Connect with us

ಕ್ರೀಡೆ

ಪಾಕಿಸ್ತಾನ ಕ್ರಿಕೆಟ್​ ಆಯ್ಕೆ ಸಮಿತಿ ವಜಾ: ಟಿ20 ವಿಶ್ವಕಪ್​ನಲ್ಲಿ ಕೋಚ್​ಗಳ ಜೊತೆ ಕಿತ್ತಾಡಿದ್ದ ವೇಗಿ ಶಾಹೀನ್​ ಆಫ್ರಿದಿ – shaheen shah afridi

ನವದೆಹಲಿ: ಪಾಕಿಸ್ತಾನ ಕ್ರಿಕೆಟ್​ನಲ್ಲಿ ಎಲ್ಲವೂ ಸರಿಯಿಲ್ಲ. ಬುಧವಾರವಷ್ಟೆ ಆಯ್ಕೆ ಸಮಿತಿಯನ್ನು ಬರ್ಖಾಸ್ತು ಮಾಡಲಾಗಿತ್ತು. ಇದರ ಬೆನ್ನಲ್ಲೇ ಒಬ್ಬರ ಮೇಲೆ ಇನ್ನೊಬ್ಬರು ಆಪಾದನೆ ಮಾಡುತ್ತಿದ್ದಾರೆ. ಏಕದಿನ ಮತ್ತು ಟಿ-20 ತಂಡದ ನಾಯಕತ್ವದಿಂದ ದಿಢೀರ್​ ತೆಗೆದು ಹಾಕಲ್ಪಟ್ಟಿರುವ ವೇಗಿ ಶಾಹೀನ್​ ಶಾ ಆಫ್ರಿದಿ ಟಿ-20 ವಿಶ್ವಕಪ್​ ವೇಳೆ ಕೋಚ್​​ಗಳ ಜೊತೆ ಕಿತ್ತಾಡಿಕೊಂಡಿದ್ದರು ಎಂಬ ಅಂಶ- ಬೆಳಕಿಗೆ ಬಂದಿದೆ.

ಟಿ-20 ವಿಶ್ವಕಪ್​ ವೇಳೆ ಪಾಕ್​​ನ ಪ್ರಮುಖ ವೇಗಿಯಾಗಿರುವ ಶಾಹೀನ್ ತರಬೇತುದಾರರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ತಂಡದ ಕೋಚ್‌ಗಳು ಮತ್ತು ಮ್ಯಾನೇಜ್‌ಮೆಂಟ್ ಸಿಬ್ಬಂದಿ ಜೊತೆ ಅಫ್ರಿದಿ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಆದರೂ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದಕ್ಕೆ ಕಾರಣ ಏನೆಂಬ ಬಗ್ಗೆ ಈಗ ತನಿಖೆ ನಡೆಯುತ್ತಿದೆ ವರದಿಯಲ್ಲಿ ಹೇಳಲಾಗಿದೆ.

ಭಾರತ ಮತ್ತು ಅಮೆರಿಕದ ವಿರುದ್ಧ ಸೋತು ಲೀಗ್​ ಹಂತದಲ್ಲೇ ತಂಡ ಹೊರಬಿದ್ದಿದ್ದಕ್ಕೆ ಶಾಹೀನ್​​ ತೀವ್ರ ಅಸಮಾಧಾನಗೊಂಡಿದ್ದರು. ಹೀಗಾಗಿ ಅವರ ತಂಡದ ಸಿಬ್ಬಂದಿ ಜೊತೆ ಬೈದಾಡಿಕೊಂಡಿದ್ದಾರೆ. ಶಾಹೀನ್​ ಅಲ್ಲದೇ, ಹ್ಯಾರೀಸ್​ ರೌಫ್​​ ಪಂದ್ಯಗಳ ಸೋಲಿನ ಬಳಿಕ ಅಭಿಮಾನಿಯೊಬ್ಬರ ಮೇಲೆ ದೈಹಿಕ ಹಲ್ಲೆಗೆ ಮುಂದಾಗಿದ್ದರು. ರಕ್ಷಣಾ ಸಿಬ್ಬಂದಿ ಅವರನ್ನು ತಡೆದಿದ್ದರು. ಆಟಗಾರರು ತಂಗಿದ್ದ ಹೋಟೆಲ್​ ಹೊರಗೆ ಈ ಘಟನೆ ನಡೆದಿತ್ತು.

ಪಾಕ್​ ಆಯ್ಕೆ ಸಮಿತಿ ವಜಾ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯು ತನ್ನ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಬುಧವಾರ ವಜಾ ಮಾಡಿದೆ. ಸಮಿತಿಯಲ್ಲಿದ್ದ ವಹಾಬ್ ರಿಯಾಜ್ ಮತ್ತು ಅಬ್ದುಲ್​ ರಜಾಕ್​ರನ್ನು ಮಂಡಳಿಯು ಹುದ್ದೆಯಿಂದ ಕಿತ್ತೆಸೆದಿದೆ. ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ಇನ್ನು ಮುಂದೆ ನಿಮ್ಮ ಸೇವೆ ಅಗತ್ಯವಿಲ್ಲ ಎಂದು ರಜಾಕ್ ಮತ್ತು ರಿಯಾಜ್ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸೂಚಿಸಿದೆ. ಅಬ್ದುಲ್ ರಜಾಕ್ ಪುರುಷ ಮತ್ತು ಮಹಿಳಾ ಆಯ್ಕೆ ಸಮಿತಿಯ ಭಾಗವಾಗಿದ್ದರೆ, ವಹಾಬ್ ಪುರುಷರ ತಂಡದ ಆಯ್ಕೆಗಾರರಾಗಿದ್ದರು.

ಈ ಬಗ್ಗೆ ವಹಾಬ್​ ರಿಯಾಜ್​ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದು, ತಂಡದ, ಮತ್ತಿತರರ ಬಗ್ಗೆ ಹೇಳಲು ಬಹಳಷ್ಟಿದೆ. ಆದರೆ, ಆಪಾದನೆಗಳಲ್ಲೇ ಕಾಲ ಕಳೆಯಲು ಇಷ್ಟವಿಲ್ಲ. ನಾನು ಆಯ್ಕೆ ಸಮಿತಿಯ ಸದಸ್ಯನಾಗಿ ದೇಶಕ್ಕಾಗಿ ಸೇವೆ ಸಲ್ಲಿಸಿರುವೆ. ನಾನು ಇಷ್ಟಪಡುವ ಆಟದಲ್ಲಿ ಜನರು ನನ್ನನ್ನು ಸೇವಕ ಎಂದು ಅರಿತರೆ ಸಾಕು. ನಂಬಿಕೆ ಮತ್ತು ಪ್ರಾಮಾಣಿಕತೆಯಿಂದ ಪಾಕಿಸ್ತಾನ ಕ್ರಿಕೆಟ್‌ನ ಉನ್ನತಿಗಾಗಿ ನನ್ನೆಲ್ಲ ಶ್ರಮ ಹಾಕಿ ಕೆಲಸ ಮಾಡಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.

ತಂಡದ ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ ಮತ್ತು ಇತರ ಕೋಚ್​ಗಳಿಗೆ ಪ್ರತಿ ಆಟಗಾರರು ಬೆಂಬಲ, ಗೌರವ ನೀಡಬೇಕು ಎಂದು ಶಾಹೀನ್​ ಆಫ್ರಿದಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಕ್ರೀಡೆ

Belgavi: ಸಂಸದರು ಮತ್ತು ಮುಖಂಡರು ಸ್ನೇಹಪೂರ್ಣ ಕ್ರಿಕೆಟ್

ಬೆಳಗಾವಿ: ದೈಹಿಕ ಆರೋಗ್ಯ, ಮಾನಸಿಕ ಸ್ಥಿತಿ ಸುಧಾರಣೆ ಮತ್ತು ಶಾರೀರಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ವ್ಯಾಯಾಮ, ನಡಿಗೆ ಮತ್ತು ಕ್ರೀಡೆಗಳು ಅಗತ್ಯ ಎಂದು ಭાજપಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಬೆಳಗಾವಿ ವಿಧಾನಸಭೆಯ ಚಳಿಗಾಲ ಅಧಿವೇಶನದ ನಡುವೆ, ಮಾಧ್ಯಮದವರ ಒತ್ತಾಯಕ್ಕೆ ಪ್ರತಿಯಾಗಿ, ಬೆಳಗಾವಿ KCA ಕ್ರೀಡಾಂಗಣದಲ್ಲಿ ವಿಧಾನಸಭಾ ಸದಸ್ಯರು, ಪಕ್ಷದ ಮುಖಂಡರು ಮತ್ತು ಮತ್ತಿತರರು ಸ್ನೇಹಪೂರ್ಣವಾಗಿ ಕ್ರಿಕೆಟ್ ಆಡಿದರು.

ಈ ಕ್ರೀಡಾ ಚಟುವಟಿಕೆ ರಂಜನೆ ಮಾತ್ರವಲ್ಲದೆ, ದೈಹಿಕ ಸುಸ್ಥಿತಿ, ಮನಸಿಗೆ ಉಲ್ಲಾಸ ಮತ್ತು ಶಕ್ತಿಯನ್ನು ಒದಗಿಸಿದೆ ಎಂದು ಅವರು ಅಭಿಪ್ರಾಯಪಟ್ಟರು. ಆಟದಲ್ಲಿ ಪಾಲ್ಗೊಂಡವರು ತಮ್ಮ ಆನಂದ, ಒಗ್ಗಟ್ಟಿನ ಶಕ್ತಿ ಮತ್ತು ಉತ್ತಮ ಆರೋಗ್ಯಕ್ಕಾಗಿ ಕ್ರಿಕೆಟ್ ಮಹತ್ವವನ್ನು ಒತ್ತಿಹೇಳಿದರು. ಅನೇಕ ಸದಸ್ಯರು ಶಾರೀರಿಕ ಕ್ಷಮತೆ, ತಂಡದ ಕಾರ್ಯಸಾಮರ್ಥ್ಯ ಮತ್ತು ಹೊಣೆಗಾರಿಕೆಯ ಸಂಬಂಧಿತ ಉತ್ಪಾದಕತೆ ಬಗ್ಗೆ ಚರ್ಚೆ ನಡೆಸಿದರು.

ಆಟದ ಸಂದೇಶ:
ಸ್ನೇಹಪೂರ್ಣ, ಸಂತೋಷಭರಿತ ಮತ್ತು ಆರೋಗ್ಯ–ಪ್ರೋತ್ಸಾಹಕ ಈ ಕ್ರೀಡೆ ಸದಸ್ಯರಿಗೆ ದಿನನಿತ್ಯದ ಜೀವನದಲ್ಲಿ ಕಸರತ್ತು ಮತ್ತು ಕ್ರೀಡೆಗಳನ್ನು ಭಾಗವನ್ನಾಗಿಸಿಕೊಳ್ಳುವ ಮಹತ್ವವನ್ನು ಮನಸಿಗೆ ತರುವಂತಿತ್ತು. ಇದರಿಂದ ಸಂಸದರು ಮತ್ತು ಪಾಲುಗಾರರು ತಮ್ಮ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲು ಪ್ರೇರಣೆ ಪಡೆದರು.

Continue Reading

ಕ್ರೀಡೆ

ಐಪಿಎಲ್ ಬ್ರಾಂಡ್ 20% ಕುಸಿತ: ಕಾರಣವೇನು? – ಸಂಪೂರ್ಣ ವರದಿ ಇಲ್ಲಿದೆ

ನವದೆಹಲಿ, ಡಿ.11: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬ್ರಾಂಡ್ ಮೌಲ್ಯ ಈ ವರ್ಷ ಗಣನೀಯವಾಗಿ ಕುಸಿದಿದ್ದು, ತಂಡಗಳ ಮೌಲ್ಯದಲ್ಲೂ ಭಾರೀ ಇಳಿಕೆ ಕಂಡಿದೆ. 18 ವರ್ಷಗಳ ಬಳಿಕ ಮೊದಲ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವೂ ಮೌಲ್ಯ ಕುಸಿತದಿಂದ ತಪ್ಪಿಸಿಕೊಳ್ಳಲಿಲ್ಲ. ಕಳೆದ ಸಾಲಿನಿಗಿಂತ ಶೇ.10ರಷ್ಟು ಇಳಿಕೆ ಕಂಡು, ಈಗ ₹876.75 ಕೋಟಿ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದೆ.

ತಂಡಗಳಲ್ಲಿ ಅತ್ಯಧಿಕ ಮೌಲ್ಯ ಕುಸಿತ ರಾಜಸ್ಥಾನ್ ರಾಯಲ್ಸ್‌ಗೆ ಸಂಭವಿಸಿದ್ದು, ಶೇ.35ರಷ್ಟು ಇಳಿಕೆ ದಾಖಲಾಗಿದೆ. ಸನ್‌ರೈಸರ್ಸ್ ಹೈದರಾಬಾದ್ (ಶೇ.34), ಕೆಕೆಆರ್ (ಶೇ.33), ಡೆಲ್ಲಿ ಕ್ಯಾಪಿಟಲ್ಸ್ (ಶೇ.26), ಚೆನ್ನೈ (ಶೇ.24), ಮುಂಬೈ (ಶೇ.9), ಪಂಜಾಬ್ ಕಿಂಗ್ಸ್ (ಶೇ.3) ಹಾಗೂ ಲಖನೌ ಸೂಪರ್ ಜೈಂಟ್ಸ್ (ಶೇ.2) ಕೂಡ ಮೌಲ್ಯ ಇಳಿಕೆಯ ದಂಡನೆ ಅನುಭವಿಸಿವೆ. 10 ತಂಡಗಳಲ್ಲಿ ಗುಜರಾತ್ ಟೈಟಾನ್ಸ್ ಮಾತ್ರ ಶೇ.2ರಷ್ಟು ಏರಿಕೆ ದಾಖಲಿಸಿದ ಏಕೈಕ ತಂಡ.

ಒಟ್ಟಾರೆ ಐಪಿಎಲ್ ಬ್ರಾಂಡ್ ಮೌಲ್ಯವು 2024ರಿಗಿಂತ ಶೇ.20ರಷ್ಟು ಕುಸಿತವಾಗಿದೆ ಎಂದು ಬ್ರ್ಯಾಂಡ್ ಫೈನಾನ್ಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅಜಿಮೊನ್ ಫ್ರಾನ್ಸಿಸ್ ತಿಳಿಸಿದ್ದಾರೆ.

ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿರುವ ಸೀಸನ್-19ರ ಮಿನಿ ಹರಾಜಿಗಾಗಿ 350 ಆಟಗಾರರು ಸ್ಪರ್ಧಿಸುತ್ತಿದ್ದು, ಗರಿಷ್ಠ 77 ಸ್ಥಾನಗಳು ಲಭ್ಯವಿವೆ.

ಈ ನಡುವೆ, ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳ ನಿಷೇಧ ತೆರವು ಕುರಿತು ರಾಜ್ಯ ಸರ್ಕಾರ ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.

Continue Reading

ಕ್ರೀಡೆ

ಕೆಎಸ್‌ಸಿಎ ಸಿಹಿ ಸುದ್ದಿ: ಚಿನ್ನಸ್ವಾಮಿಯಲ್ಲಿ ಐಪಿಎಲ್ ಆರಂಭಕ್ಕೆ ಹಸಿರು ನಿಶಾನೆ!

ಹುಬ್ಬಳ್ಳಿ: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳನ್ನು ಪುನರಾರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಮ್ಮತಿ ಸೂಚಿಸಿದ್ದಾರೆ ಎಂದು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ ಪ್ರಸಾದ ತಿಳಿಸಿದ್ದಾರೆ. ಬೆಳಗಾವಿಗೆ ಭೇಟಿ ನೀಡಿದಾಗ ನಾಯಕರು ಈ ಸಂಬಂಧ ಸಿಹಿ ಸುದ್ದಿ ನೀಡಿದ್ದಾರೆ ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವೆಂಕಟೇಶ್ ಪ್ರಸಾದ, ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ತೀರ್ಮಾನ ಹೊರಬರುವ ಸಾಧ್ಯತೆ ಇದೆ ಎಂದರು. ಆರ್‌ಸಿಬಿ ವಿಜಯೋತ್ಸವದ ಸಮಯದಲ್ಲಿ ನಡೆದ ಕಾಲ್ತುಳಿತ ಘಟನೆ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದ ಪ್ರತಿಷ್ಠೆಗೆ ಹಾನಿಯಾಗಿದ್ದರೂ, ಈಗ ಮತ್ತೆ ಮೌಲ್ಯ ಮರಳಿ ಪಡೆಯಲು ಸರ್ಕಾರದ ಸಹಕಾರ ದೊರೆಯಲಿದೆ ಎಂದು ಹೇಳಿದರು.

ಬೆಳಗಾವಿ, ಹುಬ್ಬಳ್ಳಿ, ಧಾರವಾಡ ವಲಯದಲ್ಲಿನ ಕ್ರೀಡಾಂಗಣಗಳ ಅಭಿವೃದ್ಧಿಗೆ ಕೆಎಸ್‌ಸಿಎ ಹೆಚ್ಚಿನ ಒತ್ತು ನೀಡಲಿದೆ. ಕ್ರಿಕೆಟ್ ಬೆಳವಣಿಗೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ ಎಂದು ಪ್ರಸಾದ್ ಸ್ಪಷ್ಟಪಡಿಸಿದರು.

Continue Reading

Trending