Blog
ಮೋದಿಯವರ ಟೋಪಿ, ಶೂ ಹರಾಜು! ನೀವೂ ಕೊಳ್ಳಬೇಕೇ ? ಜಸ್ಟ್ ಹೀಗೆ ಮಾಡಿ.!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 74ನೇ ಹುಟ್ಟುಹಬ್ಬದ ಪ್ರಯುಕ್ತ ಬಂದ ಉಡುಗೊರೆ ಹಾಗೂ ವಿವಿಧ ಸಂದರ್ಭದಲ್ಲಿ ಸ್ವೀಕರಿಸಿರುವ ಉಡುಗೊರೆಗಳು ಹರಾಜು ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ಬಂದ ಹಣದಲ್ಲಿ ಗಂಗಾ ನದಿಯ ಸ್ವಚ್ಛತೆಗೆ ಬಳಕೆ ಮಾಡಲಾಗುವುದು ಎಂದು ವರದಿಯಾಗಿದೆ, ಅಯೋದ್ಯೆಯ ರಾಮ ಮಂದಿರ ಪ್ರತಿಕೃತಿ, ಪ್ಯಾರಾಲಿಂಪಿಕ್ಸ್ ನೆನಪಿನ ಕಾಣಿಕೆ, ಬೆಳ್ಳಿ ವೀಣೆ, ಕ್ರೀಡಾ ಶೂ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಂದಿರುವ 600 ಕ್ಕೂ ಹೆಚ್ಚು ಉಡುಗೊರೆಗಳ ಹರಾಜು ಪ್ರಕ್ರಿಯೆ ಸೆ.17 ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿದೆ,
ಈ ಎಲ್ಲಾ ವಸ್ತುಗಳ ಒಟ್ಟು ಮೂಲ ಬೆಲೆ 1.5 ಕೋಟಿ ರೂ ಎಂದು ಅಂದಾಜಿಸಲಾಗಿದ್ದು, ಸ್ಮರಣಿಕೆಗಳ ಮೂಲ ಬೆಲೆ 600 ರಿಂದ 8.26 ಲಕ್ಷದ ವರೆಗೆ ಇರುತ್ತದೆ ಎಂದು ತಿಳಿದುಬಂದಿದೆ,
ಈ ಬಗ್ಗೆ ಸ್ವತಃ ಮೋದಿಯವರೇ ಪ್ರತಿಕ್ರಿಯಿಸಿದ್ದು ನಾನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸ್ವೀಕರಿಸುವ ವಿವಿಧ ಸ್ಮರಣಿಕೆಗಳನ್ನು ಹರಾಜು ಹಾಕುತ್ತೇನೆ, ಹರಾಜಿನ ಆದಾಯವು ನಮಾಮಿ ಗಂಗೆ ಉಪಕ್ರಮಕ್ಕೆ ಬಳಸಿಕೊಳ್ಳಲಾಗುವುದು, ಈ ವರ್ಷದ ಹರಾಜು ಪ್ರಾರಂಭವಾಗಿದೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ, ನಿಮಗೆ ಆಸಕ್ತಿದಾಯಕವೆಂದು ತೋರುವ ಸ್ಮರಣಿಕೆಗಳಿಗಾಗಿ ಬಿಡ್ ಮಾಡಿ ಎಂದು ಪೋಸ್ಟ್ ಮಾಡಿದ್ದಾರೆ,
ಈ ಲಿಂಕ್ ಮೂಲಕ ನೀವು ಹರಾಜಿನಲ್ಲಿ ಭಾಗವಹಿಸಬಯಸುವರು
https://pmmementos.gov.in/
ಹರಾಜಿನಲ್ಲಿ ಭಾಗವಹಿಸುವುದು ಹೇಗೆ?
ಲಿಂಕ್‍ನಲ್ಲಿ ನೋದಾಯಿಸಿ, ಲಾಗಿನ್ ಆಗಿ ಆಧಾರ್ ದೃಢೀಕರಣ ಮಾಡಿ, ವಸ್ತುಗಳನ್ನು ವೀಕ್ಷಿಸಲು ಬ್ರೌಸ್ ಮಾಡಿ, ವಸ್ತುವನ್ನು ಕಾರ್ಟ್ ಗೆ ಹಾಕಿ, ಹರಾಜಿನಲ್ಲಿ ಭಾಗವಹಿಸಿ, ಹಣ ಪಾವತಿಸಿ
ಅ
Blog
ಬೆಂಗಳೂರಿನಲ್ಲಿ ಕಸ ಎಸೆದ ಯುವತಿಯರಿಗೆ ಜಿಬಿಎ ದಂಡದ ಬಿಸಿ – ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ಕೃತ್ಯ!
ಬೆಂಗಳೂರು: ನಗರದಲ್ಲಿ ಎಲ್ಲೆಲ್ಲಿ ನೋಡಿದರೂ ಕಸ ಬೀಸಾಡುವವರ ವಿರುದ್ಧ ಜಿಬಿಎ (BBMP) ಸಮರ ಸಾರಿದ್ದು, ಇದೀಗ ಮೈಕೋ ಲೇಔಟ್ ಪ್ರದೇಶದಲ್ಲಿ ಕಸ ಎಸೆದ ಇಬ್ಬರು ಯುವತಿಯರಿಗೆ ದಂಡದ ಬಿಸಿ ಮುಟ್ಟಿಸಿದೆ.
ಮೈಕೋ ಲೇಔಟ್‌ನಲ್ಲಿ ಸ್ಥಳೀಯರು ರಸ್ತೆ ಬದಿಯಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಆದರೂ, ಯುವತಿಯೊಬ್ಬಳು ಕಸ ಎಸೆದಿದ್ದು, ಮತ್ತೊಬ್ಬಳು ಕ್ಯಾಮೆರಾ ಮುಂದೆ ನಿಂತು ಡ್ಯಾನ್ಸ್ ಮಾಡುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಈ ದೃಶ್ಯಗಳನ್ನು ಗಮನಿಸಿದ ಮನೆಯ ಮಾಲೀಕರು ತಕ್ಷಣ ಜಿಬಿಎ ಮಾರ್ಷಲ್‌ಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಸ ಎಸೆದ ಯುವತಿಯರಿಗೆ ₹1,000 ದಂಡ ವಿಧಿಸಿದ್ದಾರೆ. ಮುಂದಿನ ಬಾರಿ ಇದೇ ತಪ್ಪು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಸ್ಥಳೀಯರು ಹೇಳುವಂತೆ, ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ಕೆಲವರು ಕಸ ಎಸೆದು ರಸ್ತೆ ಬದಿಯನ್ನು ಡಂಪಿಂಗ್ ಯಾರ್ಡ್ ಆಗಿ ಪರಿವರ್ತಿಸಿದ್ದರು. ಹಲವು ಬಾರಿ ಬುದ್ದಿಮಾತು ಹೇಳಿದರೂ ಯಾರೂ ಕೇಳದ ಹಿನ್ನೆಲೆಯಲ್ಲಿ ಸ್ಥಳೀಯರು ಸಿಸಿಟಿವಿ ಅಳವಡಿಸಲು ಮುಂದಾಗಿದ್ದರು. ಈಗ ಈ ಕ್ರಮದಿಂದ ತಪ್ಪಿತಸ್ಥರನ್ನು ಪತ್ತೆಹಚ್ಚಿ ದಂಡ ವಿಧಿಸಲಾಗಿದೆ.
ನಗರದ ಸ್ವಚ್ಛತೆಗೆ ಜಿಬಿಎ ನೀಡುತ್ತಿರುವ ಒತ್ತಾಯಕ್ಕೆ ಇದು ಮತ್ತೊಂದು ಉದಾಹರಣೆ ಆಗಿದ್ದು, ನಾಗರಿಕರ ಸಹಕಾರದಿಂದಲೇ ‘ಸ್ವಚ್ಛ ಬೆಂಗಳೂರು’ ಕನಸು ನಿಜವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Blog
ಬೆಂಗಳೂರು ರಸ್ತೆಯಲ್ಲಿ ಭೀತಿ – ಪೆಟ್ರೋಲ್ ಬಂಕ್‌ಗೆ ನುಗ್ಗಿದ ಮಿನಿ ಟ್ರಕ್
ಬೆಂಗಳೂರು (ಅ.08): ಚಾಮರಾಜಪೇಟೆ ಮುಖ್ಯರಸ್ತೆಯ ನಯಾರಾ ಪೆಟ್ರೋಲ್ ಬಂಕ್‌ನಲ್ಲಿ ಇಂದು ಬೆಳಿಗ್ಗೆ ಒಂದು ಮಿನಿ ಟ್ರಕ್ ನಿಯಂತ್ರಣ ತಪ್ಪಿ ನುಗ್ಗಿದ ಭೀತಿದಾಯಕ ಘಟನೆ ನಡೆದಿದೆ.
ಸನ್‌ಪ್ಯೂರ್ ಎಣ್ಣೆ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ, ಪೆಟ್ರೋಲ್ ಬಂಕ್‌ನ ಶೌಚಾಲಯ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಒಂದು ಬೈಕ್ ಸಂಪೂರ್ಣ ಜಖಂಗೊಂಡಿದೆ.
ಘಟನೆ ಚಾಮರಾಜಪೇಟೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಬಂಕ್ ಆವರಣದ ಕೆಲವು ಭಾಗಗಳು ಹಾನಿಗೊಳಗಾಗಿವೆ.
Blog
“ಅಕ್ಟೋಬರ್ ಅಂತ್ಯದೊಳಗೆ ಗುಂಡಿಗಳೇ ಇಲ್ಲದ ಬೆಂಗಳೂರು ಬೇಕು!” – ಸಿಎಂ ಸಿದ್ದರಾಮಯ್ಯನಿಂದ ಕಠಿಣ ಎಚ್ಚರಿಕೆ
ಬೆಂಗಳೂರು: ರಾಜಧಾನಿ ಬೆಂಗಳೂರು ನಗರದ ರಸ್ತೆ ಗುಂಡಿಗಳ ಸಮಸ್ಯೆ ಇತ್ತೀಚೆಗೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ನಿತ್ಯ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿ ತುರ್ತು ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.
ಬೆಂಗಳೂರು ಮಹಾನಗರ ಪಾಲಿಕೆ (BBMP) ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದು, ಒಬ್ಬ ತಿಂಗಳ ಗಡುವಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಶಿಥಿಲ ತಂತ್ರಜ್ಞಾನ ಅಥವಾ ಜವಾಬ್ದಾರಿ ತೋರದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಎಚ್ಚರಿಸಿದ್ದಾರೆ.
🔍 ಸಭೆಯಲ್ಲಿ ಮುಖ್ಯ ಸೂಚನೆಗಳು:
- BBMP ವ್ಯಾಪ್ತಿಯಲ್ಲಿ 14,795 ಗುಂಡಿಗಳ ಪಟ್ಟಿ: ಈಗಾಗಲೇ 6,749 ಗುಂಡಿಗಳು ಮುಚ್ಚಲ್ಪಟ್ಟಿದ್ದು, 8,046 ಇನ್ನೂ ಬಾಕಿ
- JETPATCHER ತಂತ್ರಜ್ಞಾನ ಬಳಸುವ ಯೋಜನೆ: ತೇವಾಂಶದಲ್ಲೂ ಗುಂಡಿ ಮುಚ್ಚುವ ಸಾಧ್ಯತೆ
- ವೈಟ್‌ಟಾಪಿಂಗ್ ಕಾಮಗಾರಿ: 108.20 ಕಿ.ಮೀ ಪೂರ್ಣ, 143.68 ಕಿ.ಮೀ ಪ್ರಗತಿಯಲ್ಲಿ
- 2025-26 ನೇ ಬಜೆಟ್‌ನಲ್ಲಿ 18 ಕೋಟಿ ರೂ ಅನುದಾನ: ಗುಂಡಿ ಮುಚ್ಚುವ ಕಾರ್ಯಕ್ಕೆ
- BBMP, BDA, BMRCL, BWSSB ಸಮನ್ವಯ ಅಗತ್ಯ: ಪ್ರತಿ ವಾರ 5 ವಲಯಗಳ ಪರಿಶೀಲನೆ
- 25 ಕೋಟಿ ರೂ ತುರ್ತು ಅನುದಾನ ಬಿಡುಗಡೆ: ಎಲ್ಲಾ ನಗರ ಪಾಲಿಕೆಗಳಿಗೆ
- ಅಕ್ಟೋಬರ್ ಅಂತ್ಯ ಗಡುವು: ಎಲ್ಲ ಗುಂಡಿಗಳನ್ನು ಮುಚ್ಚುವ ಅಂತಿಮ ಡೆಡ್‌ಲೈನ್
-
ಬಿಬಿಎಂಪಿ7 months agoತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years agoವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years agoಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years agoಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years agoGruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು2 years agoನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು1 year agoಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years agoದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ
