Connect with us

ದೇಶ

ಬೆಂಗಳೂರು ವಾಹನ ಸವಾರರಿಗೆ ಶಾಕ್; NICE Road, ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಟೋಲ್ ಹೆಚ್ಚಳ

Published

on

ಬೆಂಗಳೂರು: ರಾಜಧಾನಿ ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಬೆಲೆ ಏರಿಕೆಯ ಹೊರೆ ಬಿದ್ದಿದ್ದು, ಇಂದಿನಿಂದ ನೈಸ್ ರಸ್ತೆ (NICE Road) ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್‌ನಲ್ಲಿ ಹೊಸ ಟೋಲ್ ದರ ಜಾರಿಯಾಗಿದೆ. ನಿರ್ವಹಣಾ ವೆಚ್ಚ ಹಾಗೂ ಕಾರ್ಯಾಚರಣೆಯ ಖರ್ಚು ಹೆಚ್ಚಳದ ಹಿನ್ನೆಲೆಯಲ್ಲಿ ಟೋಲ್ ಶುಲ್ಕವನ್ನು ಪರಿಷ್ಕರಿಸಲಾಗಿದೆ.

ಹೊಸ ದರದ ಪ್ರಕಾರ, ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಯವರೆಗೆ ಸಂಚರಿಸುವ ಕಾರುಗಳ ಟೋಲ್ ಶುಲ್ಕ ₹65ರಿಂದ ₹72ಕ್ಕೆ ಏರಿಕೆಯಾಗಿದೆ. ಮೈಸೂರು ರಸ್ತೆ–ಮಾಗಡಿ ರಸ್ತೆ ನಡುವಿನ ಪ್ರಯಾಣಕ್ಕೆ ಕಾರುಗಳ ಟೋಲ್ ₹70ರಿಂದ ₹77ಕ್ಕೆ ಹೆಚ್ಚಿಸಲಾಗಿದೆ. ಪ್ರಯಾಣದ ದೂರವನ್ನು ಅವಲಂಬಿಸಿ ವಿವಿಧ ವಿಭಾಗಗಳಲ್ಲಿ ಕಾರುಗಳಿಗೆ ₹3ರಿಂದ ₹8ರವರೆಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ.

ದ್ವಿಚಕ್ರ ವಾಹನ ಸವಾರರಿಗೂ ಟೋಲ್ ಏರಿಕೆಯ ಬಿಸಿ ತಟ್ಟಿದ್ದು, ಹೊಸೂರು ರಸ್ತೆ–ಬನ್ನೇರುಘಟ್ಟ ರಸ್ತೆ ಮಾರ್ಗದಲ್ಲಿ ಟೋಲ್ ಶುಲ್ಕ ₹30ರಿಂದ ₹33ಕ್ಕೆ ಹೆಚ್ಚಳವಾಗಿದೆ. ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಯವರೆಗೆ ದ್ವಿಚಕ್ರ ವಾಹನಗಳಿಗೆ ₹15ರಿಂದ ₹17ಕ್ಕೆ ಟೋಲ್ ನಿಗದಿಪಡಿಸಲಾಗಿದೆ.

ಭಾರೀ ವಾಹನಗಳಿಗೂ ಪರಿಷ್ಕೃತ ದರ ಅನ್ವಯವಾಗಲಿದೆ. ಹೊಸೂರು ರಸ್ತೆ–ಬನ್ನೇರುಘಟ್ಟ ರಸ್ತೆ ಮಾರ್ಗದಲ್ಲಿ ಬಸ್‌ಗಳ ಟೋಲ್ ಶುಲ್ಕ ₹195ರಿಂದ ₹215ಕ್ಕೆ ಏರಿಕೆಯಾದರೆ, ಟ್ರಕ್‌ಗಳ ಟೋಲ್ ₹128ರಿಂದ ₹141ಕ್ಕೆ ಹೆಚ್ಚಳವಾಗಿದೆ.

ಈ ಟೋಲ್ ದರ ಏರಿಕೆಯಿಂದ ನೈಸ್ ರಸ್ತೆ ಬಳಸುವ ಖಾಸಗಿ ವಾಹನ ಸವಾರರ ಜೊತೆಗೆ ಬಸ್ ಸೇವೆಗಳ ನಿರ್ವಹಣಾ ವೆಚ್ಚವೂ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಭವಿಷ್ಯದಲ್ಲಿ ಬಿಎಂಟಿಸಿ ಸೇರಿದಂತೆ ಸಾರ್ವಜನಿಕ ಸಾರಿಗೆ ಸೇವೆಗಳ ಕಾರ್ಯಾಚರಣಾ ವೆಚ್ಚದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಾರಿಗೆ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶ

ಎವರೆಸ್ಟ್ ಪ್ರದೇಶಕ್ಕೂ ಲಗ್ಗೆಯಿಟ್ಟ ಕಾಳಿಂಗ ಸರ್ಪ: ಪರ್ವತಾರೋಹಿಗಳಲ್ಲಿ ಭೀತಿ!

Published

on

ಪ್ರಪಂಚದ ಅತ್ಯಂತ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಏರಲು ಬಯಸುವ ಪರ್ವತಾರೋಹಿಗಳಿಗೆ ಹಾಗೂ ಸ್ಥಳೀಯರಿಗೆ ಆತಂಕಕಾರಿ ಸುದ್ದಿಯೊಂದು ಎದುರಾಗಿದೆ. ಹಿಮಾಲಯದ ಎತ್ತರದ ಪ್ರದೇಶಗಳನ್ನು ಹೊಂದಿರುವ ನೇಪಾಳದಲ್ಲಿ ವಿಷಪೂರಿತ ಹಾವುಗಳ ಹಾವಳಿ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಈ ಹಿಂದೆ ಕಂಡುಬರದಿದ್ದ ಎತ್ತರದ ಹಿಮಾಲಯ ಪ್ರದೇಶಗಳಿಗೂ ಕಾಳಿಂಗ ಸರ್ಪದಂತಹ ವಿಷಕಾರಿ ಹಾವುಗಳು ವಲಸೆ ಬಂದು ನೆಲೆಸುತ್ತಿರುವುದು ವಿಜ್ಞಾನಿಗಳನ್ನು ಆಶ್ಚರ್ಯಗೊಳಿಸಿದೆ. ಎವರೆಸ್ಟ್ ಶಿಖರವಿರುವ ಸೋಲುಖುಂಬು ಜಿಲ್ಲೆಯ ‘ಸೋತಾಂಗ್ ಪ್ರಾಥಮಿಕ ಆಸ್ಪತ್ರೆ’ಯಲ್ಲಿ ಏಪ್ರಿಲ್ 14ರಿಂದ ಈವರೆಗೆ 30 ಹಾವು ಕಡಿತದ ಪ್ರಕರಣಗಳು ವರದಿಯಾಗಿವೆ. ಪರಿಸ್ಥಿತಿಯ ಗಂಭೀರತೆ ಅರಿತ ಆಸ್ಪತ್ರೆ ಆಡಳಿತ, ತುರ್ತು ಚಿಕಿತ್ಸೆಗಾಗಿ ಹೆಚ್ಚಿನ ‘ಆ್ಯಂಟಿ-ವೆನಮ್’ ಪೂರೈಸುವಂತೆ ಸರ್ಕಾರಕ್ಕೆ ವಿನಂತಿಸಿದೆ.

ಹಾವಿನ ಹಾವಳಿ ಇಲ್ಲದ ಕಾರಣ ಈ ಮೊದಲು ಸಿದ್ಧವಾಗಿರದ ನೇಪಾಳದ ಪರ್ವತ ಆಸ್ಪತ್ರೆಗಳು ಈಗ ಗಂಭೀರ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸಲು ಸಜ್ಜಾಗಬೇಕಿದೆ. ಆದರೆ ಅನೇಕ ಆಸ್ಪತ್ರೆಗಳು ಗುಣಮಟ್ಟದ ಆ್ಯಂಟಿ-ವೆನಮ್ ಪಡೆಯಲು ಹೆಣಗಾಡುತ್ತಿವೆ. ಕಾಳಿಂಗ ಸರ್ಪದ ಜೊತೆಗೆ ‘ಪಿಟ್ ವೈಪರ್’ ನಂತಹ ಗುರುತಿಸಲು ಕಷ್ಟಕರವಾದ ಹಾವಿನ ಪ್ರಭೇದಗಳೂ ಈಗ ಕಾಣಿಸಿಕೊಳ್ಳುತ್ತಿವೆ. ನೇಪಾಳದಲ್ಲಿ ಹಾವು ಕಡಿತಕ್ಕೆ ಒಳಗಾಗುವವರ ಪೈಕಿ ಶೇ. 80ಕ್ಕಿಂತ ಹೆಚ್ಚು ಜನರು ಆಸ್ಪತ್ರೆ ತಲುಪುವ ಮುನ್ನವೇ ಸಾವಿಗೀಡಾಗುತ್ತಿದ್ದಾರೆ ಎಂಬುದು ಆತಂಕಕಾರಿ ಸಂಗತಿ.

ವಿಶ್ವಸಂಸ್ಥೆಯ ಅಂಕಿ-ಅಂಶಗಳ ಆಧಾರದಲ್ಲಿ, ದೇಶದಲ್ಲಿ ಹಾವು ಕಡಿತದಿಂದ ಸಂಭವಿಸುವ ಸಾವುಗಳ ಸಂಖ್ಯೆಯನ್ನು 2030ರ ವೇಳೆಗೆ ಶೇ. 50ರಷ್ಟು ಕಡಿಮೆ ಮಾಡುವ ಗುರಿಯನ್ನು ನೇಪಾಳ ಸರ್ಕಾರ ಹಾಕಿಕೊಂಡಿದೆ.

Continue Reading

ದೇಶ

ಬಿಸಿಗಾಳಿಗೆ ಕರಗುತ್ತಿವೆ ಯುರೋಪ್ ರಸ್ತೆಗಳು; ಭಾರತದ ಹೆದ್ದಾರಿಗಳು ಗಟ್ಟಿಯಾಗಿರುವುದೇಕೆ?

Published

on

ಯುರೋಪ್ ರಾಷ್ಟ್ರಗಳಲ್ಲಿ ಪ್ರಸ್ತುತ ತೀವ್ರತರವಾದ ಬಿಸಿಗಾಳಿ ಆವರಿಸಿದ್ದು, ತಾಪಮಾನ 40 ಡಿಗ್ರಿ ಸೆಲ್ಸಿಯಸ್ ತಲುಪುತ್ತಿದ್ದಂತೆ ರಸ್ತೆಗಳು ಕರಗಲು ಆರಂಭಿಸಿವೆ. ಆದರೆ ಭಾರತದಲ್ಲಿ ಬೇಸಿಗೆಯಲ್ಲಿ ತಾಪಮಾನ 50 ರಿಂದ 55 ಡಿಗ್ರಿ ಸೆಲ್ಸಿಯಸ್ ತಲುಪಿದರೂ ಹೆದ್ದಾರಿಗಳು ಯಾವುದೇ ಹಾನಿಯಿಲ್ಲದೆ ಗಟ್ಟಿಯಾಗಿ ಉಳಿಯುತ್ತವೆ. ಈ ವ್ಯತ್ಯಾಸಕ್ಕೆ ರಸ್ತೆ ನಿರ್ಮಾಣ ತಂತ್ರಜ್ಞಾನ ಮತ್ತು ವಿನ್ಯಾಸವೇ ಮುಖ್ಯ ಕಾರಣ ಎಂದು ವರದಿ ತಿಳಿಸಿದೆ.

ಬ್ರಿಟನ್‌ನ ರಸ್ತೆಗಳನ್ನು ಮೂಲತಃ ದೀರ್ಘಾವಧಿಯ ಚಳಿ, ಮಳೆ ಮತ್ತು ಹಿಮಪಾತ ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದ್ದು, ಸಾಮಾನ್ಯ ಬೇಸಿಗೆ ತಾಪಮಾನ 20-25 ಡಿಗ್ರಿ ಇರುತ್ತದೆ. ಹೀಗಾಗಿ 40 ಡಿಗ್ರಿ ತಾಪಮಾನ ತಲುಪಿದಾಗ ಅಲ್ಲಿನ ರಸ್ತೆಗಳು ಬಿಸಿ ತಡೆದುಕೊಳ್ಳಲಾಗದೆ ಮೃದುವಾಗುತ್ತವೆ. ಇದಕ್ಕೆ ಬಿಟುಮೆನ್ ಗ್ರೇಡ್ ವ್ಯತ್ಯಾಸವೂ ಕಾರಣ. ಬ್ರಿಟನ್‌ನಲ್ಲಿ ಕಡಿಮೆ ತಾಪಮಾನದಲ್ಲೂ ಮೃದುವಾಗಿರುವ ಬಿಟುಮೆನ್ ಬಳಸಲಾಗುತ್ತದೆ, ಇದು ಸುಮಾರು 40 ಡಿಗ್ರಿಗೇ ಕರಗಲಾರಂಭಿಸುತ್ತದೆ. ಆದರೆ ಭಾರತದಲ್ಲಿ ಕರಗಲು ಕನಿಷ್ಠ 60-70 ಡಿಗ್ರಿ ಸೆಲ್ಸಿಯಸ್ ಅಗತ್ಯವಿರುವ ಹೈ-ಗ್ರೇಡ್ ‘ವಿಜಿ-30/ವಿಜಿ-40’ ಗ್ರೇಡ್ ಡಾಂಬರು ಬಳಸಲಾಗುತ್ತದೆ. ಇದರ ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ರಬ್ಬರ್ ಸಂಯುಕ್ತಗಳ ಬಳಕೆಯೂ ರಸ್ತೆಗಳ ಬಾಳಿಕೆ ಹೆಚ್ಚಿಸುತ್ತದೆ.

ಜರ್ಮನಿಯಲ್ಲಿ ತಾಪಮಾನ 41.7 ಡಿಗ್ರಿ ದಾಟಿದ್ದು, ಟ್ರಾಮ್ ಹಳಿಗಳ ಸೀಲಾಂಟ್ ಕರಗಿ ಸಾರಿಗೆ ಸ್ಥಗಿತಗೊಂಡಿದೆ. ಈಗಿರುವ ರಸ್ತೆಗಳನ್ನು ಭಾರತದ ಮಾದರಿಯಲ್ಲಿ ಮರುನಿರ್ಮಾಣ ಮಾಡಲು ಶತಕೋಟಿ ಯುರೋ ವೆಚ್ಚವಾಗುವುದರಿಂದ, ಚಳಿಗಾಲದ ಹಿಮಪಾತದ ಅಪಾಯದ ಜೊತೆಗೆ ಯುರೋಪ್ ರಾಷ್ಟ್ರಗಳು ಇಕ್ಕಟ್ಟಿಗೆ ಸಿಲುಕಿವೆ. ಸ್ಥಳೀಯ ಸಂಸ್ಥೆಗಳು ತಾತ್ಕಾಲಿಕವಾಗಿ ಕಲ್ಲಿನ ಪುಡಿ ಉದುರಿಸುವ ಕ್ರಮ ಕೈಗೊಳ್ಳುತ್ತಿವೆ.

Continue Reading

ಅಪರಾಧ

ಜಯನಗರದಲ್ಲಿ ಶಾಸಕ ರಾಮಮೂರ್ತಿ ಆಪ್ತನಿಗೆ ಚಾಕು ಇರಿತ; 5 ಮಂದಿ ಬಂಧನ

Published

on

ಬೆಂಗಳೂರು: ಜಯನಗರದ ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ಅವರ ಆಪ್ತ ಸೋಮಶೇಖರ್ ರೆಡ್ಡಿ ಅವರಿಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜಯನಗರದ 9ನೇ ಬ್ಲಾಕ್‌ನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಬಳಿ ಜುಲೈ 24ರಂದು ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿಗಳು ರೆಡ್ಡಿ ಅವರ ಹೊಟ್ಟೆ, ಎದೆ ಮತ್ತು ಬೆನ್ನಿಗೆ ಚಾಕುವಿನಿಂದ ಇರಿದಿದ್ದಾರೆ.

ವಾಟರ್ ಪ್ಲಾಂಟ್ ನಡೆಸುತ್ತಿರುವ ಸೋಮಶೇಖರ್ ರೆಡ್ಡಿ ಅವರ ಬಳಿಗೆ ಬಂದ ಯುವಕರ ಗುಂಪೊಂದರ ಜೊತೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು, ಆಟೋದಲ್ಲಿ ಮಾರಕಾಸ್ತ್ರಗಳ ಸಮೇತ ಬಂದಿದ್ದ ಐವರ ಗುಂಪು ರೆಡ್ಡಿ ಮೇಲೆ ಹಲ್ಲೆ ನಡೆಸಿದೆ. ಗಾಯಗೊಂಡ ರೆಡ್ಡಿ ಅವರನ್ನು ಸ್ಥಳೀಯರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಮಾಡುವ ಉದ್ದೇಶದಿಂದ ದಾಳಿ ನಡೆಸಲಾಗಿದೆ ಎಂಬ ದೂರಿನ ಆಧಾರದ ಮೇಲೆ ಪೊಲೀಸರು ರವಿ, ಬಾಲು, ಪುಲಿ, ವಿಷ್ಣು ಮತ್ತು ಶಂಕರ್ ಎಂಬ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ಮುಂದಿನ ತನಿಖೆ ಮುಂದುವರೆದಿದೆ.

Continue Reading

Trending