chandrayan 3
ಇಸ್ರೋ ವಿಜ್ಞಾನಿ ತೌಜಮ್ ರಘು ಸಿಂಗ್ ಎಂಬುವರು ಕೆಲಸದೊತ್ತಡದಿಂದ ಸುಮಾರು ೨ ವರ್ಷ ತಮ್ಮ ಮನೆಗೇ ಭೇಟಿ ನೀಡಿಲ್ಲ : ಚಂದ್ರಯಾನ ೩

ಬೆಂಗಳೂರು: ಚಂದ್ರಯಾನ ೩ರ ಯಶಸ್ಸಿನ ಹಿಂದೆ ಹಲವರ ಪರಿಶ್ರಮವಿದೆ, ಚಂದ್ರಯಾನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಇಸ್ರೋ ವಿಜ್ಞಾನಿ ತೌಜಮ್ ರಘು ಸಿಂಗ್ ಎಂಬುವರು ಕೆಲಸದೊತ್ತಡದಿಂದ ಸುಮಾರು ೨ ವರ್ಷ ತಮ್ಮ ಮನೆಗೇ ಭೇಟಿ ನೀಡಿಲ್ಲ, ಚಂದ್ರಯಾನ ೩ ಯಶಸ್ವಿಯಾಗಬೇಕೆಂದು ಮನೆಗೆ ಹೋಗದೇ ಕೆಲಸದಲ್ಲಿ ಮುಳುಗಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ, ಚಂದ್ರಯಾನ ೩ ಯಶಸ್ವಿಯಾದ ಬಳಿಕ ಇವರು ಮಾತನಾಡಿ ನಾನು ಮನೆಯನ್ನು ಮಿಸ್ ಮಾಡಿಕೊಂಡೆ, ನನ್ನ ಪೋಷಕರೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದೆ, ಕೆಲಸದ ಕಾರಣ ೨ ವರ್ಷ ಮನೆಗೆ ಹೋಗಿಲ್ಲ ಎಂದು ಅವರು ಹೇಳಿದ್ದಾರೆ, ನಾವು ಈಗ ಗಗನಯಾನ ಮೇಲೆ ಗಮನವನ್ನು ಇಟ್ಟಿದ್ದೇವೆ,
chandrayaan 3
ಚಂದಿರನ ಮೇಲೆ ಸಲ್ಫರ್ ಪತ್ತೆ ಹಚ್ಚಿದ ಪ್ರಗ್ಯಾನ್ ರೋವರ್
ಬೆಂಗಳೂರು: ಚಂದ್ರನ ದಕ್ಷಿಣ ಧ್ರವದ ಮೇಲೆ ಅಧ್ಯಯನ ನಡೆಸುತ್ತಿರುವ ಪ್ರಗ್ಯಾನ್ ರೋವರ್ ಒಂದೊಂದು ಹೊಸ ಮಾಹಿತಿಯನ್ನು ರವಾನಿಸುತ್ತಿದೆ, ಇಸ್ರೋ ಚಂದ್ರನ ಮೇಲೆ ಸಲ್ಫರ್ ಇರುವುದನ್ನು ಪತ್ತೆ ಹೆಚ್ಚಿರುವುದಾಗಿ ತಿಳಿಸಿದೆ, ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ಸಲ್ಫರ್ ಇರುವುದನ್ನು ಖಚಿತಪಡಿಸಿದೆ, ಜೊತೆಗೆ ವಿಜ್ಞಾನಿಗಳ ನಿರೀಕ್ಷೆಯಂತೆ ಅಲ್ಯೂಮಿನಿಯಂ, ಐರನ್, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಹಾಗೂ ಆಕ್ಸಿಜನ ಕೂಡ ಇರುವುದನ್ನು ರೋವರ್ ಖಚಿತಪಡಿಸಿದೆ, ಹೈಡ್ರೋಜನ್ ಇರುವಿಕೆ ಬಗ್ಗೆ ಹುಡುಕಾಟ ನಡೆಸುತ್ತಿದೆ ಎಂದು ಇಸ್ರೋ ತಿಳಿಸಿದೆ,
chandrayaan 3
ಆ.23ರಂದು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ವಾಗಿ ಘೋಷಣೆ, ಪ್ರತಿವರ್ಷ ಆಚರಣೆ
ನವದೆಹಲಿ : ಆಗಸ್ಟ್ 23ನ್ನ ‘ರಾಷ್ಟ್ರೀಯ ಬಾಹ್ಯಾಕಾಶ ದಿನ‘ ಎಂದು ಕೇಂದ್ರ ಸಚಿವ ಸಂಪುಟ ಮಂಗಳವಾರ ಘೋಷಿಸಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಯಶಸ್ವಿಯಾಗಿ ಇಳಿದಿದೆ.
ಚಂದ್ರಯಾನ -3 ಮಿಷನ್ ಗಾಗಿ ಕೆಲಸ ಮಾಡಿದ ಇಸ್ರೋ ವಿಜ್ಞಾನಿಗಳ ಐತಿಹಾಸಿಕ ಯಶಸ್ಸನ್ನ ಕ್ಯಾಬಿನೆಟ್ ಶ್ಲಾಘಿಸಿತು.
ಇದು ಜಾಗತಿಕ ವೇದಿಕೆಯಲ್ಲಿ ನಮ್ಮ ಶಕ್ತಿಯ ಸಂಕೇತವಾಗಿದೆ. ಆಗಸ್ಟ್ 23ನ್ನ ‘ರಾಷ್ಟ್ರೀಯ ವಿಜ್ಞಾನ ದಿನ’ ಎಂದು ಆಚರಿಸುವ ಕ್ರಮವನ್ನ ಕ್ಯಾಬಿನೆಟ್ ಸ್ವಾಗತಿಸುತ್ತದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಕ್ಯಾಬಿನೆಟ್ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಆಗಸ್ಟ್ 26 ರಂದು ಬೆಂಗಳೂರಿನ ಇಸ್ರೋ ಕಮಾಂಡ್ ಸೆಂಟರ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಘೋಷಣೆ ಮಾಡಿದ್ದರು. “ಇಂದಿನ ಯುಗದಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವ ದೇಶವು ಇತಿಹಾಸವನ್ನ ಪಟ್ಟಿ ಮಾಡುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ನಮ್ಮ ಯುವ ಪೀಳಿಗೆಯನ್ನ ಪ್ರೋತ್ಸಾಹಿಸಲು, ನಮ್ಮ ಚಂದ್ರಯಾನ -3 ಲ್ಯಾಂಡರ್ ಚಂದ್ರನನ್ನ ಸ್ಪರ್ಶಿಸಿದ ದಿನವಾದ ಆಗಸ್ಟ್ 23ನ್ನ ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಿಸಲು ನಾವು ನಿರ್ಧರಿಸಿದ್ದೇವೆ” ಎಂದು ಪ್ರಧಾನಿ ಹೇಳಿದರು.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ಕ್ರೀಡೆ2 months ago
ಇಂದು ಐಪಿಎಲ್ ಫೈನಲ್- ಆರ್ಸಿಬಿಗೆ ಶುಭಕೋರಿದ ಎಸ್ಟಿಎಸ್!