Connect with us

ಸುತ್ತ ಮುತ್ತ

ಹಾಸನಾಂಬೆಯ ದರ್ಶನಕ್ಕಾಗಿ ನಿಂತಿದ್ದ ಭಕ್ತರಿಗೆ ಕರೆಂಟ್ ಶಾಕ್!

ಹಾಸನಾಂಬೆಯ ದರ್ಶನಕ್ಕಾಗಿ ನಿಂತಿದ್ದ ಭಕ್ತರಿಗೆ ಕರೆಂಟ್ ಶಾಕ್!

ಹಾಸನ: ಪ್ರಸಿದ್ದ ಹಾಸನಾಂಬೆ ದೇವಾಲಯದಲ್ಲಿ ಧರ್ಮದರ್ಶನ ಸರದಿಯಲ್ಲಿ ನಿಂತಿದ್ದ ಭಕ್ತರಿಗೆ ವಿದ್ಯುತ್ ಶಾಕ್ ತಗುಲಿ ಉಂಟಾದ ಗೊಂದಲದ ಸನ್ನಿವೇಶದಲ್ಲಿ ಹಲವರಿಗೆ ಗಾಯಗಳಾದ ಘಟನೆ ಶುಕ್ರವಾರ (ನ.10) ವರದಿಯಾಗಿದೆ.ಸಂತೆಪೇಟೆ ಭಾಗದಿಂದ ಧರ್ಮದರ್ಶನಕ್ಕೆ ನಿಂತಿದ್ದ ಸರದಿಯಲ್ಲಿದ್ದ ಭಕ್ತರಿಗೆ ಕರೆಂಟ್ ಶಾಕ್‌ ಹೊಡೆದ ಅನುಭವ ಆಗಿತ್ತು. ಇದರಿಂದಾಗಿ ಸ್ಥಳದಲ್ಲಿ ಗೊಂದಲದ ಪರಿಸ್ಥಿತಿ ಉಂಟಾಗಿ ನೂಕು ನುಗ್ಗಲು ಸಂಭವಿಸಿತ್ತು.ಧರ್ಮದರ್ಶನ ಸರದಿ ನಿರ್ವಹಿಸುವುದಕ್ಕಾಗಿ ಹಾಕಲಾಗಿದ್ದ ಬ್ಯಾರಿಕೇಡ್ ಮೂಲಕ ವಿದ್ಯುತ್ ಪ್ರವಹಿಸಿದ ಕಾರಣ ಭಕ್ತರಿಗೆ ಶಾಕ್ ತಗುಲಿತ್ತು. ಇದರಿಂದಾಗಿ 15-20 ಭಕ್ತರು ದೂರ ಎಸೆಯಲ್ಪಟ್ಟಿದ್ದರು. ಈ ದುರಂತದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಲಕ್ಷಾಂತರ ಭಕ್ತರು ಹಾಸನಾಂಬೆಯ ದರ್ಶನಕ್ಕೆ ಬರುವ ನಿರೀಕ್ಷೆ ಇದ್ದರೂ, ಸೂಕ್ತ ವ್ಯವಸ್ಥೆಯನ್ನು ಮಾಡಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಿದ್ಯುತ್ ಶಾಕ್‌ ಆದ ಬಳಿಕ ಉಂಟಾದ ಗೊಂದಲ ಪರಿಸ್ಥಿತಿಯಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು ಸ್ಥಳೀಯರು. ದೇವಸ್ಥಾನದ ಸಿಬ್ಬಂದಿ, ಆಡಳಿತ ಮಂಡಳಿ ಸ್ಪಂದಿಸಿಲ್ಲ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.ಪ್ರಾಣಾಪಾಯ ಆಗಿಲ್ಲ,ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಚಿಕಿತ್ಸೆ ಕರೆಂಟ್ ಶಾಕ್ ಆಗಿರುವ ಸುದ್ದಿ ಹರಡುತ್ತಿರುವಂತೆ ಗೊಂದಲ ಉಂಟಾಯಿತು. ಕೆಇಬಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಕರೆಂಟ್ ಶಾಕ್‌ಗೆ ಏನು ಕಾರಣ ಎಂಬುದನ್ನು ಪರಿಶೀಲಿಸಲಿದ್ದಾರೆ. ಸಂಜೆ ವೇಳೆ ಇನ್ನಷ್ಟು ಭಕ್ತರ ಆಗಮನ ಇರುವ ಕಾರಣ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಎಸ್‌ಪಿ ಎಂ ಸುಜಿತಾ ತಿಳಿಸಿದ್ದಾರೆ.

Continue Reading

ಸುತ್ತ ಮುತ್ತ

ನಾಗರ ಪಂಚಮಿ ವಿಶೇಷ: ಕುಕ್ಕೆ ಸುಬ್ರಹ್ಮಣ್ಯದಿಂದ ಕಾಶ್ಮೀರದ ಶೇಷನಾಗ ದೇಗುಲವರೆಗೆ ಭಾರತದ ಪ್ರಸಿದ್ಧ ನಾಗ ದೇವಾಲಯಗಳು!

ಶ್ರಾವಣ ಮಾಸದ ಶುಕ್ಲಪಕ್ಷದ 5ನೇ ತಿಥಿಯಲ್ಲಿ ಆಚರಿಸುವ ನಾಗರ ಪಂಚಮಿ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ದಿನ ನಾಗದೇವರಿಗೆ ಹಾಲೆರೆಯುವುದು, ಪೂಜೆ ಸಲ್ಲಿಸುವುದು, ಮತ್ತು ನಾಗ ಕಲ್ಲುಗಳ ಆರಾಧನೆಯ ಮೂಲಕ ಅನಂತರಸ್ನೇಹ, ಮಕ್ಕಳ ಕರುಣೆ ಹಾಗೂ ಸರ್ಪದೋಷ ನಿವಾರಣೆ ಎಂಬ ನಂಬಿಕೆಗಳಿಂದ ಆಚರಣೆ ಮಾಡಲಾಗುತ್ತದೆ.

🛕 ಕರ್ನಾಟಕದ ಪ್ರಮುಖ ನಾಗ ದೇವಾಲಯಗಳು

1. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ (Kukke Subramanya Temple)

  • ಸ್ಥಳ: ದಕ್ಷಿಣ ಕನ್ನಡ, ಸುಳ್ಯ
  • ವೈಶಿಷ್ಟ್ಯ: ಶೇಷ ಹಾಗೂ ವಾಸುಕಿ ನಾಗದೇವರ ಪೂಜೆ, ಸರ್ಪಸಂಸ್ಕಾರ ಮತ್ತು ನಾಗಪ್ರತಿಷ್ಠೆ ಸೇವೆ
  • ಯಾಕೆ ಪ್ರಸಿದ್ಧ: ಸರ್ಪದೋಷ ನಿವಾರಣೆಗೆ ಭಾರತದ ಪ್ರಮುಖ ಕ್ಷೇತ್ರ
  • 2. ಮುಕ್ತಿನಾಗ ಕ್ಷೇತ್ರ, ರಾಮೋಹಳ್ಳಿ
  • ಸ್ಥಳ: ಬೆಂಗಳೂರು ಹತ್ತಿರ, ಕೆಂಗೇರಿ ಬಳಿಯಲ್ಲಿ
  • ವೈಶಿಷ್ಟ್ಯ: 16 ಅಡಿ ಎತ್ತರದ ಏಳು ತಲೆಯ ನಾಗದೇವರ ಮೂರ್ತಿ
  • ಹೆಸರು ಹೇಗೆ: “ಮುಕ್ತಿನಾಗ” ಎಂಬ ಹೆಸರೇ ಸರ್ಪದೋಷಗಳಿಂದ ಮುಕ್ತಿಯ ಸಂಕೇತ
  • 3. ಘಾಟಿ ಸುಬ್ರಹ್ಮಣ್ಯ & ನಾಗಲಮಡಿಕೆ
  • ಕರ್ನಾಟಕದ ಮತ್ತೊಂದು ಪ್ರಮುಖ ತ್ರಿಕೋನ ದೇವಾಲಯಗಳು
  • ಪ್ರಾಚೀನ ಕಾಲದಿಂದ ನಾಗಪೂಜೆಗೆ ಪ್ರಸಿದ್ಧ.
  • ಕಾಶ್ಮೀರದ ಶೇಷನಾಗ ದೇವಾಲಯ (Sheshnag Temple)
    ಸ್ಥಳ: ಮನ್ಸಾರ್ ಸರೋವರದ ಬಳಿ, ಜಮ್ಮು ಮತ್ತು ಕಾಶ್ಮೀರ
    ವೈಶಿಷ್ಟ್ಯ: 6 ತಲೆಗಳ ಶೇಷನಾಗನ ಪಾತಾಳದ ದೇವಾಲಯ
    ಇತಿಹಾಸ: ಶೇಷನಾಗನಿಂದ ನಿರ್ಮಿತ ಮನ್ಸಾರ್ ಸರೋವರ, 14ನೇ ಶತಮಾನದ ದೇವಾಲಯ
    ನಂಬಿಕೆ: ನವವಿವಾಹಿತರು ಇಲ್ಲಿ ಪೂಜೆ ಸಲ್ಲಿಸಿದರೆ ಸಂತಾನ ಭಾಗ್ಯ ಸಿಗುತ್ತದೆ

    🙏 ಪೌರಾಣಿಕ ಮಹತ್ವ
    ನಾಗರ ಪಂಚಮಿಯ ಆಚರಣೆಗೆ ಹಿಂದಿರುವ ಕಥೆ ಮಹಾಭಾರತದ ಕಾಲಕ್ಕೆ ಹೋಗುತ್ತದೆ. ನಾಗರಾಜ ತಕ್ಷಕನಿಂದ ರಾಜ ಪರೀಕ್ಷಿತನ ಸಾವಿಗೆ ಪ್ರತಿಕಾರವಾಗಿ ಯಾಗ ನಡೆಸಿದ ಜನಮೇಜಯನ ಕಥೆ, ಮತ್ತು ಆ ಯಾಗವನ್ನು ತಡೆದ ಋಷಿ ಆಸ್ತಿಕನ ನಾಯಕತ್ವ ಈ ಹಬ್ಬದ ಮೂಲವಾಗಿದೆ. ಈ ಹಿನ್ನೆಲೆಯಿಂದಾಗಿ ನಾಗರ ಪಂಚಮಿಯ ದಿನ ಆಸ್ತಿಕನ ಜಯ, ನಾಗಕುಲ ರಕ್ಷಣೆ, ಮತ್ತು ದೋಷ ಪರಿಹಾರದ ದಿನವೆಂದು ಪರಿಗಣಿಸಲಾಗಿದೆ.
  • ನಾಗರ ಪಂಚಮಿಯು ನಂಬಿಕೆ, ಭಕ್ತಿ ಮತ್ತು ಪುರಾತನ ಪರಂಪರೆಯ ಮಿಳಿತವಾಗಿದೆ. ಈ ಸಂದರ್ಭದಲ್ಲಿ ಭಾರತದ ಪ್ರಸಿದ್ಧ ನಾಗ ದೇವಾಲಯಗಳಿಗೆ ಭೇಟಿ ನೀಡುವುದು, ಅಥವಾ ಮನೆ ಮಠದಲ್ಲಿ ನಾಗಪೂಜೆ ನಡೆಸುವುದು, ಪೂಜಾ ವಿಧಿಗಳನ್ನು ಪಾಲಿಸುವುದು ಧಾರ್ಮಿಕ ಹಾಗೂ ವೈಜ್ಞಾನಿಕ ಮಹತ್ವವನ್ನು ಹೊಂದಿದೆ.
Continue Reading

ರಾಜ್ಯ

ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಜನವೋ ಜನ..!

ಮೈಸೂರು: ರಾಜ್ಯದಲ್ಲಿ ಸದ್ಯ ಹೃದಯಾಘಾತ ಪ್ರಕರಣಗಳು ಬೆಳಕಿಗೆ ಬರುತ್ತಿದೆ, ಮಕ್ಕಳು, ಯುವಕ-ಯುವಕಿಯರ ಈ ದಿಢೀರ್ ಸಾವು ಜನರನ್ನು ಆತಂಕಕ್ಕೀಡು ಮಾಡಿದೆ, ಈ ಹಿನ್ನೆಲೆಯಲ್ಲಿ ಭಯಗೊಂಡಿರುವ ಜನ ಇದೀಗ ಆಸ್ಪತ್ರೆಗಳಿಗೆ ಭೇಟಿ ನೀಡಿ ಚೆಕಪ್ ಮಾಡಿಸಿಕೊಳ್ಳುತ್ತಿದ್ದಾರೆ, ಅದರಂತೆ ಇಂದು ಮೈಸೂರಿನ ಆಸ್ಪತ್ರೆಯ ಮುಂದೆ ಕೂಡ ಸಾರ್ವಜನಿಕರು ಜಮಾಯಿಸಿದ್ದಾರೆ,
ಮೈಸೂರಿನ ಜಯದೇವ ಆಸ್ಪತ್ರೆ ಬಳಿ ಜನಜಂಗುಳಿ ನೆರೆದಿತ್ತು, ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಇಂದು ಆಸ್ಪತ್ರೆಗೆ ಬಂದಿದ್ದಾರೆ, ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆಗೆ ಹೊರ ರೋಗಿಗಳು ಬಂದಿದ್ದಾರೆ ,ಬೆಳ್ಳಂಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಜನ ತಪಾಸಣೆ ಮಾಡಿಸುತ್ತಿದ್ದಾರೆ,
ಇನ್ನು ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ದಿನೇ ದಿನ ರೋಗಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ,

Continue Reading

ಬೆಂಗಳೂರು

ರೀಲ್ಸ್ ಹುಚ್ಚು ಹೃದಯಕ್ಕೆ ತರ್ತಿದ್ಯಾ ಕುತ್ತು: ಮೊಬೈಲ್ ವಿಕಿರಣದಿಂದ ಹೃದಯಕ್ಕೆ ಆಪತ್ತು?

ಬೆಂಗಳೂರು: ರಾಜ್ಯದಲ್ಲಿ ಹೃದಯಘಾತದ (Heart Attack) ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ತಜ್ಞರ ಇತ್ತೀಚಿನ ತನಿಖೆಯಲ್ಲಿ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ನಿತ್ಯ ಜೀವನದಲ್ಲಿ ಅನಿವಾರ್ಯ ಭಾಗವಾಗಿರುವ ಮೊಬೈಲ್ ಬಳಕೆಯೂ (Mobile Addiction) ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬುದು ತಜ್ಞರ ವರದಿಯ ಮುಖ್ಯ ಅಂಶವಾಗಿದೆ.

ಕೊವಿಡ್-19 ಸಾಂಕ್ರಾಮಿಕದ ನಂತರ ಜನರಲ್ಲಿ ಮೊಬೈಲ್ ಬಳಕೆಯ ಗೀಳು ಗಣನೀಯವಾಗಿ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಾದ ರೀಲ್ಸ್, ವ್ಲಾಗ್‌ಗಳು ಮತ್ತು ಇತರ ಡಿಜಿಟಲ್ ವಿಷಯಗಳ ವೀಕ್ಷಣೆಯು ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಬದಲಾಗಿದೆ. ಆದರೆ, ಈ ಚಟುವಟಿಕೆಯಿಂದ ದೈಹಿಕ ಚಟುವಟಿಕೆಗಳು ಕಡಿಮೆಯಾಗಿ, ಹೃದಯದ ಕಾರ್ಯಕ್ಷಮತೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ತಜ್ಞರ ಪ್ರಕಾರ, ದೀರ್ಘಕಾಲ ಮೊಬೈಲ್‌ಗೆ ಅಂಟಿಕೊಂಡಿರುವುದರಿಂದ ಹೃದಯದ ಸ್ಪಂದನ ದರದಲ್ಲಿ (Heart Rate Variability) ಏರಿಳಿತವಾಗುತ್ತಿದ್ದು, ಇದು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

ಜನರು ದಿನನಿತ್ಯದ ಬೇಸರದಿಂದ ತಪ್ಪಿಸಿಕೊಳ್ಳಲು ಮೊಬೈಲ್‌ನಲ್ಲಿ ಗಂಟೆಗಟ್ಟಲೆ ಕಳೆಯುತ್ತಿದ್ದಾರೆ. ಇದರಿಂದ ಊಟ, ನಿದ್ರೆ ಮತ್ತು ದೈಹಿಕ ಚಟುವಟಿಕೆಗಳಿಗೆ ಸಮಯವಿಲ್ಲದಂತಾಗಿ, ಒತ್ತಡದ ಜೀವನಶೈಲಿಯನ್ನು ಅನುಸರಿಸುತ್ತಿದ್ದಾರೆ. ಇದರಿಂದ ತಲೆನೋವು, ಸುಸ್ತು, ಮತ್ತು ಹೃದಯದಲ್ಲಿ ಭಾರದ ಭಾವನೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದಲ್ಲದೆ, ಮೊಬೈಲ್‌ನಿಂದ ಹೊರಸೂಸುವ ವಿಕಿರಣವು (Radiation) ಹೃದಯದ ಮೇಲೆ ದೀರ್ಘಕಾಲಿಕ ಒತ್ತಡವನ್ನುಂಟುಮಾಡಿ, ಹೃದಯಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವರದಿಯು ಎಚ್ಚರಿಸಿದೆ.

ತಜ್ಞರು ಎಚ್ಚರಿಕೆಯ ಸಂದೇಶವನ್ನು ನೀಡಿದ್ದು, ಮೊಬೈಲ್ ಬಳಕೆಯನ್ನು ಸೀಮಿತಗೊಳಿಸುವಂತೆ ಸೂಚಿಸಿದ್ದಾರೆ. ರಾತ್ರಿಯ ವೇಳೆಯಲ್ಲಿ ಮೊಬೈಲ್‌ನಿಂದ ದೂರವಿರುವುದು, ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡುವುದು, ಮತ್ತು ನಿಯಮಿತ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಇದಕ್ಕೆ ಪರಿಹಾರವಾಗಿದೆ. ಸಾಮಾಜಿಕ ಜಾಲತಾಣದ ರೀಲ್ಸ್‌ಗೆ ಒಡ್ಡಿಕೊಂಡು ಹೃದಯದ ಆರೋಗ್ಯವನ್ನು ಕಳೆದುಕೊಳ್ಳಬೇಡಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Continue Reading

Trending