ದೇಶ
ರಜನಿಕಾಂತ್ ಸುಪ್ರೀಮ್ ಆಫ್ ಆಲ್ ಸ್ಟಾರ್ಸ್’ ಎಂದ ಬಿಗ್ ಬಿ: ‘ಅಮಿತಾಭ್ ನೋಡಿ ಬಾಲಿವುಡ್ ನಕ್ಕ ದಿನ’ಇತ್ತೆಂದ ನಟ – Vettaiyan Prevue and Audio Launch
ಚೆನ್ನೈ(ತಮಿಳುನಾಡು): ಭಾರತೀಯ ಚಿತ್ರರಂಗದ ಹಿರಿಯ, ಬಹುಬೇಡಿಕೆ ನಟ ಅಮಿತಾಭ್ ಬಚ್ಚನ್ ಅವರು ಸೌತ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮೇಲೆ ಹೊಂದಿರುವ ಅಗಾಧ ಅಭಿಮಾನ ಎಲ್ಲರಿಗೂ ತಿಳಿದಿರುವ ವಿಚಾರ. ಶುಕ್ರವಾರ ಚೆನ್ನೈನಲ್ಲಿ ನಡೆದ ಬಹುನಿರೀಕ್ಷಿತ ಚಿತ್ರ ‘ವೆಟ್ಟೈಯನ್’ನ ಪ್ರಿವ್ಯೂ ಮತ್ತು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಇದು ಮತ್ತೊಮ್ಮೆ ಸಾಬೀತಾಗಿದೆ.
ಸೆಪ್ಟೆಂಬರ್ 20ರಂದು ಚೆನ್ನೈನಲ್ಲಿ ನಡೆದ ಸಿನಿಮಾ ಪ್ರಮೋಶನ್ ಈವೆಂಟ್ಗೆ ಬಿಗ್ ಬಿ ಆಗಮಿಸಲು ಸಾಧ್ಯವಾಗಿಲ್ಲವಾದರೂ, ಹೃದಯಸ್ಪರ್ಶಿ ವಿಡಿಯೋ ಸಂದೇಶದ ಮೂಲಕ ಅಭಿಮಾನಿಗಳು ಮತ್ತು ಚಿತ್ರತಂಡದೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ‘ವೆಟ್ಟೈಯನ್’ನ ಪ್ರಿವ್ಯೂ ಮತ್ತು ಆಡಿಯೋ ರಿಲೀಸ್ ಈವೆಂಟ್‌ನ ಕೆಲ ಹೈಲೆಟ್ಸ್ ಇಲ್ಲಿವೆ.
ಸುಪ್ರೀಮ್ ಆಫ್ ಆಲ್ ಸ್ಟಾರ್ಸ್’: ಬಿಗ್ ಬಿ
ತಮ್ಮ ವಿಡಿಯೋದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರು ದಕ್ಷಿಣ ಚಿತ್ರರಂಗದ ಹೆಸರಾಂತ ನಟ ರಜನಿಕಾಂತ್ ಅವರನ್ನು “ಸುಪ್ರೀಮ್ ಆಫ್ ಆಲ್ ಸ್ಟಾರ್ಸ್” ಎಂದು ಉಲ್ಲೇಖಿಸಿದ್ದಾರೆ. ಈ ಗುಣಗಾನ ಪ್ರೇಕ್ಷಕರಿಂದ ಹರ್ಷೋದ್ಗಾರ ಮತ್ತು ಚಪ್ಪಾಳೆಗಳನ್ನು ಸ್ವೀಕರಿಸಿತು. “ವೆಟ್ಟೈಯನ್ ನನ್ನ ಚೊಚ್ಚಲ ತಮಿಳು ಚಿತ್ರ, ಗೌರವಕರ ವಿಷಯ. ರಜನಿಕಾಂತ್ ಎಲ್ಲ ಸ್ಟಾರ್‌ಗಳಿಗಿಂತಲೂ ಸರ್ವೋಚ್ಛ” ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
‘ರಜನಿ ನೆಲದ ಮೇಲೆ ಮಲಗುತ್ತಿದ್ದರು’: 1991ರ ಬ್ಲಾಕ್‌ಬಸ್ಟರ್ ‘ಹಮ್’ ಚಿತ್ರದಲ್ಲಿ ರಜನಿಕಾಂತ್ ಮತ್ತು ಅಮಿತಾಭ್ ಸಹೋದರರ ಪಾತ್ರ ನಿರ್ವಹಿಸಿದ್ದರು. ವಿಡಿಯೋದಲ್ಲಿ, ಬಿಗ್ ಬಿ ಶೂಟಿಂಗ್ ಕ್ಷಣಗಳನ್ನು ನೆನಪಿಸಿಕೊಂಡರು. ಹಮ್ ಚಿತ್ರೀಕರಣದ ವೇಳೆ ನಾನು ನನ್ನ ಎಸಿ ವಾಹನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ. ರಜನಿ ಬ್ರೇಕ್ ಟೈಮ್ನಲ್ಲಿ ನೆಲದ ಮೇಲೆ ಮಲಗುತ್ತಿದ್ದರು. ಅವರ ಸರಳತೆ ನೋಡಿ ನಾನು ವಾಹನದಿಂದ ಹೊರಬಂದು ಹೊರಗೆ ವಿಶ್ರಾಂತಿ ಪಡೆದೆ ಎಂದು ಹಳೇ ನೆನಪುಗಳನ್ನು ಮೆಲುಕು ಹಾಕಿದರು.
‘ಬಿಗ್ ಬಿ ಯಶಸ್ಸಿನ ಅವನತಿಗಾಗಿ ಜಗತ್ತು ಕಾದಿತ್ತು’: ಈವೆಂಟ್ನಲ್ಲಿ, ಅಮಿತಾಭ್ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ಕೆಲ ಸವಾಲುಗಳನ್ನು ರಜನಿ ವಿವರಿಸಿದರು. “ಅಮಿತ್ ಜಿ ಸಿನಿಮಾಗಳನ್ನು ನಿರ್ಮಿಸುವ ಸಂದರ್ಭ ಅವರು ದೊಡ್ಡ ನಷ್ಟವನ್ನು ಎದುರಿಸಿದ್ದರು. ಎಷ್ಟರ ಮಟ್ಟಿಗೆಂದರೆ ತಮ್ಮ ವಾಚ್‌ಮ್ಯಾನ್‌ಗೆ ಸಂಬಳ ಪಾವತಿಸಲು ಸಹ ಸಾಧ್ಯವಾಗಲಿಲ್ಲ. ಅವರ ಜುಹು ನಿವಾಸ ಪಬ್ಲಿಕ್ ಬಿಡ್ಡಿಂಗ್‌ಗೆ ಹೋಗಿತ್ತು. ಆ ಸಂದರ್ಭ ಬಾಲಿವುಡ್ ಅವರನ್ನು ನೋಡಿ ನಗುತ್ತಿತ್ತು. ಅವರ ಯಶಸ್ಸಿನ ಅವನತಿಗಾಗಿ ಜಗತ್ತು ಕಾದಿತ್ತು” ಎಂದು ತಿಳಿಸಿದರು.
‘ದಿನಕ್ಕೆ 10 ಗಂಟೆ ಕೆಲಸ ಮಾಡುತ್ತಾರೆ’: “ಕೇವಲ ಮೂರು ವರ್ಷಗಳಲ್ಲಿ, ಅಮಿತಾಭ್ ಅವರು ಜಾಹೀರಾತುಗಳು ಮತ್ತು ಕೆಬಿಸಿ ಯಲ್ಲಿ ಕಾಣಿಸಿಕೊಂಡರು. ಎಲ್ಲ ಹಣವನ್ನು ಮರಳಿ ಗಳಿಸಿದರು. ಜುಹು ಸೇರಿದಂತೆ ಅವರ ಮೂರು ಮನೆಗಳನ್ನು ಸಹ ಮರಳಿ ಪಡೆದರು. ಅವರದ್ದು ಸ್ಫೂರ್ತಿದಾಯಕ ವ್ಯಕ್ತಿತ್ವ. 82ರ ಹರೆಯದ ಅವರು ದಿನಕ್ಕೆ 10 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ” ಎಂದು ಪ್ರಶಂಸೆಗಳ ಸುರಿಮಳೆಯನ್ನೇ ಹರಿಸಿದರು.
ತಂದೆಯ ಜನಪ್ರಿಯತೆಯನ್ನು ಬಳಸಲಿಲ್ಲ’: ಅಮಿತಾಭ್ ಕುಟುಂಬದ ಸಾಹಿತ್ಯ ಪರಂಪರೆ ಬಗ್ಗೆಯೂ ಮಾತನಾಡಿದರು. “ಅಮಿತಾಭ್ ಅವರ ತಂದೆ ಓರ್ವ ಶ್ರೇಷ್ಠ ಬರಹಗಾರರಾಗಿದ್ದರು. ಅವರು ತಮ್ಮ ತಂದೆಯ ಜನಪ್ರಿಯತೆಯನ್ನು ಸುಲಭವಾಗಿ ಬಳಸಬಹುದಿತ್ತು. ಆದರೆ ಅವರು ತಮ್ಮದೇ ಆದ ಮಾರ್ಗ ಕಂಡುಕೊಂಡರು” ಎಂದು ತಿಳಿಸಿದರು.
ಅಮಿತಾಭ್ ಆ್ಯಕ್ಸಿಡೆಂಟ್ ನೆನಪಿಸಿಕೊಂಡ ರಜನಿ: ರಜನಿ ಕೆಲ ಕಠಿಣ ಕ್ಷಣಗಳನ್ನೂ ನೆನಪಿಸಿಕೊಂಡರು. “ಒಮ್ಮೆ, ಅಮಿತಾಭ್ ಅವರು ಭೀಕರ ಅಪಘಾತಕ್ಕೊಳಗಾದರು. ಆ ವೇಳೆ, ಇಂದಿರಾ ಗಾಂಧಿ ಅವರು ಸಮ್ಮೇಳನಕ್ಕಾಗಿ ವಿದೇಶದಲ್ಲಿದ್ದರು. ಅಪಘಾತದ ಬಗ್ಗೆ ತಿಳಿದ ಕೂಡಲೇ ಅವರು ಭಾರತಕ್ಕೆ ಹಿಂತಿರುಗಿದರು. ಆಗ ರಾಜೀವ್ ಗಾಂಧಿ ಮತ್ತು ಅಮಿತಾಭ್ ಜಿ ಒಟ್ಟಿಗೆ ವಿದ್ಯಾಭ್ಯಾಸ ಪಡೆದವರು ಎಂಬುದು ಎಲ್ಲರಿಗೂ ಗೊತ್ತಾಯಿತು.
ಕುಣಿದು ಕುಪ್ಪಳಿಸಿದ ರಜನಿ: ‘ವೆಟ್ಟೈಯನ್’ನ ಪ್ರಿವ್ಯೂ ಮತ್ತು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಂಜು ವಾರಿಯರ್, ರಾಣಾ ದಗ್ಗುಬಾಟಿಯಂತಹ ಗಣ್ಯರು ಕಾಣಿಸಿಕೊಂಡರು. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ಮನಸಿಲಾಯೊ ಹಾಡಿಗೆ ಸಿಗ್ನೇಚರ್ ಸ್ಟೆಪ್ ಹಾಕಲು ರಜನಿಕಾಂತ್ ಅವರನ್ನು ಆಹ್ವಾನಿಸಿದರು. ಬ್ಲ್ಯಾಕ್ ಔಟ್ಫಿಟ್ನಲ್ಲಿದ್ದ ಸೂಪರ್ ಸ್ಟಾರ್ ವೇದಿಕೆಯಲ್ಲಿ ಸಖತ್ ಸ್ಟೆಪ್ ಹಾಕಿದರು. ಅನಿರುದ್ಧ್ ಅವರ ಗಾಯನ ಈವೆಂಟ್‌ನ ಉತ್ಸಾಹ ಹೆಚ್ಚಿಸಿತ್ತು. ರಜನಿಕಾಂತ್ ಡ್ಯಾನ್ಸ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
ದೇಶ
“ಯತೀಂದ್ರಗೆ ಮಿನಿಮಮ್ ಕಾಮನ್ ಸೆನ್ಸ್ ಇಲ್ಲ” – ಶಾಸಕ ಬಾಲಕೃಷ್ಣ ತೀವ್ರ ವಾಗ್ದಾಳಿ
ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಮಾಗಡಿ ಶಾಸಕ ಬಾಲಕೃಷ್ಣ ಕಿಡಿಕಾರಿದ್ದಾರೆ. “ಯತೀಂದ್ರ ಅವರಿಗೆ ಮಿನಿಮಮ್ ಕಾಮನ್ ಸೆನ್ಸ್ ಕೂಡ ಇಲ್ಲ” ಎಂದು ಅವರು ನೇರ ವಾಗ್ದಾಳಿ ನಡೆಸಿದರು.
ಹೈಕಮಾಂಡ್‌ನಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಯತೀಂದ್ರ ನೀಡಿದ್ದ ಹೇಳಿಕೆಗೆ ಸುವರ್ಣ ಸೌಧದಲ್ಲಿ ಪ್ರತಿಕ್ರಿಯಿಸಿದ ಬಾಲಕೃಷ್ಣ, “ದೊಡ್ಡವರಿಗೆ ಒಂದು ನ್ಯಾಯ, ಚಿಕ್ಕವರಿಗೆ ಒಂದು ನ್ಯಾಯ ಆಗುತ್ತಿದೆ. ಯತೀಂದ್ರಗೆ ನೋಟಿಸ್ ನೀಡದೇ ಇದ್ದದ್ದು ಅಸಮಾಧಾನಕಾರಿ” ಎಂದರು.
“ಈ ರೀತಿ ನಡೆಯುತ್ತಿರುವುದಕ್ಕೆ ನಮ್ಮ ಇಕ್ಬಾಲ್ ಹುಸೇನ್ ಮಾತಾಡಿದ್ರೆ ಬಲಾತ್ಕಾರ, ಯತೀಂದ್ರ ಮಾತಾಡಿದ್ರೆ ಚಮತ್ಕಾರ… ಅದನ್ನು ಅದ್ಭುತವಾಗಿ ಹೇಳಿದ್ದಾರೆ” ಎಂದು ಬಾಲಕೃಷ್ಣ ಮತ್ತಷ್ಟು ತಿರುಗೇಟು ನೀಡಿದರು.
ಇದಕ್ಕೂ ಮುಂಚೆ ಸಚಿವ ಡಿ.ಕೆ. ಶಿವಕುಮಾರ್ ಪರವಾಗಿ ಕೆಲವು ಶಾಸಕರು ನೀಡಿದ ಹೇಳಿಕೆಗಳಿಗೆ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿತ್ತು. ಆದರೆ ಈಗ ಸಿಎಂ ಪುತ್ರ ಯತೀಂದ್ರ ನೇರವಾಗಿ ತಂದೆಯ ಪರ ಬ್ಯಾಟ್ ಬೀಸಿದರೂ ಇನ್ನೂ ನೋಟಿಸ್ ನೀಡಿಲ್ಲ ಎಂಬ ಪ್ರಶ್ನೆಯನ್ನು ಡಿಕೆ ಬೆಂಬಲಿಗ ಶಾಸಕರು ಎತ್ತಿದ್ದಾರೆ.
ಬೆಳಗಾವಿ ಅಧಿವೇಶನದ ರಾಜಕೀಯ ವಾತಾವರಣ ಈ ಆರೋಪ-ಪ್ರತ್ಯಾರೋಪಗಳಿಂದ ಮತ್ತಷ್ಟು ಕಾವು ಪಡೆದಿದೆ.
ದೇಶ
ರಜನಿಕಾಂತ್ 75ನೇ ಜನ್ಮದಿನ: ಜೈಲರ್ 2 ಸೆಟ್‌ನಲ್ಲಿ ಭವ್ಯ ಸಂಭ್ರಮ
ಮುಂಬೈ/ಚೆನ್ನೈ: ಭಾರತೀಯ ಸಿನಿರಂಗದ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಇಂದು 75ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಜೈಲರ್-2 (Jailer 2) ಚಿತ್ರದ ಶೂಟಿಂಗ್ ನಡುವೆ ಸೆಟ್‌ನಲ್ಲೇ ತಲೈವ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಚಿತ್ರದ ಸಂಪೂರ್ಣ ತಂಡ ವಿಶೇಷ ಕೇಕ್ ಕತ್ತರಿಸಿ ರಜನಿಕಾಂತ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿತು.
ಸದ್ಯ ರಜನಿಕಾಂತ್ ಸನ್ ಪಿಕ್ಚರ್ಸ್ ನಿರ್ಮಾಣದ ಜೈಲರ್ ಚಿತ್ರದ ಸೀಕ್ವೆಲ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 170ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ತಲೈವ, 50 ವರ್ಷಗಳ ಸಿನಿಮಾ ಜೀವನ ಮುಗಿಸಿರುವ ಸಂದರ್ಭದಲ್ಲಿ ಈ ಹುಟ್ಟುಹಬ್ಬ ಅಭಿಮಾನಿಗಳಿಗಾಗಿ ಹೆಚ್ಚಿನ ಸಂಭ್ರಮವನ್ನು ತಂದಿದೆ.
1975ರಲ್ಲಿ ಕೆ.ಬಳಚಂದರ್ ನಿರ್ದೇಶನದ ‘ಅಪೂರ್ವ ರಾಗಂಗಳ್’ ತಮಿಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ರಜನಿಕಾಂತ್, ಅಂದಿನಿಂದಲೂ ದಕ್ಷಿಣ ಭಾರತದಷ್ಟೇ ಅಲ್ಲ ಭಾರತದೆಲ್ಲೆಡೆ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮರಾಠಿ, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಮಿಂಚಿದ ರಜನಿಕಾಂತ್ ಅವರ ಅಭಿನಯಕ್ಕೆ ಮಾಯೆ, ಶೈಲಿ ಮತ್ತು ವಿಭಿನ್ನ ಹಾವಭಾವಗಳು ಎಂದಿಗೂ ವಿಶೇಷ.
ರಜನಿಕಾಂತ್ ಹುಟ್ಟುಹಬ್ಬದ ಸಂಭ್ರಮಕ್ಕೆ ವಿಶೇಷ ಉಡುಗೊರೆಯಾಗಿ, ಅವರು ಅಭಿನಯಿಸಿ ನಿರ್ಮಿಸಿದ್ದ ‘ಪಡೆಯಪ್ಪ’ ಚಿತ್ರ ಇಂದು ರೀ-ರಿಲೀಸ್ ಆಗಿದ್ದು ಅಭಿಮಾನಿಗಳು ಸಂಭ್ರಮದಿಂದ ಥಿಯೇಟರ್‌ಗಳಿಗೆ ಧಾವಿಸಿದ್ದಾರೆ. ರಜನಿಕಾಂತ್ ಅವರ 75ನೇ ಹುಟ್ಟುಹಬ್ಬ, 50 ವರ್ಷಗಳ ಸಿನಿಮಾ ಪ್ರಯಾಣ ಮತ್ತು ಜೈಲರ್-2 ಶೂಟಿಂಗ್—all combine ಆಗಿ ಅಭಿಮಾನಿಗಳ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿವೆ.
ದೇಶ
ಅಧಿವೇಶನದ ನಂತರ ಡಿಕೆಶಿ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ಬೆಳಗಾವಿ: “ಸಂಕ್ರಾಂತಿಯಲ್ಲ, ಅಧಿವೇಶನ ಮುಗಿದ ಕೂಡಲೇ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ” ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಬೆಳಗಾವಿ ಸುವರ್ಣಸೌಧದಲ್ಲಿ ಸ್ಪಷ್ಟಪಡಿಸಿದ್ದಾರೆ.
“ನನ್ನ ಹಣೆಯಲ್ಲಿ ಬರೆದಿದ್ದಕ್ಕೆ ನಾನು ಶಾಸಕನಾಗಿದ್ದೇನೆ. ಹಾಗೆಯೇ ಡಿ.ಕೆ. ಶಿವಕುಮಾರ್ ಅವರ ಹಣೆಯಲ್ಲಿ ಸಿಎಂ ಸ್ಥಾನ ಬರೆದಿದೆ. ಅವರು ಖಚಿತವಾಗಿ ಸಿಎಂ ಆಗುತ್ತಾರೆ” ಎಂದು ಇಕ್ಬಾಲ್ ಹುಸೇನ್ ಹೇಳಿದರು. “ನಿನ್ನೆ 55 ಜನ ಶಾಸಕರು ಒಟ್ಟಿಗೆ ಊಟ ಮಾಡಿದ್ದೇವೆ. ಅದರಲ್ಲಿ ಯಾವ ರಾಜಕೀಯ ಚರ್ಚೆಯೂ ನಡೆಯಲಿಲ್ಲ. ನಮಗೆ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು, ಆಗಲೇಬೇಕು” ಎಂದರು.
“ಡಿ.ಕೆ. ಶಿವಕುಮಾರ್ ಕಷ್ಟಪಟ್ಟಿದ್ದಾರೆ, ಅದರ ಫಲ ಅವರು ಪಡೆಯಲೇಬೇಕು. ಅಧಿವೇಶನ ಮುಗಿದ ತಕ್ಷಣ ಬದಲಾವಣೆ ಸಾಧ್ಯ. ಸಂಖ್ಯಾಬಲ ಮುಖ್ಯವಲ್ಲ, ಹೈಕಮಾಂಡ್ ನಿರ್ದೇಶನೆಯೇ ಅಂತಿಮ” ಎಂದು ಅವರು ಹೇಳಿದರು.
ಡಿನ್ನರ್ ಸಭೆಯಲ್ಲಿ 50–60 ಮಂದಿ ಸೇರಿದ್ದರೂ, ಇದು ರಾಜಕೀಯ ಚರ್ಚೆಗೆ ವೇದಿಕೆ ಆಗಲಿಲ್ಲ ಎಂದು ಸ್ಪಷ್ಟಪಡಿಸಿದರು. “ಡಿ.ಕೆ. ಶಿವಕುಮಾರ್ ಕರೆದರೆ ಯಾವ ಪಕ್ಷದವರಾದರೂ ಬರುತ್ತಾರೆ. ವಿಶ್ವಾಸ, ಪ್ರೀತಿ, ಬಾಂಧವ್ಯ – ಪಕ್ಷವೇನೂ matter ಆಗೋದಿಲ್ಲ. ಕಾಂಗ್ರೆಸ್ ಶಿಸ್ತಿನ ಪಕ್ಷ” ಎಂದರು.
ಮುಖ್ಯಮಂತ್ರಿಯ ಪರವಾಗಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, “ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ನೀಡಿರುವ ಮಾರ್ಗದರ್ಶನವೇ ನಮಗೆ ಅಂತಿಮ. ನಾಯಕತ್ವ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ; ನಾನು ಡಿನ್ನರ್‌ಗೆ ಹೋಗಿರಲಿಲ್ಲ” ಎಂದು ಹೇಳಿದರು.
-
ಬಿಬಿಎಂಪಿ7 months agoತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years agoವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years agoಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years agoಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years agoGruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು2 years agoನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು1 year agoಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years agoದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ
