Connect with us

ಅಪರಾಧ

ಗಿರ್ ಅರಣ್ಯದಲ್ಲಿ ರಕುಲ್ ಪ್ರೀತ್ ಸಿಂಗ್ ನಿಯಮ ಉಲ್ಲಂಘನೆ? ವೈರಲ್ ವಿಡಿಯೋಗೆ ಸ್ಪಷ್ಟನೆ

Published

on

ನಟಿ Rakul Preet Singh ಅವರು ಗುಜರಾತ್‌ನ Gir National Park ಅರಣ್ಯ ಪ್ರದೇಶದಲ್ಲಿ ವಾಹನದಿಂದ ಇಳಿದು ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಈ ವಿಚಾರಕ್ಕೆ ಗಿರ್ ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದ್ದು, ನಟಿ ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ತಿಳಿಸಿದೆ.

ಇತ್ತೀಚೆಗೆ ‘Pati Patni Aur Woh 2’ ಚಿತ್ರದ ಪ್ರಚಾರಕ್ಕಾಗಿ ರಕುಲ್ ಪ್ರೀತ್ ಸಿಂಗ್ ಗಿರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಸಫಾರಿ ವಾಹನದಿಂದ ಇಳಿದು ನಡೆದಾಡುತ್ತಿರುವ ದೃಶ್ಯಗಳನ್ನು ಕೆಲ ಪ್ರವಾಸಿಗರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ವಿಡಿಯೋ ವೈರಲ್ ಆದ ಬಳಿಕ, “ರಾಷ್ಟ್ರೀಯ ಉದ್ಯಾನವನದ ನಿರ್ಬಂಧಿತ ಪ್ರದೇಶದಲ್ಲಿ ವಾಹನದಿಂದ ಇಳಿಯುವುದು ನಿಯಮ ಉಲ್ಲಂಘನೆಯಲ್ಲವೇ? ಸೆಲೆಬ್ರಿಟಿಗಳಿಗೆ ಪ್ರತ್ಯೇಕ ನಿಯಮಗಳಿವೆಯೇ?” ಎಂದು ನೆಟ್ಟಿಗರು ಪ್ರಶ್ನಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಅರಣ್ಯ ಇಲಾಖೆ, ವೈರಲ್ ಆಗಿರುವ ವಿಡಿಯೋ ಉದ್ಯಾನವನದ ಒಳಗಿನ ನಿರ್ಬಂಧಿತ ಪ್ರದೇಶದ್ದಲ್ಲ ಎಂದು ಸ್ಪಷ್ಟಪಡಿಸಿದೆ. ರಕುಲ್ ಪ್ರೀತ್ ಸಿಂಗ್ ಅವರು ಉದ್ಯಾನವನದ ಪ್ರವೇಶ ದ್ವಾರಕ್ಕೆ ಮುನ್ನವೇ ಅನಾರೋಗ್ಯದ ಕಾರಣದಿಂದ ಹಿಂದಿರುಗಿದ್ದರು. ಹೀಗಾಗಿ ಅವರು ಯಾವುದೇ ಅರಣ್ಯ ನಿಯಮ ಉಲ್ಲಂಘಿಸಿಲ್ಲ ಎಂದು ಇಲಾಖೆ ತಿಳಿಸಿದೆ.

ಈ ಪ್ರವಾಸದಲ್ಲಿ Ayushmann Khurrana ಮತ್ತು Wamiqa Gabbi ಕೂಡ ಭಾಗಿಯಾಗಿದ್ದರು. ಇವರ ಗುಜರಾತಿ ಥಾಳಿ ಸವಿಯುವ ಹಾಗೂ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.

ಇದೇ ವೇಳೆ ‘ಪತಿ ಪತ್ನಿ ಔರ್ ವೋ 2’ ಸಿನಿಮಾ ಅಕ್ರಮ ಸಂಬಂಧವನ್ನು ಗ್ಲೋರಿಫೈ ಮಾಡುತ್ತಿದೆ ಎಂಬ ಟೀಕೆಗಳೂ ಕೇಳಿಬರುತ್ತಿವೆ.

Continue Reading
Click to comment

Leave a Reply

Your email address will not be published. Required fields are marked *

ಅಪರಾಧ

ಮೊಹರಂ ಮೆರವಣಿಗೆಯಲ್ಲಿ ವಿಷಕಾರಿ ಕ್ಯಾಪ್ಸುಲ್ ಹಂಚಿಕೆ! 15 ಸಾವಿರ ಜನರ ಹತ್ಯೆ ಸಂಚು ವಿಫಲ

Published

on

ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಡೆದ ಮೊಹರಂ ಮೆರವಣಿಗೆಯ ವೇಳೆ ಸಾವಿರಾರು ಜನರನ್ನು ಗುರಿಯಾಗಿಸಿಕೊಂಡು ವಿಷಕಾರಿ ಕ್ಯಾಪ್ಸುಲ್‌ಗಳನ್ನು ವಿತರಿಸುತ್ತಿದ್ದ ಆರೋಪದ ಮೇಲೆ ಫಯಾಜ್ ಪ್ರೇಮ್‌ಜಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಸಕಾಲದಲ್ಲಿ ಕಾರ್ಯಾಚರಣೆ ನಡೆಸಿದ ಪರಿಣಾಮ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದ್ದು, ಸ್ಥಳೀಯ ನ್ಯಾಯಾಲಯ ಆರೋಪಿಯನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಪೊಲೀಸರ ಪ್ರಕಾರ, ಕಳೆದ ಶುಕ್ರವಾರ (ಜೂನ್ 26) ರೇ ರಸ್ತೆಯ ರೆಹಮತಾಬಾದ್ ಸ್ಮಶಾನದ ಬಳಿ ನಡೆದ ಅಶುರಾ ಮೆರವಣಿಗೆಯಲ್ಲಿ ಆರೋಪಿ ಜನಸಂದಣಿಯ ಲಾಭ ಪಡೆದು ಕ್ಯಾಪ್ಸುಲ್‌ಗಳನ್ನು ನೋವು ನಿವಾರಕ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿ ಎಂದು ಹೇಳಿ ಸಾರ್ವಜನಿಕರಿಗೆ ವಿತರಿಸುತ್ತಿದ್ದ. ಈ ಕ್ಯಾಪ್ಸುಲ್‌ಗಳಲ್ಲಿ ಇಲಿ ವಿಷ (ಝಿಂಕ್ ಫಾಸ್ಫೈಡ್) ಹಾಗೂ ಇತರ ವಿಷಕಾರಿ ರಾಸಾಯನಿಕಗಳನ್ನು ಬೆರೆಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಈ ವಿಷಕಾರಿ ಕ್ಯಾಪ್ಸುಲ್‌ಗಳನ್ನು ಸೇವಿಸಿದ ಬಳಿಕ ಕನಿಷ್ಠ 11 ಮಂದಿ ಅಸ್ವಸ್ಥರಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಟ್ಟೆನೋವು, ವಾಂತಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದರೂ, ಚಿಕಿತ್ಸೆ ಬಳಿಕ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮುಂಬೈ ಪೊಲೀಸ್ ಡಿಸಿಪಿ (ಕೇಂದ್ರ ವಲಯ-I) ಜಯಂತ್ ಮೀನಾ ಅವರ ಮಾಹಿತಿ ಪ್ರಕಾರ, ಆರೋಪಿ ಸುಮಾರು 15,000 ಜನರನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾನೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಯಿಂದ 14,900 ವಿಷಕಾರಿ ಕ್ಯಾಪ್ಸುಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, 30,000 ಖಾಲಿ ಕ್ಯಾಪ್ಸುಲ್‌ಗಳು ಮತ್ತು 50 ಕೆಜಿ ಫಾಸ್ಫರಸ್ ಖರೀದಿಸಲು ಆರ್ಡರ್ ನೀಡಿದ್ದ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಘಟನೆ ಪತ್ತೆಯಾಗಲು ಮೂರು ಮಹಿಳಾ ಸ್ವಯಂಸೇವಕರ ಜಾಗರೂಕತೆ ಪ್ರಮುಖ ಕಾರಣವಾಗಿದೆ. ಆರೋಪಿ ಅನುಮಾನಾಸ್ಪದ ರೀತಿಯಲ್ಲಿ ಮಾತ್ರೆಗಳನ್ನು ಹಂಚುತ್ತಿರುವುದನ್ನು ಗಮನಿಸಿದ ಸ್ವಯಂಸೇವಕರು ಕೂಡಲೇ ಆತನನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಕ್ಯಾಪ್ಸುಲ್ ಸೇವಿಸದಂತೆ ಎಚ್ಚರಿಕೆ ನೀಡಲಾಯಿತು. ಇದರಿಂದ ಸಾವಿರಾರು ಜನರ ಜೀವ ಉಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಫಯಾಜ್ ಪ್ರೇಮ್‌ಜಿ ಬಿಬಿಎ ಪದವೀಧರನಾಗಿದ್ದು, ಆತ ಇರಾನ್ ಮತ್ತು ಇರಾಕ್‌ಗೆ ಪ್ರಯಾಣಿಸಿದ್ದ ಹಿನ್ನೆಲೆ ಹೊಂದಿದ್ದಾನೆ ಎಂಬ ಮಾಹಿತಿಯೂ ತನಿಖೆಯಲ್ಲಿ ಲಭ್ಯವಾಗಿದೆ. ಈ ಪ್ರಯಾಣಗಳ ಉದ್ದೇಶ ಹಾಗೂ ಸಂಚಿನ ಹಿಂದಿನ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಝಿಂಕ್ ಫಾಸ್ಫೈಡ್ ಎಷ್ಟು ಅಪಾಯಕಾರಿ?

ಝಿಂಕ್ ಫಾಸ್ಫೈಡ್ (Zinc Phosphide) ಇಲಿ ವಿಷವಾಗಿ ಬಳಸಲಾಗುವ ಅತ್ಯಂತ ವಿಷಕಾರಿ ರಾಸಾಯನಿಕವಾಗಿದೆ. ಇದು ಹೊಟ್ಟೆಯಲ್ಲಿನ ಗ್ಯಾಸ್ಟ್ರಿಕ್ ಆಮ್ಲದೊಂದಿಗೆ ಪ್ರತಿಕ್ರಿಯಿಸಿ ಫಾಸ್ಫೈನ್ ಅನಿಲ ಉತ್ಪಾದಿಸುತ್ತದೆ. ಈ ಅನಿಲವು ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ ಹಾಗೂ ಮೆದುಳಿಗೆ ತೀವ್ರ ಹಾನಿ ಉಂಟುಮಾಡುವ ಸಾಮರ್ಥ್ಯ ಹೊಂದಿದೆ. ಇಂತಹ ವಿಷ ಸೇವನೆಯ ಸಂದರ್ಭದಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಿಸಿ ರೋಗಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ಹಾಗೂ ಅಗತ್ಯವಿದ್ದರೆ ವೆಂಟಿಲೇಟರ್ ಬೆಂಬಲ ನೀಡುವುದು ಜೀವ ಉಳಿಸುವ ಪ್ರಮುಖ ಮಾರ್ಗವಾಗಿದೆ.


ದೇಶ-ವಿದೇಶದ ಪ್ರಮುಖ ಬೆಳವಣಿಗೆಗಳು, ಅಪರಾಧ ಹಾಗೂ ಬ್ರೇಕಿಂಗ್ ಸುದ್ದಿಗಳಿಗಾಗಿ ನಿರಂತರವಾಗಿ ಭೇಟಿ ನೀಡಿ Hosasuddi.in.
ನಿಖರ, ವಿಶ್ವಾಸಾರ್ಹ ಹಾಗೂ ವೇಗದ ಕನ್ನಡ ಸುದ್ದಿಗಳಿಗೆ
Hosasuddi.in ನಿಮ್ಮ ನೆಚ್ಚಿನ ಸುದ್ದಿ ತಾಣ.

Continue Reading

ಅಪರಾಧ

ಆರ್‌ಎಸ್‌ಎಸ್ ವಿರುದ್ಧದ ಹೇಳಿಕೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಕೋರ್ಟ್ ಸಮನ್ಸ್, ಜುಲೈ 21ಕ್ಕೆ ಖುದ್ದು ಹಾಜರಿಗೆ ಆದೇಶ

Published

on

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಪ್ರಕರಣ ಸಂಬಂಧ ಜುಲೈ 21ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಬೆಂಗಳೂರು ಸಿದ್ದಾಪುರ ನಿವಾಸಿ ಎ. ತೇಜಸ್ ದಾಖಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು, ಪ್ರಿಯಾಂಕ್ ಖರ್ಗೆ ಹಾಗೂ ಹ್ಯಾರಿಸ್ ನಲಪಾಡ್ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಂಡು ಸಮನ್ಸ್ ಜಾರಿ ಮಾಡಿದೆ. ಇದೇ ವೇಳೆ ಪ್ರಕರಣದ ಎರಡನೇ ಆರೋಪಿಯಾಗಿದ್ದ ಮಾಜಿ ಸಚಿವ ದಿನೇಶ್ ಗುಂಡೂರಾವ್ ವಿರುದ್ಧದ ಆರೋಪವನ್ನು ಕೈಬಿಡಲಾಗಿದೆ.

ಪ್ರಕರಣದ ಪ್ರಕಾರ, ಆರ್‌ಎಸ್‌ಎಸ್ ಸಂಘಟನೆಯ ಚಟುವಟಿಕೆಗಳ ವಿರುದ್ಧ ಪ್ರಿಯಾಂಕ್ ಖರ್ಗೆ ಅವರು ಈ ಹಿಂದೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಸಂಘದ ಮೇಲೆ ನಿಷೇಧ ಹೇರಬೇಕು ಎಂದು ಆಗ್ರಹಿಸಿದ್ದರು. ಸರ್ಕಾರಿ ಶಾಲೆಗಳು, ಸರ್ಕಾರಿ ಸ್ಥಳಗಳು ಹಾಗೂ ಸಾರ್ವಜನಿಕ ಮೈದಾನಗಳಲ್ಲಿ ಸಂಘದ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಪತ್ರವನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲೂ ಹಂಚಿಕೊಂಡಿದ್ದಲ್ಲದೆ, ಆರ್‌ಎಸ್‌ಎಸ್ ಜೊತೆ ಸ್ನೇಹ ಮಾಡಬಾರದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು.

ಇನ್ನೊಂದೆಡೆ, ಹ್ಯಾರಿಸ್ ನಲಪಾಡ್ ಖಾಸಗಿ ಯೂಟ್ಯೂಬ್ ವಾಹಿನಿಯೊಂದರಲ್ಲಿ ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹೇಳಿಕೆಗಳಿಂದ ಸಂಘದ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ ಕಾನೂನು ಕ್ರಮಕ್ಕೆ ಮನವಿ ಮಾಡಲಾಗಿತ್ತು.

ಇತ್ತೀಚೆಗಷ್ಟೇ ಆರ್‌ಎಸ್‌ಎಸ್ ನೋಂದಣಿಯಾಗದಿರುವ ವಿಚಾರ ಪ್ರಸ್ತಾಪಿಸಿ, ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಪ್ರಿಯಾಂಕ್ ಖರ್ಗೆ ಎಂಟು ಪ್ರಶ್ನೆಗಳನ್ನೊಳಗೊಂಡ ಪತ್ರ ಬರೆದಿದ್ದರು. ಈ ಪತ್ರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಇದೇ ವಿಚಾರಗಳ ನಡುವೆ ನ್ಯಾಯಾಲಯದ ಸಮನ್ಸ್ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಜುಲೈ 21ರಂದು ನಡೆಯಲಿರುವ ವಿಚಾರಣೆಯತ್ತ ರಾಜಕೀಯ ವಲಯದ ಗಮನ ನೆಟ್ಟಿದೆ.


ಇನ್ನಷ್ಟು ತಾಜಾ ಹಾಗೂ ನಿಖರ ಸುದ್ದಿಗಳಿಗಾಗಿ ನಿರಂತರವಾಗಿ ಭೇಟಿ ನೀಡಿ Hosasuddi.in.
ನಿಮ್ಮ ವಿಶ್ವಾಸವೇ ನಮ್ಮ ಶಕ್ತಿ – ಕ್ಷಣಕ್ಷಣದ ಸುದ್ದಿಗಳಿಗೆ
Hosasuddi.in ಜೊತೆಯಲ್ಲಿರಿ.

Continue Reading

ಅಪರಾಧ

ಪ್ರೇಮ ಕಲಹಕ್ಕೆ ಭೀಕರ ಅಂತ್ಯ! ತುಮಕೂರು ಹೆದ್ದಾರಿಯಲ್ಲಿ ಕಾರಿನೊಳಗೆ ಬೆಂಕಿ ದುರಂತ

Published

on

ತುಮಕೂರು: ಪ್ರೇಮಿಗಳ ನಡುವಿನ ವೈಯಕ್ತಿಕ ಮನಸ್ತಾಪ ಭೀಕರ ದುರಂತಕ್ಕೆ ತಿರುಗಿದ ಘಟನೆ ತುಮಕೂರು–ಪುಣೆ ರಾಷ್ಟ್ರೀಯ ಹೆದ್ದಾರಿಯ ಸಿರಾ ಸಮೀಪದ ಜೋಗಿಹಳ್ಳಿ ಬಳಿ ನಡೆದಿದೆ. ಯುವಕನೊಬ್ಬ ತನ್ನ ಪ್ರೇಯಸಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಬಳಿಕ ಕಾರಿನೊಳಗೆ ಸ್ಫೋಟಕ ದ್ರವ ಬಳಸಿ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಯುವತಿಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತನನ್ನು ಬೆಂಗಳೂರಿನ ನಾಗೇಂದ್ರ ಎಂದು ಗುರುತಿಸಲಾಗಿದ್ದು, ಗಾಯಾಳು ರಮ್ಯಾ ಬೆಂಗಳೂರಿನ ಜಯನಗರದಲ್ಲಿ ವಾಸವಿದ್ದು, ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಓಟಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಳು. ಇಬ್ಬರೂ ಸುಮಾರು ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಉಂಟಾದ ಮನಸ್ತಾಪದಿಂದ ರಮ್ಯಾ ನಾಗೇಂದ್ರನ ಸಂಪರ್ಕವನ್ನು ಕಡಿತಗೊಳಿಸಿದ್ದಳು ಎಂದು ತಿಳಿದುಬಂದಿದೆ.

ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ನಾಗೇಂದ್ರ ಶನಿವಾರ ಬೆಳಗ್ಗೆ ರಮ್ಯಾಳ ನಿವಾಸಕ್ಕೆ ತೆರಳಿ ಗಲಾಟೆ ನಡೆಸಿದ್ದಾನೆ. ಬಳಿಕ ಆಕೆಯನ್ನು ಬಲವಂತವಾಗಿ ಬಾಡಿಗೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಪ್ರಯಾಣದ ವೇಳೆ ಇಬ್ಬರ ನಡುವೆ ಮತ್ತೆ ವಾಗ್ವಾದ ನಡೆದಿದ್ದು, ಕಾರಿನಲ್ಲಿ ಸ್ಫೋಟಕ ದ್ರವವನ್ನು ತೋರಿಸಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಸಿರಾ ಸಮೀಪದ ಜೋಗಿಹಳ್ಳಿ ಬಳಿ ಕಾರು ತಲುಪುತ್ತಿದ್ದಂತೆ ನಾಗೇಂದ್ರ, ರಮ್ಯಾಳ ತಲೆ ಮತ್ತು ಕೈಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಸಮಯಪ್ರಜ್ಞೆ ಮೆರೆದ ರಮ್ಯಾ ಚಲಿಸುತ್ತಿದ್ದ ಕಾರಿನಿಂದ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಬಳಿಕ ಕಾರಿನೊಳಗೆ ಬೆಂಕಿ ಕಾಣಿಸಿಕೊಂಡು ನಾಗೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಎಲ್ಲಾ ಆಯಾಮಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Continue Reading

Trending