Connect with us

ರಾಜ್ಯ

ಏನ್ ಟೈಗರ್ ಅಂದ್ರು.. ಜೈಲಿನಲ್ಲಿ ದರ್ಶನ್ ನೋಡಿ ಶಾಕ್ ಆದ ವಿನೋದ್ ಪ್ರಭಾಕರ್; ಹೇಳಿದ್ದೇನು?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅವರನ್ನು ಇಂದು ಕುಟುಂಬ ಸದಸ್ಯರು, ಆತ್ಮೀಯರು ಭೇಟಿಯಾಗಿದ್ದಾರೆ. ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ಭೇಟಿಯಾದ ಜೊತೆಗೆ ನಟ ವಿನೋದ್ ಪ್ರಭಾಕರ್ ಅವರು ಭೇಟಿಯಾಗಿ ದರ್ಶನ್ ಹೇಗಿದ್ದಾರೆ ಅನ್ನೋ ಮಾಹಿತಿ ನೀಡಿದ್ದಾರೆ.

ಬೆಳಗ್ಗೆ ದರ್ಶನ್ ಅವರನ್ನ ಭೇಟಿಯಾಗಲು ಪರಪ್ಪನ ಅಗ್ರಹಾರಕ್ಕೆ ತೆರಳಿದ್ದ ವಿನೋದ್ ಪ್ರಭಾಕರ್ ಅವರು ಅಧಿಕಾರಿಗಳು ಫ್ಯಾಮಿಲಿ ಸದಸ್ಯರಿಗೆ ಮಾತ್ರ ಇವತ್ತು ಭೇಟಿಯಾಗಲು ಅವಕಾಶ ನೀಡಿದ್ದಾರೆ. ಆದರೂ ದರ್ಶನ್ ಭೇಟಿಯಾಗಲು ಪ್ರಯತ್ನ ಮಾಡ್ತೀನಿ ಅಂತಾ ಹೇಳಿ ಒಳಗೆ ಹೋಗಿದ್ದರು.

ಕಾರಾಗೃಹದಲ್ಲಿ ಕೊನೆಗೂ ದರ್ಶನ್ ಅವರನ್ನು ಭೇಟಿಯಾಗಿ ಬಂದ ವಿನೋದ್ ಪ್ರಭಾಕರ್ ಅವರು, ಮೊದಲನೆಯದಾಗಿ ಮೃತ ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಬೇಕು. ಅವರ ತಂದೆ, ತಾಯಿ, ಅಜ್ಜಿ, ಪತ್ನಿಗೆ ಭಗವಂತ ಧೈರ್ಯ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು.

ದರ್ಶನ್ ಅವ್ರನ್ನು ಭೇಟಿ ಆಗಬೇಕು ಅಂತ ಬಂದಿದ್ದೆ. ಜೈಲಿನ ನಿಯಮಾವಳಿ ಪ್ರಕಾರವೇ ಮನವಿ ಮಾಡಿಕೊಂಡೆ. ಕೇವಲ ಎರಡೇ ಎರಡು ಸೆಕೆಂಡ್ ಮಾತ್ರ ದರ್ಶನ್ ಸಾರ್‌ ಮಾತಾಡೋಕೆ ಸಿಕ್ಕಿದ್ದರು. ದರ್ಶನ್ ಮುಖದಲ್ಲಿ ಮೌನ ಇತ್ತು. ಏನನ್ನೂ ಮಾತಾಡಲಿಲ್ಲ. ಮಂಕಾಗಿಯೇ ದರ್ಶನ್ ಇದ್ದರು. ನಾನು ಬಾಸ್ ಅಂತ ಕರೆದೆ ಅದಕ್ಕೆ ಅವರು ಟೈಗರ್ ಅಂದು ಶೇಕ್ ಹ್ಯಾಂಡ್ ಮಾಡಿದರು ಅಷ್ಟೇ ಎಂದು ವಿನೋದ್ ಪ್ರಭಾಕರ್ ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದ ಮೇಲೆ ವಿನೋದ್ ಪ್ರಭಾಕರ್ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಬಗ್ಗೆ ಮಾತನಾಡಿದ ವಿನೋದ್ ಪ್ರಭಾಕರ್, ನಾನು ಯಾಕಿನ್ನೂ ಈ ಘಟನೆ ಬಗ್ಗೆ ಮಾತಾಡ್ಲಿಲ್ಲ ಅಂದ್ರೆ ಮೊದಲು ದರ್ಶನ್ ಭೇಟಿ ಆಗಬೇಕು ಅಂತ ಕಾಯ್ತಿದ್ದೆ. ಆ ಕಾರಣಕ್ಕೆ ಎಲ್ಲೂ ರಿಯಾಕ್ಟ್ ಮಾಡಿರಲಿಲ್ಲ ಎಂದರು. ಇನ್ನು, ದರ್ಶನ್ ಅವರನ್ನ ನಾನು ಭೇಟಿಯಾಗಿ 4 ತಿಂಗಳಾಗಿತ್ತು. ಅವರ ಬರ್ತ್ ಡೇ ನಂತರ ಒಂದು ಪಾರ್ಟಿಯಲ್ಲಿ ಸಿಕ್ಕಿದ್ವಿ ಅಷ್ಟೇ. ನಿಮಗೆಷ್ಟು ಗೊತ್ತಿದ್ಯೋ ಅಷ್ಟೇ ನನಗೂ ಗೊತ್ತಿರೋದು. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಹೋಗಲು ಪ್ರಯತ್ನಿಸಿದ್ದೆ. ದರ್ಶನ್ ಅವರನ್ನ ಭೇಟಿಯಾಗಲು ದೇವರ ಹತ್ರ ಬೇಡಿಕೊಂಡು ಬಂದಿದ್ದೆ. ಭೇಟಿಯಾಗಿದ್ದೇನೆ. ಎಲ್ಲರಿಗೂ ನ್ಯಾಯ ಸಿಗಲಿ ಎಂದು ವಿನೋದ್ ಪ್ರಭಾಕರ್ ತಿಳಿಸಿದ್ದಾರೆ.

ಬೆಂಗಳೂರು

ಅಗಸ್ಟ್ 10 ರಂದು ಬೆಂಗಳೂರು ಮೆಟ್ರೋ ಫೇಸ್-3 ಶಂಕುಸ್ಥಾಪನೆ: ಪ್ರಧಾನಿ ಮೋದಿ ಉದ್ಘಾಟನೆ ನೆರವೇರಿಸಲಿದ್ದಾರೆ

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಮತ್ತೊಂದು ಸಿಹಿ ಸುದ್ದಿ. ಬೆಂಗಳೂರು ಮೆಟ್ರೋ ಫೇಸ್-3 ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಸ್ಟ್ 10ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಪ್ರಕಟಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆಗಸ್ಟ್ 10ರಂದು ಪ್ರಧಾನಿ ಮೋದಿ ಮೆಟ್ರೋ ಯೆಲ್ಲೋ ಲೈನ್ ಅನ್ನು ಉದ್ಘಾಟಿಸುವುದರ ಜೊತೆಗೆ ಜೆಪಿ ನಗರ ವೆಗಾಸಿಟಿ ಮಾಲ್‌ನಿಂದ ಕಡಬಗೆರೆವರೆಗೆ ವಿಸ್ತರಿಸಲಾಗಿರುವ ಮೆಟ್ರೋ ಮಾರ್ಗದ ಶಂಕುಸ್ಥಾಪನೆ ಕಾರ್ಯವನ್ನು ಸಹ ನೆರವೇರಿಸಲಿದ್ದಾರೆ,” ಎಂದು ಹೇಳಿದರು.

ಈ ಯೋಜನೆಯು ಸುಮಾರು ₹17,000 ಕೋಟಿ ವೆಚ್ಚದ ಫೇಸ್-3 ಯೋಜನೆಯ ಭಾಗವಾಗಿದೆ. ಮೊದಲೇ ಯೆಲ್ಲೋ ಲೈನ್ ಶಂಕುಸ್ಥಾಪನೆಗೆ ಮೋದಿ ಅವರೇ ಆಗಿದ್ದರೆ, ಈಗ ಉದ್ಘಾಟನೆಯ ಗೌರವವೂ ಅವರಿಗೇ ಸಲ್ಲಲಿದೆ.

ಡಿಸಿಎಂ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ:
ಡಿಸಿಎಂ ಡಿ.ಕೆ. ಶಿವಕುಮಾರ್ ಮೆಟ್ರೋ ಯೋಜನೆಯಲ್ಲಿ ರಾಜ್ಯದ ಪಾತ್ರವಿದೆ ಎಂದು ಹೇಳಿರುವುದರ ಬಗ್ಗೆ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸುತ್ತಾ, “ಇದುವರೆಗೆ ಈ ಯೋಜನೆಯ ಬಗ್ಗೆ ಯಾವ ರಾಜ್ಯ ಸಚಿವರೂ ಚಿಂತೆ ಮಾಡಿಲ್ಲ. ಪ್ರಧಾನಿ ಬರುವ ಸುದ್ದಿ ತಿಳಿಯುತ್ತಿದ್ದಂತೆ ಕ್ರೆಡಿಟ್ ಕಳಿಸಲು ಮುಂದಾಗಿದ್ದಾರೆ,” ಎಂದು ಟೀಕಿಸಿದರು.

ಫ್ಲೈಓವರ್ ಪ್ರಗತಿಯ ಮೇಲೂ ಟೀಕೆ:
“ಈಜಿಪುರದ 2.5 ಕಿ.ಮೀ ಫ್ಲೈಓವರ್‌ನ್ನು ಎಂಟು ವರ್ಷಗಳಿಂದ ಪೂರ್ಣಗೊಳಿಸಲಾಗಿಲ್ಲ. ಅದರೆ ಇದೀಗ 100 ಕಿ.ಮೀ ರಸ್ತೆಗಳ ಯೋಜನೆ ಪ್ರಾರಂಭಿಸಿದ್ದಾರೆ,” ಎಂದು ಹೇಳಿದ್ದಾರೆ.

ಮೆಟ್ರೋ ಯೋಜನೆಗೆ ಹಿಂದೆ ಸರ್ಕಾರದ ಕೊಡುಗೆ:
ಕೊರೋನಾ ಸಮಯದಲ್ಲೂ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರಗಳು ಅನುದಾನ ಒದಗಿಸಿ ಕೆಲಸ ಮುಂದುವರೆದಿದ್ದವು. ಆದರೆ ಇದೀಗ ಎಂಡಿ ನೇಮಕ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಳಂಬ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

Continue Reading

ರಾಜಕೀಯ

ಮಾಜಿ ಡಿಸಿಎಂ ಈಶ್ವರಪ್ಪ ಮತ್ತೆ ಭಾರೀ ವಾಗ್ದಾಳಿ: ಯಡಿಯೂರಪ್ಪ ಕುಟುಂಬ, ಬಿಜೆಪಿಗೆ ತೀವ್ರ ಕಿಡಿ

ಬಳ್ಳಾರಿ:
ಬಿಜೆಪಿಯಿಂದ ಉಚ್ಚಾಟನೆಯಾದ ನಂತರ ಸೈಲೆಂಟ್ ಆಗಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಇದೀಗ ಮತ್ತೆ ಸುದ್ದಿಯಲ್ಲಿ ಮೂಡಿದ್ದಾರೆ. ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನನ್ನದು ಭಾರತೀಯ ಬಿಜೆಪಿಯ ಟೀಮ್, ಯಾವುದೇ ಗುಂಪಿನೊಂದಿಗೆ ನಾನು ಹೋಗುವುದಿಲ್ಲ. ಆದರೆ ಬಿಜೆಪಿ ಶುದ್ಧೀಕರಣಗೊಳ್ಳಬೇಕು ಎಂಬುದು ಎಲ್ಲರ ಅಭಿಪ್ರಾಯ. ಅದು ನನ್ನದು ಸಹ ಆಗಿದೆ,” ಎಂದು ಪರೋಕ್ಷವಾಗಿ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈಶ್ವರಪ್ಪನ ಈ ಹೇಳಿಕೆ ಕೇಸರಿಪಾಳ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಅನೇಕ ನಾಯಕರು ಈಶ್ವರಪ್ಪನ ನೇರ ಭಾಷೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಯಡಿಯೂರಪ್ಪನ ಕುಟುಂಬದ ಮದುವೆಯಲ್ಲಿ ಭಾಗವಹಿಸಿದ ಈಶ್ವರಪ್ಪ:
ಇತ್ತೀಚೆಗೆ ಈಶ್ವರಪ್ಪ ಯಡಿಯೂರಪ್ಪನ ಮೊಮ್ಮಗನ ಮದುವೆಯಲ್ಲಿ ಭಾಗವಹಿಸಿ ಎಲ್ಲರಿಗೂ ಆಶ್ಚರ್ಯ ತಂದಿದ್ದರು. ಈ ಘಟನೆಯ ಬಳಿಕ ಅವರು ಮತ್ತೆ ಪಕ್ಷದ ಪರ ನಿಂತು ಮಾತನಾಡಿದ್ದಾರೆ.

ಎಫ್‌ಐಆರ್ ದಾಖಲು:
ಇದಕ್ಕೂ ಮಿಕ್ಕಿ, ಮಾಜಿ ಡಿಸಿಎಂ ಈಶ್ವರಪ್ಪ ಪುತ್ರ ಕಾಂತೇಶ್ ಮತ್ತು ಸೊಸೆ ಶಾಲಿನಿ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ. ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಕೇಸ್ ದಾಖಲಾಗಿದೆ.

ಅದಕ್ಕೂ ಹಿಂದಿನ ಘಟನೆಗಳು:
ಈ ಪ್ರಕರಣ ಸಂಬಂಧ ಕಳೆದ ಏಪ್ರಿಲ್‌ನಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಲೋಕಾಯುಕ್ತರಿಗೆ ವರದಿ ಸಲ್ಲಿಸಲು ಸೂಚಿಸಿತ್ತು. ಇದೀಗ ಖಾಸಗಿ ವಕೀಲ ವಿನೋದ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

Continue Reading

ರಾಜಕೀಯ

ಮತಗಳ್ಳತನದ ದಾಖಲೆ ಬಿಡುಗಡೆಗೆ ರಾಹುಲ್ ಗಾಂಧಿ ಸಜ್ಜು: ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

ಬೆಂಗಳೂರು: ಕಾಂಗ್ರೆಸ್ ಯಾವತ್ತೂ “ಹಿಟ್ ಅಂಡ್ ರನ್” ರಾಜಕೀಯ ಮಾಡಲ್ಲ, ಎಲ್ಲದಕ್ಕೂ ದಾಖಲಾತಿಗಳಿವೆ. ಕರ್ನಾಟಕದಲ್ಲಿ ನಡೆದ ಮತಗಳ್ಳತನದ ಬಗ್ಗೆ ದಾಖಲೆಗಳನ್ನು ರಾಹುಲ್ ಗಾಂಧಿ ಬಹಿರಂಗಪಡಿಸುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, “ಇಂದು ದೆಹಲಿಯಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ ಮೂಲಕ ಮತಗಳ್ಳತನದ ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಆ.8 ರಂದು ಇದೇ ಕುರಿತು ಕರ್ನಾಟಕದಲ್ಲಿಯೂ ಸಾಕ್ಷ್ಯ ಬಿಡುಗಡೆ ಮಾಡಲಾಗುತ್ತದೆ” ಎಂದು ಹೇಳಿದರು.

ಇದೊಂದು ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಚುನಾವಣಾ ಆಯೋಗ ಯಾರ ನಿಯಂತ್ರಣದಲ್ಲಿದೆ ಎಂಬುದನ್ನು ಜನತೆಯೇ ನಿರ್ಧರಿಸಬೇಕಿದೆ ಎಂದು ಅವರು ಹೇಳಿದ್ದಾರೆ.

BJP ಪ್ರತಿಕ್ರಿಯೆ ಬಗ್ಗೆ ಖರ್ಗೆ ಪ್ರತಿಸ್ಪಂದನೆ:

“ನಾವು ಆರೋಪವನ್ನೇ ಮಾಡಿಲ್ಲ. documentation ಇದೆ, ಅದನ್ನೇ ತೋರಿಸುತ್ತಿದ್ದೇವೆ. ಬಿಜೆಪಿಯವರು ಏಕೆ ಎಲ್ಲಾ ಸಂಸ್ಥೆಗಳ ವಕ್ತಾರರಂತೆ ಮಾತನಾಡುತ್ತಿದ್ದಾರೆ? ಆಯಾ ಸಂಸ್ಥೆಗಳಿಗೆ ತಮ್ಮದೇ ಆದ ವಕ್ತಾರರು ಇದ್ದಾರೆ, ಅವರು ಸ್ಪಷ್ಟನೆ ನೀಡಲಿ,” ಎಂದು ತೀವ್ರ ಟೀಕೆ ಮಾಡಿದರು.

Continue Reading

Trending