ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದರು. ಆಗ ಎಸ್.ಎಂ.ಕೃಷ್ಣ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ, ಆಗ ಎಸ್‌.ಎಂ. ಕೃಷ್ಣ ಅವರ ಪತ್ನಿ ಪ್ರೇಮಾ ಅವರು ಪತ್ರಿಕಾ ಹೇಳಿಕೆಯ ಮೂಲಕ ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು. ಪ್ರೇಮಾ ಕೃಷ್ಣ ಅವರು ನೀಡಿದ್ದ ಸ್ಪಷ್ಟನೆಯಲ್ಲಿ ಬಿ.ಸರೋಜಾದೇವಿ ಅವರನ್ನು ಎಸ್‌.ಎಂ.ಕೃಷ್ಣ ಅವರ ಜೊತೆ ಮದುವೆ ಮಾಡುವ ಪ್ರಸ್ತಾಪ ಬಂದಿತ್ತು. ಆದರೆ, ಎಸ್.ಎಂ.ಕೃಷ್ಣ ಮನೆಯಲ್ಲಿ ಸಿನಿಮಾ ಹಿನ್ನಲೆಯವರನ್ನು ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳಲು ಹಿರಿಯರು ಒಪ್ಪಲಿಲ್ಲ. ಅಲ್ಲಿಗೆ ಈ ವಿಷಯ ಮುಗಿಯಿತು. ನಂತರ ಮುಂದುವರಿಯಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಈ ಇಬ್ಬರೂ ತಮ್ಮ ಜೀವನದಲ್ಲಿ ಈ ಪ್ರಸಂಗವನ್ನು ಸಾಮಾಜಿಕವಾಗಿ ದೊಡ್ಡದಾಗಿ ಚರ್ಚಿಸಲಿಲ್ಲ. ಕೃಷ್ಣ ಅವರು ತಮ್ಮ ಪತ್ನಿ ಪ್ರೇಮಾ ಅವರೊಂದಿಗೆ ದಾಂಪತ್ಯ ಜೀವನ ನಡೆಸಿದರು, ಸರೋಜಾದೇವಿ 1967ರಲ್ಲಿ ಶ್ರೀಹರ್ಷ ಎಂಬ ಎಂಜಿನಿಯರ್‌ ರನ್ನು ಮದುವೆಯಾಗಿ ತುಂಬು ಜೀವನ ನಡೆಸಿದ್ದರು.

ದೇಶ

ಮೆಲೊಡಿ ಟ್ರೆಂಡ್‌ಗೆ ಎಂಟ್ರಿ ಕೊಟ್ಟ ಬಾಲಿವುಡ್ ಜೋಡಿ: ಸೋನಾಕ್ಷಿ ವಿಡಿಯೋ ಸದ್ದು

Published

on

ಬಾಲಿವುಡ್ ನಟಿ Sonakshi Sinha ಮತ್ತು ಅವರ ಪತಿ Zaheer Iqbal ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮೋಜಿನ ಪೋಸ್ಟ್‌ಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ಆಗಿರುವ ‘ಮೆಲೊಡಿ’ ಮೀಮ್‌ಗೆ ಈ ಜೋಡಿ ಹೊಸ ಟ್ವಿಸ್ಟ್ ನೀಡಿದ್ದು, ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಬುಧವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ರೀಲ್ಸ್‌ನಲ್ಲಿ, ಸೋನಾಕ್ಷಿ ತಮ್ಮ ಪತಿ ಜಹೀರ್ ಅವರನ್ನು “ನೀನು ಏನು ಕೇಳಲು ಬಯಸುತ್ತೀಯ?” ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಜಹೀರ್, “ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಅನ್ನೋದು ನಿನಗೆ ಗೊತ್ತಿದೆ” ಎಂದು ಉತ್ತರಿಸುತ್ತಾರೆ. ಆದರೆ ಸೋನಾಕ್ಷಿ ತಮಾಷೆಯಾಗಿ “ಇಲ್ಲ” ಎಂದು ಪ್ರತಿಕ್ರಿಯಿಸುತ್ತಾರೆ. ಕೆಲವೇ ಕ್ಷಣಗಳಲ್ಲಿ ಜಹೀರ್ ತಮ್ಮ ಜೇಬಿನಿಂದ ‘ಮೆಲೊಡಿ’ ಚಾಕೊಲೇಟ್ ತೆಗೆದು “ಮೆಲೊಡಿ ತಿನ್ನು, ನೀನೇ ತಿಳಿದುಕೋ” ಎಂದು ಹೇಳುವ ದೃಶ್ಯ ಅಭಿಮಾನಿಗಳನ್ನು ನಗಿಸುವಂತಾಗಿದೆ.

ಈ ವಿಡಿಯೋ ಬಿಡುಗಡೆಯಾದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ. ಹಲವರು ಈ ಜೋಡಿಯ ಕೆಮಿಸ್ಟ್ರಿಯನ್ನು ಮೆಚ್ಚಿಕೊಂಡಿದ್ದು, ವೈರಲ್ ಟ್ರೆಂಡ್‌ಗೆ ತಮ್ಮದೇ ಶೈಲಿಯಲ್ಲಿ ಸ್ಪಂದಿಸಿರುವುದನ್ನು ಪ್ರಶಂಸಿಸಿದ್ದಾರೆ. ವಿಶೇಷವೆಂದರೆ, ಇವರ ಬಹುನಿರೀಕ್ಷಿತ ‘ಸಿಸ್ಟಮ್’ ಚಿತ್ರದ ಬಿಡುಗಡೆಗೂ ಮುನ್ನ ಈ ವಿಡಿಯೋ ಹೊರಬಂದಿರುವುದು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

‘ಮೆಲೊಡಿ’ ಟ್ರೆಂಡ್ ಮೊದಲು ಪ್ರಧಾನಿ Narendra Modi ಮತ್ತು ಇಟಲಿ ಪ್ರಧಾನಿ Giorgia Meloni ಅವರ ವೈರಲ್ ಫೋಟೋಗಳಿಂದ ಹುಟ್ಟಿಕೊಂಡಿತ್ತು. ಬಳಿಕ #Melodi ಹ್ಯಾಶ್‌ಟ್ಯಾಗ್ ಜಾಗತಿಕ ಮಟ್ಟದಲ್ಲಿ ಟ್ರೆಂಡ್ ಆಗಿ, ಇದೀಗ ಸಿನಿಮಾ ಮತ್ತು ಮನರಂಜನಾ ವಲಯಕ್ಕೂ ವ್ಯಾಪಿಸಿದೆ.

Continue Reading

ದೇಶ

‘ಜೋರಾಗಿ ಸಾರಿ ಹೇಳಿ!’ ಪಾಪರಾಜಿಗಳನ್ನು ಕಿಚಾಯಿಸಿದ ಸಲ್ಮಾನ್

Published

on

ಮುಂಬೈ: ಬಾಲಿವುಡ್‌ನ ಜನಪ್ರಿಯ ನಟ Salman Khan ಮತ್ತು ಪಾಪರಾಜಿಗಳ ನಡುವಿನ ಸಂಬಂಧ ಮತ್ತೆ ಸುದ್ದಿಯಾಗಿದೆ. ಮುಂಬೈನ ಆಸ್ಪತ್ರೆಯೊಂದರ ಹೊರಗೆ ನಡೆದ ಘಟನೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟಿಕೊಂಡಿತ್ತು. ಆದರೆ, ಇದೀಗ ಅದೇ ವಿಚಾರ ಸ್ನೇಹಪೂರ್ಣ ತಿರುವು ಪಡೆದುಕೊಂಡಿದೆ.

ಮರಾಠಿ ಸಿನಿಮಾ Raja Shivaji ಯಶಸ್ಸಿನ ಸಮಾರಂಭದಲ್ಲಿ ಸಲ್ಮಾನ್ ಖಾನ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಅಲ್ಲಿದ್ದ ಫೋಟೋಗ್ರಾಫರ್‌ಗಳು ಒಂದೇ ಸ್ವರದಲ್ಲಿ “ಸಾರಿ ಸರ್” ಎಂದು ಕೂಗಿ ಕ್ಷಮೆಯಾಚಿಸಿದರು. ಇದನ್ನು ಕೇಳಿದ ಸಲ್ಮಾನ್ ಕೂಡ ಹಾಸ್ಯಮಯವಾಗಿ ಪ್ರತಿಕ್ರಿಯಿಸಿ, “ಜೋರಾಗಿ ಸಾರಿ ಹೇಳಿ” ಎಂದು ಕಿಚಾಯಿಸಿದರು. ನಟ Riteish Deshmukh ಕೂಡ ಈ ಕ್ಷಣವನ್ನು ನೋಡಿ ನಗುವುದರಲ್ಲಿ ತೊಡಗಿಕೊಂಡರು.

ಇದಕ್ಕೂ ಮುನ್ನ ಸಲ್ಮಾನ್ ಖಾನ್ ತಮ್ಮ ಆತ್ಮೀಯರನ್ನು ಭೇಟಿ ಮಾಡಲು ಮುಂಬೈನ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಕೆಲ ಪಾಪರಾಜಿಗಳು ಅವರ ಹೆಸರನ್ನು ಕೂಗಿ ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದರು. ಇದರಿಂದ ಅಸಮಾಧಾನಗೊಂಡ ನಟ, ಆಸ್ಪತ್ರೆಗಳಂತಹ ಖಾಸಗಿ ಸ್ಥಳಗಳಲ್ಲಿ ಗೌಪ್ಯತೆಯನ್ನು ಕಾಪಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.

ಇದೇ ವೇಳೆ ಸಲ್ಮಾನ್ ಖಾನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ “Alone” ಮತ್ತು “Lonely” ಕುರಿತ ಚಿಂತನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು ಅಭಿಮಾನಿಗಳ ಗಮನ ಸೆಳೆದಿದೆ. “ಒಂಟಿತನ ನಮ್ಮ ಆಯ್ಕೆ ಆಗಿರಬಹುದು. ಆದರೆ ಯಾರೂ ನಮ್ಮ ಜೊತೆ ಇರಲು ಬಯಸದಾಗ ಅದು ನಿಜವಾದ ನೋವು” ಎಂದು ಅವರು ಬರೆದುಕೊಂಡಿದ್ದರು. ಈ ಪೋಸ್ಟ್‌ಗೆ ನಟಿ Sneha Ullal ಸಹ ಹಾಸ್ಯಮಯ ಕಾಮೆಂಟ್ ಮಾಡಿದ್ದು ವೈರಲ್ ಆಗಿದೆ.

ಸದ್ಯ ಸಲ್ಮಾನ್ ಖಾನ್ ಅವರ ಮುಂಬರುವ Kick 2, Tiger vs Pathaan ಹಾಗೂ Sikandar ಸಿನಿಮಾಗಳ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿದೆ.

Continue Reading

ದೇಶ

‘ಪೆದ್ದಿ’ ಟ್ರೇಲರ್‌ಗೆ ರಿಷಬ್ ಶೆಟ್ಟಿ ಫಿದಾ: “ರಾಮ್ ಚರಣ್ ಆ್ಯಬ್ಸಲ್ಯೂಟ್ ಫೈರ್”

Published

on

ಬೆಂಗಳೂರು: Rishab Shetty ಅಭಿನಯದ ‘ಕಾಂತಾರ’ ಬಳಿಕ ದೇಶವ್ಯಾಪಿ ಖ್ಯಾತಿ ಪಡೆದಿರುವ ರಿಷಬ್ ಶೆಟ್ಟಿ, ಇದೀಗ Peddi ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Ram Charan ಹಾಗೂ Shiva Rajkumar ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಆ್ಯಕ್ಷನ್–ಸ್ಪೋರ್ಟ್ಸ್ ಡ್ರಾಮಾ ಜೂನ್ 4, 2026ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಮೇ 18ರಂದು ಸಂಜೆ ಮುಂಬೈನ Jio World Driveನಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.

“ಪ್ರತಿ ಫ್ರೇಮ್‌ನಲ್ಲೂ ರಾಮ್ ಚರಣ್ ಫೈರ್”

ಟ್ರೇಲರ್ ನೋಡಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ರಿಷಬ್ ಶೆಟ್ಟಿ, “ಪೆದ್ದಿ ಟ್ರೇಲರ್ ಅದ್ಭುತವಾಗಿದೆ. ರಾಮ್ ಚರಣ್ ಪ್ರತಿಯೊಂದು ಫ್ರೇಮ್‌ನಲ್ಲೂ ಸ್ಟನ್ನಿಂಗ್ ಆಗಿ ಕಾಣಿಸುತ್ತಿದ್ದಾರೆ. ಅವರು ಆ್ಯಬ್ಸಲ್ಯೂಟ್ ಫೈರ್” ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ ಶಿವರಾಜ್‌ಕುಮಾರ್ ಅವರ ಸ್ಕ್ರೀನ್ ಪ್ರೆಸೆನ್ಸ್ ಚಿತ್ರಕ್ಕೆ ಭವ್ಯತೆ ತಂದಿದೆ ಎಂದು ಶ್ಲಾಘಿಸಿದ ಅವರು, Janhvi Kapoor ಅಭಿನಯವನ್ನೂ ಮೆಚ್ಚಿಕೊಂಡಿದ್ದಾರೆ.

ಶಿವಣ್ಣ ಪಾತ್ರಕ್ಕೂ ಭಾರೀ ಮೆಚ್ಚುಗೆ

ಟ್ರೇಲರ್ ಬಿಡುಗಡೆಗೂ ಮುನ್ನ ಶಿವರಾಜ್‌ಕುಮಾರ್ ನಿರ್ವಹಿಸಿರುವ “ಗೌರ್ನಾಯ್ಡು” ಪಾತ್ರದ ಪರಿಚಯ ವಿಡಿಯೋ ಕೂಡ ಬಿಡುಗಡೆಯಾಗಿತ್ತು. ಟ್ರೇಲರ್‌ನಲ್ಲಿ ಶಿವಣ್ಣನ ಸ್ಟೈಲಿಶ್ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ.

ಟ್ರೇಲರ್‌ನಲ್ಲಿ ಏನಿದೆ?

3 ನಿಮಿಷ 7 ಸೆಕೆಂಡ್ ಅವಧಿಯ ಟ್ರೇಲರ್‌ನಲ್ಲಿ ರಾಮ್ ಚರಣ್ ಹಲವು ಕ್ರೀಡಾಂಗಣಗಳಲ್ಲಿ ಮಿಂಚುತ್ತಿರುವ ದೃಶ್ಯಗಳಿವೆ. ಕುಸ್ತಿ, ಕ್ರಿಕೆಟ್ ಹಾಗೂ ಓಟ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಅವರ ಪಾತ್ರವನ್ನು ತೋರಿಸಲಾಗಿದೆ.

ಒಂದು ದೃಶ್ಯದಲ್ಲಿ Boman Irani, ರಾಮ್ ಚರಣ್ ಅವರನ್ನು “ಭಾರತದ ಕ್ರಾಸ್ ಅಥ್ಲೀಟ್” ಎಂದು ಹೊಗಳುತ್ತಾರೆ.

ಗ್ರಾಮೀಣ ಹಿನ್ನೆಲೆಯ ಕಥೆಯಲ್ಲಿ Divyendu Sharma ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಬುಚಿ ಬಾಬು ಸನಾ ನಿರ್ದೇಶನ

ಚಿತ್ರವನ್ನು Buchi Babu Sana ನಿರ್ದೇಶಿಸಿದ್ದು, A. R. Rahman ಸಂಗೀತ ಸಂಯೋಜನೆ ಮಾಡಿದ್ದಾರೆ.

ಈ ಚಿತ್ರವನ್ನು ವೆಂಕಟ್ ಸತೀಶ್ ಕಿಲಾರು ನಿರ್ಮಿಸಿದ್ದು, Mythri Movie Makers ಮತ್ತು Sukumar Writings ಪ್ರಸ್ತುತಪಡಿಸುತ್ತಿವೆ.

Continue Reading

Trending