ಬಿಬಿಎಂಪಿ
ನಮ್ಮ ಕ್ಲಿನಿಕ್ ವೇಳೆ ಬದಲಾವಣೆ
ಬೆಂಗಳೂರು: ಜನಸಾಮಾನ್ಯರಿಗೆ ಕಡಿಮೆ ದುಡ್ಡಿನಲ್ಲಿ ಆರೋಗ್ಯ ಸೇವೆ ಲಭಿಸಬೇಕೆಂಬ ಕಾರಣದಿಂದಾಗಿ ಆರಂಭಿಸಲಾಗಿರುವ ನಮ್ಮ ಕ್ಲಿನಿಕ್‌ಗಳ ಸೇವೆಯ ವೇಳೆಯನ್ನು ಬದಲಾವಣೆ ಮಾಡಲಾಗಿದ,
ಈ ಹಿಂದೆ ಬೆಳಗ್ಗೆ ೯ರಿಂದ ಮಧ್ಯಾಹ್ನ ೧ ಗಂಟೆವರೆಗೆ, ಸಂಜೆ ೪ ರಿಂದ ೫-೩೦ರ ವರೆಗೆ ಮಾತ್ರ ಇದ್ದ ನಮ್ಮ ಕ್ಲಿನಿಕ್‌ಗಳ ಸೇವೆಯನ್ನು ಇನ್ನು ಮುಂದೆ ಬೆಳಗ್ಗೆ ೮ರಿಂದ ಮಧ್ಯಾಹ್ನ ೨ರವರೆಗೆ ಹಾಗೂ ಸಂಜೆ ೪ ರಿಂದ ೮ರ ವರೆಗೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ, ನಮ್ಮ ಕ್ಲಿನಿಕ್‌ಗಳನ್ನು ಹೆಚ್ಚಾಗಿ ಬಡವರು, ಶ್ರಮಿಕರು ಬಳಕೆ ಮಾಡಿಕೊಳ್ಳುತ್ತಿದ್ದರು, ಅದರೆ ಸಂಜೆ ಕೆಲಸ ಮುಗಿಸಿಕೊಂಡು ಬರುವ ವೇಳೆಗೆ ನಮ್ಮ ಕ್ಲಿನಿಕ್ ಮುಚ್ಚಲಾಗುತ್ತಿತ್ತು, ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸಮಯವನ್ನು ಬದಲಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ, ಇದನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭಿಸಲಾಗಿರುವ ನಮ್ಮ ಕ್ಲಿನಿಕ್‌ಗಳಿಗೂ ಅನ್ವಯಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ, ಈಗ ನಮ್ಮ ಕ್ಲಿನಿಕ್‌ಗಳು ೧೨ ಗಂಟೆ ಕಾಲ ಕಾರ್ಯನಿರ್ವಹಿಸಲಿವೆ, ಇದರಿಂದ ಜನರಿಗೆ ಅನುಕೂಲವಾಗಲಿದೆ, ಈಗಾಗಲೇ ನಮ್ಮ ಕ್ಲಿನಿಕ್‌ಗಳಲ್ಲಿ ಸಾವಿರಾರು ಮಂದಿ ತಪಾಸಣೇ ಮಾಡಿಸಿಕೊಳ್ಳುತ್ತಿದ್ದಾರೆ, ಈಗ ಸಮಯ ಬದಲಾವಣೆ ಮಾಡಿರುವದರಿಂದ ಮುಂದಿನ ದಿನಗಳಲ್ಲಿ ತಪಾಸಣೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಮಾಹಿತಿ ನೀಡಿದರು,