ಬೆಂಗಳೂರು
ನಮ್ಮ ಪಕ್ಷದ್ದು ಸರಿಮಾಡಿಕೊಳ್ತೇವೆ, ಮೊದಲು ಅವರದ್ದು ನೋಡಿಕೊಳ್ಳಲಿ: ಪ್ರತಿಪಕ್ಷಗಳಿಗೆ ಪರಮೇಶ್ವರ್ ಟಾಂಗ್ – G Parameshwar

ಬೆಂಗಳೂರು: ಅವರಲ್ಲಿನ ಜಗಳವನ್ನು ಮೊದಲು ಸರಿ ಮಾಡಿಕೊಳ್ಳಲಿ, ನಮ್ಮ ಪಕ್ಷದ್ದನ್ನು ನಾವು ಸರಿಮಾಡಿಕೊಳ್ಳುತ್ತೇವೆ ಎಂದು ಪ್ರತಿಪಕ್ಷ ನಾಯಕರಿಗೆ ಗೃಹ ಸಚಿವ ಜಿ.ಪರಮೇಶ್ವರ್ ಟಾಂಗ್ ಕೊಟ್ಟರು.
‘ನಮ್ಮ ಪಕ್ಷದ ವಿಚಾರ ಅವರಿಗೇಕೆ?’: ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಸರ್ಕಾರದ ಸ್ಥಿರತೆ ಬಗ್ಗೆ ಆರ್.ಅಶೋಕ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮ ಪಕ್ಷದ ವಿಚಾರ ಅವರಿಗೇಕೆ?. ಅವರಲ್ಲಿನ ಜಗಳವನ್ನು ಮೊದಲು ಸರಿಮಾಡಿಕೊಳ್ಳಲಿ. ನಮ್ಮ ಪಕ್ಷದ್ದನ್ನು ನಾವು ಸರಿಪಡಿಸಿಕೊಳ್ತೇವೆ ಎಂದು ತಿರುಗೇಟು ಕೊಟ್ಟರು.
‘ಸಿಎಂ ಹುದ್ದೆಯ ಕುರಿತು ಈಗಲೇ ಚರ್ಚೆ ಅಗತ್ಯವಿಲ್ಲ’: ಮುಂದೊಮ್ಮೆ ನಾನು ಸಿಎಂ ಆಗ್ತೇನೆ ಎಂಬ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ, ಇವತ್ತಿಗೆ ಆ ಪ್ರಶ್ನೆ ಬರಲ್ಲ, ಸಿಎಂ ಇದ್ದಾರೆ. ಕೋರ್ಟ್‌ನಲ್ಲಿ ಕೇಸ್ ಇದೆ ನಿಜ. ಏನಾಗುತ್ತೆ ಅಂತ ಕೋರ್ಟ್ ತೀರ್ಪಿನಿಂದ ಗೊತ್ತಾಗುತ್ತದೆ. ಸಿಎಂ ಹುದ್ದೆಗಾಗಿ ಈಗಲೇ ಚರ್ಚೆ ಮಾಡುವ ಅಗತ್ಯವಿಲ್ಲ. ನಾನು ಎಂ.ಬಿ.ಪಾಟೀಲ್ ಮೆನೆಗೆ ಹೋಗಿದ್ದು ಸಕಲೇಶಪುರ ಪ್ರೋಗ್ರಾಂ ಸಲುವಾಗಿ. ಇದಕ್ಕೆಲ್ಲಾ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸಿಎಂ ಕೇಸ್‌ನಿಂದ ಆಡಳಿತದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.
‘ಸರ್ಕಾರದ ಕೆಲಸಗಳು ನಡೆಯುತ್ತಿವೆ’: ನಾವೆಲ್ಲಾ ನಮ್ಮ ನಮ್ಮ ಇಲಾಖೆಯ ಕೆಲಸ ಮಾಡುತ್ತಿದ್ದೇವೆ. ಯಾರೂ ಸುಮ್ಮನೆ ಕೂತಿಲ್ಲ. ಸಿಎಂ ಸ್ವಾಭಾವಿಕವಾಗಿ ಇಂದು ಯಾವ ಕೆಲಸಗಳನ್ನೂ ಹಾಕಿಕೊಂಡಿಲ್ಲ. ಇವತ್ತು ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಕಳೆದ ಬಾರಿ ಕೂಡ ಯಾವ ಕಾರ್ಯಕ್ರಮಕ್ಕೂ ಅನುಮತಿ ಕೊಟ್ಟಿರಲಿಲ್ಲ. ಸರ್ಕಾರದಲ್ಲಿ ಯಾವ ಕೆಲಸ ನಿಂತಿದೆ? ಯಾವ ಅಧಿಕಾರಿ ಆಫೀಸಿಗೆ ಹೋಗಿಲ್ಲ ಹೇಳಿ?. ಎಲ್ಲ ಕೆಲಸಗಳೂ ನಡೆಯುತ್ತಿವೆ ಎಂದು ಸಮರ್ಥಿಸಿಕೊಂಡರು.
ದರ್ಶನ್ ಪ್ರಕರಣ: ದರ್ಶನ್ ಮತ್ತು ತಂಡದ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾಗುತ್ತಿರುವ ವಿಚಾರವಾಗಿ ಮಾತನಾಡುತ್ತಾ, ಇದು ಕಾನೂನು ಪ್ರಕಾರ ತೀರ್ಮಾನ ಆಗುತ್ತೆ. 17 ಮಂದಿ ಜಾಮೀನು ಕೇಳಿಕೊಂಡಿದ್ದಾರೆ. ಕೋರ್ಟ್‌ನಲ್ಲಿ ಏನು ತೀರ್ಮಾನ ಆಗುತ್ತೋ ಕಾದು ನೋಡೋಣ ಎಂದರು.
ಎತ್ತಿನಹೊಳೆ ಯೋಜನೆ: ಕೇಂದ್ರ ಅರಣ್ಯ ಪರಿಸರ ತಾಪಮಾನ ಮಂಡಳಿಯಿಂದ ಎತ್ತಿನಹೊಳೆ ಕಾರ್ಯಸಾಧ್ಯತಾ ವರದಿ ಕೇಳಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಈಗಾಗಲೇ ಯೋಜನೆಯ ಕೆಲಸ ಪ್ರಾರಂಭವಾಗಿದೆ. ಬಯಲುಸೀಮೆಗೆ ನೀರು ಬರುವ ಕೆಲಸ ಕಾರ್ಯಗಳು ನಡೆಯುತ್ತಿವೆ. ಅರಣ್ಯ ನಾಶ ಮಾಡದೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅದಕ್ಕೆ ಸಂಬಂಧಪಟ್ಟ ಇಲಾಖೆ ಉತ್ತರ ಕೊಡುತ್ತದೆ ಎಂದು ತಿಳಿಸಿದರು.
ಅಧೀಕ್ಷಕ ಆತ್ಮಹತ್ಯೆ ಯತ್ನ ಪ್ರಕರಣ: ಕಲಬುರಗಿಯಲ್ಲಿ ಅಧೀಕ್ಷಕ ಆತ್ಮಹತ್ಯೆ ಯತ್ನ ವಿಚಾರಕ್ಕೆ, ಯಾವ ಹಂತದಲ್ಲಿ, ಯಾರು ಹಣ ಕೇಳ್ತಿದ್ದಾರೆ?. ಡೆತ್ ನೋಟಲ್ಲಿ ಏನು ಬರೆದಿದ್ದಾರೆ?. ಯಾರು ಭಾಗಿಯಾಗಿದ್ದಾರೆ?. ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಬೆಂಗಳೂರು
ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: ಕಿತ್ತೂರು ಕೋಟೆ ಮತ್ತು ರಾಣಿ ಚೆನ್ನಮ್ಮನ ಆಕರ್ಷಕ ಪ್ರತಿಕೃತಿಗಳು

ಬೆಂಗಳೂರು: ಲಾಲ್‌ಬಾಗ್ ಉದ್ಯಾನದಲ್ಲಿ ನಾಳೆ ಆಗಸ್ಟ್ 7ರಿಂದ 18ರವರೆಗೆ ನಡೆಯಲಿರುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಈ ವರ್ಷದ ಪ್ರಮುಖ ಆಕರ್ಷಣೆ ಎಂದರೆ ಗಾಜಿನ ಮನೆಯಲ್ಲಿ ಸ್ಥಾಪಿಸಿರುವ ಕಿತ್ತೂರು ಕೋಟೆ ಮತ್ತು ರಾಣಿ ಚೆನ್ನಮ್ಮನವರ ಐಕ್ಯ ಮಂಟಪದ ಪ್ರತಿಕೃತಿಗಳು.
ತೋಟಗಾರಿಕೆ ಇಲಾಖೆ ವಿವಿಧ ರೀತಿಯ ಆಕರ್ಷಕ ಹೂವುಗಳಿಂದ ಗಾಜಿನ ಮನೆಯನ್ನು ಅಲಂಕಾರಗೊಳಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳು ಬಣ್ಣ ಬಣ್ಣದ ಹೂಸಸಿಗಳೊಂದಿಗೆ ಶೃಂಗಾರಗೊಂಡಿವೆ. ಈ ಪ್ರದರ್ಶನದಲ್ಲಿ ಆಂಥೋರಿಯಂ, ಗುಲಾಬಿ, ಆರ್ಕಿಡ್, ಜರ್ಬೇರಾ ಮತ್ತು ಸುಗಂಧ ರಾಜ ಸೇರಿದಂತೆ ಹಲವಾರು ಶೀತ ವಲಯದ ಹೂಗಳು ನೋಡುಗರ ಕಣ್ಮನ ಸೆಳೆಯಲಿವೆ.
ಬೋನ್ಸಾಯ್ ವನವನ್ನು ನವೀಕರಿಸಿ ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ವಿಶೇಷ ಬೋನ್ಸಾಯ್ ಸಸಿಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಜೊತೆಗೆ ಇಕೆಬಾನಾ, ತರಕಾರಿ ಕೆತ್ತನೆ ಪ್ರದರ್ಶನ, ತೋಟಗಳ ಸ್ಪರ್ಧೆ ಮತ್ತು ನಾನಾ ಹೂವಿನ ಜೋಡಣೆ ಕಲೆಯ ಪ್ರದರ್ಶನವೂ ಈ ಶೋನಲ್ಲಿ ಒಳಗೊಂಡಿವೆ.
ಸುಮಾರು 2.5 ಲಕ್ಷದಿಂದ 3 ಲಕ್ಷ ಹೂವುಗಳಿಂದ ನಿರ್ಮಿತವಾಗಿರುವ ಗಾಜಿನ ಮನೆಯಲ್ಲಿ, 18 ಅಡಿ ಎತ್ತರ ಮತ್ತು 32 ಅಡಿ ಅಗಲದ ಕಿತ್ತೂರಿನ ಕೋಟೆ ಪ್ರತಿಕೃತಿ ಸ್ಥಾಪಿಸಲಾಗಿದೆ. ಇದರ ಮುಂಭಾಗದಲ್ಲಿ ಅಶ್ವಾರೂಢ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳು ಹಾಗೂ ಹಿಂಭಾಗದಲ್ಲಿ ಐಕ್ಯ ಮಂಟಪದ ಪ್ರತಿಕೃತಿ ಇದೆ.
ಪ್ರವೇಶ ಶುಲ್ಕ:
- ಸಾಮಾನ್ಯ ದಿನ: ₹80
- ರಜಾದಿನಗಳು ಮತ್ತು ವಾರಾಂತ್ಯ: ₹100
ಈ ಪ್ರದರ್ಶನವು ನೈಸರ್ಗಿಕ ಸೌಂದರ್ಯ ಹಾಗೂ ಐತಿಹಾಸಿಕ ಮಹತ್ವವನ್ನು ಒಗ್ಗೂಡಿಸುವ ಅತ್ಯುತ್ತಮ ವೇದಿಕೆಯಾಗಿದ್ದು, ಸಾರ್ವಜನಿಕರು ಹೆಚ್ಚಾಗಿ ಭಾಗವಹಿಸುವ ನಿರೀಕ್ಷೆಯಿದೆ.
ಬೆಂಗಳೂರು
ಅಲ್ಪಸಂಖ್ಯಾತರ ಸಾಮೂಹಿಕ ವಿವಾಹಕ್ಕೆ ₹50,000 ಸಹಾಯಧನ: ಜಮೀರ್ ಅಹ್ಮದ್ ಘೋಷಣೆ

ಬೆಂಗಳೂರು:
ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ಸಾಮೂಹಿಕ ವಿವಾಹಗಳಿಗೆ ಇನ್ಮುಂದೆ ಸರ್ಕಾರದಿಂದ ₹50,000 ಸಹಾಯಧನ ಸಿಗಲಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಘೋಷಿಸಿರುವ ಬಜೆಟ್ ಯೋಜನೆಗೆ ಈಗ ಅನುಮೋದನೆ ಲಭಿಸಿದ್ದು, ಈ ನಿಟ್ಟಿನಲ್ಲಿ ಬಡ ಅಲ್ಪಸಂಖ್ಯಾತರಿಗೆ ಸಹಾಯ ಮಾಡಲು ಸರ್ಕಾರ ಸಜ್ಜಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು:
ಮೌಲಾನಾ ಅಬ್ದುಲ್ ಕಲಾಂ ಸ್ಕೂಲ್ ಸೇರಿದಂತೆ ಪ್ರತಿಭಾವಂತ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಗುತ್ತಿದೆ. ಈಗಾಗಲೇ 214 ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಲ್ಯಾಪ್‌ಟಾಪ್ ವಿತರಣೆ ನಡೆಸಲಾಗಿದೆ.
ಮದರಸಾಗಳಲ್ಲಿ ಕನ್ನಡ ಕಲಿಕೆ:
ಮದರಸಾಗಳಲ್ಲಿ ಕನ್ನಡ ಕಲಿಕೆ ಆರಂಭಿಸುವ ಯೋಜನೆಯೊಂದಿಗೆ, ಮೊದಲ ಹಂತದಲ್ಲಿ 200 ಮೌಲ್ವಿಗಳನ್ನು ಆಯ್ಕೆ ಮಾಡಲಾಗಿದೆ. ಮೂವರು ತಿಂಗಳಲ್ಲಿ ಅವರಿಗೆ ಕನ್ನಡ ಭಾಷಾ ತರಬೇತಿ ನೀಡಲಾಗುವುದು.
2,000 ಮದರಸಾಗಳಿಗೆ ಕನ್ನಡ ಪಾಠ್ಯಕ್ರಮ:
ರಾಜ್ಯದಲ್ಲಿ 2 ಸಾವಿರ ಮದರಸಾಗಳಿಗೆ ಕನ್ನಡ ಕಲಿಕೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಅಲ್ಪಸಂಖ್ಯಾತ ಆಯೋಗ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅಧ್ಯಕ್ಷ ಯು. ನಿಸಾರ್ ಅಹಮದ್ ಹೇಳಿದ್ದಾರೆ. very soon ಈ ಪಾಠ್ಯಕ್ರಮ ಮುದ್ರಣಕ್ಕೂ ಕ್ರಮ ಜರಗಲಿದೆ.
ಬೆಂಗಳೂರು
ಸು ಫ್ರಮ್ ಸೋ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಸೆನ್ಸೇಷನ್: ಶ್ರಾವಣದ ಹಬ್ಬಕ್ಕೂ ಮುನ್ನ ಧನಲಕ್ಷ್ಮೀ ವರ!

ಬೆಂಗಳೂರು: ಶ್ರಾವಣ ತಿಂಗಳು ಅಂದ್ರೆ ಬಂಗಾರದ ತಿಂಗಳು. ಮನೆಮಾಲೀಕರಿಗೆ ವರಮಹಾಲಕ್ಷ್ಮೀ ಹಬ್ಬ, ಕನ್ನಡ ಚಿತ್ರರಂಗಕ್ಕೆ “ಸು ಫ್ರಮ್ ಸೋ” ಚಿತ್ರದ ಯಶಸ್ಸು! ರಾಜ್ ಬಿ.ಶೆಟ್ಟಿ ಅಭಿನಯದ ಈ ಹಾರರ್-ಕಾಮಿಡಿ ಸಿನಿಮಾ ಇದೀಗ ಮೂರನೇ ವಾರದಲ್ಲೂ ಭರ್ಜರಿಯಾಗಿ ಓಡುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹವಾ ಸೃಷ್ಟಿಸಿದೆ.
ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಂಟೆಂಟ್ ಹೊಂದಿರುವ ಸಿನಿಮಾಗಳಿಗೆ ಅಭಿಮಾನಿಗಳ ಮೆಚ್ಚುಗೆ ಹೆಚ್ಚಾಗುತ್ತಿದೆ. ‘ಎಕ್ಕ’, ‘ಜೂನಿಯರ್’ ನಂತರ ‘ಸು ಫ್ರಮ್ ಸೋ’ ಕೂಡ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
75 ಲಕ್ಷ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಈಗಾಗಲೇ ₹25 ಕೋಟಿ ಕಲೆಕ್ಷನ್ ಮಾಡಿದ್ದು, ಶೀಘ್ರದಲ್ಲೇ ₹50 ಕೋಟಿ ಕ್ಲಬ್ ಸೇರುವ ಲಕ್ಷಣವಿದೆ.
ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್, ಕೇರಳ ಹಾಗೂ ವಿದೇಶಗಳಲ್ಲೂ ರಿಲೀಸ್ ಆದ ಈ ಸಿನಿಮಾ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಪಡೆಯುತ್ತಿದೆ. ರಾಜ್ ಬಿ.ಶೆಟ್ಟಿ ಹಾಗೂ ನಿರ್ದೇಶಕ ಜೆ.ಪಿ. ತುಮಿನಾಡ್ ಅವರ ಶ್ರದ್ಧೆ ಫಲ ನೀಡಿದ್ದು, “ಬಂದರೋ ಬಂದರು.. ಬಾವ ಬಂದರು” ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ.
ಇನ್ನು ಮಲಯಾಳಂ ಡಬ್ಬಿಂಗ್ ಆಗಿ ಆಗಸ್ಟ್ 1ರಂದು ಬಿಡುಗಡೆಗೊಂಡ ‘ಸು ಫ್ರಮ್ ಸೋ’ ಚಿತ್ರ, ಕೊಚ್ಚಿಯಲ್ಲಿ ಒಂದೇ ದಿನ 8 ಸಾವಿರ ಟಿಕೆಟ್ ಮಾರಾಟ ಮಾಡಿದ ದಾಖಲೆ ಸ್ಥಾಪಿಸಿದೆ. ಆದುದರಿಂದ, ಚಿತ್ರದ ಬಯೋಪಿಕ್ ಮತ್ತಷ್ಟು ಭಾಷೆಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ