Connect with us

ಕ್ರೀಡೆ

ಕೊಹ್ಲಿ ಹೆಸರಿಗೆ ಸೇರಿತು ಮತ್ತೊಂದು ಕಳಪೆ ದಾಖಲೆ: 8 ವರ್ಷಗಳಲ್ಲಿ ಒಂದೇ ಒಂದು ಅರ್ಧಶತಕವಿಲ್ಲ!

Published

on

ಹೈದರಾಬಾದ್​: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಅವರ ಖಾತೆಗೆ ಕೆಟ್ಟ ದಾಖಲೆಯೊಂದು ಸೇರ್ಪಡೆಗೊಂಡಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಕೊಹ್ಲಿ ಡಕ್ ಔಟ್ ಆಗಿ ಪೆವಿಲಿಯನ್ ಸೇರಿದ್ದಾರೆ​. ಒಂಬತ್ತು ಎಸೆತಗಳನ್ನು ಎದುರಿಸಿದ ಅವರು ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ವಿಲಿಯಂ ರೌರ್ಕಿ ಬೌಲಿಂಗ್​ನಲ್ಲಿ ಕೊಹ್ಲಿ ಕ್ಯಾಚೌಟ್​ ಆಗಿ ಪೆವಿಲಿಯನ್ ಹಾದಿ ಹಿಡಿದರು.

ಸಾಮಾನ್ಯವಾಗಿ ಸೆಕೆಂಡ್ ಡೌನ್​ನಲ್ಲಿ ಬ್ಯಾಟಿಂಗ್​ಗೆ ಬರುವ ಕೊಹ್ಲಿ ಈ ಬಾರಿ ಯುವ ಬ್ಯಾಟ್ಸ್​ಮನ್ ಶುಭ್​ಮನ್ ಗಿಲ್ ಅನುಪಸ್ಥಿತಿಯಿಂದಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದರು. ಆದರೆ ಈ ಒನ್ ಡೌನ್ ಅವರಿಗೆ ಮತ್ತೊಮ್ಮೆ ಕೂಡಿ ಬರಲಿಲ್ಲ. ವಿರಾಟ್ ಕೊನೆಯ ಬಾರಿಗೆ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಒನ್ ಡೌನ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದರು. ಆ ಪಂದ್ಯದಲ್ಲೂ ಅವರು ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 3 ಮತ್ತು 4 ರನ್ ಗಳಿಸಿದ್ದರು. ಕಳೆದ 8 ವರ್ಷಗಳಲ್ಲಿ ಟೆಸ್ಟ್ ನಲ್ಲಿ ನಾಲ್ಕು ಪಂದ್ಯಗಳಲ್ಲಿ ಒನ್ ಡೌನ್​ನಲ್ಲಿ ಬ್ಯಾಟಿಂಗ್ ಮಾಡಿರುವ ಕೊಹ್ಲಿ ಈ ಕ್ರಮಾಂಕದಲ್ಲಿ ಕನಿಷ್ಠ ಒಂದು ಅರ್ಧಶತಕವನ್ನೂ ಸಿಡಿಸಿಲ್ಲ. ಅವರು ಆಡಿರುವ ಆರು ಇನ್ನಿಂಗ್ಸ್‌ಗಳಲ್ಲಿ ಒಟ್ಟು 97 ರನ್ ಮಾತ್ರ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ 41 ರನ್ ಆಗಿದೆ.

38ನೇ ಡಕ್​: ಇದು ಕೊಹ್ಲಿಯ 38ನೇ ಅಂತಾರಾಷ್ಟ್ರೀಯ ಡಕ್ ಆಗಿದೆ. ಇದು ಸದ್ಯ ಭಾರತ ವಿರುದ್ಧ ಆಡುತ್ತಿರುವ ಟಿಮ್ ಸೌಥಿ (38) ಅವರೊಂದಿಗೆ ಸಮಾನಾಗಿದೆ. ಇವರಿಬ್ಬರ ನಂತರ ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ (33) ಕೂಡ ಸೇರಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಮುತ್ತಯ್ಯ ಮುರಳಿಧರನ್ ಮುಂದಿದ್ದಾರೆ. ಅವರೂ ಆಡಿರುವ ಎಲ್ಲಾ ಸ್ವರೂಪದ ಕ್ರಿಕೆಟ್​ಗಳಲ್ಲಿ ಒಟ್ಟು 59 ಬಾರಿ ಡಕ್​ಔಟ್ ಆಗಿದ್ದಾರೆ.​

ಅತೀ ಹೆಚ್ಚು ಟೆಸ್ಟ್​ ಆಡಿದ ದಾಖಲೆ: ಟೀಂ ಇಂಡಿಯಾ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಎರಡನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 664 ಪಂದ್ಯಗಳನ್ನಾಡಿ ಅಗ್ರಸ್ಥಾನದಲ್ಲಿದ್ದರೆ, 536 ಪಂದ್ಯಗಳೊಂದಿಗೆ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ. 535 ಪಂದ್ಯಗಳನ್ನು ಆಡಿದ ಧೋನಿ 3ನೇ ಸ್ಥಾನದಲ್ಲಿದ್ದರೆ, ರಾಹುಲ್ ದ್ರಾವಿಡ್ 504 ಪಂದ್ಯಗಳೊಂದಿಗೆ ನಾಲ್ಕನೇ ಸ್ಥಾನ, ಹಾಲಿ ನಾಯಕ ರೋಹಿತ್ ಶರ್ಮಾ 486 ಪಂದ್ಯಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ನ್ಯೂಜಿಲೆಂಡ್​ ವಿರುದ್ಧ 3ನೇ ಬಾರಿಗೆ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಕೇವಲ 10 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. 1990ರ ನಂತರ ಭಾರತವು ತವರಿನಲ್ಲಿ ನಡೆದ ಪಂದ್ಯಗಳಲ್ಲಿ 10 ಅಥವಾ ಅದಕ್ಕಿಂತ ಕಡಿಮೆ ರನ್‌ಗಳಿಗೆ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಳೆದುಕೊಂಡಿರುವುದು ಇದು ಮೂರನೇ ಬಾರಿಯಾಗಿದೆ. 1999ರಲ್ಲಿ ಮೊಹಾಲಿ ಮತ್ತು 2010 ರಲ್ಲಿ ಅಹಮದಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕ್ರಮವಾಗಿ 7 ರನ್ ಮತ್ತು 2 ರನ್‌ಗಳಿಗೆ 3 ವಿಕೆಟ್​ ಕಳೆದುಕೊಂಡಿತ್ತು.

Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

ಲಿಯೋನೆಲ್ ಮೆಸ್ಸಿಯ ದಾಖಲೆಗಳ ಮಳೆ: ವಿಶ್ವಕಪ್‌ನಲ್ಲಿ ಹೊಸ ಇತಿಹಾಸ ಬರೆದ ಅರ್ಜೆಂಟೀನಾ ನಾಯಕ

Published

on

ಮಿಯಾಮಿ: ಅರ್ಜೆಂಟೀನಾದ ಫುಟ್‌ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ 2026ರ ಫಿಫಾ ವಿಶ್ವಕಪ್‌ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದಾರೆ. ಕೇಪ್ ವರ್ಡೆ ವಿರುದ್ಧ ನಡೆದ 32ರ ಹಂತದ ಪಂದ್ಯದಲ್ಲಿ ಗೋಲು ಬಾರಿಸಿದ ಮೆಸ್ಸಿ, ಫಿಫಾ ವಿಶ್ವಕಪ್ ಇತಿಹಾಸದಲ್ಲಿ 30 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಹಾಗೂ 20 ಗೋಲುಗಳನ್ನು ದಾಖಲಿಸಿದ ಮೊದಲ ಫುಟ್‌ಬಾಲಿಗ ಎಂಬ ಅಪರೂಪದ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ಶನಿವಾರ ಮಿಯಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ 3-2 ಗೋಲುಗಳ ಅಂತರದಲ್ಲಿ ಕೇಪ್ ವರ್ಡೆ ತಂಡವನ್ನು ಮಣಿಸಿ 16ರ ಘಟ್ಟಕ್ಕೆ ಪ್ರವೇಶಿಸಿತು. ಪಂದ್ಯ ಆರಂಭಿಕ 11 ಆಟಗಾರರ ಬಳಗದಲ್ಲೇ ಕಣಕ್ಕಿಳಿದ ಮೆಸ್ಸಿ, 28ನೇ ನಿಮಿಷದಲ್ಲಿ ಲಿಸಾಂಡ್ರೊ ಮಾರ್ಟಿನೆಸ್ ನೀಡಿದ ಅದ್ಭುತ ಪಾಸ್ ಅನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು.

ಈ ಗೋಲಿನೊಂದಿಗೆ ಮೆಸ್ಸಿ ವಿಶ್ವಕಪ್ ಇತಿಹಾಸದಲ್ಲೇ 20 ಗೋಲುಗಳ ಗಡಿ ದಾಟಿದ ಮೊದಲ ಆಟಗಾರರಾದರು. ಅಲ್ಲದೆ, ಫಿಫಾ ವಿಶ್ವಕಪ್‌ನಲ್ಲಿ ಸತತ 8 ಪಂದ್ಯಗಳಲ್ಲಿ ಗೋಲು ದಾಖಲಿಸಿದ ಮೊದಲ ಫುಟ್‌ಬಾಲಿಗ ಎಂಬ ಹೆಗ್ಗಳಿಕೆಯೂ ಅವರದಾಯಿತು. 2018, 2022 ಮತ್ತು 2026ರ ವಿಶ್ವಕಪ್‌ಗಳಲ್ಲಿ 18 ಪಂದ್ಯಗಳಿಂದ 18 ಗೋಲು ಗಳಿಸಿರುವ ಫ್ರಾನ್ಸ್‌ನ ಕಿಲಿಯನ್ ಎಂಬಾಪ್ಪೆ ಈ ದಾಖಲೆಗೆ ಸಮೀಪದಲ್ಲಿದ್ದರೂ, ಮೆಸ್ಸಿಯ ಸಾಧನೆ ಇನ್ನೂ ಅಜೇಯವಾಗಿದೆ.

2026ರ ವಿಶ್ವಕಪ್‌ನಲ್ಲಿ ಮೆಸ್ಸಿ ಇದುವರೆಗೆ 7 ಗೋಲುಗಳನ್ನು ಗಳಿಸಿದ್ದು, ಗೋಲ್ಡನ್ ಬೂಟ್ ಪ್ರಶಸ್ತಿಯ ಸ್ಪರ್ಧೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿಶ್ವಕಪ್ ಇತಿಹಾಸದಲ್ಲಿ 30 ಪಂದ್ಯಗಳ ಮೈಲಿಗಲ್ಲು ತಲುಪಿರುವ ಏಕೈಕ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಅವರು ಮತ್ತೊಮ್ಮೆ ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಿದ್ದಾರೆ. ಈ ಸಾಧನೆಯು ವಿಶ್ವ ಫುಟ್‌ಬಾಲ್ ಅಭಿಮಾನಿಗಳಿಂದ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

Continue Reading

ಕ್ರೀಡೆ

ಕ್ರಿಸ್ಟಿಯಾನೊ ರೊನಾಲ್ಡೊಗೆ 2026 FIFA ವಿಶ್ವಕಪ್ ಕೊನೆಯ ಟೂರ್ನಿ? ಸಹೋದರಿ ಕಟಿಯಾ ಅವೆರೋ ಮಹತ್ವದ ಸುಳಿವು

Published

on

ನ್ಯೂಯಾರ್ಕ್: ಪೋರ್ಚುಗಲ್‌ನ ಸ್ಟಾರ್ ಫುಟ್‌ಬಾಲರ್ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಭವಿಷ್ಯದ ಬಗ್ಗೆ ಅವರ ಸಹೋದರಿ ಕಟಿಯಾ ಅವೆರೋ ನೀಡಿರುವ ಹೇಳಿಕೆ ಫುಟ್‌ಬಾಲ್ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 2026ರ ಫಿಫಾ ವಿಶ್ವಕಪ್ ರೊನಾಲ್ಡೊ ಅವರ ಕೊನೆಯ ಅಂತರರಾಷ್ಟ್ರೀಯ ಟೂರ್ನಿಯಾಗುವ ಸಾಧ್ಯತೆ ಇದೆ ಎಂದು ಅವರು ಸುಳಿವು ನೀಡಿದ್ದಾರೆ.

ಗುರುವಾರ ರಾತ್ರಿ (ಸ್ಥಳೀಯ ಸಮಯ) ಕ್ರೊಯೇಷಿಯಾ ವಿರುದ್ಧ ನಡೆದ ವಿಶ್ವಕಪ್ ರೌಂಡ್ ಆಫ್ 32 ಪಂದ್ಯದ ಮುನ್ನ ಟೊರೊಂಟೊದ ಬಿಎಂಒ ಫೀಲ್ಡ್ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಟಿಯಾ ಅವೆರೋ, ರೊನಾಲ್ಡೊ ಅವರ ಅಂತರರಾಷ್ಟ್ರೀಯ ಫುಟ್‌ಬಾಲ್ ಪಯಣ ಅಂತಿಮ ಹಂತಕ್ಕೆ ತಲುಪಿದೆ ಎಂದು ತಮಗೆ ಅನಿಸುತ್ತಿದೆ ಎಂದು ಹೇಳಿದರು.

“ನನಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ರೊನಾಲ್ಡೊ ಶೀಘ್ರದಲ್ಲೇ ರಾಷ್ಟ್ರೀಯ ತಂಡಕ್ಕೆ ವಿದಾಯ ಹೇಳುವ ಸಾಧ್ಯತೆಯಿದೆ. ಅವರು ಇಂದು ನಿವೃತ್ತಿಯಾಗುವುದಿಲ್ಲ. ಆದರೆ ಈ ವಿಶ್ವಕಪ್ ಅವರ ಕೊನೆಯ ನೃತ್ಯವಾಗಬಹುದು ಎಂದು ನಾನು ನಂಬಿದ್ದೇನೆ,” ಎಂದು ಕಟಿಯಾ ತಿಳಿಸಿದ್ದಾರೆ.

ರೊನಾಲ್ಡೊ ತಮ್ಮ ವೃತ್ತಿಜೀವನದಲ್ಲಿ 1,000 ಗೋಲುಗಳ ಮೈಲಿಗಲ್ಲು ತಲುಪಿದ ಬಳಿಕ ನಿವೃತ್ತಿಯಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾನು ರಾಷ್ಟ್ರೀಯ ತಂಡದ ಬಗ್ಗೆ ಮಾತನಾಡುತ್ತಿದ್ದೇನೆ. ವಿಶ್ವಾಸಾರ್ಹ ಮೂಲಗಳಿಂದ ನನಗೆ ದೊರೆತ ಮಾಹಿತಿಯ ಪ್ರಕಾರ, 2026ರ ವಿಶ್ವಕಪ್ ಅವರ ಕೊನೆಯ ಟೂರ್ನಿಯಾಗಬಹುದು” ಎಂದು ಹೇಳಿದರು.

41 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊ ಪೋರ್ಚುಗಲ್ ಫುಟ್‌ಬಾಲ್ ಇತಿಹಾಸದ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರಾಗಿದ್ದು, ದೇಶದ ಪರ ಅತ್ಯಧಿಕ ಪಂದ್ಯಗಳು ಹಾಗೂ ಗೋಲುಗಳ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಐದು ಬಾರಿ ಬ್ಯಾಲನ್ ಡಿ’ಓರ್ ಪ್ರಶಸ್ತಿ ಗೆದ್ದಿರುವ ಅವರು, ಪೋರ್ಚುಗಲ್ ತಂಡವನ್ನು ಹಲವು FIFA ವಿಶ್ವಕಪ್ ಹಾಗೂ UEFA ಯುರೋಪಿಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಮುನ್ನಡೆಸಿದ್ದಾರೆ.

ಅವರ ನಾಯಕತ್ವದಲ್ಲಿ ಪೋರ್ಚುಗಲ್ UEFA ಯುರೋ 2016 ಪ್ರಶಸ್ತಿ ಹಾಗೂ 2019ರ UEFA ನೇಷನ್ಸ್ ಲೀಗ್ ಪ್ರಶಸ್ತಿಯನ್ನು ಗೆದ್ದಿತ್ತು. ಇದೀಗ 2026ರ ವಿಶ್ವಕಪ್ ಬಳಿಕ ರೊನಾಲ್ಡೊ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಲಿದ್ದಾರೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಆದರೆ ಈ ಕುರಿತು ರೊನಾಲ್ಡೊ ಅವರಿಂದ ಇನ್ನೂ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.

Continue Reading

ಕ್ರೀಡೆ

ರಜನಿಕಾಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್! ‘ಜೈಲರ್ 2’ ಬಿಡುಗಡೆ ದಿನಾಂಕ ಫಿಕ್ಸ್

Published

on

ಚೆನ್ನೈ, ಜು. 3: ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ‘ಜೈಲರ್ 2’ (Jailer 2) ಸಿನಿಮಾದ ಬಿಡುಗಡೆ ದಿನಾಂಕ ಕೊನೆಗೂ ಅಂತಿಮಗೊಂಡಿದೆ. ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಬಹುನಿರೀಕ್ಷಿತ ಚಿತ್ರವು ಈ ವರ್ಷದ ದಸರಾ ಸಂಭ್ರಮದಲ್ಲಿ ತೆರೆಗೆ ಬರಲು ಸಜ್ಜಾಗಿದೆ.

ಮೊದಲಿಗೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಇದೀಗ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಬದಲಾಯಿಸಿದ್ದು, ದಸರಾ ಹಬ್ಬದ ವಿಶೇಷ ಸಂದರ್ಭದಲ್ಲಿ ಮುತ್ತುವೇಲ್ ಪಾಂಡಿಯನ್ ಪಾತ್ರ ಮತ್ತೊಮ್ಮೆ ಅಭಿಮಾನಿಗಳ ಮುಂದೆ ಅಬ್ಬರಿಸಲು ಸಜ್ಜಾಗಿದೆ.

ಸುಮಾರು ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ‘ಜೈಲರ್’ ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತ್ತು. ರಜನಿಕಾಂತ್ ಅವರ ಸ್ಟೈಲ್, ಆಕ್ಷನ್, ನೆಲ್ಸನ್ ಅವರ ನಿರ್ದೇಶನ ಹಾಗೂ ಅನಿರುದ್ಧ್ ರವಿಚಂದರ್ ಅವರ ಸಂಗೀತ ಚಿತ್ರಕ್ಕೆ ಭಾರೀ ಮೆಚ್ಚುಗೆ ತಂದುಕೊಟ್ಟಿತ್ತು.

ಮೊದಲ ಭಾಗದ ಯಶಸ್ಸಿನ ನಂತರವೇ ಅಭಿಮಾನಿಗಳು ಸೀಕ್ವೆಲ್‌ಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಬೇಡಿಕೆ ಇಡುತ್ತಿದ್ದರು. ಅದರಂತೆ ಕಳೆದ ವರ್ಷ ‘ಜೈಲರ್ 2’ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗಿತ್ತು. ಚಿತ್ರದ ಘೋಷಣಾ ಟೀಸರ್ ಕೂಡ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಮೂಡಿಸಿತ್ತು.

ಈಗ ಬಿಡುಗಡೆ ದಿನಾಂಕ ನಿಗದಿಯಾಗಿರುವ ಹಿನ್ನೆಲೆಯಲ್ಲಿ ರಜನಿಕಾಂತ್ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ. ದಸರಾ ರಜೆಯ ಲಾಭ ಪಡೆಯುವ ಉದ್ದೇಶದಿಂದ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಮತ್ತೊಮ್ಮೆ ಹೊಸ ದಾಖಲೆಗಳನ್ನು ನಿರ್ಮಿಸುವ ನಿರೀಕ್ಷೆ ಸಿನಿ ವಲಯದಲ್ಲಿದೆ.

Continue Reading

Trending