Connect with us

ಚುನಾವಣೆ

ಚುನಾವಣಾಧಿಕಾರಿಗಳು ಕಾಂಗ್ರೆಸ್ ಕೈಗೊಂಬೆಯಾಗಿದ್ದಾರೆ: ನಿಖಿಲ್ ಕುಮಾರಸ್ವಾಮಿ ಕಿಡಿ

ರಾಮನಗರ: ಬುಧವಾರ ತೋಟದ ಮನೆಯ ಹೊಸತೊಡಕು ಊಟಕ್ಕೆ ಚುನಾವಣಾಧಿಕಾರಿಗಳು (Returning Officer) ಬ್ರೇಕ್ ಹಾಕಿದ ವಿಚಾರದ ಕುರಿತು ಮಾತನಾಡಿದ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಈ ಬಗ್ಗೆ ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಯುಗಾದಿ (Ugadi) ಹಬ್ಬದಲ್ಲಿ ಹೊಸತೊಡಕು ಊಟ ಹಾಕುತ್ತೇವೆ. ನಮ್ಮ ತೋಟದ ಮನೆಯ 100 ರಿಂದ 150 ಮಂದಿ ಕೆಲಸಗಾರರಿಗೆ ಊಟದ ವ್ಯವಸ್ಥೆ ಮಾಡಿದ್ದೆವು. ಅಲ್ಲದೇ ಬಿಜೆಪಿ-ಜೆಡಿಎಸ್ ಮುಖಂಡರು ಸಹ ಊಟಕ್ಕೆ ಸೇರುವ ತೀರ್ಮಾನ ಮಾಡಿದ್ದೆವು. ಇಲ್ಲಿ ಯಾವುದೇ ಪಾರ್ಟಿ ಕಾರ್ಯಕ್ರಮ ಮಾಡುತ್ತಿರಲಿಲ್ಲ. ಸಾರ್ವಜನಿಕ ಸಮಾರಂಭ ಮಾಡುತ್ತಿರಲಿಲ್ಲ. ಕಾಂಗ್ರೆಸ್‌ನವರ ರೀತಿಯ ಕುಕ್ಕರ್, ಸೀರೆ ಹಂಚುವ ಕಾರ್ಯಕ್ರಮ ನಮ್ಮದಲ್ಲ ಎಂದು ಹರಿಹಾಯ್ದರು.

ಕಾಂಗ್ರೆಸ್ (Congress) ಸೋಲುವ ಆತಂಕದಲ್ಲಿ ಏನೇನೋ ಆರೋಪ ಮಾಡುತ್ತಿದೆ. ಅವರ ದೂರಿಗೆ ಮಣೆಹಾಕಿ ಅಧಿಕಾರಿಗಳು ತೋಟದ ಮನೆಗೆ ಬಂದು ಪರಿಶೀಲನೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಕುಕ್ಕರ್, ಸೀರೆ ಹಂಚುವ ಬಗ್ಗೆ ಯಾಕೆ ಚುನಾವಣಾ ಆಯೋಗ ಕ್ರಮವಹಿಸುತ್ತಿಲ್ಲ. ಚುನಾವಣಾಧಿಕಾರಿಗಳು ಅವರ ಕೈಗೊಂಬೆ ಆಗಿರೋದು ಸ್ಪಷ್ಟವಾಗಿದೆ. ರಾಮನಗರದಲ್ಲಿ ಸುಮಾರು 3,700 ಸೀರೆ ಜಪ್ತಿ ಮಾಡಿದ್ದು ನಮ್ಮ ಕಾರ್ಯಕರ್ತರು. ಆಗ ಚುನಾವಣಾ ಆಯೋಗ, ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಚುನಾವಣಾಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರು ಉತ್ಸಾಹದಿಂದ ಡಾ.ಮಂಜುನಾಥ್ (Dr Manjunath) ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಅವರ ವೈದ್ಯಕೀಯ ಸೇವೆಯನ್ನು ಜನ ನೆನಪಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಮೈತ್ರಿ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆದ್ದೆ ಗೆಲ್ಲುತ್ತಾರೆ. ಸಿ.ಎನ್.ಮಂಜುನಾಥ್ ಅವರು ಈ ಭಾಗದಲ್ಲಿ ಸಂಸದರಾದರೆ ಕ್ಷೇತ್ರ ಅಭಿವೃದ್ಧಿ ಮಾಡುತ್ತಾರೆ. ಹಾಗಾಗಿ ಜನ ಅವರನ್ನು ಗೆಲ್ಲಿಸುವ ವಿಶ್ವಾಸ ಇದೆ ಎಂದರು. ಮಂಡ್ಯದಲ್ಲಿ ತಂದೆ ಪರ ಪ್ರಚಾರ ಮಾಡುವ ವಿಚಾರ ಕುರಿತು ಮಾತನಾಡಿ, ಮಂಡ್ಯದ 8 ವಿಧಾನಸಭಾ ಕ್ಷೇತ್ರಗಳಿಗೂ ಒಂದೊಂದು ದಿನ ಮೀಸಲಿಟ್ಟಿದ್ದೇನೆ. ಅಲ್ಲಿಯೂ ಎಲ್ಲಾ ಕಡೆ ಓಡಾಟ ಮಾಡುತ್ತೇನೆ. ಅಲ್ಲಿ ಪಕ್ಷದ ಕಾರ್ಯಕರ್ತರು ಬಲಿಷ್ಠವಾಗಿದ್ದಾರೆ. ಅಲ್ಲದೇ ಮಾಜಿ ಪ್ರಧಾನಿ ಹೆಚ್‌ಡಿಡಿ ಅವರು ರಾಜ್ಯದ 28 ಕ್ಷೇತ್ರದಲ್ಲೂ ಪ್ರಚಾರ ಮಾಡುವ ಹುಮ್ಮಸ್ಸು ತೋರುತ್ತಿದ್ದಾರೆ. ಶೀಘ್ರದಲ್ಲೇ ಎಲ್ಲಾ ಕ್ಷೇತ್ರಗಳಲ್ಲಿ ಸಂಚಾರ ಮಾಡಲಿದ್ದಾರೆ ಎಂದು ತಿಳಿಸಿದರು.

ಕ್ರೀಡೆ

ಐಪಿಎಲ್ 2025 ರದ್ದು: ದೇಶದ ಭದ್ರತೆಗೆ ಬಿಸಿಸಿಐ ಆದ್ಯತೆ, ಆರ್‌ಸಿಬಿ ಕನಸು ಭಗ್ನ!

ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಮತ್ತು ಭದ್ರತಾ ಆತಂಕಗಳಿಂದಾಗಿ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್ 2025ರ 18ನೇ ಆವೃತ್ತಿಯನ್ನು ಅರ್ಧದಲ್ಲೇ ರದ್ದುಗೊಳಿಸಲಾಗಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಬಿಸಿಸಿಐ ಘೋಷಿಸಿದೆ. ಈ ನಿರ್ಧಾರವು ಕ್ರಿಕೆಟ್ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರ್‌ಸಿಬಿ ಸೇರಿದಂತೆ ಹಲವು ತಂಡಗಳ ಕಪ್ ಗೆಲ್ಲುವ ಕನಸು ಭಗ್ನವಾಗಿದೆ.

ಮೇ 8, 2025 ರಂದು ಪಂಜಾಬ್‌ನ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಐಪಿಎಲ್ 2025ರ 58ನೇ ಪಂದ್ಯದ ವೇಳೆ, 10.1 ಓವರ್‌ಗಳಲ್ಲಿ ಫ್ಲಡ್‌ಲೈಟ್ ವೈಫಲ್ಯದಿಂದಾಗಿ ಆಟ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ಆದರೆ, ಇದಕ್ಕೆ ಕಾರಣ ಪಾಕಿಸ್ತಾನದಿಂದ ನಡೆದ ಡ್ರೋನ್ ದಾಳಿಯಿಂದ ಉಂಟಾದ ವಿದ್ಯುತ್ ಕಡಿತವಾಗಿತ್ತು ಎಂದು ವರದಿಯಾಗಿದೆ. ಭದ್ರತಾ ಕಾರಣಗಳಿಂದ ಆ ಪಂದ್ಯವನ್ನು ರದ್ದುಗೊಳಿಸಲಾಯಿತು, ಮತ್ತು ಕ್ರೀಡಾಂಗಣದಲ್ಲಿದ್ದ ಎಲ್ಲರನ್ನೂ ತಕ್ಷಣವೇ ಸ್ಥಳಾಂತರಿಸಲಾಯಿತು. ಈ ಘಟನೆಯು ಐಪಿಎಲ್‌ನ ಉಳಿದ ಪಂದ್ಯಗಳ ಮೇಲೆ ಗಂಭೀರ ಪರಿಣಾಮ ಬೀರಿತು.

ವಿದೇಶಿ ಆಟಗಾರರ ಭದ್ರತೆ:

ಐಪಿಎಲ್‌ನಲ್ಲಿ ಭಾಗವಹಿಸುವ ವಿದೇಶಿ ಆಟಗಾರರ ಭದ್ರತೆಯು ಬಿಸಿಸಿಐಗೆ ಪ್ರಮುಖ ಆದ್ಯತೆಯಾಗಿದೆ. ಪಾಕಿಸ್ತಾನದಿಂದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ಭೀತಿಯಿಂದಾಗಿ, ದೇಶದ ಭದ್ರತಾ ವ್ಯವಸ್ಥೆಯನ್ನು ತೀವ್ರಗೊಳಿಸಲಾಗಿದೆ. ಈ ಸಂದರ್ಭದಲ್ಲಿ, ವಿದೇಶಿ ಆಟಗಾರರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ, ಬಿಸಿಸಿಐ ಐಪಿಎಲ್ 2025ರ ಉಳಿದ 14 ಪಂದ್ಯಗಳನ್ನು ಮತ್ತು ಫೈನಲ್ ಪಂದ್ಯವನ್ನು ರದ್ದುಗೊಳಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ಮೇ 9, 2025 ರಂದು ನಡೆದ ತುರ್ತು ಸಭೆಯಲ್ಲಿ ಈ ತೀರ್ಮಾನವನ್ನು ಘೋಷಿಸಲಾಗಿದೆ ಎಂದು ವರದಿಯಾಗಿದೆ.

ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ

ಐಪಿಎಲ್ 2025ರ ರದ್ದತಿಯ ಸುದ್ದಿಯು ಕ್ರಿಕೆಟ್ ಪ್ರಿಯರಿಗೆ ಭಾರೀ ನಿರಾಸೆಯನ್ನುಂಟು ಮಾಡಿದೆ. ಈಗಾಗಲೇ 57 ಪಂದ್ಯಗಳು ಮುಗಿದಿದ್ದು, ಲೀಗ್ ತನ್ನ ಅಂತಿಮ ಹಂತದಲ್ಲಿತ್ತು. ಆದರೆ, ದೇಶದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರ್‌ಸಿಬಿ ತಂಡದ ಅಭಿಮಾನಿಗಳಿಗೆ ಈ ವರ್ಷವೂ ಕಪ್ ಗೆಲ್ಲುವ ಕನಸು ಭಗ್ನವಾಗಿದೆ, ಇದು ಅವರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ತಮ್ಮ ನಿರಾಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ, ಆದರೆ ದೇಶದ ಭದ್ರತೆಗಿಂತ ಕ್ರಿಕೆಟ್ ದೊಡ್ಡದಲ್ಲ ಎಂಬ ಅಭಿಪ್ರಾಯವೂ ಜನಪ್ರಿಯವಾಗಿದೆ.

ಬಿಸಿಸಿಐನ ಸಂದೇಶ

ಬಿಸಿಸಿಐ ಅಧ್ಯಕ್ಷ ಅರುಣ್ ಧುಮಾಲ್ ಈ ಬಗ್ಗೆ ಪ್ರತಿಕ್ರಿಯಿಸಿ, “ದೇಶದ ಭದ್ರತೆಯೇ ನಮಗೆ ಮೊದಲ ಆದ್ಯತೆ. ಆಟಗಾರರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಸಾಧ್ಯವಾಗದ ಸಂದರ್ಭದಲ್ಲಿ, ಐಪಿಎಲ್ 2025ರ ರದ್ದತಿಯ ನಿರ್ಧಾರವು ಅನಿವಾರ್ಯವಾಗಿತ್ತು. ಕ್ರಿಕೆಟ್ ಅಭಿಮಾನಿಗಳಿಗೆ ಈ ನಿರ್ಧಾರ ಕಷ್ಟಕರವಾಗಿದ್ದರೂ, ದೇಶದ ಸುರಕ್ಷತೆಗೆ ಯಾವುದೇ ರಾಜಿಯಿಲ್ಲ,” ಎಂದು ತಿಳಿಸಿದ್ದಾರೆ. ಶೀಘ್ರದಲ್ಲೇ ಈ ರದ್ದತಿಯ ಬಗ್ಗೆ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ.

Continue Reading

ಚುನಾವಣೆ

ಮತಗಟ್ಟೆಯಲ್ಲಿ ಸರ್ಕಾರಿ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಅಭ್ಯರ್ಥಿ

ರಾಜಸ್ಥಾನ: ಇಲ್ಲಿನ ಮತಗಟ್ಟೆಯೊಂದರಲ್ಲಿ ಅಘಾತಕಾರಿ ಘಟನೆ ನಡೆದಿದೆ. ಸರ್ಕಾರಿ ಅಧಿಕಾರಿಗೆ ಡಿಯೋಲಿ-ಉನಿಯಾರಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ.

ಡಿಯೋಲಿ-ಉನಿಯಾರಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ನರೇಶ್ ಮೀನಾ ಅವರು, ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಗೆ ಕಪಾಳಮೋಕ್ಷ ಮಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಸಂರವತ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ. ಮತಗಟ್ಟೆಗೆ ತೆರಳಿದ್ದ ಮೀನಾ ಅವರು, ಚುನಾವಣಾ ಪ್ರೋಟೋಕಾಲ್ ಅನ್ನು ಮೇಲ್ವಿಚಾರಣೆ ಮಾಡಲು ಕರ್ತವ್ಯದಲ್ಲಿದ್ದ ಎಸ್‌ಡಿಎಂ ಅಮಿತ್ ಚೌಧರಿ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆ ಮಾಡದಂತೆ ತಡೆದಿದ್ದಾರೆ.

2018 ಮತ್ತು 2023 ರಲ್ಲಿ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದ ಕಾಂಗ್ರೆಸ್ ನಾಯಕ ಹರೀಶ್ ಚಂದ್ರ ಮೀನಾ ಅವರು ಸಾರ್ವತ್ರಿಕ ಚುನಾವಣೆಯ ನಂತರ ಲೋಕಸಭೆಗೆ ಪ್ರವೇಶಿಸಿದ್ದಾರೆ. ತೆರವಾಗಿದ್ದ ಅವರ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ.

1,914 ಮತಗಟ್ಟೆಗಳಲ್ಲಿ 9,000 ಸಿಬ್ಬಂದಿ ನಿಯೋಜಿಸಲಾಗಿದ್ದು, ಡಿಯೋಲಿ-ಉನಿಯಾರಾ ಸೇರಿದಂತೆ ರಾಜಸ್ಥಾನದಾದ್ಯಂತ ಏಳು ವಿಧಾನಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ.

Continue Reading

ಚುನಾವಣೆ

FACT CHECK ಟ್ರಂಪ್ ಭಾಷಣದ ವೇಳೆ ಜನ ಮೋದಿ ಮೋದಿ ಎಂದು ಕೂಗಿದ್ರಾ? ಇಲ್ಲಿದೆ ಅಸಲಿಯತ್ತು

ವಾಷಿಂಗ್ಟನ್: ಟ್ರಂಟ್ ಅವರ ವಿಜಯೋತ್ಸವ ಭಾಷಣದಲ್ಲಿ ಮೋದಿ, ಮೋದಿ ಎಂದು ಕೂಗಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಅದರೆ ಇದೀಗ ಆ ವಿಡಿಯೋ ಎಡಿಟ್ ಮಾಡಿರುವುದು ಎನ್ನಲಾಗಿದೆ,
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಗೆಲುವಿನ ನಂತರ ವಿಜಯದ ಭಾಷಣ ಮಾಡಿದ್ದರು, ಈ ವೇಳೆ ಜನರು ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಜಪಿಸುತ್ತಿರುವ ವಿಡಿಯೋ ವೈರೆಲ್ ಆಗಿದೆ,
ಅಮೆರಿಕವನ್ನು ಮತ್ತೆ ಆರೋಗ್ಯವಂತರನ್ನಾಗಿ ಮಾಡಿ ಎಂದು ಟ್ರಂಪ್ ಹೇಳುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ, ಅದರ ನಂತರ ಜನರು ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾರೆ, ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್ ಅವರೊಬ್ಬ ಮಹಾನ್ ವ್ಯಕ್ತಿ ಎಂದು ನನಗೆ ತಿಳಿದಿದೆ ಎಂದು ಹೇಳುತ್ತಾರೆ,
ಅದರೆ ಈ ವಿಡಿಯೋದ ಅಸಲಿಯತ್ತು ಇದೀಗ ಬಯಲಾಗಿದೆ, ಟ್ರಂಪ್ ಅವರ ಸಂಪೂರ್ಣ ಭಾಷಣವಿರುವ ವಿಡಿಯೋದಲ್ಲಿ ಯೂಟ್ಯೂಬ್ ವಿಡಿಯೋದಲ್ಲಿ 19 ನಿಮಿಷ 37 ಸೆಕೆಂಡ್‍ನಲ್ಲಿ ಈ ವಿಡಿಯೋವನ್ನು ಗಮನಿಸಬಹುದಾಗಿದೆ, ಅದರಲ್ಲಿ ಮೋದಿ ಘೋಷಣೆಯಿಲ್ಲ, ಬದಲಿಗೆ ಟ್ರಂಪರ ಮಿತ್ರ ರಾಬರ್ಟ್ ಎಫ್ ಕೆನಡಿ ಜೂನಿಯರ್ ಗಾಗಿ ಜನರು ಘೋಷಣೆ ಕೂಗಿದ್ದಾರೆ, ಈ ವೇಳೆ ಜನರು ಮೋದಿ ಬದಲಿಗೆ ಬಾಬಿ ಎಂಬ ಅಡ್ಡಹೆಸರನ್ನು ಕೂಗಿದ್ದಾರೆ.
ಭಾಷಣದ ವೇಳೆ ಒಮ್ಮೆಯೂ ಜನ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಜಪಿಸಲಿಲ್ಲ, ಟ್ರಂಪ್ ಕೂಡ ಮೋದಿಯನ್ನು ಪ್ರಸ್ತಾಪಿಸಲಿಲ್ಲ ಎನ್ನಲಾಗಿದೆ,

Continue Reading

Trending