Connect with us

excersise

ಆರೋಗ್ಯಕರ ಜೀವನಕ್ಕೆ ಸಂತೋಷ  ಮದ್ದು

ಆರೋಗ್ಯಕರ ಜೀವನ

ಆರೋಗ್ಯವೆಂದರೆ ಯಾವುದೇ ಕಾಯಿಲೆ ಇಲ್ಲದೆ ಅಥವಾ ದೈಹಿಕವಾಗಿ ವಿಕಲತೆಗಳಿಲ್ಲದ ಸ್ಥಿತಿಯಷ್ಟೆ ಅಲ್ಲ;

ಅದು ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸುಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆಯು ವ್ಯಾಖ್ಯಾನಿಸಿದೆ.

ಮನುಷ್ಯ ತಮ್ಮಲ್ಲೆ ಅಡಗಿರುವ ಸಂತೋಷವನ್ನು ಬಿಟ್ಟು,ಬೇರೆಡೆ ಸಂತೋಷಕ್ಕಾಗಿ ಹುಡುಕುತಿರುತ್ತಾನೆ.

ಈ ಹುಡುಕಾಟದಲ್ಲಿ ಮನ:ಶಾಂತಿಯನ್ನು ಕಳೆದುಕೊಂಡು ಖಿನ್ನತೆಗೊಳಗಾಗಿ  ನಿರಾಶೆ ಹಾಗೂ ಅತೃಪ್ತಿಯ ಜೀವನ ಶೈಲಿಯಿಂದ,

 ಅನಾವಶ್ಯಕ ಔಷಧಗಳು ಮತ್ತು ಮಾದಕ ವಸ್ತುಗಳಿಗೆ ದಾಸನಾಗುತ್ತಿದ್ದಾನೆ.

ʼಆರೋಗ್ಯವೆಂದರೆ ಸಂತೋಷಕರವಾದ ಜೀವನ ಶೈಲಿ,

 ಅಸಂತೋಷವೆಂದರೆ ಅನಾರೋಗ್ಯʼ.

ಆರೋಗ್ಯದ ಪ್ರತಿಯೊಂದು ಪ್ರಕಾರವನ್ನು ನಿಯಂತ್ರಿಸುವ ಅಂಶಗಳು ಹಲವಾರಿದ್ದು,

ಅವೆಲ್ಲವುಗಳ ನಿಯಂತ್ರಣದಿಂದ ಮಾತ್ರ ಆರೋಗ್ಯ ಸಾಧ್ಯ.

ದೇಹದ ರಚನೆ ಮತ್ತು ಕಾರ್ಯಗಳನ್ನು ನಿಯಂತ್ರಿಸುವ ವಂಶವಾಹಿಗಳು,

ಆಹಾರ, ವ್ಯಾಯಾಮ, ಅಭ್ಯಾಸಗಳು ಇತ್ಯಾದಿಗಳು ದೈಹಿಕ ಆರೋಗ್ಯವನ್ನು ನಿಯಂತ್ರಿಸುತ್ತವೆ.

ನಮ್ಮ ದೈನಂದಿನ ಅಭ್ಯಾಸಗಳು ನಮ್ಮ ಜೀವನದಲ್ಲಿ ಸಂತೋಷವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ನಿದ್ರೆ

ಮನುಷ್ಯನ ದಣಿದ ದೇಹಕ್ಕೆ ಸಂಪೂರ್ಣ ವಿಶ್ರಾಂತಿ ಸಿಗಬೆಕಾದರೆ 6–8ಗಂಟೆ ನಿದ್ರೆ ಅವಶ್ಯಕ;

ನಿದ್ರೆ ಸರಿಯಾಗ್ಗಿದ್ದರೆ ರೋಗನಿರೋಧಕ ಶಕ್ತಿ ಹೆಚ್ಚುವುದು; ನೆನಪಿನ ಶಕ್ತಿಯೂ ವೃದ್ಧಿಸುವುದು.

ಸರಿಯಾದ ನಿದ್ರೆಗೆ ಯ ಆರೋಗ್ಯವನ್ನು ಕಾಪಾಡಲು ಮನಸ್ಸನ್ನೂ, ಮಲಗುವ ಕೋಣೆಯ ವಾತಾವರಣವನ್ನೂ ಪ್ರಶಾಂತವಾಗಿಟ್ಟುಕೊಳ್ಳಬೇಕು.

ಧ್ಯಾನ

 ಧ್ಯಾನದಿಂದ ಸಂತೋಷವನ್ನು ಕಂಡುಕೊಳ್ಳಬಹುದು ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ.

 ದಿನಕ್ಕೆ ಕನಿಷ್ಠ 30 ನಿಮಿಷಗಳ ಧ್ಯಾನ ಮಾಡಿದರೂ ಸಾಕು. ಆರೋಗ್ಯ ವೃದ್ಧಿಯಾಗಲಿದೆ. ಧ್ಯಾನದಲ್ಲಿ ಹಲವಾರು ವಿಧಾನಗಳಿದ್ದು,

ಪ್ರಾರಂಭದಲ್ಲಿ ದಿನಗಳಲ್ಲಿ ಹತ್ತು ನಿಮಿಷ ದಿನಕಳೆದಂತ್ತೆ

ಸಮಯ ಹೆಚ್ಚಿಸುತ್ತ ಹೊಗಬಹುದು ಅವುಗಳನ್ನು ಗಮನದಲ್ಲಟ್ಟುಕೊಂಡು ಸರಳ ವಿಧಾನವನ್ನು ಆರಿಸಿಕೊಳ್ಳಿರಿ.ದೀರ್ಘವಾದ ಉಸಿರಾಟವೂ ಕೂಡ ಧ್ಯಾನದ ಒಂದು ರೂಪ.

ವ್ಯಾಯಾಮ

 ಮುಂಜಾನೆಯ ವ್ಯಾಯಾಮ ಬಹು ಪ್ರಯೋಜನಕಾರಿ. ಜನರ ಗುಂಪಿನಲ್ಲಿ ಸಂತಸದಿಂದ ಮಾಡುವ ವ್ಯಾಯಾಮ

ಮತ್ತು ಕ್ರೀಡೆಗಳು ನೋವುನಿವಾರಕ,ನಿಮ್ಮ ವಯಸ್ಸಿಗನುಗುಣವಾಗಿ, ಸಾಮರ್ಥ್ಯಕ್ಕೆ ತಕ್ಕಷ್ಟು, ನಿಮಗೆ ಇಷ್ಟವಾಗುವ

ಹಾಗೂ ಸೂಕ್ತವಾದ ವ್ಯಾಯಾಮಗಳನ್ನು ನಿತ್ಯಜೀವನಲ್ಲಿ ರೂಢಿಸಿಕೊಳ್ಳಿ….

ವಾರದಲ್ಲಿ ಒಮ್ಮೆಯಾದರೂ ಕನಿಷ್ಠ 30 ನಿಮಿಷಗಳ ಕಾಲ ಪ್ರಕೃತಿಯ ಹಸಿರು ವಾತಾವರಣದಲ್ಲಿ ವಿಹರಿಸಬೇಕು.

ಬೆಳಗಿನ ಬಿಸಿಲಿನ ಕಿರಣಗಳು ವಿಟಮಿನ್ ಡಿಯನ್ನು ಉತ್ಪಾದನೆ ಮಾಡುತ್ತದೆ ಮತ್ತು  ಖಿನ್ನತೆಯನ್ನು ದೂರಮಾಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ವಿಸುತ್ತದೆ.

 ಹೀಗಾಗಿ ಸಾಧ್ಯವಾದಷ್ಟು ಎಳೆಬಿಸಿಲಿನಲ್ಲಿ ವ್ಯಾಯಾಮವನ್ನು ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿರಿ

 ಸ್ವ-ಆರೈಕೆ

  ಪ್ರಯಾಣ ಮಾಡುವುದು, ನೀಮಗೆ ಇಷ್ಟವಾದ ಆರೋಗ್ಯಕರ ಭೋಜನ ಮಾಡುವುದು, ಸತ್ಸಂಗ, ಸಂಗೀತ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು, ಸಿನಿಮ ವೀಕ್ಷಣೆಮಾಡುವುದು – ಹೀಗೆ ನಿಮಗೆ ಇಷ್ಟವಾದ ಪ್ರವೃತ್ತಿಗಳನ್ನು ರೂಢಿಸಿಕೊಳ್ಳಬೇಕು; ಇಂಥ ಸರಳ ಜೀವನಶೈಲಿಯ ವಿಧಾನಗಳಿಂದ ಸ್ವಯಂ ಆರೈಕೆ ಮಾಡಿಕೊಳ್ಳಬೇಕು. ಇದು ನಿಮ್ಮನ್ನು ಸದಾಕಾಲ ಲವಲವಿಕೆಯಿಂದ ಇರಿಸಲು ಸಹಾಯಕವಾಗುತ್ತದೆ.

ಆಹಾರ ಕ್ರಮ

 ಸಾತ್ವಿಕ ಆಹಾರಸೇವನೆ ನಮ್ಮದಾಗಬೇಕು.

ನಾವು ಸೇವಿಸುವ ಆಹಾರ ನಮ್ಮ ಶರೀರ ಮತ್ತು ಮನಸ್ಸಿನ ಆರೋಗ್ಯದ ಮೇಲೆ ಅತ್ಯಂತ ಪ್ರಭಾವ ಬೀರುತ್ತದೆ.

ಕಾರ್ಬೊಹೈಡ್ರೇಟ್ಸ್‌ಮತ್ತು ಜಂಕ್ ಫುಡ್‌ಗಳು ಸಂಸ್ಕರಿಸಿದ ಆಹಾರ ಪದಾರ್ಥಗಳು,ಎಣ್ಣೆಯಲ್ಲಿ ಕರಿದ ಆಹಾರಗಳ ಸೇವನೆ ಬೇಡ.

ಪೌಷ್ಟಿಕಾಂಶ ಅಧಿಕವಾಗಿರುವ ಆಹಾರಗಳಾದ ಹಾಲು, ಬಾಳೆಹಣ್ಣು, ಮೊಟ್ಟೆ, ತುಪ್ಪ, ಬಾದಾಮಿ, ಅಂಜೂರ, ಉತ್ತುತ್ತಿ, ಬೇಳೆಕಾಳುಗಳನ್ನು ಸೇವಿಸಬೇಕು.

ಸಾಮಾಜಿಕ ಸಂಪರ್ಕ

ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ,

ಕುಟುಂಬಸ್ಥರೊಂದಿಗೆ ಸಮಯ ಕಳೆಯಿರಿ.

ಸಂತೋಷವಾಗಿರಲು ಸಾಮಾಜಿಕ ಸಂಪರ್ಕ ಮುಖ್ಯವಾಗುತ್ತದೆ. ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರ ಜೊತೆಗೆ ನಿಮ್ಮ ಸಮಯ ಕಳೆಯಿರಿ

ನಿಮ್ಮದೇ ಆದ ಹವ್ಯಾಸಗಳನ್ನು ರೂಢಿಸಿಕೊಳ್ಳಿ,ನಿಮಗಿಷ್ಟವಾದ ಹವ್ಯಾಸಗಳಿಗೂ ಸಮಯ ನೀಡಿ.

ಕಲಿಕೆ

 ದೈನಂದಿನ ದಿನಚರಿಯಲ್ಲಿ ಕಲಿಕೆಯನ್ನು ಅಳವಡಿಸಿಕೊಳ್ಳಿ

ನಿಯಮಿತವಾಗಿ ಕಲಿಕೆಯು ನಮ್ಮ ಜ್ಞಾನವನ್ನು ಮತ್ತಷ್ಟು ವೃದ್ಧಿಸುತ್ತದೆ.

ಮೊಬೈಲ್ ಬಳಕೆಯನ್ನು ಸಾಧ್ಯವಾದಷ್ಟು ಮಿತಿಗೊಳಿಸಿ. ಪ್ರಕೃತಿಯಲ್ಲಿ ಸಮಯ ಕಳೆಯಿರಿ..

ಕೃತಜ್ಞತಾ ಭಾವ

ಕೃತಜ್ಞತೆಯ ಭಾವನೆಯು ಸಂತೋಷ, ಉತ್ಸಾಹ

ಮತ್ತು ಇತರ ಧನಾತ್ಮಕ ಭಾವನೆಗಳನ್ನು ಉಂಟುಮಾಡುತ್ತದೆ.

ಕೃತಜ್ಞತೆಯ ಭಾವನೆಯುಳ್ಳವರು ತಮ್ಮಲ್ಲಿ ಇಲ್ಲದಿರುವುದಕ್ಕೆ ಕೊರಗುವ ಬದಲು ತಮ್ಮಲ್ಲಿರುವುದಕ್ಕೆ ಹೆಚ್ಚು ಸಂತೃಪ್ತಿ ಹೊಂದಲು ಆರಂಭಿಸುತ್ತಾರೆ.

ಇದು ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ.

ರೋಗನಿರೋಧಕ ವ್ಯವಸ್ಥೆಯು ಬಲಗೊಳ್ಳುತ್ತದೆ,

ರಕ್ತದೊತ್ತಡ ಕಡಿಮೆಯಾಗುತ್ತದೆ. ಕಸ್ತೂರಿಮೃಗ ತನ್ಳೊಳಗೆ ಸುವಾಸನೆಯನ್ನು ಇಟ್ಟುಕೊಂಡು,ಸುವಾಸನೆಗಾಗಿ ಹುಡುಕಾಡುವಂತೆ ಮನುಷ್ಯನು ಕೂಡ ತನ್ನಲ್ಲೇ ಅಡಗಿರುವ ಸಂತೋಷವನ್ನು  ಬೇರೆಡೆ ಹುಡುಕುತ್ತಲೇ ಇದ್ದಾನೆ.ನಾವು ನಮ್ಮ ಜೀವನ ಶೈಲಿ ಬದಲಾವಣೆ ತಂದುಕೊಂಡು ನಮ್ಮಲ್ಲಿರೋ ಸಂತೋಷವನ್ನು ಕಂಡುಕೊಳ್ಳೊಣ..

Trending