Connect with us

PM Modi

ಓದಿನ ಧ್ಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

ಓದಿನ ಧ್ಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

ಬೆಂಗಳೂರು: ವಾಯುವಿಹಾರಿಗಳ ಮತ್ತು ಪ್ರೇಮಿಗಳ ಸ್ವರ್ಗ ಕಬ್ಬನ್ ಉದ್ಯಾನ ಈಗ ಪುಸ್ತಕ ಪ್ರೇಮಿಗಳ ಅಚ್ಚುಮೆಚ್ಚಿನ ತಾಣವಾಗಿರುವುದು ಅನೇಕರಿಗೆ ಸಂತಸ ತಂದಿರುವ ವಿಷಯ, ಹಚ್ಚಹಸಿರಿನ ಹುಲ್ಲು ಹಾಸಿನಲ್ಲಿ ಪುಸ್ತಕ ಓದಿನ ಆನಂದದ ಜೊತೆಗೆ ಚಿತ್ರಕಲೆ, ಕಥೆ-ಕವನಗಳ ರಚನೆಗೆ ವೇದಿಕೆಯಾಗಿದೆ, ಪುಸ್ತಕ ಓದುವ ಹವ್ಯಾಸ ವೃದ್ಧಿಸುವ ಉದ್ದೇಶದಿಂದ ಸ್ವಯಂ ಉದ್ಯೋಗಿಗಳಾದ ಹರ್ಷ ಮತ್ತು ಶ್ರುತಿ ಕಬ್ಬನ್ ರೀಡ್ಸ್ ಎಂಬ ಇನ್‌ಸ್ಟಾಗ್ರಾಂ ಪೇಜ್ ಸ್ಧಾಪಿಸಿದ್ದಾರೆ, ಈ ಮೂಲಕ ಕಬ್ಬನ್, ಲಾಲ್‌ಬಾಗ್ ಸೇರಿ ನಗರದಲ್ಲಿರುವ ವಿವಿಧ ಉದ್ಯಾನಗಳಲ್ಲಿ ಸಾರ್ವಜನಿಕರಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ, ಕಬ್ಬನ್ ಉದ್ಯಾನದಲ್ಲಿ ಮರಗಳ ಬುಡದಲ್ಲಿ ಪುಸ್ತಕಗಳನ್ನು ಓದುತ್ತಿರುವುದು ಪುಸ್ತಕ ಪ್ರಿಯರು, ಕವನ ರಚಿಸುವ ಯುವ ಕವಿಗಳು ಮತ್ತು ಪ್ರಕೃತಿ ಸೌಂದರ್ಯವನ್ನು ಭಾಗವಹಿಸುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ,
ಕಬ್ಬನ್ ರೀಡ್ಸ್ ಪ್ರತಿ ಶನಿವಾರ ಬೆಳೆಗ್ಗೆ ೯ರಿಂದ ಮಧ್ಯಾಹ್ನ ೨ ರವರೆಗೆರ ನಡೆಯುತ್ತಿದೆ, ಸ್ವ ಉದ್ಯೋಗಿಯಾದ ಹರ್ಷ ಮತ್ತು ಶ್ರುತಿ ಎಂಬ ಯುವ ಜೋಡಿ ಪ್ರತಿ ಶನಿವಾರ ಇಂದಿರಾನಗರದಿAದ ಕಬ್ಬನ್ ಉದ್ಯಾನಕ್ಕ ಸೈಕ್ಲಿಂಗ್ ಮತ್ತು ಪುಸ್ತಕ ಓದುವುದಕ್ಕೆ ಬರುತ್ತಿದ್ದರು, ಪುಸ್ತಕ ಓದುವ ಆಸಕ್ತಿ ಇರುವವರೂ ನಮ್ಮೊಂದಿಗೆ ಸೇರಿಕೊಳ್ಳಬಹುದು ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು, ಕಬ್ಬನ್ ರೀಡ್ಸ್ ಇನಸ್ಟಾಗ್ರಾಂ ಪೇಜ್ ಹುಟ್ಟಿಕೊಂಡು ಹಂತ ಹಂತವಾಗಿ ಇವರು ಮಾಡಿದ ಪೋಸ್ಟ್ಗೆ ಸ್ನೇಹಿತರು ಸೇರಿಕೊಂಡರು, ಇಂದು ಸುಮಾರು ೩೩ ಸೆಷನ್‌ಗಳು ನಡೆದಿದ್ದು ಪ್ರತಿ ಶನಿವಾರ ಓದುಗರ ಸಂಖ್ಯೆ ಹೆಚ್ಚುತ್ತಲೆ ಇದೆ ಎಂದು ಕಬ್ಬನ್ ರೀಡ್ಸ್ನ ಸಂಸ್ಧಾಪಕರಾದ ಹರ್ಷ, ಶ್ರುತಿ ಮಾಹಿತಿ ನೀಡಿದ್ದಾರೆ, ಓದುಗರ ಸಂಖ್ಯೆ ಹೆಚ್ಚಿಸುವುದೇ ಕಬ್ಬನ್ ರೀಡ್ಸ್ನ ಮುಖ್ಯ ಗುರಿಯಾಗಿದೆ, ಇದರಿಂದ ನಮಗೆ ಯಾವುದೇ ರೀತಿಯ ಲಾಭ ಗಳಿಸಲು ಉದ್ದೇಶವಿಲ್ಲ ಎಂದರು, ಕಬ್ಬನ್ ರೀಡ್ಸ್ ಬಗ್ಗೆ ಸಂಸದ ಪಿ ಸಿ ಮೋಹನ್ ಅವರು ಟ್ವೀಟ್ ಮಾಡಿದ್ದರು, ಇದನ್ನು ಮರುಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಓದುವ ಆನಂದವನ್ನು ಹರಡುವ ಪ್ರಯತ್ನ ಶ್ಲಾಘನೀಯ ಎಂದು ಕಬ್ಬನ್ ರೀಡ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು, ಅಂತರಾಷ್ಟಿçÃಯ ಮಟ್ಟದಲ್ಲಿ ಕಬ್ಬನ್ ರೀಡ್ಸ್ ದೇಶ ವಿದೇಶಗಳಲ್ಲಿ ೬೦ಕ್ಕೂ ಹೆಚ್ಚು ರೀಡ್ಸ್ ತಂಡಗಳು ಸಂಯೋಜಿತವಾಗಿವೆ, ಮುಂಬೈ ಚೆನ್ನೆöÊ ಹೈದರಾಬಾದ್ ಕೋಲ್ಕತ್ತ ಕೊಚ್ಚಿ ಗೋವಾ ವಿಜಯವಾಡ, ಪಾಂಡಿಚೇರಿ, ತ್ರಿಶೂರ್, ಶ್ರೀನಗರ ಕಟಕ್ ಶಿಲ್ಲಾಂಗ್, ಜೈಪುರ ಮತ್ತು ಕ್ವಾಲಾಂಲAಪುರ, ಆ್ಯಮ್‌ಸ್ಟರ್ಡಾಮ್, ಮೆಲ್ಬೋರ್ನ್, ಲಂಡನ್, ದುಬೈ, ಪ್ಯಾರಿಸ್, ಜೋಹಾನಸ್‌ಬರ್ಗ್ ಸಿಯಾಟಲ್ ನ್ಯೂಯಾರ್ಕ್ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ,

PM Modi

ತೆಲಂಗಾಣದಲ್ಲಿ 56,000 ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಆದಿಲಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ಸುಮಾರು 56,000 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತೆಲಂಗಾಣದ ಅಭಿವೃದ್ಧಿಯ ಕನಸನ್ನು ನನಸಾಗಿಸಲು ಕೇಂದ್ರ ಎಲ್ಲಾ ಬೆಂಬಲವನ್ನು ನೀಡುತ್ತಿದೆ ಎಂದು ಹೇಳಿದರು. ವಿದ್ಯುತ್, ರೈಲು ಮತ್ತು ರಸ್ತೆಗಳಿಗೆ ಸಂಬಂಧಿಸಿದ ಹೊಸ ಅಭಿವೃದ್ಧಿ ಯೋಜನೆಗಳು ರಾಜ್ಯದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತಿವೆ ಎಂದರು. ಇದೇ ವೇಳೆ ಇಂಡಿಯಾ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದಲ್ಲಿ ಆಳವಾಗಿ ಮುಳುಗಿರುವ ಇಂಡಿಯಾ ಮೈತ್ರಿಕೂಟದ ನಾಯಕರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ನಾನು ಅವರ ‘ಪರಿವಾರವಾದ’ವನ್ನು ಪ್ರಶ್ನಿಸಿದಾಗ, ಅವರು ಮೋದಿಗೆ ಕುಟುಂಬವಿಲ್ಲ ಎಂದು ಹೇಳಲು ಪ್ರಾರಂಭಿಸಿದ್ದಾರೆ” ಎಂದು ಪ್ರಧಾನಿ ತಿರುಗೇಟು ನೀಡಿದರು. “ನನ್ನ ಜೀವನ ಒಂದು ತೆರೆದ ಪುಸ್ತಕ. ದೇಶದ 140 ಕೋಟಿ ಜನ ನನ್ನ ಕುಟುಂಬ ಇದ್ದಂತೆ. ಇಂದು ದೇಶದ ಕೋಟಿ ಹೆಣ್ಣುಮಕ್ಕಳು, ತಾಯಂದಿರು ಮತ್ತು ಸಹೋದರಿಯರು ಮೋದಿಯವರ ಕುಟುಂಬ. ದೇಶದ ಪ್ರತಿಯೊಬ್ಬ ಬಡವರೂ ನನ್ನ ಕುಟುಂಬ, ಯಾರೂ ಇಲ್ಲದವರು ಸಹ ಮೋದಿ ನನ್ನವರು ಎಂದು ಹೇಳುತ್ತಾರೆ ಮತ್ತು ಮೋದಿ ಅವರಿಗೂ ಸೇರಿದ್ದಾರೆ. ‘ನೇನೆ ಮೋದಿ ಕುಟುಂಬ’ (ನಾನು ಮೋದಿ ಕುಟುಂಬ) ಎಂದು ಹೇಳುತ್ತಾರೆ ಎಂದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಪ್ರಧಾನಿಯವರು ದೊಡ್ಡಣ್ಣನಿದ್ದಂತೆ. ದೊಡ್ಡ ಸಹೋದರನ ಸಹಾಯದಿಂದ ಮಾತ್ರ ರಾಜ್ಯಗಳು ಮತ್ತಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯ” ಎಂದು ಅವರು ಹೇಳಿದರು. ಪ್ರಧಾನಿಯವರ ಬೆಂಬಲದಿಂದ ಮಾತ್ರ ತೆಲಂಗಾಣ ಗುಜರಾತ್‌ನಂತೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮುಖ್ಯಮಂತ್ರಿಗಳು ಹೇಳಿದರು.

Continue Reading

PM Modi

ರಾಮಮಂದಿರ ಪ್ರಾಣಪ್ರತಿಷ್ಠೆಗೆ ಶಾಲಾ ಕಾಲೇಜಿಗೆ ರಜೆ, ಮದ್ಯ ಮಾರಾಟ ನಿಷೇಧ; ಸಿಎಂ ಯೋಗಿ ಘೋಷಣೆ!

ರಾಮಮಂದಿರ ಪ್ರಾಣಪ್ರತಿಷ್ಠೆ ಜನವರಿ 22ರಂದು ನಡೆಯಲಿದೆ. ಈ ದಿನ ಉತ್ತರ ಪ್ರದೇಶ ಎಲ್ಲಾ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಇಷ್ಟೇ ಅಲ್ಲ ಈ ದಿನ ಉತ್ತರ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಕುರಿತು ಸಿಎಂ ಯೋಗಿ ಆದಿತ್ಯನಾಥ್ ಮಹತ್ವದ ಆದೇಶ ಹೊರಡಿಸಿದ್ದಾರೆ.

ಲಖನೌ ರಾಮ ಮಂದಿರ ಲೋಕಾರ್ಪಣೆಗೆ ತಯಾರಿ ನಡೆಯುತ್ತಿದೆ. ಜನವರಿ 22 ರಂದು ರಾಮಲ್ಲಾ ಪ್ರಾಣಪ್ರತಿಷ್ಠೆ ನಡೆಯಲಿದೆ. ಐತಿಹಾಸಿಕ ದಿನಕ್ಕಾಗಿ ವಿಶ್ವವೇ ಕಾಯುತ್ತಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆದಿನ ಉತ್ತರ ಪ್ರದೇಶದ ಎಲ್ಲಾ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಇಷ್ಟೇ ಅಲ್ಲ ಪ್ರಾಣ ಪ್ರತಿಷ್ಠೆ ದಿನ ಉತ್ತರ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಮಹತ್ವದ ಆದೇಶವನ್ನು ಸಿಎಂ ಯೋಗಿ ಆದಿತ್ಯನಾಥ್ ಹೊರಡಿಸಿದ್ದಾರೆ. ಇದೇ ವೇಳೆ ಪ್ರಾಣಪ್ರತಿಷ್ಠೆಯ ಐತಿಹಾಸಿಕ ದಿನ ಶಾಂತಿಯುತವಾಗಿ ಸಂಭ್ರಮಿಸಲು ಮನವಿ ಮಾಡಿದ್ದಾರೆ. 500 ವರ್ಷಗಳ ಹೋರಾಟದ ಬಳಿಕ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಈ ಐತಿಹಾಸಿಕ ದಿನ ನಮ್ಮೆಲ್ಲರಿಗೂ ಅತ್ಯಂತ ಮಹತ್ವ ಹಾಗೂ ಸಂಭ್ರಮದ ದಿನವಾಗಿದೆ. ಈ ದಿನವನ್ನು ಆಚರಿಸಲು ಎಲ್ಲಾ ಶಾಲಾ ಕಾಲೇಜಿಗೆ ರಜೆ ಘೋಷಿಸಿ ಎಂದು ಯೋಗಿ ಆದಿತ್ಯನಾಥ್, ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ. ಶ್ರೀರಾಮ ಪ್ರಾಣಪ್ರತಿಷ್ಠೆ ಅತ್ಯಂತ ಪವಿತ್ರವಾಗಿದೆ. ಹೀಗಾಗಿ ಈ ದಿನ ಉತ್ತರ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧಿಸಲು ಆದೇಶ ಹೊರಡಿಸಲಾಗಿದೆ. ಸಾರ್ವಜನಿಕರು ರಾಮ ಮಂದಿರ ಪ್ರಾಣಪ್ರತಿಷ್ಠೆಯನ್ನು ಸಂಭ್ರಮಿಸಲು ಕೆಲ ಸೂಚನೆ ನೀಡಲಾಗಿದೆ. ಶಾಂತಿಯುತವಾಗಿ ಸಂಭ್ರಮ ಆಚರಿಸಿ, ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಮನೆಯಲ್ಲೇ ದೀಪ ಬೆಳಗಿ ರಾಮನ ಭವ್ಯ ಮಂದಿರದ ಲೋಕಾರ್ಪಣೆ ಹಾಗೂ ಪ್ರಾಣಪತಿಷ್ಠೆಯಲ್ಲಿ ಪಾಲ್ಗೊಳ್ಳಿ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಶಾಂತಿಯುತವಾಗಿ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಸಂಭ್ರಮದಲ್ಲಿ ಪಾಲ್ಗೊಳ್ಳಲು ಯೋಗಿ ಆದಿತ್ಯನಾಥ್ ಮನವಿ ಮಾಡಿದ್ದಾರೆ. ರಾಮ ಮಂದಿರ ಪ್ರಾಣಪ್ರತಿಷ್ಟೆಯನ್ನು ಪ್ರಧಾನಿ ನರೇಂದ್ರ ಮೋದಿ ನೇರವೇರಿಸಲಿದ್ದಾರೆ. ಜನವರಿ 22ರ 12.30ರ ಶುಭಮುಹೂರ್ತದಲ್ಲಿ ಪ್ರಾಣಪ್ರತಿಷ್ಠೆ ನಡೆಯಲಿದೆ. ಜನವರಿ 16ರಿಂದ ರಾಮನಗರಿಯಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿದೆ. ಈಗಾಗಲೇ ಮನೆ ಮನೆಗೆ ರಾಮ ಮಂದಿರದ ಮಂತ್ರಾಕ್ಷತೆ ವಿತರಣೆ ಮಾಡಲಾಗುತ್ತಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಆಹ್ವಾನ ನೀಡಲಾಗುತ್ತಿದೆ. ಬರೋಬ್ಬರಿ 7 ಸಾವಿರ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ. ಈಗಾಗಲೇ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಪ್ರತಿಯೊಬ್ಬ ಗಣ್ಯರಿಗೂ ಮುಖತಃ ಭೇಟಿ ಮಾಡಿ ಆಹ್ವಾನ ಪತ್ರಿಕೆಗಳನ್ನು ನೀಡಲಾಗುವುದು. ದೇವಾಲಯ ಟ್ರಸ್ಟ್‌ನ ಪ್ರತಿನಿಧಿಗಳು ಹಾಗೂ ಸ್ವಯಂಸೇವಕರು ಗಣ್ಯರನ್ನು ಭೇಟಿ ಮಾಡಿ ಆಹ್ವಾನ ನೀಡಲಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಅಧಿಕಾರಿಗಳು ಹೇಳಿದ್ದಾರೆ.

Continue Reading

PM Modi

ವಿಶ್ವ ಹವಾಮಾನ ಶೃಂಗಸಭೆ: ದುಬೈನಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ.

ವಿಶ್ವ ಹವಾಮಾನ ಶೃಂಗಸಭೆ: ದುಬೈನಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ..

ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ದುಬೈನಲ್ಲಿರುವ ಭಾರತೀಯ ವಲಸಿಗರು ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಜನರು ಮೋದಿ-ಮೋದಿ ಮತ್ತು ಈ ಬಾರಿ ಮೋದಿ ಸರ್ಕಾರ ಎಂಬ ಘೋಷಣೆಗಳನ್ನು ಕೂಗಿದರು. ಜತೆಗೆ 400ಕ್ಕೂ ಅಧಿಕ ಸೀಟುಗಳಿಂದ ಗೆಲ್ಲುವಂತೆ ಶುಭ ಹಾರೈಸಿದರು.ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ದುಬೈನಲ್ಲಿರುವ ಭಾರತೀಯ ವಲಸಿಗರು ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಜನರು ಮೋದಿ-ಮೋದಿ ಮತ್ತು ಈ ಬಾರಿ ಮೋದಿ ಸರ್ಕಾರ ಎಂಬ ಘೋಷಣೆಗಳನ್ನು ಕೂಗಿದರು. ಜತೆಗೆ 400ಕ್ಕೂ ಅಧಿಕ ಸೀಟುಗಳಿಂದ ಗೆಲ್ಲುವಂತೆ ಶುಭ ಹಾರೈಸಿದರು.ಎಎನ್​ಐ ಹಂಚಿಕೊಂಡಿರುವ ವಿಡಿಯೋದಲ್ಲಿ, ಮೋದಿ, ಮೋದಿ, ಅಬ್ಕಿ ಬಾರ್ ಮೋದಿ ಸರ್ಕಾರ್ ಮತ್ತು ವಂದೇ ಮಾತರಂ ಎಂಬ ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು. ಅನಿವಾಸಿ ಭಾರತೀಯರೊಬ್ಬರು ಪ್ರಧಾನಿ ಮೋದಿಯವರನ್ನು ಭೇಟಿಯಾದ ಬಗ್ಗೆ ಸಂತಸ ವ್ಯಕ್ತಪಡಿಸಿ, ನಾನು 20 ವರ್ಷಗಳಿಂದ ಯುಎಇಯಲ್ಲಿ ವಾಸಿಸುತ್ತಿದ್ದೇನೆ, ಆದರೆ ಇಂದು ನನ್ನವರೊಬ್ಬರು ಈ ದೇಶಕ್ಕೆ ಬಂದಂತೆ ಭಾಸವಾಗುತ್ತಿದೆ ಎಂದಿದ್ದಾರೆ.ಮೋದಿ ಭಾರತದ ವಜ್ರ, ಪ್ರಧಾನಿ ಮೋದಿಯನ್ನು ಇಲ್ಲಿ ನೋಡಲು ನಮಗೆ ತುಂಬಾ ಸಂತೋಷವಾಗಿದೆ. ಜಗತ್ತಿಗೆ ಪ್ರಧಾನಿ ಮೋದಿಯಂತಹ ನಾಯಕನ ಅಗತ್ಯವಿದೆ ಎಂದರು.ಶೃಂಗಸಭೆಯಲ್ಲಿ ಜಾಗತಿಕ ನಾಯಕರು ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ತಂತ್ರಗಳ ಬಗ್ಗೆ ಚರ್ಚಿಸಲಿದ್ದಾರೆ. ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಲ್ಲದೆ, ಮೋದಿ ಇತರೆ ಮೂರು ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಲಿದ್ದಾರೆ. ದುಬೈನಲ್ಲಿರುವ ಭಾರತೀಯ ಸಮುದಾಯದ ಆತ್ಮೀಯ ಸ್ವಾಗತದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಅವರ ಬೆಂಬಲ ಮತ್ತು ಉತ್ಸಾಹವು ನಮ್ಮ ರೋಮಾಂಚಕ ಸಂಸ್ಕೃತಿ ಮತ್ತು ಬಲವಾದ ಸಂಬಂಧಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

Continue Reading

Trending