Connect with us

ರಾಜ್ಯ

ಅಪ್ಪು ಸರ್ ನನಗೆ ಧೈರ್ಯ ತುಂಬಿದ್ದರು’: ಪುನೀತ್​ ರಾಜ್​ಕುಮಾರ್​ ಸ್ಮರಿಸಿದ ಹರ್ಷಿಕಾ ಪೂಣಚ್ಚ – Harshika on Appu

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಪುನೀತ್​ ರಾಜ್​ಕುಮಾರ್​ ನಮ್ಮೆಲ್ಲರನ್ನು ಅಗಲಿ ದಿನಗಳು ಉರುಳಿವೆ. ಆದರೆ ಅವರ ನೆನಪು ಮಾತ್ರ ಸದಾ ಜೀವಂತ. ಅವರ ಸಿನಿಮಾ ಮತ್ತು ಸಾಮಾಜಿಕ ಸೇವೆ ಹೆಚ್ಚಿನ ಸಂಖ್ಯೆಯ ಜನರಲ್ಲಿ ಅಚ್ಚಳಿಯದೇ ಉಳಿದಿದೆ. ಅಪ್ಪು ಹೆಸರಲ್ಲಿ ಮಾನವೀಯ ಕಾರ್ಯಗಳು ಮತ್ತು ಅವರ ಸ್ಮರಣೆ ಮುಂದುವರೆದಿದೆ. ಇದೀಗ ನಟಿ ಹರ್ಷಿಕಾ ಪೂಣಚ್ಚ ಅವರು ಪುನೀತ್​​ ರಾಜ್​ಕುಮಾರ್​​​ ಕುರಿತಾದ ವಿಶೇಷ ಪೋಸ್ಟ್ ಶೇರ್ ಮಾಡೋ ಮೂಲಕ ಗಮನ ಸೆಳೆದಿದ್ದಾರೆ.

ಜಾಕಿ’, 2010ರ ಅಕ್ಟೋಬರ್​ 14ರಂದು ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದ ಸಿನಿಮಾ. ಬಹುತೇಕ ಉತ್ತಮ ಪ್ರತಿಕ್ರಿಯೆ ಗಳಿಸಿದ್ದ ಈ ಚಿತ್ರ ಗಲ್ಲಾಪೆಟ್ಟಿಗೆ ವಿಚಾರದಲ್ಲೂ ಯಶ ಕಂಡಿತ್ತು. ದುನಿಯಾ ಸೂರಿ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​​ ಹಾಗೂ ಭಾವನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರೆ, ಹರ್ಷಿಕಾ ಪೂಣಚ್ಚ, ಸುಮಿತ್ರಾ, ರಂಗಾಯಣ ರಘು, ಪೆಟ್ರೋಲ್​ ಪ್ರಸನ್ನ, ವಿಕಾಸ್​​​ ಸೇರಿದಂತೆ ಹಲವರು ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದರು. ಪಾರ್ವತಮ್ಮ ರಾಜ್​ಕುಮಾರ್​ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದರು.

ಪುನೀತ್​ ರಾಜ್​​​ಕುಮಾರ್​ ವೃತ್ತಿಜೀವನದಲ್ಲಿ ಈ ಚಿತ್ರ ಮಹತ್ವದ ಪಾತ್ರ ವಹಿಸಿದೆ. ಕನ್ನಡದಲ್ಲಿ ಇದು ಯಶಸ್ವಿ ಚಿತ್ರಗಳಲ್ಲೊಂದು. ಹರ್ಷಿಕಾ ಪೂಣಚ್ಚ ಅವರ ಆರಂಭದ ದಿನಗಳಲ್ಲಿ ಸಿಕ್ಕ ಸಿನಿಮಾ. ಸದ್ಯ ನಟಿ ತಮ್ಮ ಅನುಭವ, ಅಪ್ಪು ಕೊಟ್ಟ ಸಾಥ್ ಬಗ್ಗೆ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಪುನೀತ್​​ ಅವರ ಜೊತೆಗಿನ ಒಂದು ಫೋಟೋ ಕೂಡಾ ಶೇರ್ ಮಾಡಿದ್ದಾರೆ.

ಹರ್ಷಿಕಾ ಪೂಣಚ್ಚ ಪೋಸ್ಟ್: ”ಚಿತ್ರೀಕರಣದ ಮೊದಲ ದಿನ ನನಗಾದ ಅನುಭವ, ಭಯ, ಹತಾಶೆಯನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ. ಅದರಲ್ಲೂ, ಒಂದೇ ಒಂದು ಡೈಲಾಗ್​ ಇಲ್ಲದೇ ದೃಶ್ಯವೊಂದನ್ನು ನಿಭಾಯಿಸಬೇಕಾದ ಕ್ಷಣ. ಅದೊಂದು ಕಠಿಣ ಪರಿಸ್ಥಿತಿ. ಕಣ್ಣೀರಿಟ್ಟಿದ್ದೆ. ಆದ್ರೆ ಅಪ್ಪು ಸರ್​​ ನನ್ನ ಸಂಕಟ ಗಮನಿಸಿ ಸಮಾಧಾನ ಹೇಳಲು ಬಂದಿದ್ದರು. ನನ್ನ ಪಾತ್ರ ಮಹತ್ವದ್ದು, ಸಾಕಷ್ಟು ಡೈಲಾಗ್ಸ್​ ಸಿಗಲಿದೆ ಎಂದು ಭರವಸೆಯ ಮಾತುಗಳನ್ನಾಡಿದ್ದರು. ಚಿಂತಿಸಬೇಡಿ ಎಂದು ಸಮಾಧಾನ ಹೇಳಿದ್ದರು. 15 ವರ್ಷ ವಯಸ್ಸಿನವಳಾಗಿದ್ದಾಗ, ಅವರೊಂದಿಗೆ ಕೆಲಸ ಮಾಡಿದ್ದು ನನಗೆ ಬಹಳ ಸಂತೋಷ ಕೊಟ್ಟಿತ್ತು. ಜಾಕಿ ಚಿತ್ರದ ಚಿತ್ರೀಕರಣದ ಸಮಯ ಸ್ಮರಣೀಯ. ಅವರ ವಿನಮ್ರತೆ, ಸಮರ್ಪಣೆ, ಪ್ಯಾಶನ್​​​, ಹಾಗೆಯೇ ಅವರು ತಮ್ಮ ಜೀವನ ನಡೆಸಿದ ರೀತಿಯನ್ನು ಅನುಸರಿಸಲು ಬಯಸುತ್ತೇನೆ” ಎಮದು ಬರೆದುಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ ಪೋಸ್ಟ್​​ನಲ್ಲಿ ಸಿನಿಮಾ ಸೆಟ್​ನ ಫೋಟೋವನ್ನು ಹಂಚಿಕೊಂಡಿದ್ದಾರೆ.

ರಾಜಕೀಯ

DK Shivakumar ಸಿಎಂ ಆಗಬೇಕು: ರಾಮನಗರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷ ಆಗ್ರಹ

ರಾಮನಗರ:
ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಸಿಎಂ ಸ್ಥಾನ ಸಿಗಬೇಕು ಎಂಬ ಆಗ್ರಹವನ್ನು ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “DK Shivakumar ನಮ್ಮ ನಾಯಕರು. ಅವರ ಶ್ರಮ ಹಾಗೂ ಹೋರಾಟಕ್ಕೆ ಪ್ರತಿಫಲ ಸಿಗಬೇಕು. ನಾನು ಈ ಜಿಲ್ಲೆಯಲ್ಲಿ ಹುಟ್ಟಿದ್ದು, ಅವರು ಕೂಡ ನಮ್ಮ ಜನರು. ಅವರಿಗೆ ಗೌರವ ಸಿಗಬೇಕು ಎಂದು ಹೇಳುವುದು ನನ್ನ ಹಕ್ಕು,” ಎಂದು ಸ್ಪಷ್ಟಪಡಿಸಿದರು.

“ನಾನು ಈಗಲೂ ನನ್ನ ಹಿಂದಿನ ಹೇಳಿಕೆಗೆ ಬದ್ಧನಾಗಿದ್ದೇನೆ. DK Shivakumar ಸಿಎಂ ಆಗಬೇಕು ಎಂಬ ಮಾತು ಹಿಂದೆ ಹೇಳಿದ್ದೆ, ಈಗಲೂ ನಿಂತಿದ್ದೇನೆ,” ಎಂದರು.

ಆ.8ರಂದು ಕಾಂಗ್ರೆಸ್ ಹೋರಾಟ:
ಆಗಸ್ಟ್ 8ರಂದು ನಡೆಯಲಿರುವ ಚುನಾವಣಾ ಅಕ್ರಮದ ವಿರುದ್ಧದ ಕಾಂಗ್ರೆಸ್ ಹೋರಾಟ ಕುರಿತು ಮಾತನಾಡಿದ ಅವರು, “ಈ ಹೋರಾಟಕ್ಕೆ ಹೈಕಮಾಂಡ್ ರೂಪುರೇಷೆ ನೀಡಿದೆ. ರಾಷ್ಟ್ರೀಯ ನಾಯಕರು ನೇತೃತ್ವ ವಹಿಸುತ್ತಿದ್ದಾರೆ. ನಮ್ಮ ಜಿಲ್ಲೆಯಿಂದ 20,000 ಮಂದಿ ಪಾಲ್ಗೊಳ್ಳುತ್ತಾರೆ,” ಎಂದು ಹೇಳಿದರು.

ಇವಿಎಂ ಅಕ್ರಮ ಕುರಿತು ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲವಾದರೂ, “ನಮ್ಮ ರಾಷ್ಟ್ರ ನಾಯಕರು ಎಲ್ಲಾ ವಿವರಗಳನ್ನು ಬಹಿರಂಗಪಡಿಸುತ್ತಾರೆ,” ಎಂದು ತಿಳಿಸಿದರು.

Continue Reading

ಬೆಂಗಳೂರು

ಅಲ್ಪಸಂಖ್ಯಾತರ ಸಾಮೂಹಿಕ ವಿವಾಹಕ್ಕೆ ₹50,000 ಸಹಾಯಧನ: ಜಮೀರ್ ಅಹ್ಮದ್ ಘೋಷಣೆ

ಬೆಂಗಳೂರು:
ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ಸಾಮೂಹಿಕ ವಿವಾಹಗಳಿಗೆ ಇನ್ಮುಂದೆ ಸರ್ಕಾರದಿಂದ ₹50,000 ಸಹಾಯಧನ ಸಿಗಲಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಘೋಷಿಸಿರುವ ಬಜೆಟ್ ಯೋಜನೆಗೆ ಈಗ ಅನುಮೋದನೆ ಲಭಿಸಿದ್ದು, ಈ ನಿಟ್ಟಿನಲ್ಲಿ ಬಡ ಅಲ್ಪಸಂಖ್ಯಾತರಿಗೆ ಸಹಾಯ ಮಾಡಲು ಸರ್ಕಾರ ಸಜ್ಜಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು:
ಮೌಲಾನಾ ಅಬ್ದುಲ್ ಕಲಾಂ ಸ್ಕೂಲ್‌ ಸೇರಿದಂತೆ ಪ್ರತಿಭಾವಂತ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಗುತ್ತಿದೆ. ಈಗಾಗಲೇ 214 ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಲ್ಯಾಪ್‌ಟಾಪ್ ವಿತರಣೆ ನಡೆಸಲಾಗಿದೆ.

ಮದರಸಾಗಳಲ್ಲಿ ಕನ್ನಡ ಕಲಿಕೆ:
ಮದರಸಾಗಳಲ್ಲಿ ಕನ್ನಡ ಕಲಿಕೆ ಆರಂಭಿಸುವ ಯೋಜನೆಯೊಂದಿಗೆ, ಮೊದಲ ಹಂತದಲ್ಲಿ 200 ಮೌಲ್ವಿಗಳನ್ನು ಆಯ್ಕೆ ಮಾಡಲಾಗಿದೆ. ಮೂವರು ತಿಂಗಳಲ್ಲಿ ಅವರಿಗೆ ಕನ್ನಡ ಭಾಷಾ ತರಬೇತಿ ನೀಡಲಾಗುವುದು.

2,000 ಮದರಸಾಗಳಿಗೆ ಕನ್ನಡ ಪಾಠ್ಯಕ್ರಮ:
ರಾಜ್ಯದಲ್ಲಿ 2 ಸಾವಿರ ಮದರಸಾಗಳಿಗೆ ಕನ್ನಡ ಕಲಿಕೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಅಲ್ಪಸಂಖ್ಯಾತ ಆಯೋಗ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅಧ್ಯಕ್ಷ ಯು. ನಿಸಾರ್ ಅಹಮದ್ ಹೇಳಿದ್ದಾರೆ. very soon ಈ ಪಾಠ್ಯಕ್ರಮ ಮುದ್ರಣಕ್ಕೂ ಕ್ರಮ ಜರಗಲಿದೆ.

Continue Reading

ಅಪರಾಧ

ಧರ್ಮಸ್ಥಳ ಶವ ಹೂತು ಪ್ರಕರಣ: ಮೂರು ಅಸ್ಥಿಪಂಜರ ಪತ್ತೆ, ಎಸ್‌ಐಟಿ ತನಿಖೆಗೆ ಹೊಸ ತಿರುವು!

ದಕ್ಷಿಣ ಕನ್ನಡ, ಆಗಸ್ಟ್ 5 – ಧರ್ಮಸ್ಥಳದ ಸುತ್ತಮುತ್ತಲ ಶವ ಹೂತು ಪ್ರಕರಣಕ್ಕೆ ದಿನೇ ದಿನೆ ನ್ಯೂ ಟ್ವಿಸ್ಟ್ ಸಿಗುತ್ತಿದ್ದು, ಇದೀಗ ಮೂರು ಅಸ್ಥಿಪಂಜರಗಳು ಪತ್ತೆಯಾಗಿವೆ ಎಂಬ ಸುದ್ದಿ ಚಕ್ಕರಿಗೊಳ್ಳುತ್ತಿದೆ. ಈ ಕುರಿತು ದೂರುದಾರ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಎಸ್‌ಐಟಿ ತಂಡದ ಶೋಧ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿನ್ನೆ ನಡೆದ ಉತ್ಖನನದ ವೇಳೆ:

  • ಸ್ಟಾಟ್ ನಂಬರ್ 12ರ ಬಳಿ ಕಾರ್ಮಿಕರಿಂದ ಅಗೆಸಿದಾಗ, ಮೂರು ಅಸ್ಥಿಪಂಜರಗಳು ಹಾಗೂ ಮಹಿಳೆಯ ಸೀರೆ ಪತ್ತೆಯಾಗಿವೆ.
  • ಸುಮಾರು 140 ಮೂಳೆಗಳ ತುಂಡುಗಳು ಪತ್ತೆಯಾದ ಕುರಿತು ವರದಿ ಇದೆ.
  • ಅಸ್ಥಿಪಂಜರಗಳನ್ನು ತಕ್ಷಣವೇ ಕೆಎಂಸಿ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ.

ಇಂದಿನ ಉತ್ಖನನ:

  • ನೇತ್ರಾವತಿ ನದಿಯ ದಡದ ಬಳಿ 11ನೇ ಪಾಯಿಂಟ್‌ನಲ್ಲಿ ಅಗೆತ ಕೆಲಸ ನಡೆಯುತ್ತಿದೆ.
  • 6 ಅಡಿಯವರೆಗೆ ಶೋಧ ನಡೆದ ಬಳಿಕ ಸಾಕ್ಷ್ಯ ಸಿಕ್ಕದರೆ ಮುಂದಿನ ಪಾಯಿಂಟ್‌ಗೆ ಹೋಗುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಪೂರ್ವ ಘಟನೆ:

  • ಜುಲೈ 31ರಂದು 6ನೇ ಗುರುತುಸ್ಥಳದಲ್ಲಿ ಅಸ್ಥಿಪಂಜರ ಪತ್ತೆಯಾದ ಹಿನ್ನೆಲೆ, ಎಸ್‌ಐಟಿ ಅಧಿಕಾರಿಗಳಾದ ಐಪಿಎಸ್ ಜಿತೇಂದ್ರ ಕುಮಾರ್ ದಯಾಮ ಅವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು, ಆಧಾರದ ಮೇಲೆ UDR ಪ್ರಕರಣ ದಾಖಲಾಗಿದೆ.
Continue Reading

Trending