Connect with us

ಬೆಂಗಳೂರು

ಮೇ 13ಕ್ಕೆ ಬೆಂಗಳೂರಿಗರಿಗೆ ‘ಬಿಗ್ ಗಿಫ್ಟ್’; ಡಿಕೆ ಶಿವಕುಮಾರ್ ಸರ್‌ಪ್ರೈಸ್ ಘೋಷಣೆ

Published

on

ಬೆಂಗಳೂರು: “ಮೇ 13ರಂದು ಬೆಂಗಳೂರಿನ ಜನತೆಗೆ ದೊಡ್ಡ ಗಿಫ್ಟ್ ನೀಡಲಿದ್ದೇವೆ” ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. ರಾಜಕೀಯ ಮತ್ತು ಆಡಳಿತಾತ್ಮಕ ಸಭೆಗಳ ಬಳಿಕ ಈ ಮಹತ್ವದ ಘೋಷಣೆ ಮಾಡಿರುವ ಅವರು, ಬೆಂಗಳೂರಿಗರಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, “ಸುರ್ಜೇವಾಲ ಅವರ ಜೊತೆ ರಾಜಕೀಯ ಸಭೆ ನಡೆಸಿದ್ದೇವೆ. ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆಲವು ಸೂಚನೆಗಳನ್ನು ನೀಡಿದ್ದೇನೆ. ಮೇ 13ರಂದು ಬೆಂಗಳೂರಿನ ಜನತೆಗೆ ಒಂದು ದೊಡ್ಡ ಗ್ಯಾರಂಟಿ ಹಾಗೂ ಬಿಗ್ ಗಿಫ್ಟ್ ಘೋಷಿಸಲಾಗುವುದು. ಅದರ ಸಂಪೂರ್ಣ ಮಾಹಿತಿ ಅಂದೇ ನೀಡುತ್ತೇನೆ” ಎಂದು ತಿಳಿಸಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಚಿನ್ನ ಖರೀದಿ ಮತ್ತು ಪೆಟ್ರೋಲ್ ಬಳಕೆ ಕಡಿಮೆ ಮಾಡುವಂತೆ ನೀಡಿದ ಸಲಹೆ ಬಗ್ಗೆ ಡಿಕೆಶಿ ತೀವ್ರ ವ್ಯಂಗ್ಯವಾಡಿದರು. “ಚಿನ್ನದ ಬೆಲೆ ಯಾಕೆ ಏರಿತು ಎನ್ನುವುದನ್ನು ಮೋದಿ ಹೇಳುತ್ತಿಲ್ಲ. ಮದುವೆ, ಸಮಾರಂಭ ಇರುವವರು ಚಿನ್ನ ಖರೀದಿ ಮಾಡಬೇಡಿ ಅಂತ ಹೇಳೋದು ಪ್ರಾಯೋಗಿಕವೇ?” ಎಂದು ಪ್ರಶ್ನಿಸಿದರು.

“ಮೊದಲು ಕೇಂದ್ರ ಸರ್ಕಾರದ ಮಂತ್ರಿಗಳು ಮತ್ತು ಅಧಿಕಾರಿಗಳು ಸರ್ಕಾರಿ ಬಸ್‌, ಮೆಟ್ರೋಗಳಲ್ಲಿ ಓಡಾಡಲಿ. ಅವರು ಐಷಾರಾಮಿ ಕಾರುಗಳಲ್ಲಿ ಸಂಚರಿಸಿ ಸಾಮಾನ್ಯ ಜನರಿಗೆ ತ್ಯಾಗದ ಪಾಠ ಹೇಳುವುದು ಸರಿಯಲ್ಲ” ಎಂದು ಟೀಕಿಸಿದರು.

ಕೊರೊನಾ ಸಮಯದ ಉದಾಹರಣೆ ನೀಡಿದ ಅವರು, “ದೀಪ ಹಚ್ಚಿ ಎಂದರು, ಚಪ್ಪಾಳೆ ತಟ್ಟಿರಿ ಎಂದರು, ಎಲ್ಲ ಮಾಡಿದ್ದೇವೆ. ಆದರೆ ಜನರ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರ ಬೇಕು” ಎಂದು ಹೇಳಿದರು.

ತ್ಯಾಗದ ಮಾತು ಮಾಡುವ ಮುನ್ನ ರಾಜಕಾರಣಿಗಳು ಮತ್ತು ಅಧಿಕಾರಿಗಳೇ ಮೊದಲು ಮಾದರಿಯಾಗಬೇಕು ಎಂದು ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟರು.

ದೇಶ

‘ಅವರನ್ನು ನೋಡಿದರೆ ಕೈಮುಗಿಯಬೇಕು’; ಪ್ರದೀಪ್ ಈಶ್ವರ್ ವಿರುದ್ಧ ಕುಮಾರಸ್ವಾಮಿ ವ್ಯಂಗ್ಯ

Published

on

ಬೆಂಗಳೂರು: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರ ಕಾರಿನ ಮೇಲೆ ಚಪ್ಪಲಿ ಎಸೆದ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಪಕ್ಷದ ಕಾರ್ಯಕರ್ತರಿಗೆ ಪ್ರಚೋದನೆಗೆ ಒಳಗಾಗದಂತೆ ಕಿವಿಮಾತು ಹೇಳಿದ್ದಾರೆ. “ಚಪ್ಪಲಿ ತೂರುವುದು ನಮ್ಮ ಸಂಸ್ಕೃತಿಯಲ್ಲ” ಎಂದು ಸ್ಪಷ್ಟಪಡಿಸಿದ ಅವರು, ಪ್ರದೀಪ್ ಈಶ್ವರ್ ಅವರ ನಡವಳಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಾ “ಅವರನ್ನು ನೋಡಿದಾಗ ಕೈಮುಗಿಯಬೇಕಷ್ಟೇ” ಎಂದು ವ್ಯಂಗ್ಯವಾಡಿದರು.

ಭಾನುವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆ ಗಮನಕ್ಕೆ ಬಂದಿದೆ ಎಂದು ಹೇಳಿ, “ನಮ್ಮ ಪಕ್ಷದ ಕಾರ್ಯಕರ್ತರು ಯಾವುದೇ ಪ್ರಚೋದನಾಕಾರಿ ಹೇಳಿಕೆಗಳಿಗೆ ಉದ್ರೇಕಗೊಳ್ಳಬಾರದು. ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂತಹ ಘಟನೆಗಳನ್ನು ಸೃಷ್ಟಿಸುತ್ತಾರೆ. ಅಂತಹವರನ್ನು ನಿರ್ಲಕ್ಷಿಸಿ” ಎಂದು ಮನವಿ ಮಾಡಿದರು.

‘ನಮ್ಮ ಕುಟುಂಬದ ಮೇಲಿನ ಟೀಕೆ ಹೊಸದೇನಲ್ಲ’

ತಮ್ಮ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕುಟುಂಬದ ವಿರುದ್ಧ ಆಗಾಗ ಟೀಕೆಗಳು ಕೇಳಿಬರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ನಮ್ಮ ಕುಟುಂಬದ ಬಗ್ಗೆ ಟೀಕೆ ಮಾಡುವುದು ಹೊಸ ವಿಚಾರವಲ್ಲ. ಕಳೆದ 50-60 ವರ್ಷಗಳಿಂದಲೂ ಇಂತಹ ಟೀಕೆಗಳು ನಡೆಯುತ್ತಿವೆ. ಅದಕ್ಕಾಗಿ ಕಾರ್ಯಕರ್ತರು ತಾಳ್ಮೆ ಕಳೆದುಕೊಳ್ಳುವ ಅಗತ್ಯವಿಲ್ಲ” ಎಂದು ಹೇಳಿದರು.

‘ಶಾಂತಿಯುತವಾಗಿ ವರ್ತಿಸಿ’

ಚಪ್ಪಲಿ ಎಸೆದ ಘಟನೆಯನ್ನು ಖಂಡಿಸಿದ ಕುಮಾರಸ್ವಾಮಿ, “ಚಪ್ಪಲಿ ತೂರುವುದು, ಧಿಕ್ಕಾರ ಕೂಗುವುದು ಅಥವಾ ಹಿಂಸೆಗೆ ಇಳಿಯುವುದು ನಮ್ಮ ನಾಡಿನ ಸಂಸ್ಕೃತಿಯಲ್ಲ. ಅಂತಿಮವಾಗಿ ಜನರೇ ತೀರ್ಪು ನೀಡುತ್ತಾರೆ. ಯಾವುದೇ ಕಾರಣಕ್ಕೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸಕ್ಕೆ ಅವಕಾಶ ಕೊಡಬೇಡಿ. ಕಾರ್ಯಕರ್ತರು ಮಾನಸಿಕವಾಗಿ ದೃಢವಾಗಿದ್ದು, ಶಾಂತಿಯುತವಾಗಿ ವರ್ತಿಸಬೇಕು” ಎಂದು ಕರೆ ನೀಡಿದರು.

ಪ್ರದೀಪ್ ಈಶ್ವರ್ ನಡವಳಿಕೆಗೆ ವ್ಯಂಗ್ಯ

ಘಟನೆಗೂ ಮುನ್ನ ಶಾಸಕ ಪ್ರದೀಪ್ ಈಶ್ವರ್ ಅವರ ನಡವಳಿಕೆ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, “ಅವರನ್ನು ನೋಡಿದಾಗ, ಅವರ ನಡವಳಿಕೆ ನೋಡಿದಾಗ ಕೈಮುಗಿಯೋಣ” ಎಂದು ಕುಮಾರಸ್ವಾಮಿ ವ್ಯಂಗ್ಯಭರಿತವಾಗಿ ಪ್ರತಿಕ್ರಿಯಿಸಿದರು.

ಏನಿದು ಪ್ರಕರಣ?

ಶನಿವಾರ ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ, ಎನ್‌ಡಿಎ ಕಾರ್ಯಕರ್ತರು ಶಾಸಕ ಪ್ರದೀಪ್ ಈಶ್ವರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕನ್ನಡ ಭವನದ ಒಳಗೆ ಮತ್ತು ಹೊರಗೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ತಳ್ಳಾಟ-ನೂಕಾಟ ನಡೆದಿದ್ದು, ನಂತರ ಪ್ರದೀಪ್ ಈಶ್ವರ್ ಅವರ ಕಾರಿನತ್ತ ಚಪ್ಪಲಿ ಎಸೆಯಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಯುವ ಮುಖಂಡ ಅಖಿಲ್ ರೆಡ್ಡಿ, ಚಪ್ಪಲಿ ಎಸೆದ ವ್ಯಕ್ತಿ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.


ರಾಜಕೀಯದ ಕ್ಷಣಕ್ಷಣದ ಬೆಳವಣಿಗೆಗಳು, ಬ್ರೇಕಿಂಗ್ ಸುದ್ದಿಗಳು ಹಾಗೂ ವಿಶೇಷ ವರದಿಗಳಿಗಾಗಿ ನಿರಂತರವಾಗಿ ಭೇಟಿ ನೀಡಿ Hosasuddi.in.
ನಿಖರ, ವಿಶ್ವಾಸಾರ್ಹ ಹಾಗೂ ವೇಗದ ಕನ್ನಡ ಸುದ್ದಿಗಳಿಗೆ
Hosasuddi.in ನಿಮ್ಮ ನೆಚ್ಚಿನ ಸುದ್ದಿ ತಾಣ.

Continue Reading

ದೇಶ

CM ಡಿ.ಕೆ. ಶಿವಕುಮಾರ್ ನಾಯಕತ್ವದ ಮ್ಯಾಜಿಕ್ ನೋಡಲು ಕಾಯುತ್ತಿದ್ದೇವೆ’; ಪಿ. ಗಾಂಧಿ ವಿಶ್ವಾಸ

Published

on

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮೇಖ್ರಿ ವೃತ್ತದಿಂದ ಹೆಬ್ಬಾಳ ಜಂಕ್ಷನ್‌ವರೆಗೆ ನಿರ್ಮಾಣವಾಗಲಿರುವ ಸುರಂಗ ರಸ್ತೆ ಯೋಜನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಹೆಬ್ಬಾಳ ಜಂಕ್ಷನ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ಎಂಎಲ್‌ಸಿ ನಾಗರಾಜ್ ಯಾದವ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಬಿಡಿಎ ಮುಖ್ಯ ಆಯುಕ್ತ ಮಣಿವಣ್ಣನ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್, ಸದಸ್ಯರಾದ ಪಿ. ಗಾಂಧಿ, ಜಯಗೋಪಾಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಿಡಿಎ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಪಿ. ಗಾಂಧಿ, ಈ ಸುರಂಗ ರಸ್ತೆ ಯೋಜನೆ ಪೂರ್ಣಗೊಂಡ ಬಳಿಕ ಬೆಂಗಳೂರಿನ ಉತ್ತರ ಭಾಗದಲ್ಲಿನ ವಾಹನ ದಟ್ಟಣೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಅದಕ್ಕೆ ತಕ್ಕ ಮೂಲಸೌಕರ್ಯ ಅಭಿವೃದ್ಧಿ ಅತ್ಯಗತ್ಯವಾಗಿದೆ. ಈ ಸುರಂಗ ರಸ್ತೆ ಯೋಜನೆಯಿಂದ ಸಂಚಾರ ಸುಗಮವಾಗುವುದರ ಜೊತೆಗೆ ಪ್ರಯಾಣದ ಸಮಯವೂ ಕಡಿಮೆಯಾಗಲಿದೆ. ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆಗೆ ಇದು ಮಹತ್ವದ ಪರಿಹಾರವಾಗಲಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬೆಂಗಳೂರಿನ ಸಮಗ್ರ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ದೃಷ್ಟಿಕೋನವಿದೆ. ನಗರದ ರಸ್ತೆ ಜಾಲ, ಮೇಲ್ಸೇತುವೆಗಳು, ಸುರಂಗ ರಸ್ತೆಗಳು ಹಾಗೂ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಗೆ ಅವರು ವಿಶೇಷ ಯೋಜನೆ ರೂಪಿಸಿಕೊಂಡಿದ್ದಾರೆ. ಬೆಂಗಳೂರನ್ನು ವಿಶ್ವಮಟ್ಟದ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಅವರು ಸಂಪೂರ್ಣ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಪಿ. ಗಾಂಧಿ ಹೇಳಿದರು.

“ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಾಯಕತ್ವದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಅಭಿವೃದ್ಧಿಯ ‘ಮ್ಯಾಜಿಕ್’ ಅನ್ನು ನೋಡಲು ನಾವು ಕಾತರದಿಂದ ಕಾಯುತ್ತಿದ್ದೇವೆ. ಕರ್ನಾಟಕದ ಅಭಿವೃದ್ಧಿಗೆ ಅವರು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ” ಎಂದು ಅವರು ತಿಳಿಸಿದರು.

ಈ ಸುರಂಗ ರಸ್ತೆ ಯೋಜನೆಯು ಪೂರ್ಣಗೊಂಡ ಬಳಿಕ ಹೆಬ್ಬಾಳ ಮಾರ್ಗದಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗಲಿದ್ದು, ಪ್ರಯಾಣಿಕರಿಗೆ ವೇಗವಾದ ಹಾಗೂ ಸುಗಮ ಸಂಚಾರ ವ್ಯವಸ್ಥೆ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಬೆಂಗಳೂರು ಅಭಿವೃದ್ಧಿ, ಮೂಲಸೌಕರ್ಯ ಹಾಗೂ ಕರ್ನಾಟಕದ ಪ್ರಮುಖ ಸುದ್ದಿಗಳಿಗಾಗಿ ನಿರಂತರವಾಗಿ ಭೇಟಿ ನೀಡಿ Hosasuddi.in. ನಿಖರ, ವಿಶ್ವಾಸಾರ್ಹ ಹಾಗೂ ವೇಗದ ಕನ್ನಡ ಸುದ್ದಿಗಳಿಗೆ Hosasuddi.in ನಿಮ್ಮ ನೆಚ್ಚಿನ ಸುದ್ದಿ ತಾಣ.

Continue Reading

ದೇಶ

ಪೋಲಿಯೋ ಮತ್ತೆ ಬರದಂತೆ ಎಚ್ಚರಿಕೆ; ಪೋಷಕರಿಗೆ CM ಡಿ.ಕೆ. ಶಿವಕುಮಾರ್ ಮನವಿ

Published

on

ಬೆಂಗಳೂರು: ದೇಶವನ್ನು ಪೋಲಿಯೋ ಮುಕ್ತವಾಗಿಡುವ ಸಂಕಲ್ಪದೊಂದಿಗೆ ರಾಜ್ಯಾದ್ಯಂತ ಭಾನುವಾರ ಹಮ್ಮಿಕೊಳ್ಳಲಾದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು. ರಾಜ್ಯದ ಎಲ್ಲಾ ಭಾಗಗಳಲ್ಲಿರುವ ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಕಡ್ಡಾಯವಾಗಿ ಪೋಲಿಯೋ ಲಸಿಕೆ ತಲುಪಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅವರು ತಿಳಿಸಿದರು.

ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಡಿ.ಕೆ. ಶಿವಕುಮಾರ್, ಭಾರತದಲ್ಲಿ ಪೋಲಿಯೋ ನಿರ್ಮೂಲನೆಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1972ರಲ್ಲೇ ಮುನ್ನುಡಿ ಬರೆದಿದ್ದರು ಎಂದು ಸ್ಮರಿಸಿದರು. ಮಕ್ಕಳ ಆರೋಗ್ಯ ಮತ್ತು ಸುರಕ್ಷಿತ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಲಸಿಕಾ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.

ಅಕ್ಕಪಕ್ಕದ ಕೆಲವು ದೇಶಗಳಲ್ಲಿ ಇನ್ನೂ ಪೋಲಿಯೋ ಪ್ರಕರಣಗಳು ವರದಿಯಾಗುತ್ತಿರುವುದರಿಂದ, ಕರ್ನಾಟಕದಲ್ಲಿ ಈ ರೋಗ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಪೋಷಕರೂ ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.

ಈ ಅಭಿಯಾನವನ್ನು ಆರೋಗ್ಯ ಸಚಿವರ ನೇತೃತ್ವದಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿದ್ದು, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶೇಷವಾಗಿ ಹಳ್ಳಿ, ಗುಡ್ಡಗಾಡು ಹಾಗೂ ದುರ್ಗಮ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೂ ಲಸಿಕೆ ತಲುಪಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಆರೋಗ್ಯ ಇಲಾಖೆ ವ್ಯಾಪಕ ಯೋಜನೆ ರೂಪಿಸಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು.

ರಾಜ್ಯದಾದ್ಯಂತ ಸಾವಿರಾರು ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ ಹಾಗೂ ಸ್ವಯಂಸೇವಕರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಮನೆಮನೆಗೆ ತೆರಳಿ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ.

ಪೋಲಿಯೋ ಮುಕ್ತ ಕರ್ನಾಟಕ ಹಾಗೂ ಪೋಲಿಯೋ ಮುಕ್ತ ಭಾರತದ ಕನಸನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಸರ್ಕಾರ ಬದ್ಧವಾಗಿದ್ದು, ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಡಿ.ಕೆ. ಶಿವಕುಮಾರ್ ಕರೆ ನೀಡಿದರು.


ಆರೋಗ್ಯ, ಸರ್ಕಾರದ ಯೋಜನೆಗಳು ಹಾಗೂ ಕರ್ನಾಟಕದ ಪ್ರಮುಖ ಸುದ್ದಿಗಳಿಗಾಗಿ ನಿರಂತರವಾಗಿ ಭೇಟಿ ನೀಡಿ Hosasuddi.in.
ನಿಖರ, ವಿಶ್ವಾಸಾರ್ಹ ಹಾಗೂ ವೇಗದ ಕನ್ನಡ ಸುದ್ದಿಗಳಿಗೆ
Hosasuddi.in ನಿಮ್ಮ ನೆಚ್ಚಿನ ಸುದ್ದಿ ತಾಣ.

Continue Reading

Trending