ಬೆಂಗಳೂರು
ಕೇಂದ್ರ ಮಧ್ಯಸ್ಥಿಕೆ ವಹಿಸಲಿ, ಮೇಕೆದಾಟು ಅಣೆಕಟ್ಟು ಕಟ್ಟಲು ಸಿದ್ಧ – ಸಿದ್ದರಾಮಯ್ಯ

ಮೈಸೂರು: ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲಿ ಮೇಕೆದಾಟು ಅಣೆಕಟ್ಟು (Mekedatu Dam) ಕಟ್ಟಲು ನಾವು ಸಿದ್ಧರಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ (Mekedatu Project) ವಿಚಾರಕ್ಕೆ ಪ್ರತಿಕ್ರಿಯಿಸಿದರು. ಮೇಕೆದಾಟು ಅಣೆಕಟ್ಟು ಕಟ್ಟಲು ನಾವು ಸಿದ್ಧರಿದ್ದೇವೆ. ತಮಿಳುನಾಡಿನವರು ರಾಜಕೀಯ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ. ಆದ್ದರಿಂದ ಕೇಂದ್ರದವರು (Union Government) ಮಧ್ಯಸ್ಥಿಕೆ ವಹಿಸಲಿ ಅಂತ ಒತ್ತಾಯಿಸಿದ್ದಾರೆ.
ವಿತ್ತ ಸಚಿವರು ಕರ್ನಾಟಕದ ಋಣ ತೀರಿಸಬಾರದಾ?
ಇದೇ ವೇಳೆ ನೀತಿ ಆಯೋಗದ ಸಭೆಗೆ ಗೈರಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ಉದ್ದೇಶ ಪೂರ್ವಕವಾಗಿ ನೀತಿ ಆಯೋಗದ ಸಭೆಗೆ ಬಾಯ್ಕಾಟ್ ಮಾಡಿದ್ದೇನೆ. ನಾನು ಮಾತ್ರ ಅಲ್ಲ, ಬಿಜೆಪಿಯೇತರ ಸರ್ಕಾರದ ರಾಜ್ಯಗಳು ಬಾಯ್ಕಾಟ್ ಮಾಡಿದ್ದಾರೆ. ರಾಜ್ಯಕ್ಕೆ ನ್ಯಾಯವೇ ಸಿಗದಿದ್ದ ಮೇಲೆ ಸಭೆಗೆ ಹೋಗಿ ಏನು ಪ್ರಯೋಜನ? ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಸಂಪೂರ್ಣ ಅನ್ಯಾಯವಾಗಿದೆ. ಪ್ರತಿ ಬಾರಿಯೂ ನಿರ್ಮಾಲಾ ಸೀತಾರಾಮನ್ ರಾಜ್ಯಕ್ಕೆ ಬಂದು ಸುಳ್ಳು ಹೇಳಿ ಹೋಗುತ್ತಾರೆ. ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಕರ್ನಾಟಕದ ಋಣ ತೀರಿಸಿಬಾರದಾ? ಎಂದು ಪ್ರಶ್ನೆ ಮಾಡಿದರು,
ಕುಮಾರಸ್ವಾಮಿ ಮಂಡ್ಯದಿಂದ ಆಯ್ಕೆಯಾಗಿದ್ದಾರೆ. ಮಂಡ್ಯ ಕ್ಷೇತ್ರಕ್ಕೆ ಕಾರ್ಖಾನೆ ತಂದಿದ್ದಾರಾ? 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯ ದೇಶದ ಯಾವ ರಾಜ್ಯಕ್ಕೂ ಆಗಿಲ್ಲ. ಅತಿ ಹೆಚ್ಚು ತೆರಿಗೆ ಕೊಡುವ 2ನೇ ರಾಜ್ಯ ಕರ್ನಾಟಕ ಇಂತಹ ರಾಜ್ಯಕ್ಕೆ ಅನ್ಯಾಯಾಗುತ್ತಿದೆ. ಅನ್ಯಾಯ ಆಗಿಲ್ಲ ಎಂದು ಕೇಂದ್ರ ಸಚಿವರು ಹೇಳುತ್ತಾರೆ. ಆಂಧ್ರ ಪ್ರದೇಶ, ಬಿಹಾರಕ್ಕೆ ಕೊಟ್ಟಿರುವ ಅನುದಾನ ಎಷ್ಟು? ನಮ್ಮದು ಎಷ್ಟು ಎಂದು ಹೇಳಲಿ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಹಳೇಯ ಯಾವ ಯೋಜನೆಗಳಿಗೆ ದುಡ್ಡು ಕೊಟ್ಟಿಲ್ಲ. ನಮಗೆ ಪಾಠ ಮಾಡಲು ಬರುತ್ತಾರಾ? ನಿರ್ಮಾಲಾ ಸೀತಾರಾಮನ್ ವಿರುದ್ಧ ಸಿಎಂ ನಡೆದಿಸಿದರು.