ಕ್ರೀಡೆ

ಮೊದಲ ದಿನವೇ ಪದಕದ ಆಸೆ ಚಿಗುರಿಸಿ ಭಾರತದ ಶೂಟರ್

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‍ನ ಮೊದಲ ದಿನದಲ್ಲೇ ಭಾರತದ ಶೂಟರ್ ಮನು ಭಾಕರ್ ಮಹಿಳೆಯರ 10 ಮೀಟರ್ ಪಿಸ್ತೂಲ್‍ನಲ್ಲ ಫೈನಲ್ ಪ್ರವೇಶಿಸಿದ ಮೂಲಕ ಪದಕದ ಆಸೆ ಮೂಡಿಸಿದ್ದಾರೆ,
60 ಪ್ರಯತ್ನಗಳ ಪೈಕಿ ಮನು ಭಾಕರ್ 27 ಬಾರಿ 10 ರ ಸರ್ಕರ್‍ಗೆ ಗುರಿ ಇಡುವ ಮೂಲಕ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದರು,
ಫೈನಲ್ ನಲ್ಲಿ 8 ಶೂಟರ್‍ಗಳು ಮೂರು ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ, ಕಳೆದ ಬಾರಿ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮನು ಭಕರ್ ಮೊದಲ ಸೀರಿಸ್‍ನಲ್ಲಿ 100 ಕ್ಕೆ 98 ಅಂಕ ಕಲೆಹಾಕಿದ್ದರು, ಅದರೆ ಎರಡನೇ ಸುತ್ತಿನ ಸಂದರ್ಭದಲ್ಲಿ ಅವರ ಪಿಸ್ತೂಲ್ ಕೈಕೊಟ್ಟಿತ್ತು, ಪಿಸ್ತೂಲ್ ಸರಿ ಪಡಿಸಲು ಸಮಯಾವಕಾಶ ನೀಡಲಾಗಿತ್ತು, ಈ ವೇಳೆ ಹೆಚ್ಚಿನ ವ್ಯಯ ಮಾಡಿದ್ದರಿಂದಾಗಿ ಕೊನೆಗೆ 12 ನೇ ಸ್ಧಾನಕ್ಕೆ ಕುಸಿಯುವ ಮೂಲಕ ಪ್ರಶಸ್ತಿ ರೇಸ್ ನಿಂದ ಹೊರಬಿದ್ದಿದ್ದರು,

Trending

Exit mobile version