ಸಿನಿಮಾ

Ghoomer: ಅಭಿಷೇಕ್​ ಬಚ್ಚನ್​ ನಟನೆಯ ‘ಘೂಮರ್’ ​; ಸಿನಿ ಪ್ರೇಮಿಗಳ ಮೆಚ್ಚುಗೆ

Ghoomer twitter review: ಅಭಿಷೇಕ್​​ ಬಚ್ಚನ್​ ಮತ್ತು ಸೈಯಾಮಿ ಖೇರ್ ಮುಖ್ಯಭೂಮಿಕೆಯಲ್ಲಿರುವ ‘ಘೂಮರ್’​ ಸಿನಿಮಾ ಇಂದು ತೆರೆ ಕಂಡಿದೆ. ಈ ಚಿತ್ರ ನೋಡಿದ ಪ್ರೇಕ್ಷಕರ ಟ್ವಿಟರ್​ ಪ್ರತಿಕ್ರಿಯೆ ಹೀಗಿದೆ..

ಬಾಲಿವುಡ್​ ಬಿಗ್​ ಬಿ ಪುತ್ರ, ನಟ ಅಭಿಷೇಕ್​​ ಬಚ್ಚನ್​ ಅಭಿನಯದ ಬಹುನಿರೀಕ್ಷಿತ ‘ಘೂಮರ್’​ ಸಿನಿಮಾ ಇಂದು ಬಿಡುಗಡೆಯಾಗಿದೆ.

ಈ ಕ್ರೀಡಾಧಾರಿತ ಚಿತ್ರದಲ್ಲಿ ಜೂನಿಯರ್​ ಬಚ್ಚನ್​ ಕೋಚ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೋಚ್​ ಅಭಿಷೇಕ್​​ ಬಚ್ಚನ್​ ಮಾರ್ಗದರ್ಶನದಲ್ಲಿ ಕ್ರಿಕೆಟ್ ತರಬೇತಿ ಪಡೆಯುವ ಸೈಯಾಮಿ ಖೇರ್ (Saiyami) ಪಾತ್ರ ಕೂಡ ಗಮನ ಸೆಳೆದಿದೆ. ಸ್ಫೂರ್ತಿದಾಯಕ ಕಥೆಗೆ ಆರ್.ಬಾಲ್ಕಿ ಆಯಕ್ಷನ್​ ಕಟ್​ ಹೇಳಿದ್ದಾರೆ. ಚಿತ್ರವು ಬಿಡುಗಡೆಯಾದ ಮೊದಲ ದಿನ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ವಿಮರ್ಶೆ ದಕ್ಕಿಸಿಕೊಂಡಿದೆ.

ಟ್ವಿಟರ್ನಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ‘ಘೂಮರ್’ ವೀಕ್ಷಿಸಿದ ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಭಿಷೇಕ್​ ಬಚ್ಚನ್​ ಮತ್ತು ಸೈಯಾಮಿ ಖೇರ್​ ಅಭಿನಯವನ್ನು ಶ್ಲಾಘಿಸಿದ್ದಾರೆ. “ಘೂಮರ್ ತುಂಬಾ ಚೆನ್ನಾಗಿದೆ. ಉತ್ತಮ ಸ್ಫೂರ್ತಿದಾಯಕ ಕ್ರಿಕೆಟ್​ ಆಧಾರಿತ ಕಥೆಯಾಗಿದೆ. ನೋಡುಗರ ಭಾವನೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಚಿತ್ರದ ಅಂತ್ಯವು ಭಾವನಾತ್ಮಕತೆಯನ್ನು ನೀಡುತ್ತದೆ. ಅಭಿಷೇಕ್​ ಬಚ್ಚನ್​ ಪಾತ್ರವು ತುಂಬಾ ಚೆನ್ನಾಗಿದೆ” ಎಂದು ಬರೆದುಕೊಂಡಿದ್ದಾರೆ. ಚಿತ್ರಕ್ಕೆ ಮೂರು ಸ್ಟಾರ್​ ನೀಡಿದ್ದಾರೆ.

Trending

Exit mobile version