Connect with us

blind cricket

ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್ ವಿಶ್ವ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಮಣಿಸಿ ಚಿನ್ನ ಗೆದ್ದಿದೆ

ಮಹಿಳಾ ಅಂಧರ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಮಣಿಸಿ ಚಿನ್ನ ಗೆದ್ದಿದೆ

ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್ ವಿಶ್ವ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಮಣಿಸಿ ಚಿನ್ನ ಗೆದ್ದಿದೆ
ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್ ವಿಶ್ವ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಮಣಿಸಿ ಚಿನ್ನ ಗೆದ್ದಿದೆ

ಬರ್ಮಿಂಗ್ಹ್ಯಾಮ್​:​   ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್​ (ಐಬಿಎಸ್‌ಎ) ವಿಶ್ವ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಆಸೀಸ್​ ಟೀಂಅನ್ನು 9 ವಿಕೆಟ್​ಗಳಿಂದ ಸೋಲಿಸಿ ಭಾರತದ ನಾರಿಯರು ಇತಿಹಾಸ ಬರೆದಿದ್ದಾರೆ.

ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಕಾಂಗರೂ ಪಡೆ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 114ರನ್​ ಕಲೆ ಹಾಕಿತು. ಎರಡನೇ ಇನ್ನಿಂಗ್ಸ್​ ವೇಳೆ ಮಳೆ ಬಂದ ಕಾರಣ ಪಂದ್ಯವನ್ನ ಡಿಎಲ್​ಎಸ್​ ನಿಯಮದಂತೆ 9 ಓವರ್​ಗಳಿಗೆ ಇಳಿಸಿ ಭಾರತಕ್ಕೆ 43 ರನ್​ಗಳ ಗುರಿ ನೀಡಲಾಯಿತು. ಈ ಗುರಿಯನ್ನ ಬೆನ್ನತ್ತಿದ ಭಾರತ ತಂಡದ ನಾರಿಯರು ಕೇವಲ 3.3 ಓವರ್​ಗಳಲ್ಲಿ 1 ವಿಕೆಟ್​ ನಷ್ಟಕ್ಕೆ 43 ರನ್​ ಕಲೆ ಹಾಕಿ ಗೆಲುವಿನ ನಗೆ ಬೀರಿದರು. ಈ ಮೂಲಕ ಮೊದಲ ಬಾರಿಗೆ ಐಬಿಎಸ್‌ಎ ವಿಶ್ವ ಕ್ರೀಡಾಕೂಟದಲ್ಲಿ ಭಾರತದ ಮಹಿಳೆಯರು ಚಿನ್ನಗೆದ್ದು ದಾಖಲೆ ನಿರ್ಮಿಸಿದರು.

ಇದಕ್ಕೂ ಮೊದಲು ಆಗಸ್ಟ್​ 20ರಂದು ನಡೆದ ಪಂದ್ಯದಲ್ಲೂ ಆಸ್ಟ್ರೇಲಿಯಾ ವಿರುದ್ಧ ಭಾರತೀಯ ಮಹಿಳಾ ತಂಡವು 8 ವಿಕೆಟ್‌ಗಳ ಗೆಲವು ಸಾಧಿಸಿದ್ದರು. ಆ ಮೂಲಕ ವರ್ಲ್ಡ್​ ಗೇಮ್ಸ್​ ಅಭಿಯಾನವನ್ನು ಭಾರತ ಪ್ರಭಾವಶಾಲಿ ರೀತಿಯಲ್ಲಿ ಪ್ರಾರಂಭಿಸಿತು.

ನಂತರ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲೂ ಭಾರತದ ನಾರಿಯರು ಬಿರುಸಿನ ಪ್ರದರ್ಶನವನ್ನು ತೋರಿದ್ದರು. ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್​ ಕಳೆದುಕೊಂಡು 268ರನ್​ಗಳ ಕಲೆ ಹಾಕಿದ್ದರು. ಭಾರತದ ಪರ ಗಂಗವ್ವ ಎಚ್. 60 ಎಸೆತಗಳಲ್ಲಿ 117 ರನ್ ಗಳಿಸಿ ತಂಡ ಗೆಲವಿಗೆ ಪ್ರಮುಖ ಪಾತ್ರವಹಿಸಿದ್ದರು. ಈ ಅಸಾಧಾರಣ ಗುರಿಯನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ 185 ರನ್‌ ಗಳಿಸಿ ಭಾರತದ ಎದುರು ಸೋಲೊಪ್ಪಿಕೊಂಡಿತ್ತು.

ಮತ್ತೊಂದೆಡೆ ಭಾರತದ ಪುರುಷರ ಅಂಧರ ಕ್ರಿಕೆಟ್​ ತಂಡವು IBSA ವಿಶ್ವ ಕ್ರೀಡಾಕೂಟದಲ್ಲಿ ಫೈನಲ್​ ತಲುಪಿದೆ. ಅಂತಿಮ ಪಂದ್ಯದಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಸೆಣಸಲಿದೆ. ಕಳೆದ ವಾರ ಎರಡು ತಂಡಗಳು ತಮ್ಮ ವರ್ಲ್ಡ್​ ಗೇಮ್ಸ್​ ಟೂರ್ನಿಯನ್ನು ಆರಂಭಿಸಿದ್ದವು. ಈ ಪಂದ್ಯದಲ್ಲಿ ಪಾಕಿಸ್ತಾನವು ಭಾರತವನ್ನು 18 ರನ್‌ಗಳಿಂದ ಮಣಿಸಿತ್ತು.

ಇದೀಗ ಉಭಯ ತಂಡಗಳು ಎರಡನೇ ಬಾರಿಗೆ ಟೂರ್ನಿಯಲ್ಲಿ ಮುಖಾಮುಖಿ ಆಗಿರುವುದರಿಂದ ಚಿನ್ನದ ಮೇಲೆ ಕಣ್ಣಿಟ್ಟಿರುವ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಲು ನೋಡುತ್ತಿದೆ.

Trending