Connect with us

ಸಿನಿಮಾ

2023ರ ಸೈಮಾ ಅರ್ವಾಡ್:ಒಟ್ಟೊಟ್ಟಿಗೆ 10 ಪ್ರಶಸ್ತಿ ತನ್ನದಾಗಿಸಿಕೊಂಡ ಕಾಂತರ ಸಿನಿಮಾ!

Published

on

ಕಾಂತಾರ’ ಸಿನಿಮಾಗೆ 10 ಸೈಮಾ ಪ್ರಶಸ್ತಿ ಬಂದಿದೆ. ರಿಷಬ್​ ಶೆಟ್ಟಿ ಅವರು ಈ ಖುಷಿಯನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ರಿಷಬ್​ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ‘ಕಾಂತಾರ’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಮಾತ್ರವಲ್ಲದೇ ಪ್ರಶಸ್ತಿ ಬಾಚಿಕೊಳ್ಳುವಲ್ಲಿಯೂ ಮುಂಚೂಣಿಯಲ್ಲಿದೆ.ಕನ್ನಡದ ಕಾಂತಾರ ಸಿನಿಮಾ ಇಡೀ ದೇಶದಾದ್ಯಂತ ಕಮಾಲ್ ಮಾಡಿತ್ತು. ಬಾಲಿವುಡ್ ಅಂಗಳದಲ್ಲೂ ಭರ್ಜರಿ ಪ್ರದರ್ಶನ ಕಂಡು ದಾಖಲೆ ಬರೆಯಿತು.ಕನ್ನಡ ಸೂಪರ್ ಹಿಟ್ ಸಿನಿಮಾ ಕಾಂತಾರ ಇತರ ಭಾಷೆಗಳಲ್ಲೂ ಭರ್ಜರಿ ಸದ್ದು ಮಾಡಿತ್ತು. ಈ ಸಿನಿಮಾ ರಿಷಬ್ ಲಕ್ ಅನ್ನೇ ಬದಲಿಸಿದೆ. ಕಾಂತಾರ ಸಿನಿಮಾ ಮೂಲಕ ನಟ, ನಿರ್ದೇಶಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ನಡೆದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬರೋಬ್ಬರಿ 10 ವಿಭಾಗಗಳಲ್ಲಿ ಕಾಂತಾರ ಸಿನಿಮಾಗೆ ಅವಾರ್ಡ್​ ಸಿಕ್ಕಿರುವುದು ವಿಶೇಷ. ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಹಾಸ್ಯ ನಟ, ಅತ್ಯುತ್ತಮ ಸಂಗೀತ ನಿರ್ದೇಶನ ಮುಂತಾದ ವಿಭಾಗಗಳಲ್ಲಿ ‘ಕಾಂತಾರ’ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿರುವುದನ್ನು ರಿಷಬ್​ ಶೆಟ್ಟಿ ಅವರು ಸಂಭ್ರಮಿಸುತ್ತಿದ್ದಾರೆ. ಜನರ ಮನ್ನಣೆಯಿಂದ ಸಿಕ್ಕ ಪ್ರೀತಿಯೇ ಕಾಂತಾರ ಸಿನಿಮಾದ ಯಶಸ್ಸಿಗೆ ಕಾರಣ ಎಂದು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು.ತುಳುನಾಡಿನ ಸಂಸ್ಕೃತಿ ಮತ್ತು ಆಚರಣೆಗಳ ಬಗ್ಗೆ ‘ಕಾಂತಾರ’ ಸಿನಿಮಾದಲ್ಲಿ ತೋರಿಸಲಾಗಿದೆ. 2022ರ ಸೆಪ್ಟೆಂಬರ್​ 30ರಂದು ಬಿಡುಗಡೆ ಆದ ಈ ಸಿನಿಮಾದಲ್ಲಿನ ರಿಷಬ್​ ಶೆಟ್ಟಿ ಅವರ ನಟನೆಗೆ ಫಿದಾ ಆಗದವರಿಲ್ಲ.ಅದರಲ್ಲೂ ಕ್ಲೈಮ್ಯಾಕ್ಸ್​ ದೃಶ್ಯ ಹೆಚ್ಚು ಗಮನ ಸೆಳೆದಿತ್ತು. ಬೇರೆ ಭಾಷೆಗಳಿಗೆ ಡಬ್​ ಆಗಿ ತೆರೆಕಂಡು ಹಲವು ರಾಜ್ಯಗಳಲ್ಲಿ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಂಡಿತ್ತು. ಬಾಲಿವುಡ್​ ಮಟ್ಟದಲ್ಲಿ ರಿಷಬ್​ ಶೆಟ್ಟಿ ಅವರಿಗೆ ಜನಪ್ರಿಯತೆ ಸಿಕ್ಕಿತು. ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಗೆ ಭರ್ಜರಿ ಲಾಭ ಆಯಿತು. ಮನ ತುಂಬಿ ಬಂದಿದೆ, ಜವಾಬ್ದಾರಿ ಹೆಚ್ಚಿಸಿದೆ. ನಿಮ್ಮ ಪ್ರೀತಿ, ಆಶೀರ್ವಾದ ಹೀಗೇ ಇರಲಿ. ಈ ಎಲ್ಲಾ ಯಶಸ್ಸನ್ನು ದೈವ ನರ್ತಕರು, ಅಪ್ಪು ಸರ್ ಹಾಗೂ ಕನ್ನಡಿಗರಿಗೆ ಸಮರ್ಪಣೆ ಮಾಡುವುದಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.ಕಾಂತಾರ ಸಿನಿಮಾ 10 ಪ್ರಶಸ್ತಿಯನ್ನು ಗೆದ್ದಿದೆ ಎಂದಿದ್ದಾರೆ.ಇನ್ನು ರಿಷಬ್ ಪತ್ನಿ ಪ್ರಗತಿರವರು ನನ್ನ ಪತಿಗಾಗಿ ನಾನು ಫ್ಯಾಷನ್ ಡಿಸೈನ್ ಮಾಡಿದೆ ಕೆಲಸವನ್ನು ಬಹಳ ಹೆಮ್ಮೆಯಿಂದ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ರಿಷಬ್ ಹಾಗೂ ಪ್ರಗತಿ ಇಬ್ಬರೂ ಸೈಮಾ ಸಮಾರಂಭದಲ್ಲಿ ಮಿಂಚಿದ್ರು. ಈಗ ‘ಕಾಂತಾರ 2’ ಸಿನಿಮಾಗೆ ಸಿದ್ಧತೆಗಳು ನಡೆಯುತ್ತಿವೆ.ಸೈಮಾ ಅವಾರ್ಡ್ಸ್ನಲ್ಲಿ ರಿಷಬ್ ಶೆಟ್ಟಿ ಡ್ರೆಸ್ ಕೂಡ ಎಲ್ಲರ ಗಮನ ಸೆಳೆದಿತ್ತು. ಈ ಉಡುಗೆಯನ್ನು ಪತ್ನಿ ಪ್ರಗತಿಯೇ ಡಿಸೈನ್ ಮಾಡಿದ್ದಾರೆ.

ದೇಶ

ರಾಜಮೌಳಿ ಚಿತ್ರದಲ್ಲಿ ಜೂ. ಎನ್‌ಟಿಆರ್ ಪುತ್ರ ಎಂಟ್ರಿ? ‘ವಾರಣಾಸಿ’ ಬಗ್ಗೆ ಭಾರೀ ಚರ್ಚೆ

Published

on

ನವದೆಹಲಿ: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ S. S. Rajamouli ಅವರ ಸಿನಿಮಾಗಳು ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿವೆ. ಅವರ ಹೊಸ ಸಿನಿಮಾ ‘ವಾರಣಾಸಿ’ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದ್ದು, ಇದಕ್ಕೆ ಸಂಬಂಧಿಸಿದ ಹೊಸ ಸುದ್ದಿಯೊಂದು ಸಿನಿ ವಲಯದಲ್ಲಿ ಸದ್ದು ಮಾಡುತ್ತಿದೆ.

ಸ್ಟಾರ್ ನಟ Jr. NTR ಅವರ ಪುತ್ರ ಭಾರ್ಗವ್ ರಾಮ್ ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಚಿತ್ರದಲ್ಲಿ ನಟಿಸುತ್ತಿರುವ Mahesh Babu ಅವರ ಬಾಲ್ಯದ ಪಾತ್ರದಲ್ಲಿ ಭಾರ್ಗವ್ ರಾಮ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ರಾಜಮೌಳಿ ಅವರ ಸಿನಿಮಾಗಳಲ್ಲಿ ನಾಯಕನ ಬಾಲ್ಯದ ಕಥೆಗೆ ವಿಶೇಷ ಮಹತ್ವವಿರುತ್ತದೆ. ಇದೇ ಶೈಲಿಯನ್ನು ‘ವಾರಣಾಸಿ’ ಸಿನಿಮಾದಲ್ಲಿಯೂ ಮುಂದುವರಿಸಲಾಗುತ್ತಿದ್ದು, ಫ್ಲ್ಯಾಶ್‌ಬ್ಯಾಕ್ ಸನ್ನಿವೇಶದಲ್ಲಿ ಬಾಲ್ಯದ ಪಾತ್ರ ಪ್ರಮುಖ ಪಾತ್ರವಹಿಸಲಿದೆ ಎಂದು ತಿಳಿದುಬಂದಿದೆ.

ಹೆಚ್ಚಿನ ಆಸಕ್ತಿಯ ಸಂಗತಿ ಎಂದರೆ, Jr. NTR ಕೂಡ ಬಾಲನಟನಾಗಿಯೇ ತಮ್ಮ ಸಿನಿ ಜೀವನವನ್ನು ಆರಂಭಿಸಿದ್ದರು. ‘ರಾಮಾಯಣಂ’ ಚಿತ್ರದಲ್ಲಿ ಅಭಿನಯಿಸಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು. ಈಗ ಅವರ ಪುತ್ರವೂ ಅದೇ ಹಾದಿಯಲ್ಲಿ ಸಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಈ ಸಿನಿಮಾದಲ್ಲಿ ನಟಿಸಲು ಅನೇಕ ದೊಡ್ಡ ನಟರು ಆಸಕ್ತಿ ತೋರಿಸುತ್ತಿದ್ದು, ಸಂಭಾವನೆ ಇಲ್ಲದಿದ್ದರೂ ಪಾತ್ರಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ. ರಾಜಮೌಳಿ ನಿರ್ದೇಶನ ಮತ್ತು ಮಹೇಶ್ ಬಾಬು ನಟನೆಯ ಸಂಯೋಜನೆಯಿಂದ ‘ವಾರಣಾಸಿ’ ಈಗಾಗಲೇ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಒಟ್ಟಾರೆ, ಭಾರ್ಗವ್ ರಾಮ್ ಅವರ ಎಂಟ್ರಿ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಬಾರದಿದ್ದರೂ, ಈ ಸುದ್ದಿ ಜೂ. ಎನ್‌ಟಿಆರ್ ಅಭಿಮಾನಿಗಳಿಗೆ ಸಂತಸದ ಅಲೆ ಮೂಡಿಸಿದೆ.

Continue Reading

ದೇಶ

‘ಬಡೇ ಸಾಬ್’ ಪಾತ್ರದ ಹಿಂದಿನ ಸತ್ಯ: ದಾವೂದ್ ಕುರಿತ ಚರ್ಚೆ

Published

on

ಬೆಂಗಳೂರು: ಭಾರತದ ಮೋಸ್ಟ್ ವಾಂಟೆಡ್ ಅಪರಾಧಿ Dawood Ibrahim ಮತ್ತೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್‌ನಲ್ಲಿ ಬಿಡುಗಡೆಯಾದ Dhurandhar 2 ಚಿತ್ರದ ಭಾರೀ ಯಶಸ್ಸಿನ ಬೆನ್ನಲ್ಲೇ ದಾವೂದ್ ಇಬ್ರಾಹಿಂ ಕುರಿತ ಚರ್ಚೆ ಮತ್ತೆ ಜೋರಾಗಿದೆ.

1990ರ ದಶಕದ 1993 Bombay bombings ದಾಳಿಗಳ ಮಾಸ್ಟರ್ ಮೈಂಡ್ ಆಗಿದ್ದ ದಾವೂದ್, ನಂತರ ಪಾಕಿಸ್ತಾನಕ್ಕೆ ಪಲಾಯನ ಮಾಡಿದನು. ಅಂದಿನಿಂದಲೇ ತನ್ನ ‘ಡಿ-ಗ್ಯಾಂಗ್’ ಕಾರ್ಯಾಚರಣೆಗಳನ್ನು ಅಲ್ಲಿಂದಲೇ ನಿರ್ವಹಿಸುತ್ತಿದ್ದಾನೆ ಎಂಬ ಆರೋಪಗಳಿವೆ.

ಸದ್ಯದ ಮಾಹಿತಿಗಳ ಪ್ರಕಾರ, ದಾವೂದ್ ಪಾಕಿಸ್ತಾನದ Karachi ನಗರದಲ್ಲಿನ ಕ್ಲಿಫ್ಟನ್ ಪ್ರದೇಶದ 13ನೇ ರಸ್ತೆಯ ‘ವೈಟ್ ಹೌಸ್’ ಎಂಬ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾನೆ ಎನ್ನಲಾಗುತ್ತಿದೆ. ಈ ಪ್ರದೇಶವು ಪಾಕಿಸ್ತಾನದ ಅತ್ಯಂತ ಭದ್ರತಾ ವ್ಯವಸ್ಥೆ ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ.

ಇನ್ನೂ ಕೆಲವು ವರದಿಗಳ ಪ್ರಕಾರ, ಕರಾಚಿಯ ಡಿಫೆನ್ಸ್ ಹೌಸಿಂಗ್ ಏರಿಯಾ (DHA) ಹಾಗೂ ಖಯ್ಯುಮಾಬಾದ್ ಪ್ರದೇಶದಲ್ಲಿಯೂ ದಾವೂದ್ ನಿವಾಸ ಹೊಂದಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಭಾರತೀಯ ಗುಪ್ತಚರ ಸಂಸ್ಥೆಗಳಿಗೂ ಇದೇ ರೀತಿಯ ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ.

‘ಧುರಂಧರ್ 2’ ಸಿನಿಮಾದಲ್ಲಿ ‘ಬಡೇ ಸಾಬ್’ ಎಂಬ ಪಾತ್ರದ ಮೂಲಕ ದಾವೂದ್ ಇಬ್ರಾಹಿಂನಂತೆ ಕಾಣುವ ಪಾತ್ರವನ್ನು ಚಿತ್ರಿಸಲಾಗಿದೆ. ನೈಜ ಘಟನೆಗಳನ್ನು ಆಧರಿಸಿದ ಕಥಾಹಂದರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಈ ಪಾತ್ರ ಭಾರೀ ಚರ್ಚೆಗೆ ಕಾರಣವಾಗಿದೆ.

ಆದಾಗ್ಯೂ, ದಾವೂದ್ ಇಬ್ರಾಹಿಂ ನಿಖರವಾಗಿ ಎಲ್ಲಿದ್ದಾನೆ ಎಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಆದರೆ ಸಿನಿಮಾ ಮತ್ತು ಗುಪ್ತಚರ ಮಾಹಿತಿಗಳ ಹಿನ್ನೆಲೆ, ದಾವೂದ್ ಕುರಿತ ಚರ್ಚೆ ಮತ್ತೆ ಜಾಗತಿಕ ಮಟ್ಟದಲ್ಲಿ ತೀವ್ರವಾಗಿದೆ

Continue Reading

ದೇಶ

ಲಾಸ್ ಏಂಜಲೀಸ್‌ನಲ್ಲಿ ‘ರಾಮಾಯಣ’ ಟೀಸರ್ ಸದ್ದು: ರಣಬೀರ್ ಲುಕ್‌ಗೆ ಭಾರೀ ಚಪ್ಪಾಳೆ

Published

on

Continue Reading

Trending