ಬೆಂಗಳೂರು

ಅರ್ಧರಾತ್ರೀಲಿ.. ಮಧ್ಯರಸ್ತೇಲಿ..ಕಾರಿನಲ್ಲಿ ಕಾರ್ ಬಾರ್!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೈಕ್ ಸ್ಟಂಟ್‍ಗಳೀಗೇನೂ ಕಡಿಮೆ ಇಲ್ಲ, ಅದರೆ ಇದರ ನಡುವೆ ಈಗ ಕಾರು ಸ್ಟಂಟ್ ಆರಂಭವಾಗಿದೆ ಎಂದರೆ ನೀವು ನಂಬಲೇಬೇಕು,
ಬೈಕ್ ಗಳಲ್ಲಿ ವ್ಹೀಲಿಂಗ್ ಮಾಡುವವರ ಮೇಲೆ ಪೊಲೀಸ್ ಕಣ್ಣೀಡುತ್ತಾರೆ, ಅದರೂ ವ್ಹೀಲಿಂಗ್ ಮಾಡವವರೇನು ಕಡಿಮೆಯಾಗಿಲ್ಲ,ಅವರಿಂದ ಬೇರೆ ವಾಹನ ಸವಾರರಿಗೆ ಸಂಕಟ ತಪ್ಪಿಲ್ಲ, ಈ ನಡುವೆ ಬೆಂಗಳೂರಿನಲ್ಲಿ ಮಧ್ಯೆ ರಸ್ತೆಯಲ್ಲೇ ಕಾರನ್ನು ಅಡ್ಡಾದಿಡ್ಡಿ ಚಾಲನೆ ಮಾಡಿದ ದೃಶ್ಯವೊಂದು ವೈರಲ್ ಆಗಿದೆ, ಜೂನ್ 1 ರಂದು ಸರಿ ರಾತ್ರಿ 1.52ಕ್ಕೆ ನಡೆದ ಈ ಘಟನೆ ವೈರಲ್ ಆಗಿದೆ, ಒಂದೇ ಜಾಗದಲ್ಲಿ ಕಾರನ್ನು ರೌಂಡ್ ಹೊಡೆದ ದೃಶ್ಯವಿದು, ಜಯನಗರ ನಾಲ್ಕನೇ ಬ್ಲಾಕ್‍ನಲ್ಲಿ ನಡೆದ ಈ ಪುಂಡಾಟ ಮೊಬೈಲ್ ನಲ್ಲಿ ಸೆರೆಯಾಗಿದೆ,
ಜಯನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಗಿದ್ದು ಇನ್ನಾದರೂ ಪೊಲೀಸರು ಈ ಬಗ್ಗೆ ಗಮನಿಸುತ್ತಾರೆಯೇ ನೋಡಬೇಕಿದೆ.

Trending

Exit mobile version