ಬಿಬಿಎಂಪಿ
ಲೋಕಸಭಾ ಚುನಾವಣೆ ಬಳಿಕವೇ ಬಿಬಿಎಂಪಿ ಚುನಾವಣೆ? ವಾರ್ಡ್ ಸಮಿತಿಗಳ ಕಥೆ ಏನು?

- /home/u521927855/domains/hosasuddi.in/public_html/wp-content/plugins/mvp-social-buttons/mvp-social-buttons.php on line 27
https://hosasuddi.in/wp-content/uploads/2023/11/kk-10.jpg&description=ಲೋಕಸಭಾ ಚುನಾವಣೆ ಬಳಿಕವೇ ಬಿಬಿಎಂಪಿ ಚುನಾವಣೆ? ವಾರ್ಡ್ ಸಮಿತಿಗಳ ಕಥೆ ಏನು?', 'pinterestShare', 'width=750,height=350'); return false;" title="Pin This Post">
- Share
- Tweet /home/u521927855/domains/hosasuddi.in/public_html/wp-content/plugins/mvp-social-buttons/mvp-social-buttons.php on line 72
https://hosasuddi.in/wp-content/uploads/2023/11/kk-10.jpg&description=ಲೋಕಸಭಾ ಚುನಾವಣೆ ಬಳಿಕವೇ ಬಿಬಿಎಂಪಿ ಚುನಾವಣೆ? ವಾರ್ಡ್ ಸಮಿತಿಗಳ ಕಥೆ ಏನು?', 'pinterestShare', 'width=750,height=350'); return false;" title="Pin This Post">
ಡಿಸೆಂಬರ್ ಒಳಗೆ ಬಿಬಿಎಂಪಿ ಚುನಾವಣೆ ನಡೆಯಬಹುದು ಅನ್ನೋ ನಿರೀಕ್ಷೆ ಹುಸಿಯಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಜನರು 2024ರ ಲೋಕಸಭಾ ಚುನಾವಣೆ ಮುಗಿದ ಬಳಿಕವೇ ಬಿಬಿಎಂಪಿ ಚುನಾವಣೆ ನಿರೀಕ್ಷೆ ಮಾಡಬಹುದು ಎನ್ನಲಾಗುತ್ತಿದೆ. ಹೀಗಾಗಿ, ಬೆಂಗಳೂರಿನ ಜನತೆ ತಮ್ಮ ಜನಪ್ರತಿನಿಧಿಗಳ ಬಳಿ ಅಹವಾಲು ಸಲ್ಲಿಸಲು ಇನ್ನಷ್ಟು ತಿಂಗಳು ಕಾಯೋದು ಅನಿವಾರ್ಯವಾಗಲಿದೆ. ಲೋಕಸಭಾ ಚುನಾವಣೆಯು 2024ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿದೆ. ಈ ಚುನಾವಣೆ ಬಳಿಕ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹಾಗೆ ನೋಡಿದರೆ ಬಿಬಿಎಂಪಿ ಚುನಾವಣೆ ಡಿಸೆಂಬರ್‌ನಲ್ಲೇ ನಡೆಯಬೇಕಿದೆ. ಆದರೆ, ಈ ವಿಚಾರದಲ್ಲಿ ಯಾವುದೇ ರಾಜಕೀಯ ಪಕ್ಷಗಳಲ್ಲೂ ರಾಜಕೀಯ ಇಚ್ಛಾ ಶಕ್ತಿಯೇ ಕಂಡು ಬರುತ್ತಿಲ್ಲ. ಎಲ್ಲರೂ ಕೂಡಾ ಲೋಕಸಭಾ ಚುನಾವಣೆವರೆಗೂ ಕಾದು ನೋಡುವ ತಂತ್ರಕ್ಕೆ ಶರಣಾಗಿರೋದು ಕಂಡು ಬರ್ತಿದೆ. ಬಿಬಿಎಂಪಿ ಕೌನ್ಸಿಲ್ ಚುನಾವಣೆ ನಡೆಯೋದು ಬೆಂಗಳೂರು ನಗರದ ಜನತೆ ಪಾಲಿಗೆ ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಏಕೆಂದರೆ ಚುನಾವಣೆ ನಡೆದು ಜನಪ್ರತಿನಿಧಿಗಳ ನೇಮಕವಾದರೆ, ಜನರು ತಮ್ಮ ವಾರ್ಡ್ ಸಮಿತಿಗಳ ಮುಂದೆ ತಮ್ಮ ಅಹವಾಲುಗಳನ್ನು ಸಲ್ಲಿಸಲು ನೆರವಾಗುತ್ತದೆ. ವಾರ್ಡ್ ಮಟ್ಟದ ಸಮಿತಿಗಳು ತಿಂಗಳಿಗೆ ಒಮ್ಮೆಯಾದರೂ ಸಭೆ ನಡೆಸಿ ಜನರ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗುತ್ತದೆ. ಸ್ಧಳೀಯ ಮಟ್ಟದ ಸಮಸ್ಯೆಗಳು, ನಾಗರಿಕರ ದೂರುಗಳನ್ನು ಆಲಿಸಿ ಬಗೆಹರಿಸಲು ವಾರ್ಡ್ ಮಟ್ಟದ ಸಮಿತಿ ಸಭೆಗಳು ನಡೆಯೋದು ಅತ್ಯಗತ್ಯವಾಗಿದೆ. ಆದರೆ ಬಿಬಿಎಂಪಿಯಲ್ಲಿ ಜನ ಪ್ರತಿನಿಧಿಗಳೇ ಇಲ್ಲದ ಕಾರಣ ಜನರ ಅಹವಾಲು ಆಲಿಸುವವರೇ ಇಲ್ಲದಂತಾಗಿದೆ. ಕೆಲವರು ವಾರ್ಡ್ ಸಮಿತಿ ಸಭೆಯನ್ನು ಟೈಮ್ ವೇಸ್ಟ್ ಎಂದು ಭಾವಿಸುವ ಸನ್ನಿವೇಶವೂ ಇದೆ. ಈ ಸಭೆಯಿಂದ ಯಾವುದೇ ಪ್ರಯೋಜನವಿಲ್ಲ. ಸುಮ್ಮನೆ ಟೀ, ಕಾಫಿ ಕುಡಿದು, ಬಿಸ್ಕೇಟ್ ತಿನ್ನೋದಕ್ಕೆ ಸಭೆ ಸೀಮಿತ ಆಗುತ್ತೆ ಅನ್ನೋದು ಕೆಲವರ ಅಭಿಪ್ರಾಯ.
ಆದರೆ, ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ ಅಧಿಕಾರಿಗಳು, ಎಂಜಿನಿಯರ್‌ಗಳು ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಭಾಗಿಯಾಗುವ ಈ ಸಭೆಯಲ್ಲಿ ವಾರ್ಡ್ ಮಟ್ಟದ ಸಮಸ್ಯೆಗಳನ್ನು ಸೂಕ್ತವಾಗಿ ನಿಭಾಯಿಸಲು ಹಾಗೂ ಪರಿಹರಿಸಲು ನೆರವಾಗಲಿದೆ ಅನ್ನೋದು ಹಲವರ ದೃಢ ನಿಲುವಾಗಿದೆ.
ಬಿಬಿಎಂಪಿ
2025ರ ಅಂತ್ಯಕ್ಕೆ ಬಿಬಿಎಂಪಿ ಚುನಾವಣೆ ಸಾಧ್ಯತೆ: ಆರು ವರ್ಷದ ನಿರೀಕ್ಷೆಗೆ ತೆರೆ ಹಾಕಲು ಕಾಂಗ್ರೆಸ್ ಸಿದ್ಧತೆ

ಬೆಂಗಳೂರು, ಜುಲೈ 27 – ಬೆಂಗಳೂರಿನ ಬೃಹತ್ ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕಳೆದ ಆರು ವರ್ಷಗಳಿಂದ ಚುನಾವಣೆ ನಡೆಯದೇ ಇರುವ ಸ್ಥಿತಿಗೆ ಕೊನೆಗೂ ತೆರೆ ಬೀಳುವ ಸೂಚನೆ ನೀಡಲಾಗಿದೆ. ಈ ವರ್ಷದ ಅಂತ್ಯದಲ್ಲಿ ಬಿಬಿಎಂಪಿ ಹಾಗೂ ಹೊಸದಾಗಿ ರಚಿಸಲಾಗಿರುವ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಸರ್ಕಾರ ಸ್ಪಷ್ಟಪಡಿಸಿದೆ.
ಸರ್ಕಾರದ ಶ್ರದ್ಧೆ ಹಾಗೂ ಕೋರ್ಟ್‌ನಲ್ಲಿ ಮುಂದುವರಿದಿರುವ ವಿಚಾರಣೆ:
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದು, ಅವರ ಪರವಾಗಿ ವಕೀಲ ಡಿ.ಎಲ್. ಚಿದಾನಂದ ಪ್ರತಿನಿಧಿಸಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳು ಸೂರ್ಯಕಾಂತ್ ಮತ್ತು ಜೋಯ್ ಮಾಲ್ಯ ಬಾಗ್ಚಿ ಅವರ ಪೀಠ ಸೋಮವಾರ ನಡೆಸಲಿದೆ.
ಚುನಾವಣೆಯ ಹಿನ್ನಲೆ – ಏಳು ವರ್ಷದ ವಿಳಂಬ:
- ಬಿಬಿಎಂಪಿ ಸದಸ್ಯರ ಅವಧಿ 2019ರಲ್ಲೇ ಕೊನೆಗೊಂಡಿತ್ತು.
- ಹೈಕೋರ್ಟ್ 6 ವಾರಗಳಲ್ಲಿ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದರೂ, ಸುಪ್ರೀಂ ಕೋರ್ಟ್ ಆ ಆದೇಶವನ್ನು ಅಮಾನತುಗೊಳಿಸಿತು.
- 2023 ರಲ್ಲಿ ವಾರ್ಡ್ ಮರುರಚನೆ ನಡೆಸಿ ವಾರ್ಡ್‌ಗಳ ಸಂಖ್ಯೆ 198 ರಿಂದ 225 ಕ್ಕೆ ಹೆಚ್ಚಿಸಲಾಯಿತು.
- ಈ ಮರುರಚನೆಯ ವಿರುದ್ಧ ಸಾರ್ವಜನಿಕ ಹಾಗೂ ಪ್ರತಿಪಕ್ಷಗಳಿಂದ ಗಂಭೀರ ವಿರೋಧ ವ್ಯಕ್ತವಾಯಿತು.
- ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ ಮತ್ತು ಮುಂದಿನ ಆಯೋಜನೆ:
- 2025 ರಲ್ಲಿ ಕಾಂಗ್ರೆಸ್ ಸರ್ಕಾರ ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ ಮಂಡಿಸಿದ್ದು, ಬೆಂಗಳೂರನ್ನು ಐದು ಹೊಸ ನಗರ ಪಾಲಿಕೆಗಳಾಗಿ ವಿಭಜಿಸಿ “ಗ್ರೇಟರ್ ಬೆಂಗಳೂರು” ಎಂದು ಹೆಸರಿಸಲಾಗಿದೆ. ಈ ಹೊಸ ಪಾಲಿಕೆಗಳಿಗೆ ಸಂಬಂಧಿಸಿದ ವಾರ್ಡ್‌ಗಳ ಗಡಿ ಹಾಗೂ ರೂಪರೇಖೆಯ ಕರಡು ಅಧಿಸೂಚನೆ ಹೊರಬಿದ್ದಿದ್ದು, ನವೆಂಬರ್ 2024 ವೇಳೆಗೆ ಅಂತಿಮ ಅಧಿಸೂಚನೆ ಹೊರಬರುವ ಸಾಧ್ಯತೆ ಇದೆ.
- ರಾಜಕೀಯ ಬಿಕ್ಕಟ್ಟು ಮತ್ತು ಸಾರ್ವಜನಿಕ ಒತ್ತಡ:
- ಬಿಬಿಎಂಪಿ ಚುನಾವಣೆ ಮುಂದೂಡುತ್ತಿರುವ ಬಗ್ಗೆ ಕೆಲವು ಶಾಸಕರ ನಿರಾಸಕ್ತಿ ಹಾಗೂ ಅಧಿಕಾರದಲ್ಲಿ ಮುಂದುವರಿಯುವ ಔತ್ಸುಕರತೆ ಕಾರಣಗಳಾಗಿದ್ದವು. ಹಲವಾರು ಪ್ರಭಾವಿ ಮುಖಂಡರು ಈ ಹಿನ್ನೆಲೆಯಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಬಿಬಿಎಂಪಿ
ವರ್ಗಾವಣೆಯಲ್ಲಿಯೂ ಬಿಬಿಎಂಪಿ ಭ್ರಷ್ಟಾಚಾರ – ಒಲ್ಲದವರಿಗೆ ಗೇಟ್ ಪಾಸ್, ಬೇಕಾದವರಿಗೆ ಸ್ಟೇಟಸ್!

ಬೆಂಗಳೂರು : ಬಿಬಿಎಂಪಿಯ ಹಲವು ಭ್ರಷ್ಟಾಚಾರಗಳ ಪೈಕಿ ಈಗ ಸಾರ್ವತ್ರಿಕ ವರ್ಗಾವಣೆಯಲ್ಲಿ ದಂಧೆ ನಡೆದಿರುವ ಆರೋಪ ಕೇಳಿಬಂದಿದೆ. ಯಾವುದೇ ಸೇವಾಜೇಷ್ಟತೆ, ಅರ್ಹತೆ, ಅನುಭವಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಬೇಕಾಬಿಟ್ಟಿ ವರ್ಗಾವಣೆ ಮಾಡಿದ್ದಾರೆಂದು ಸ್ವತಃ ಸಿಬ್ಬಂದಿಗಳೇ ಆಕ್ರೋಶ ಹೊರಹಾಕಿದ್ದಾರೆ.
ಒಂದೇ ಕಚೇರಿಯಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವವರನ್ನು ವರ್ಗಾಯಿಸಬೇಕೆಂಬ ನಿಯಮವಿದ್ದರೂ ಇತ್ತೀಚೆಗೆ ನೇಮಕವಾದವರನ್ನು ವರ್ಗಾಯಿಸಿ ಹಳೆಯ ತಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳು ವ್ಯಾಪಕವಾಗಿ ನಡೆದಿದೆ. ಇದಕ್ಕೆ ಬಲಿಪಶುಗಳಾಗಿರುವ ಸಿಬ್ಬಂದಿಗಳು ವರ್ಗಾವಣೆಗೆ ಆಕ್ಷೇಪ ಸಲ್ಲಿಸಿದ್ದಾರೆ.
ನೇಮಕವಾಗಿರುವ ದಿನಾಂಕಕ್ಕೂ ಹಾಗೂ ಎಚ್‌ಆರ್‌ಎಂಎಸ್ ನಲ್ಲಿ ದಾಖಲಾಗಿರುವ ದಿನಾಂಕಕ್ಕೂ ವ್ಯತ್ಯಾಸವಿರುದು ದೋಷಪೂರಿತವೆಂದೆ ಸ್ವತಃ ಬಿಬಿಎಂಪಿ ಒಳಾಡಳಿತವೇ ಒಪ್ಪಿಕೊಂಡಿದೆ .ಆದರೂ ಸಹ ಎಚ್‌ಆರ್‌ಎಂಎಸ್ ದಾಖಲೆಗೆ ಅನುಸಾರವಾಗಿ ಬಿಬಿಎಂಪಿ ವರ್ಗಾವಣೆ ಮಾಡಿದೆ.
ಅಲ್ಲದೇ ಎಂಟೂ ವಲಯಗಳಲ್ಲಿಯೂ ವರ್ಗಾವಣೆಯಲ್ಲಿ ಪಕ್ಷಪಾತ ತೋರಲಾಗಿದ್ದು, ಕೇವಲ ಎರಡು ವಲಯಗಳ ಸಿಬ್ಬಂದಿಗೆ ಮಾತ್ರ ಈ ವರ್ಗಾವಣೆ ಜಾರಿಯಾಗಿದೆ. ಮಿಕ್ಕವರು ಹಣಬಲ, ಅಧಿಕಾರಿಗಳ ಬೆಂಬಲ, ಜಾತಿಬಲ ಗಳಿಂದ ಪಾರಾಗಿದ್ದಾರೆಂದು ಸಿಬ್ಬಂದಿ ವರ್ಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರ್ಗಾವಣೆ ನಿಯಮ ಪಾರದರ್ಶಕವಾಗಿರಲಿ, ಎಲ್ಲರಿಗೂ ಸಮಾನವಾಗಿ ಜಾರಿಯಾಗಲಿ ಎಂದು ಸಿಬ್ಬಂದಿಗಳು ಆಗ್ರಹಿಸಿದ್ದಾರೆ.
ಬಿಬಿಎಂಪಿ
ಕಟ್ಟಡ ನಕ್ಷೆ ಮಂಜೂರಾತಿಗೆ ಇ-ಖಾತಾ ಕಡ್ಡಾಯ: ಜು.1ರಿಂದ ಹೊಸ ನಿಯಮ ಜಾರಿಗೆ..!

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಸ್ವತ್ತುಗಳು ಇ-ಖಾತಾ ಪಡೆದಿರುವುದನ್ನು ಕಡ್ಡಾಯಗೊಳಿಸಿ ಬಿಬಿಎಂಪಿ ಆದೇಶಿಸಿದೆ.
ಈ ಸಂಬಂಧ ಸೋಮವಾರ ಆದೇಶ ಹೊರಡಿಸಿರುವ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು, ಕಂದಾಯ ವಿಭಾಗದಿಂದ ಇ-ಆಸ್ತಿ ತಂತ್ರಾಂಶವನ್ನು ಜಾರಿ ಮಾಡಲಾಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಈಗಾಗಲೇ ಇ-ಖಾತಾ ನೀಡಲಾಗುತ್ತಿದೆ. ಆದುದರಿಂದ ಸ್ವತ್ತುಗಳ ದತ್ತಾಂಶವು ಇ-ಆಸ್ತಿ ತಂತ್ರಾಂಶದಲ್ಲಿ ಲಭ್ಯವಿರುತ್ತದೆ ಎಂದು ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮತ್ತು ವಿತರಣೆ ವ್ಯವಸ್ಥೆ ಮಾಡಲಾಗಿದೆ. ಅದರ ಜತೆಗೆ ಸ್ವತ್ತುಗಳಿಗೆಇ-ಖಾತಾವನ್ನು ಆನ್‌ಲೈನ್‌ಮೂಲಕ ನೀಡಲಾಗುತ್ತಿದೆ. ಇದೀಗ ಎರಡೂ ತಂತ್ರಾಂಶವನ್ನು ಏಕೀಕರಣಗೊಳಿಸಲಾಗುತ್ತಿದೆ. ಹೀಗಾಗಿ ಕಟ್ಟಡನಕ್ಷೆ ಮಂಜೂರಾತಿಗೆ ಅರ್ಜಿಸಲ್ಲಿ ಸುವವರು ಮೊದಲು ಇ- ಖಾತಾವನ್ನು ಪಡೆದಿರಬೇಕಿದೆ.
ಹೀಗಾಗಿ ಜು. 1ರಿಂದ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸುವವರುಇ-ಖಾತಾ ಅಥವಾ ಇಪಿಐಡಿ ಸಂಖ್ಯೆಯನ್ನು ತಂತ್ರಾಂಶದಲ್ಲಿ ನಮೂದಿಸುವುದು ಹಾಗೂ ಇ- ಖಾತಾ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇ-ಖಾತಾ ಸಲ್ಲಿಸದ ಅರ್ಜಿಗಳನ್ನು ಕಟ್ಟಡ ನಕ್ಷೆ ಮಂಜೂರಾತಿಗೆ ಪರಿಗಣಿಸದಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇನ್ನು, ನಂಬಿಕೆಯೊಂದಿಗೆ ಪರಿಶೀಲನೆ ವ್ಯವಸ್ಥೆ ಅಡಿಯಲ್ಲಿ ನಿಗದಿತ ಕಾಲಮಿತಿಯಲ್ಲಿ ತಾತ್ಕಾಲಿಕ ನಕ್ಷೆ ಮಂಜೂರಾತಿ ಹೊಣೆಯನ್ನು ಸಂಬಂಧಪಟ್ಟ ಸಹಾಯಕ ನಿರ್ದೇಶಕ (ನಗರ ಯೋಜನೆ) ಅವರಿಗೆ ನೀಡಲಾಗಿದೆ. ಒಂದು ವೇಳೆ ಸಹಾಯಕ ನಿರ್ದೇಶಕ (ನಗರ ಯೋಜನೆ) ನಿಗದಿತ ಕಾಲ ಮಿತಿಯಲ್ಲಿ ಅರ್ಜಿಗಳನ್ನು ಪರಿಶೀಲಿಸದಿದ್ದರೆ ತಂತ್ರಾಶದಲ್ಲಿ ಅರ್ಜಿಗಳಿಗೆ ಸ್ವಯಂಚಾಲಿತವಾಗಿ ಡೀಮ್ಡ್ ಅನುಮೋದನೆ ದೊರೆಯಲಿದೆ.
ಒಂದು ವೇಳೆ ನಕ್ಷೆ ಮಂಜೂರಾತಿ ಅರ್ಜಿಗಳು ಇ-ಖಾತಾ ಸೇರಿದಂತೆ ಇನ್ನಿತರ ದಾಖಲೆಗಳನ್ನು ಸಲ್ಲಿಸದೇ ಡೀಮ್ ಅನುಮೋದನೆ ದೊರೆತರೆ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಿ ನಿಯಮದ ಪ್ರಕಾರ ಶಿಸ್ತು ಕ್ರಮಕೈಗೊಳ್ಳುವುದಾಗಿ ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.
5 ಲಕ್ಷ ನಾಗರಿಕರಿಗೆ ಅಂತಿಮ ಇ-ಖಾತಾ ವಿತರಣೆ
ಬಿಬಿಎಂಪಿ ಪಾಲಿಕೆ ವ್ಯಾಪ್ತಿಯಲ್ಲಿ ಈವರೆಗೂ 5 ಲಕ್ಷ ನಾಗರಿಕರು ಅಂತಿಮ ಇ-ಖಾತಾ ಪಡೆದಿದ್ದಾರೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
25 ಲಕ್ಷಕ್ಕಿಂತ ಹೆಚ್ಚು ಕರಡು ಇ-ಖಾತಾಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ನಾಗರಿಕರು ತಮ್ಮ ಆಧಾರ್ ಸಂಖ್ಯೆ, ಮಾರಾಟ ದಸ್ತಾವೇಜಿನ ಸಂಖ್ಯೆ, ಆಸ್ತಿಯ ತೆರಿಗೆ ಐ.ಡಿ, ಬೆಸ್ಕಾಂ ಸಂಖ್ಯೆ (ಖಾಲಿ ಜಾಗಕ್ಕೆ ಐಚ್ಛಿಕ) ಮತ್ತು ಆಸ್ತಿಯ ಫೋಟೋ ಹಾಕಬೇಕು. ಈ ಮಾಹಿತಿಗಳನ್ನು ನೀಡಿದ ನಂತರ ನಾಗರಿಕರಿಗೆ ಅಂತಿಮ ಇ-ಖಾತಾ ಕನಿಷ್ಠ 1 ರಿಂದ 2 ದಿನಗಳಲ್ಲಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ಪ್ರತಿದಿನ ಸುಮಾರು 3,000 ಜನರು ಈ ಪ್ರಕ್ರಿಯೆ ನಡೆಸುತ್ತಿದ್ದಾರೆ. ಮತ್ತು ಇಷ್ಟೇ ಸಂಖ್ಯೆಯವರಿಗೆ ಇ-ಖಾತಾ ಅನುಮೋದನೆ ದೊರೆಯುತ್ತಿದೆ. ಈವರೆಗೆ ಸುಮಾರು 5 ಲಕ್ಷ ನಾಗರಿಕರು ತಮ್ಮ ಇ-ಖಾತಾ ಪಡೆದುಕೊಂಡಿದ್ದಾರೆ. ಅರ್ಜಿ ಸಲ್ಲಿಕೆಯಾದ 1 ರಿಂದ 2 ದಿನಗಳಲ್ಲಿ ಇ-ಖಾತಾ ಅನುಮೋದಿತವಾಗಲಿದೆ. ನಾಗಕರಿರು ಇ-ಖಾತಾವನ್ನು ಆನ್‌ಲೈನ್ BBMPeAasthi.karnataka.gov.in ಮೂಲಕ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು1 year ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ