ಅಪರಾಧ
ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ,
ಆತ್ಮಹತ್ಯೆ ಮಾಡಿಕೊಂಡ ವಿದ್ಯಾಥಿಘನಿಯನ್ನು ಪಾವನಾ (19) ಎಂದು ಗುರುತಿಸಲಾಗಿದೆ, ಪ್ರಥಮ ವರ್ಷ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಪಾವನಾ ಜೂನ್ 16 ರಂದು ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಅದು ರಾತ್ರಿ 11 30 ರ ವೇಳೆಗೆ ಪಾವನಾ ಇದ್ದ ಕೊಠಡಿಯನ್ನು ಆಕೆಯ ಗೆಳತಿಯರು ಇಣುಕಿ ನೋಡಿದಾಗ ಆತ್ನಹತ್ಯೆ ಮಾಡಿಕೊಂಡಿರುವುದ ಬೆಳಕಿಗೆ ಬಂದಿದೆ,
ತಕ್ಷಣ ವಿದ್ಯಾರ್ಥಿನಿಯರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಸ್ಧಳಕ್ಕಾಗಮಿಸಿದೆ ಹೈಗ್ರೌಂಡ್ಸ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ,
ಪಾವನಾ ಡೆತ್ ನೋಟ್ ಪತ್ತೆಯಾಗಿದ್ದು ಆಕೆ ಮೊಬೈಲ್ ಆಪ್ ಒಂದರಲ್ಲಿ 15 ಸಾವಿರ ರೂ ಹೂಡಿಕೆ ಮಾಡಿದ್ದಾಗಿ ಉಲ್ಲೇಖಿಸಿದ್ದಾಳೆ, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ