cinema
ದೋಸ್ತಿಗೆ ಗ್ರೀನ್ ಸಿಗ್ನಲ್ : ಡಿ ಬಾಸ್ ?

- /home/u521927855/domains/hosasuddi.in/public_html/wp-content/plugins/mvp-social-buttons/mvp-social-buttons.php on line 27
https://hosasuddi.in/wp-content/uploads/2023/08/darshan-and-sudeep.jpg&description=ದೋಸ್ತಿಗೆ ಗ್ರೀನ್ ಸಿಗ್ನಲ್ : ಡಿ ಬಾಸ್ ?', 'pinterestShare', 'width=750,height=350'); return false;" title="Pin This Post">
- Share
- Tweet /home/u521927855/domains/hosasuddi.in/public_html/wp-content/plugins/mvp-social-buttons/mvp-social-buttons.php on line 72
https://hosasuddi.in/wp-content/uploads/2023/08/darshan-and-sudeep.jpg&description=ದೋಸ್ತಿಗೆ ಗ್ರೀನ್ ಸಿಗ್ನಲ್ : ಡಿ ಬಾಸ್ ?', 'pinterestShare', 'width=750,height=350'); return false;" title="Pin This Post">
ಬೆಂಗಳೂರು: ಅಭಿಮಾನಿಗಳಿಗೆ ಡಿ ಬಾಸ್ ಬ್ಯಾಕ್ ಟು ಬ್ಯಾಕ್ ಸಿಹಿ ಸುದ್ದಿಯನ್ನು ಕೊಡ್ತಿದ್ದಾರೆ, ಸಂಸದೆ ಸುಮಲತಾ ಅಂಬರೀಷ್ ಬರ್ತ್‍ಡೇ ವೇಳೆ ದರ್ಶನ್ ಹಾಗೂ ಸುದೀಪ್ 6 ವರ್ಷಗಳ ಬಳಿಕ ಮುಖಾಮುಖಿಯಾಗಿದ್ದರು, ಈ ಗೆಳೆಯರು ದೂರವಾದ ಮೇಲೆ ಯಾವುದೇ ವೇದಿಕೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ, ರಾಜ್ಯದ ಕೋಟ್ಯಾಂತರ ಅಭಿಮಾನಿಗಳು ಇವರಿಬ್ಬರು ಮತ್ತೆ ಒಂದಾಗ್ಬೇಕು ಎಂದು ಎದುರು ನೋಡುತ್ತಿದ್ದಾರೆ, ಈ ಗೆಳೆಯರು ಒಂದೇ ವೇದಿಕೆ ಮೇಲಿದ್ದ ವಿಡಿಯೋ ಎಲ್ಲಿರಿಗೂ ಸಂತೋಷ ತಂದಿದೆ, ಇವರಿಬ್ಬರ ನಡುವೆ ಸುಮಲತಾ ಸಂಧಾನ ಮಾಡಿಸಿದ್ದಾರೆ, ಇವರ ಮತ್ತೆ ಒಂದಾಗ್ತಾರೆ ಅಂತೆಲ್ಲ ಚರ್ಚೆ ನಡೆಯುತ್ತಿದ್ದ ಬೆನ್ನಲ್ಲೇ ಡಿ ಬಾಸ್ ಮಾಡಿರುವ ಪೋಸ್ಟ್ ಮತ್ತಷ್ಟು ಕುತೂಹಲ ಹುಟ್ಟಿಹಾಕಿದೆ,
ಜೋಡೆತ್ತಗಳನ್ನು ಹಿಡಿದುಕೊಂಡಿರುವ ಫೋಟೋ ಒಂದನ್ನೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಕಾಲಾಯ ತಸ್ಮೈ ನಮಃ ಎಂಬ ಸಾಲುಗಳನ್ನು ಬರೆದಿದ್ದಾರೆ ಇದು ಕಿಚ್ಚ ಸುದೀಪ್ ಮತ್ತು ದರ್ಶನ್ ಒಂದಾಗುವ ಕಾಲ ಸಮೀಪ ಬಂದಿದೆ ಎಂದು ಹೇಳಲಾಗುತ್ತಿದೆ, ಏಕೆಂದರೆ ಪೋಸ್ಟ್ ಮಾಡಿರುವ ಜೋಡೆತ್ತುಗಳ ಫೋಟೋ ಇದಕ್ಕೆ ಪುಷ್ಟಿ ಕೊಟ್ಟಂತೆ ಇದೆ, ಇದಕ್ಕಾಗಿ ಫ್ಯಾನ್ಸ್ ವಿಧ ವಿಧವಾದ ಕಮೆಂಟ್ಸ್ ಮಾಡುತ್ತಿದ್ದಾರೆ,

cinema
ಆಸ್ಕರ್: ಭಾರತಕ್ಕೆ ಈ ಬಾರಿ ನಿರಾಸೆ

96ನೇ ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದ್ದ, ಮಲಯಾಳಂನ 2018ನೇ ಹೆಸರಿನ ಸಿನಿಮಾ ಅಂತಿಮ ಸುತ್ತಿನ ಸ್ಪರ್ಧೆಗೆ ಎಂಟ್ರಿ ಪಡೆಯುವಲ್ಲಿ ವಿಫಲವಾಗಿದೆ. ಇದರಿಂದಾಗಿ ಸಹಜವಾಗಿಯೇ ಭಾರತೀಯ ಸಿನಿಮಾ ಪ್ರೇಕ್ಷಕರಿಗೆ ನಿರಾಸೆಯಾಗಿದೆ. ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗಕ್ಕೆ ಈ ಸಿನಿಮಾವನ್ನು ಭಾರತದಿಂದ ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಆದರೆ, ಮುಂದಿನ ಸುತ್ತಿಗೆ ಹೋಗುವಲ್ಲಿ ಅದು ವಿಫಲವಾಗಿದೆ.ಕಳೆದ ಸಲ ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾದ ‘ನಾಟು ನಾಟು’ ಹಾಡಿಗಾಗಿ ಆಸ್ಕರ್ ಪ್ರಶಸ್ತಿ ಬಂದಿತ್ತು. ಈ ಬಾರಿ ದಕ್ಷಿಣದ ಮತ್ತೊಂದು ಸಿನಿಮಾ ಈ ವರ್ಷದ ಆಸ್ಕರ್ ಪ್ರಶಸ್ತಿಗಾಗಿ ನಾಮಿನೇಟ್ ಆಗಿ ಸಂಭ್ರಮಕ್ಕೆ ಕಾರಣವಾಗಿತ್ತು. ಈ ವಿಷಯವನ್ನು ಈ ಹಿಂದೆ ಆಸ್ಕರ್ ಆಯ್ಕೆ ಸಮಿತಿ ಅಧ್ಯಕ್ಷ, ಕನ್ನಡದವರೇ ಆಗಿರುವ ಗಿರೀಶ್ ಕಾಸರವಳ್ಳಿ ತಿಳಿಸಿದ್ದರು.ಟೊವಿನೋ ಥಾಮಸ್ ನಟನೆಯ 2018 ಹೆಸರಿನ ಮಲಯಾಳಂ ಸಿನಿಮಾ ವಿಶೇಷ ಕಥಾವಸ್ತುವನ್ನು ಹೊಂದಿದೆ. ಕೇರಳದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಅತಿವೃಷ್ಠಿ ಸೃಷ್ಟಿಸಿದ ಆವಾಂತರವನ್ನು ಆಧರಿಸಿದ ಚಿತ್ರಿಸಲಾಗಿದೆ. ಈ ಚಿತ್ರಕ್ಕೆ ಭಾರೀ ಪ್ರತಿಕ್ರಿಯೆ ಕೂಡ ಉತ್ತಮವಾಗಿತ್ತು. ಈ ಸಿನಿಮಾವನ್ನು ಕಾಸರವಳ್ಳಿ ಅಧ್ಯಕ್ಷತೆಯ ಕಮೀಟಿಯು ಆಸ್ಕರ್ ಪ್ರಶಸ್ತಿ ಸ್ಪರ್ಧೆಗಾಗಿ ಆಯ್ಕೆ ಮಾಡಲಾಗಿತ್ತು. ಈ ಆಯ್ಕೆಯು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಮೂಲಕ ನಡೆದಿತ್ತು. ಇದು ಪ್ರತಿ ವರ್ಷವೂ ಒಂದು ಸಿನಿಮಾವನ್ನು ಆಯ್ಕೆ ಮಾಡಿ, ಸರಕಾರವೇ ಉಳಿದ ವೆಚ್ಚವನ್ನು ಭರಿಸಿ ಕಳುಹಿಸುತ್ತದೆ. ಖಾಸಗಿಯಾಗಿ ಯಾವ ಸಿನಿಮಾಗಳು ಬೇಕಾದರೂ ಸ್ಪರ್ಧಿಸಬಹುದಾಗಿದೆ.
ಬಲಗಮ್, ದಿ ಕೇರಳ ಸ್ಟೋರಿ, ಆಗಸ್ಟ್ 16 ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳನ್ನು ನೋಡಿರುವ ಸದಸ್ಯರು ಕೊನೆಗೆ 2018: ಎವರಿ ಒನ್ ಇಸ್ ಎ ಹೀರೋ ಚಿತ್ರವನ್ನು ಆಯ್ಕೆ ಮಾಡಿದ್ದಾರೆ. ಆಸ್ಕರ್ ನಾಮಿನೇಷನ್ ಯಾದಿಗೆ ಈ ಸಿನಿಮಾ ಸೇರ್ಪಡೆ ಆಗಬೇಕಾದರೆ, ಆಸ್ಕರ್ ಕಮೀಟಿ ಕೂಡ ಈ ಸಿನಿಮಾ ನೋಡಬೇಕಿತ್ತು. ಆದರೆ, ಈ ಸುತ್ತಿನಲ್ಲಿ ವಿಫಲವಾಗಿದೆ.
cinema
ಹಾಟ್ ಟಾಪಿಕ್ ಆಗಿರುವ ವಿಜಯ್ ದೇವರಕೊಂಡ ಇನ್ಸ್ಟಾ ಸ್ಟೋರಿ

ಟಾಲಿವುಡ್ ಖ್ಯಾತ ನಟ ವಿಜಯ್ ದೇವರಕೊಂಡ ಮದುವೆಗೆ ಸಿದ್ಧವಾಗುತ್ತಿದ್ದಾರಾ? ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ವಿಜಯ್ ದೇವರಕೊಂಡ ಮದುವೆ ಹಾಗೂ ಭಾವಿ ಪತ್ನಿಗೆ ಇರಬೇಕಾದ ಗುಣಗಳ ಬಗ್ಗೆ ಮಾತನಾಡಿದ್ದಾರೆ. ಯಾರೋ ಒತ್ತಡ ಹಾಕಿದ್ರು ಅಂತ ಮದುವೆ ಆಗುವುದಿಲ್ಲ, ನನಗೆ ಇಷ್ಟಅದ್ರೆ ಮಾತ್ರ ಮದುವೆಯಾಗುತ್ತೇನೆ ಎಂದರು. ತನ್ನ ಫೀಲಿಂಗ್ಸ್ಗೆ ಹೊಂದುವ ಹಾಗೂ ನನ್ನನ್ನು ಚೆನ್ನಾಗಿ ರ‍್ಥ ಮಾಡಿಕೊಳ್ಳುವ ಹುಡುಗಿಯನ್ನೇ ಮದುವೆ ಆಗುವೆ ಎಂದು ವಿಜಯ್ ದೇವರಕೊಂಡ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಚಿಕ್ಕ ಚಿಕ್ಕ ವಿಷಯಗಳನ್ನೂ ಆಕೆ ನೆನಪಿಸಿಕೊಳ್ಳಬೇಕು, ಜೊತೆಗೆ ಸ್ವಲ್ಪ ಬುದ್ಧಿವಂತೆ ಕೂಡ ಆಗಿರಬೇಕು ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ….ಆದರೆ ಮತ್ತೊಂದು ಕಡೆ ನಾಯಕಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ಬಗ್ಗೆ ಹಲವು ರೂರ‍್ಸ್ ಹರಿದಾಡ್ತಿದೆ.ಈ ಮಧ್ಯೆ ವಿಜಯ್ ದೇವರಕೊಂಡ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ವಿಜಯ್ ದೇವರಕೊಂಡ ಇನ್ಸ್ಟಾ ಸ್ಟೋರಿಯಲ್ಲಿ ಹುಡುಗಿಯ ಕೈ ಹಿಡಿದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಒಂದು ಕೈ ಅವರದ್ದೇ ಅಂತ ಸ್ಪಷ್ಟವಾಗಿ ತಿಳಿಯುತ್ತದೆ. ಆದ್ರೆ ಇನ್ನೊಂದು ಕೈ ಯಾರದ್ದು ಎನ್ನುವುದು ತಿಳಿದಿಲ್ಲ. ಅಲ್ಲದೆ, “ಜೀವನದಲ್ಲಿ ಬಹಳಷ್ಟು ನಡೆಯುತ್ತಿದೆ. ಆದ್ರೆ, ಇದು ತುಂಬಾ ವಿಶೇಷ! ಶೀಘ್ರವೇ ಪ್ರಕಟಿಸಲಾಗುವುದು,’’ ಅಂತ ಕ್ಯಾಪ್ಷನ್ ಕೊಟ್ಟಿದ್ದು, ಅಭಿಮಾನಿಗಳ ತೆಲೆ ಕೆಡುವಂತೆ ಮಾಡಿದೆ.ವಿಜಯ್ ದೇವರಕೊಂಡ ಪೋಸ್ಟ್ ಮಾಡಿರುವ ಈ ಫೋಟೋ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶೀಘ್ರದಲ್ಲೇ ನಟ ವಿಜಯ್ ಗುಡ್ ನ್ಯೂಸ್ ಕೊಡಲಿದ್ದಾರೆ ಎನ್ನಲಾಗ್ತಿದೆ.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು1 year ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ