Blog
ಪದ್ಮಾಸನ

ಪದ್ಮವೆಂದರೆ ಕಮಲದ ಹೂವು ಎಂದರ್ಥ. ಕಮಲದ ಹೂವನ್ನು ಹೋಲುವ ಈ ಭಂಗಿಗೆ ಪದ್ಮಾಸನ ಎಂದು ಕರೆದಿದ್ದಾರೆ. ಹಿಂದೆ ಎಲ್ಲಾ ತಪಸ್ವಿಗಳು ಈ ಆಸನದಲ್ಲಿ ತಮ್ಮ ಸಾಧನೆಗೈದಿರುವುದನ್ನು ನಾವು ಕಾಣಬಹುದು. ಪದ್ಮವೆಂದರೆ ಕಮಲದ ಹೂವು ಎಂದರ್ಥ. ಕಮಲದ ಹೂವನ್ನು ಹೋಲುವ ಈ ಭಂಗಿಗೆ ಪದ್ಮಾಸನ ಎಂದು ಕರೆದಿದ್ದಾರೆ. ಹಿಂದೆ ಎಲ್ಲಾ ತಪಸ್ವಿಗಳು ಈ ಆಸನದಲ್ಲಿ ತಮ್ಮ ಸಾಧನೆಗೈದಿರುವುದನ್ನು ನಾವು ಕಾಣಬಹುದು. ಪದ್ಮಾಸನ ನೋಡಲು ಸರಳವಾಗಿ ಕಾಣುತ್ತದೆ. ಆದರೆ ಇದಕ್ಕೆ ಉತ್ತಮ ಅಭ್ಯಾಸದ ಅಗತ್ಯವಿದೆ. ಇದು ಅತ್ಯಂತ ಆರಾಮದಾಯಕವಾದ ಆಸನವಾಗಿದ್ದು, ಅದಕ್ಕಾಗಿಯೇ ಇದನ್ನು ಧ್ಯಾನಕ್ಕಾಗಿ ಆಗಾಗ್ಗೆ ಬಳಸಲಾಗುತ್ತದೆ.ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸಬೇಕೆಂದರೆ ಯೋಗಾಸನಗಳನ್ನು ಅಭ್ಯಾಸ ಮಾಡುವುದು ಉತ್ತಮ. ಯೋಗದಲ್ಲಿ ಒಟ್ಟು 84 ಆಸನಗಳಿವೆ. ಆರಂಭಿಕರಿಗೂ ಕೂಡ ಇವು ತುಂಬಾ ಸರಳ ಮತ್ತು ಪರಿಣಾಮಕಾರಿ. ಯೋಗಾಸನ ಮಾಡುವುದರಿಂದ ನೀವು ತುಂಬಾ ತಾಜಾತನ ಮತ್ತು ನವಚೈತನ್ಯವನ್ನು ಅನುಭವಿಸಬಹುದು. ರಿಫ್ರೆಶ್ ಆಗಿರುವುದರ ಜೊತೆಗೆ, ದೈಹಿಕವಾಗಿ ಸದೃಢವಾಗಿರಲು ಮತ್ತು ಆರೋಗ್ಯವಾಗಿರಲು ಇದು ನಿಮಗೆ ಸಹಾಯ ಮಾಡುತ್ತದೆ.ಆಸನಗಳ ಹೆಚ್ಚಿನ ಹೆಸರುಗಳು ಪ್ರಕೃತಿ ಮತ್ತು ಪ್ರಾಣಿಗಳಿಗೆ ಸಂಬಂಧಿಸಿವೆ. ಯೋಗದ ಅಭ್ಯಾಸವು ಪ್ರಕೃತಿಯೊಂದಿಗೆ ಹೇಗೆ ಸಂಪರ್ಕ ಹೊಂದುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಅಂದಹಾಗೆ ಯೋಗದಲ್ಲಿ ಪದ್ಮಾಸನವು ಸುಲಭವಾದ ಆಸನಗಳಲ್ಲಿ ಒಂದಾಗಿದೆ. ಇದರಿಂದ ಸಾಕಷ್ಟು ಪ್ರಯೋಜನಗಳಿವೆ.
ಪದ್ಮಾಸನ ಮಾಡುವ ವಿಧಾನ:
⦁ ಮೊದಲು ನೇರ ಕುಳಿತುಕೊಳ್ಳಬೇಕು.
⦁ ಈಗ ಬಲಗಾಲನ್ನು ಮಡಿಸಿ ಎಡಗೈನಿಂದ ಬಲಪಾದವನ್ನು ಬಲಗೈನಿಂದ ಬಲಗಾಲಿನ ಮೀನಖಂಡದ ಭಾಗವನನ್ನು ಹಿಡಿದು ಮೇಲಕ್ಕೆ ಎತ್ತಿ ಬಲಪಾದವನ್ನು ಎಡತೊಡೆಯ ಮೇಲೆ ತೆಗೆದುಕೊಳ್ಳಬೇಕು.
⦁ ಅದೇ ರೀತಿಯಲ್ಲಿ ಎಡಪಾದವನ್ನು ಬಲತೊಡೆಯ ಮೇಲೂ ತೆಗೆದುಕೊಳ್ಳಬೇಕು.
⦁ ಬೆನ್ನು ನೇರವಾಗಿರಲಿ.
⦁ ನಂತರ ಎಡಗಾಲನ್ನು ಬಿಡಿಸಿ.
⦁ ಬಲಗಾಲನ್ನು ಬಿಡಿಸಿ ಎರಡು ಕೈಗಳನ್ನು ಹಿಂದೆ ತೆಗೆದುಕೊಂಡು ವಿಶ್ರಾಂತಿ.
ಪದ್ಮಾಸನ ಅನುಕೂಲಗಳು:
⦁ ಈ ಆಸನದಿಂದ ಮೀನಖಂಡ ಮತ್ತು ತೊಡೆಗಳಲ್ಲಿರುವ ಕೊಬ್ಬಿನಂಶ ಕರಗುವುದು.
⦁ ಮಂಡಿಗಳಲ್ಲಿನ ನೋವು ನಿವಾರಣೆ ಆಗಿ ಸಡಿಲತೆ ಬುರುವುದು.
⦁ ಬೆನ್ನು ನೇರವಾಗುವುದು. ನಾಭಿಯ ಭಾಗ ಹಿಗ್ಗಲ್ಪಡುವುದು. ಕುಂಡಲಿನಿಯ ಶಕ್ತಿ ಉದ್ದೀಪನಗೊಳ್ಳುವುದು.
⦁ ಪದ್ಮಾಸನ ನಿತ್ಯ ಮಾಡುವುದರಿಂದ ಶರೀರದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.
⦁ ಧ್ಯಾನ ಮತ್ತು ಪ್ರಾಣಾಯಾಮಕ್ಕೆ ಉತ್ತಮ ಆಸನ ಪದ್ಮಾಸನ.
⦁ ಪದ್ಮಾಸನ ಮಾಡಿದರೆ ದೈವಿಕ ಮನೋಭಾವ ಮೂಡುತ್ತದೆ.
⦁ ದೇಹದ ಶಕ್ತಿ ಕೇಂದ್ರಗಳನ್ನು ಜಾಗೃತಗೊಳಿಸಲು ಇದು ಸಹಕಾರಿ.
⦁ ಮನಸ್ಸಿಗೆ ಶಾಂತಿ ಒದಗಿಸುತ್ತದೆ. ಧ್ಯಾನ ಮತ್ತು ಪ್ರಾಣಾಯಾಮ ಮಾಡಲು ಪದ್ಮಾಸನದ ಭಂಗಿ ಅತ್ಯಂತ ಸೂಕ್ತವಾದುದು.
⦁ ಪದ್ಮಾಸನದ ನಿಯಮಿತ ಅಭ್ಯಾಸದಿಂದ ಕಾಲುಸೆಳೆತ, ಮಂಡಿನೋವು ಹತ್ತಿರ ಸುಳಿಯುವುದಿಲ್ಲ.
⦁ ಕಾಲುಗಳ ನರ ಮತ್ತು ಮಂಡಿಗಳಿಗೆ ಹೊಸ ಹುರುಪು ಬರುತ್ತದೆ. ಹೊಟ್ಟೆ ಸಣ್ಣಗಾಗಿ ಶರೀರ ಸುಂದರವಾಗುತ್ತದೆ.
⦁ ಬುದ್ಧಿ ಚುರುಕಾಗುತ್ತದೆ, ಏಕಾಗ್ರತೆ ಮೂಡುತ್ತದೆ.
⦁ ಆತಂಕ, ಒತ್ತಡಗಳು ನಿಯಂತ್ರಣವಾಗುತ್ತವೆ.
⦁ ಹೃದಯ ವಿಶಾಲವಾಗಿ ಅಹಂಭಾವ ಕಡಿಮೆಯಾಗುತ್ತದೆ.
ಎಚ್ಚರಿಕೆ:
ತುಂಬಾ ಮಂಡಿನೋವು, ಸೊಂಟ ನೋವು ಮತ್ತು ಕಾಲಿನ ಸೆಳೆತ ಇರುವವರು ಪದ್ಮಾಸನ ಮಾಡಬಾರದು.
Blog
ಪ್ರವಾಹ ಸಂತ್ರಸ್ತರಿಗೆ ನೀಡಲು ಹಣವಿಲ್ಲ, ನಾನು ಕ್ಯಾಬಿನೇಟ್ ಸಚಿವೆ ಅಲ್ಲ; ಮತ್ತೆ ವಿವಾದ ಸೃಷ್ಟಿಸಿದ ಕಂಗನಾ

ಶಿಮ್ಲಾ: ಹಿಮಾಚಲ ಪ್ರದೇಶದಾದ್ಯಂತ ಭಾರೀ ಮಳೆಯಿಂದಾಗಿ ಪ್ರವಾಹ (Kangana Ranaut) ಉಂಟಾಗಿದೆ. ಪ್ರವಾಹದಿಂದಾಗಿ ಈ ವರೆಗೆ 78 ಜನರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳು ಹಾನಿಯಾಗಿವೆ. ಭಾನುವಾರ ಹಿಮಾಚಲ ಪ್ರದೇಶದ ಮಂಡಿಯಲ್ಲಿ ಪ್ರವಾಹ (Mandi Flood) ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದ್ದ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರನೌತ್, ತಮ್ಮ ಬಳಿ ಸಂಪುಟ ಹುದ್ದೆಯೂ ಇಲ್ಲ, ವಿಪತ್ತು ಪರಿಹಾರಕ್ಕಾಗಿ ಹಣವೂ ಇಲ್ಲ ಎಂದು ಹೇಳುವ ಮೂಲಕ ವಿವಾದವನ್ನು ಸೃಷ್ಟಿ ಮಾಡಿದ್ದಾರೆ. ಆದಾಗ್ಯೂ, ಕೇಂದ್ರದಿಂದ ಆರ್ಥಿಕ ನೆರವು ಪಡೆಯಲು ತಾವು ಪ್ರಯತ್ನಿಸುತ್ತಿರುವುದಾಗಿ ಅವರು ಒತ್ತಿ ಹೇಳಿದರು.
ನನ್ನ ಬಳಿ ವಿಪತ್ತು ಪರಿಹಾರಕ್ಕಾಗಿ ಯಾವುದೇ ಹಣವಿಲ್ಲ ಅಥವಾ ಯಾವುದೇ ಸಂಪುಟ ಹುದ್ದೆಯನ್ನು ಹೊಂದಿಲ್ಲ. ಸಂಸದರಿಗೆ ಸಂಸತ್ತಿಗೆ ಸೀಮಿತವಾದ ಕೆಲಸವಿದೆ. ನಾವು ಬಹಳ ಸಣ್ಣವರು. ಆದರೆ, ಕೇಂದ್ರದಿಂದ ವಿಪತ್ತು ನಿಧಿಯನ್ನು ಪಡೆಯಲು ನಾನು ಸಹಾಯ ಮಾಡಬಹುದು” ಎಂದು ಮಂಡಿಯ ಸಂಸದೆ ಹೇಳಿದ್ದಾರೆ. ಕಂಗನಾ ಅವರ ಈ ಹೇಳಿಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸ್ವಪಕ್ಷದವರೇ ಕಂಗನಾ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದರು. ಮಂಡಿಯಲ್ಲಿ ಪ್ರವಾಹ ಬಂದು ಜನರು ಸಂಕಷ್ಟದಲ್ಲಿದ್ದರೂ ಸಂಸದೆ ಅದರ ಕುರಿತು ಎಲ್ಲಿಯೂ ಮಾತನಾಡಿರಲಿಲ್ಲ. ಈ ಕುರಿತು ಆಕ್ರೋಶ ವ್ಯಕ್ತ ಪಡಿಸಿದ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಿಜೆಪಿ ನಾಯಕ ಜೈರಾಮ್ ಠಾಕೂರ್ ಕಂಗನಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಕಂಗನಾ ಮಂಡಿಯ ಪರಿಸ್ಥಿತಿಯ ಬಗ್ಗೆ ಏಕೆ ಪ್ರತಿಕ್ರಿಯಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಠಾಕೂರ್, “ನನಗೆ ಗೊತ್ತಿಲ್ಲ, ಮತ್ತು ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಕಾಳಜಿ ವಹಿಸುವವರಿಗಾಗಿ ನೆರವು ನೀಡಲು ನಾವು ಇಲ್ಲಿಗೆ ಬಂದಿದ್ದೇವೆ. ಕಾಳಜಿ ವಹಿಸದವರ ಬಗ್ಗೆ ನಾನು ಕಾಮೆಂಟ್ ಮಾಡಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಠಾಕೂರ್ ಅವರ ಹೇಳಿಕೆಗಳ ವೀಡಿಯೊವನ್ನು ಹಂಚಿಕೊಂಡ ಕಾಂಗ್ರೆಸ್, “ಸಂಸದ ಕಂಗನಾ ರನೌತ್ ಅವರಿಗೆ ಮಂಡಿಯ ಜನರ ಬಗ್ಗೆ ಕಾಳಜಿ ಇಲ್ಲ. ಇವು ನಮ್ಮ ಮಾತುಗಳಲ್ಲ, ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳೇ ಇದನ್ನು ಹೇಳಿದ್ದಾರೆ ಎಂದು ಹೇಳಿದೆ. ಮಂಡಿಯಲ್ಲಿ ಪ್ರಸ್ತುತ ಭಾರೀ ಮಳೆಯಾಗುತ್ತಿದ್ದು, ಇದು ನಿವಾಸಿಗಳ ಸಾಮಾನ್ಯ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
Blog
ಝೊಮ್ಯಾಟೊ-ಸ್ವಿಗ್ಗಿಗೆ ಬಿಗ್ ಶಾಕ್: ಬೈಕ್ ನಲ್ಲಿ ಆಹಾರ,ವಸ್ತು ಡೆಲಿವರಿ ಬ್ಯಾನ್?

ಬೆಂಗಳೂರು: ರಾಜ್ಯದಲ್ಲಿ ಸದ್ಯ ರಾಪಿಡೋ ಬೈಕ್ ಟ್ಯಾಕ್ಸಿಗೆ ಬ್ರೇಕ್ ಹಾಕಲಾಗಿದೆ, ಆದರೆ ಇನ್ಮುಂದೆ ಸ್ವಿಗ್ಗಿ, ಝೊಮ್ಯಾಟೊ, ಅಮೆಜಾನ್, ಫ್ಲಿಪ್ ಕಾರ್ಟ್‍ಗೂ ಶಾಕ್ ಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ,
ಸಾಮಾನ್ಯವಾಗಿ ಸರಕು ಸಾಗಣೆ, ಪ್ರಯಾಣಕ್ಕೆ ಯೆಲ್ಲೊ ಬೋರ್ಡ್ ವಾಹನಗಳನ್ನು ಬಳಸಬೇಕು, ಅದರೆ ಇಷ್ಟು ದಿನ ಇದ್ದ ರಾಪಿಡೋ ಬೈಕ್ ಟ್ಯಾಕ್ಸಿ ಈಗ ಇರುವ ಸ್ವಿಗ್ಗಿ, ಝೊಮ್ಯಾಟೊ, ಅಮೆಜಾನ್, ಫ್ಲಿಪ್ ಕಾರ್ಟ್ ನಂತಹ ಇ-ಕಾಮರ್ಸ್, ಕ್ವಿಕ್ ಕಾಮರ್ಸ್‍ನ ಡೆಲಿವರಿ ಬಾಯ್ ಗಳು ಬಳಸುವ ಬೈಕ್‍ಗಳು ಸಾಮಾನ್ಯವಾಗಿ ವೈಟ್ ಬೋರ್ಡ್‍ಗಳಿರುತ್ತವೆ, ಅದೇ ಈಗ ಸಂಕಷ್ಟ ತಂದೊಡ್ಡುತ್ತಿದೆ,
ಕೇಂದ್ರ ಸಾರಿಗೆ ಇಲಾಖೆ ಈ ಒಂದು ಆದೇಶ ಹೊರಡಿಸಿದ್ದು, ಆ ನಿರ್ಧಾರದಿಂದ ಇ-ಕಾಮರ್ಸ್ ಹಾಗೂ ಕ್ವಿಕ್ ಕಾಮರ್ಸ್, ಗಿಗಿ ಉದ್ಯೋಗಿಗಳಿಗೆ ಸಂದಷ್ಟ ಎದುರಾಗಿದೆ,
ಎಲ್ಲಾ ವಾಹನಗಳನ್ನು ಯೆಲ್ಲೋ ಬೋರ್ಡ್ ಮಾಡಬೇಕಾ?
ಖಾಸಗಿ ನೋಂದಾಯಿತ ಬೈಕ್‍ಗಳು ಅಂದರೆ ವೈಟ್ ಬೋರ್ಡ್ ಇರುವ ಬೈಕ್‍ಗಳನ್ನು ಕೇವಲ ಪ್ರಯಾಣಕ್ಕಾಗಿ ಮಾತ್ರ ಬಳಸಬೇಕು, ಆದರೆ ಗಿಗ್ ಉದ್ಯೋಗಿಗಳು ವಾಣಿಜ್ಯ ವಿತರಣಾ ಉದ್ದೇಶಗಳಿಗೆ ಬಳಸುತ್ತಿದ್ದಾರೆ, ಇದು ಸಾರಿಗೆ ಇಲಾಖೆಯ ನಿಯಮಗಳಿಗೆ ವಿರುದ್ಧವಾದುದು, ಇದೇ ಕಾರಣಕ್ಕೆ ಈಗಾಗಲೇ ರಾಪಿಡೋ ಸೇವೆಗೆ ಬ್ರೇಕ್ ಹಾಕಲಾಗಿದೆ, ಮುಂದಿನ ದಿನಗಳಲ್ಲಿ ಆಹಾರ ಹಾಗೂ ಇ-ಕಾಮರ್ಸ್ ಡೆಲಿವರಿಗಳಿಗೂ ಈ ನಿಯಮ ಅನ್ವಯವಾಗಲಿದೆ,
ಸಾರಿಗೆ ಇಲಾಖೆ ಅಧಿಸೂಚನೆಯಲ್ಲಿ ಏನೇನಿದೆ?
ಸಾಮಾನ್ಯವಾಗಿ ಡೆಲಿವರಿ ಬಾಯ್ ಗಳಿಗೆ ಇಂತಿಷ್ಟೇ ಸಮಯದಲ್ಲಿ ವಸ್ತುಗಳನ್ನು ತಲುಪಿಸಲಬೇಕು ಎಂಬ ನಿಯಮ ಇರುತ್ತದೆ, ಅದಕ್ಕಾಗಿ ಅತಿಯಾದ ವೇಗದಲ್ಲಿ ವಾಹನ ಚಲಾಯಿಸುತ್ತಾರೆ, ಸಿಗ್ನಲ್ ಬ್ರೇಕ್ ಮಾಡುತ್ತಾಎರ, ಡೆಲಿವರಿ ಬಾಯ್ ಗಳು ಪಾದಚಾರಿಗಳ ಹಕ್ಕು ಉಲ್ಲಂಘನೆ ಮಾಡುತ್ತಾರೆ ಎಂದು ಕೇಂದ್ರದ ಸಾರಿಗೆ ಇಲಾಖೆ ಹೇಳಿದೆ, ಕೆಲವೊಮ್ಮೆ ಪಾದಚಾರಿ ಮಾರ್ಗಗಳ ಮೇಲೆಯೇ ಬೈಕ್ ಓಡಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ,
ಪೀಕ್ ಅವರ್ ನಲ್ಲಿ ಡೆಲಿವರಿ ವಾಹನಗಳ ಸಂಖ್ಯೆ ಹೆಚ್ಚಾಗಿರುತ್ತದೆ, ಇದರಿಂದ ಟ್ರಾಫಿಕ್ ಜಾಮ್ ಆಗುತ್ತದೆ, ಸ್ವಿಗ್ಗಿ, ಝೊಮ್ಯಾಟೊ, ಅಮೆಜಾನ್, ಫ್ಲಿಪ್ ಕಾರ್ಟ್ ನಂತಾ ಕಂಪನಿಗಳನ್ನು ನಂಬಿ ಖಾಸಗಿ ಬೈಕ್ ಗಳ ಮೂಲಕ ವಿತರಣಾ ಕೆಲಸ ನಿರ್ವಹಿಸುತ್ತಿದ್ದ ಲಕ್ಷಾಂತರ ಗಿಗ್ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ, ಈಗಾಗಲೇ ಕೇಂದ್ರ ಸಾರಿಗೆ ಇಲಾಖೆ ರಾಜ್ಯ ಸಾರಿಗೆ ಇಲಾಖೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದು, ರಾಜ್ಯ ಸರ್ಕಾರಗಳು ಕ್ರಮ ಕೈಗೊಂಡರೆ ಗಿಗ್ ಕ್ರಮ ಕೈಗೊಂಡರೆ ಗಿಗ್ ನೌಕರರು ಬೀದಿಗೆ ಬೀಳುತ್ತಾರೆ.
Blog
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಗೆ ಕಂಗನಾ ರನೌತ್ ರಾಯಭಾರಿ!

ನವದೆಹಲಿ: ಖ್ಯಾತ ಬಾಲಿವುಡ್ ನಟಿ ಮತ್ತು ಸಂಸದೆ ಕಂಗನಾ ರನೌತ್ ಅವರನ್ನು ನವದೆಹಲಿ 2025 ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ನ ಅಧಿಕೃತ ಬ್ರಾಂಡ್ ರಾಯಭಾರಿಯಾಗಿ ನೇಮಿಸಲಾಗಿದೆ ಎಂದು ಭಾರತೀಯ ಪ್ಯಾರಾಲಿಂಪಿಕ್ ಸಮಿತಿ ಘೋಷಿಸಿದೆ,
ಈ ಹೊಸ ಪಾತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಕಂಗನಾ, ಭಾರತದ ಪ್ಯಾರಾ ಅಥ್ಲೀಟ್‍ಗಳು ಪ್ರತಿದಿನ ಅದ್ಭುತ ಸಾಧನೆಗಳ ಇತಿಹಾಸವನ್ನು ಪುನಃ ಬರೆಯುತ್ತಿದ್ದಾರೆ, ಅವರನ್ನು ಬೆಂಬಲಿಸಲು ಮತ್ತು ಅವರ ಅದ್ಬುತ ಸಾಧನೆಗಳ ಬಗ್ಗೆ ಪ್ರಚಾರ ಮಾಡಲು ನನಗೆ ತುಂಬಾ ಹೆಮ್ಮೆಯೆನಿಸುತ್ತಿದೆ, ಪ್ಯಾರಾ ಕ್ರೀಡೆ ಕೇವಲ ಸ್ಪರ್ಧೆಯ ಬಗ್ಗೆ ಅಲ್ಲ, ಇದು ಧೈರ್ಯವನ್ನು ತೋರಿಸುತ್ತದೆ, ಮತ್ತು ನಮ್ಮ ಚಾಂಪಿಯನ್ ಗಳ ಹಿಂದೆ ನಿಲ್ಲಲು ನನಗೆ ತುಂಬಾ ಹೆಮ್ಮೆ ಇದೆ ಎಂದು ಅವರು ಹೇಳಿದ್ದಾರೆ,
ಕಂಗನಾ ರನೌತ್ ಅವರ ಧ್ವನಿಯ ಪ್ಯಾರಾ ಕ್ರೀಡೆಗಳೊಂದಿಗೆ ಸಾರ್ವಜನಿಕವಾಗಿ ತೊಡಗಿಸಿಕೊಳ್ಳುವಿಕೆಯನ್ನು ಗಮನಾರ್ಹವಾಗಿ ವರ್ಧಿಸುತ್ತದೆ ಮತ್ತು ದೇಶಾದ್ಯಂತ ಮುಂದಿನ ಪೀಳಿಗೆಯ ಕ್ರೀಡಾಪಟುಗಳು ಮತ್ತು ಅಭಿಮಾನಿಗಳಿಗೆ ಸ್ಫೋರ್ತಿ ನೀಡುತ್ತದೆ ಎಂದು ಭಾರತದ ಪ್ಯಾರಾಲಿಂಪಿಕ್ ಸಮಿತಿ ಹೇಳಿದೆ,
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು9 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ