athlelitics
ತಿರಂಗದ ಮೇಲೆ ಆಟೋಗ್ರಾಫ್ ಹಾಕಲಾರೆ’: ‘ಚಿನ್ನದ ಹುಡುಗ’ ನೀರಜ್ ಚೋಪ್ರಾ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ ಅಭಿಮಾನಿಯೊಬ್ಬರು ಭಾರತದ ಧ್ವಜದ ಮೇಲೆ ಆಟೋಗ್ರಾಫ್ ಹಾಕುವಂತೆ ಕೇಳಿದ್ದಾರೆ. ನಯವಾಗಿಯೇ ನಿರಾಕರಿಸಿದ ನೀರಜ್, ಅಭಿಮಾನಿಯ ಟೀ ಶರ್ಟ್ನ ತೋಳಿಗೆ ಸಹಿ ಹಾಕಿ ದೇಶಾಭಿಮಾನ ಮೆರೆದರು.
ಬುಡಾಪೆಸ್ಟ್ (ಹಂಗೇರಿ): ನೀರಜ್ ಚೋಪ್ರಾ ಅವರಿಂದು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 88.17 ಮೀಟರ್ ದೂರ ಚಾವೆಲಿನ್ ಥ್ರೋ ಮಾಡಿ ಐತಿಹಾಸಿಕ ಸಾಧನೆಯೊಂದಿಗೆ ಮತ್ತೊಮ್ಮೆ ಭಾರತಕ್ಕೆ ವಿಶೇಷ ಗೌರವ ತಂದುಕೊಟ್ಟಿದ್ದಾರೆ. ಈ ಸಾಧನೆಯ ಮೂಲಕ ಶತಕೋಟಿ ಅಭಿಮಾನಿಗಳ ಹೃದಯವನ್ನೂ ಚೋಪ್ರಾ ಗೆದ್ದರು. ಇದರ ಹೊರತಾಗಿ ಚೋಪ್ರಾ ನಡೆಯೊಂದು ಇನ್ನಷ್ಟು ಮೆಚ್ಚುಗೆ ಗಳಿಸಿದೆ.
ಹಂಗೇರಿಯಾದ ಅಭಿಮಾನಿಯೊಬ್ಬರು ನೀರಜ್ ಬಳಿ ಬಂದು ಭಾರತದ ತ್ರಿವರ್ಣ ಧ್ವಜದ ಮೇಲೆ ಆಟೋಗ್ರಾಫ್ ಹಾಕಿಕೊಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಗೌರವಪೂರ್ವಕವಾಗಿಯೇ ಅವರು ನಿರಾಕರಿಸಿದರು. “ವಹಾ ನಹಿ ಸೈನ್ ಕರ್ ಸಕ್ತಾ (ಅಲ್ಲಿ ಸಹಿ ಹಾಕಲು ಸಾಧ್ಯವಿಲ್ಲ)” ಎಂದು ಅವರು ಹೇಳಿದರು. ಭಾರತದ ಧ್ವಜ ಸಂಹಿತೆಯ 3.28ರ ಪ್ರಕಾರ, “ಧ್ವಜದ ಮೇಲೆ ಯಾವುದೇ ರೀತಿಯ ಅಕ್ಷರಗಳನ್ನು ಬರೆಯುವಂತಿಲ್ಲ”.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ಕ್ರೀಡೆ2 months ago
ಇಂದು ಐಪಿಎಲ್ ಫೈನಲ್- ಆರ್ಸಿಬಿಗೆ ಶುಭಕೋರಿದ ಎಸ್ಟಿಎಸ್!