ದೇಶ
ವಕ್ಫ್ ಆಸ್ತಿ ವಿವಾದ- ಸಂಸತ್ ಸಮಿತಿ ಮುಖ್ಯಸ್ಧರಿಗೆ ಪತ್ರ ಬರೆದ ತೇಜಸ್ವಿ ಸೂರ್ಯ
ಬೆಂಗಳೂರು: ವಿಜಯಪುರ ಜೆಲ್ಲೆ ಮತ್ತು ಕರ್ನಾಟಕದ ಇತರ ಜೆಲ್ಲೆಗಳ ರೈತರ ಜಮೀನನ್ನು ವಕ್ಫ್ ಆಸ್ತಿ ಎಂದು ಘೋಷಿಸಿ ನೀಡಿರುವ ನೋಟಿಸ್‍ಗಳ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ವಕ್ಫ್ ತಿದ್ದುಪಡಿ ವಿಧೇಯಕ ಜಂಟಿ ಸದನ ಸಮಿತಿ ಮುಖ್ಯಸ್ಧರಾದ ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಪ್ಲಾಟ್‍ಫಾರ್ಮ್ ಎಕ್ಸ್‍ನಲ್ಲಿ ಮಾಹಿತಿ ಹಂಚಿಕೊಂಡಿರುವ ತೇಜಸ್ವಿ ಸೂರ್ಯ, ವಿಜಯಪುರ ಮತ್ತು ಕರ್ನಾಟಕದ ಇತರ ಜಿಲ್ಲೆಗಳ ರೈತರ ಜಮೀನನ್ನು ವಕ್ಫ್ ಆಸ್ತಿಯನ್ನಾಗಿ ಘೋಷಿಸುವ ಕುರಿತು ಬಂದಿರುವ ನೋಟಿಸ್ ಗಳು ಕುರಿತು ವಕ್ಫ್ ತಿದ್ದುಪಡಿ ವಿಧೇಯಕದ ಜಂಟಿ ಸದನ ಸಮಿತಿ ಚೇರ್ಮನ್ ಆಗಿರುವ ಜಗದಂಬಿಕಾ ಪಾಲ್ ಅವರಿಗೆ ಪತ್ರ ಬರೆದಿದ್ದೇನೆ, ಈ ಮೂಲಕ ವಕ್ಫ್ ಬೋರ್ಡ್ ನಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಅವರಿಗೆ ಮಾಹಿತಿ ನೀಡಿದ್ದೇನೆ.
ನೋಟಿಸ್ ಗಳ ಹೊರತಾಗಿಯೂ ಹಲವರು ಆರ್‍ಟಿಸಿ, ಪಹಣಿ ಗಳಲ್ಲಿಯೂ ಯಾವುದೇ ಸಮರ್ಪಕ ಕಾನೂನುಗಳನ್ನು ಪಾಲಿಸದೇ ವಕ್ಫ್ ಆಸ್ತಿಗಳೆಂದು ತಿದ್ದುಪಡಿ ಮಾಡಲಾಗಿದೆ, ಈ ರೀತಿ ತೊಂದರೆಗೆ ಒಳಗಾಗಿರುವ ರೈತರ ನಿಯೋಗವನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸುವಂತೆ ಮನವಿ ಮಾಡಿದ್ದೇನೆ, ಇದರಿಂದ ವಕ್ಫ್ ನಿಂದ ಆಗಿರುವ ಭೂಮಿ ಅತಿಕ್ರಮಣದ ನೇರ ಮಾಹಿತಿ ದೊರಕಲಿದೆ ಎಂದು ತಿಳಿಸಿದ್ದಾರೆ,
ದೇಶ
UG CET 2026 ಫಲಿತಾಂಶ ಪ್ರಕಟ; ಇಂಜಿನಿಯರಿಂಗ್ ವಿಭಾಗದಲ್ಲಿ ತನಿಷಾ ಕಾರ್ತಿಕ್‌ಗೆ ಮೊದಲ ರ‍್ಯಾಂಕ್
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ್ದ UG CET 2026 ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದೆ. ಏಪ್ರಿಲ್ 22, 23 ಮತ್ತು 24ರಂದು ನಡೆದಿದ್ದ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ RV PU College ವಿದ್ಯಾರ್ಥಿನಿ Tanisha Karthik ಮೊದಲ ರ‍್ಯಾಂಕ್ ಪಡೆದು ರಾಜ್ಯದ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಬೆಳ್ತಂಗಡಿಯ Sir M.V. PU College ವಿದ್ಯಾರ್ಥಿ Shrajan ದ್ವಿತೀಯ ರ‍್ಯಾಂಕ್ ಪಡೆದಿದ್ದು, ಬೆಂಗಳೂರಿನ ಜಯನಗರದ ಆರ್‌ವಿ ಪಿಯು ಕಾಲೇಜಿನ Ninad Vasishta ತೃತೀಯ ರ‍್ಯಾಂಕ್ ಪಡೆದಿದ್ದಾರೆ.
ಇಂಜಿನಿಯರಿಂಗ್ ವಿಭಾಗದ ಟಾಪ್ 3 ರ‍್ಯಾಂಕ್‌ಗಳು
| ರ‍್ಯಾಂಕ್ | ವಿದ್ಯಾರ್ಥಿ |
|---|---|
| 1 | ತನಿಷಾ ಕಾರ್ತಿಕ್ |
| 2 | ಶ್ರಾಜನ್ |
| 3 | ನಿನಾದ್ ವಸಿಷ್ಠ |
ವೆಟನರಿ ವಿಭಾಗದ ಟಾಪ್ 3
ವೆಟನರಿ ವಿಭಾಗದಲ್ಲೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಈ ವಿಭಾಗದ ಮೊದಲ ಮೂರು ರ‍್ಯಾಂಕ್‌ಗಳು ಈ ಕೆಳಗಿನಂತಿವೆ:
| ರ‍್ಯಾಂಕ್ | ವಿದ್ಯಾರ್ಥಿ |
|---|---|
| 1 | ನಯನಾ ಗೋಪಿ |
| 2 | ಅಮೂಲ್ಯ |
| 3 | ರಿತ್ವಿಕ್ ಕುಮಾರ್ |
UG CET ಫಲಿತಾಂಶ ಪ್ರಕಟವಾಗುತ್ತಿದ್ದಂತೆ ರಾಜ್ಯದಾದ್ಯಂತ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಸಂಭ್ರಮ ಮನೆ ಮಾಡಿದೆ. ಇಂಜಿನಿಯರಿಂಗ್, ಕೃಷಿ, ವೆಟನರಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಈ ಫಲಿತಾಂಶ ಪ್ರಮುಖವಾಗಿದ್ದು, ಮುಂದಿನ ಹಂತದಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶೀಘ್ರದಲ್ಲೇ ಕೌನ್ಸೆಲಿಂಗ್ ವೇಳಾಪಟ್ಟಿ ಹಾಗೂ ಸೀಟ್ ಹಂಚಿಕೆ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳು ತಮ್ಮ ರ‍್ಯಾಂಕ್ ಮತ್ತು ಅಂಕಗಳನ್ನು ಪರಿಶೀಲಿಸಿ ಮುಂದಿನ ಪ್ರವೇಶ ಪ್ರಕ್ರಿಯೆಗೆ ಸಿದ್ಧರಾಗಬಹುದು.
ದೇಶ
NEET, CBSE ವಿವಾದದ ನಡುವೆ ಯುವಕರ ಬೃಹತ್ ಪ್ರತಿಭಟನೆ; CJPಗೆ ಭಾರೀ ಬೆಂಬಲ
ನವದೆಹಲಿ: NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ CBSE ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ, ಯುವಕರ ನೇತೃತ್ವದ Cockroach Janta Party (CJP) ದೆಹಲಿಯ **Jantar Mantar**ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
CJP ಸಂಸ್ಥಾಪಕ Abhijeet Dipke ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು, ಯುವ ವೃತ್ತಿಪರರು ಹಾಗೂ ಪೋಷಕರು ಭಾಗವಹಿಸಿದರು. ಹಲವರು ಕಾಕ್‌ರೋಚ್ ಮುಖವಾಡ ಧರಿಸಿ ಹಾಗೂ ಹೂವುಗಳನ್ನು ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯ
ಪ್ರತಿಭಟನಾಕಾರರು ಕೇಂದ್ರ ಶಿಕ್ಷಣ ಸಚಿವ Dharmendra Pradhan ಅವರ ರಾಜೀನಾಮೆಗೆ ಆಗ್ರಹಿಸಿದರು. NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ CBSEಯ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ವ್ಯವಸ್ಥೆಯಲ್ಲಿ ನಡೆದಿರುವುದಾಗಿ ಆರೋಪಿಸಲಾದ ಅಕ್ರಮಗಳಿಗೆ ಸಚಿವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸೋನಂ ವಾಂಗ್ಚುಕ್ ಬೆಂಬಲ
ಲಡಾಖ್‌ನ ಸಾಮಾಜಿಕ ಹೋರಾಟಗಾರ Sonam Wangchuk ಕೂಡ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಕೇವಲ ಪರೀಕ್ಷಾ ಅಕ್ರಮಗಳಿಗೆ ಸೀಮಿತವಲ್ಲ ಎಂದು ಹೇಳಿದ್ದಾರೆ.
“ನಾಲ್ಕು ದಶಕಗಳಿಂದ ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ನಿರೀಕ್ಷಿತ ಬದಲಾವಣೆ ಕಾಣುತ್ತಿಲ್ಲ. ಶಿಕ್ಷಣ ಕ್ಷೇತ್ರದ ಸುಧಾರಣೆ ಅತ್ಯಗತ್ಯ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ
ಕಾಕ್‌ರೋಚ್ ಜನತಾ ಪಾರ್ಟಿ ಆರಂಭದಲ್ಲಿ ವ್ಯಂಗ್ಯಾತ್ಮಕ ಚಳವಳಿಯಾಗಿ ಹುಟ್ಟಿಕೊಂಡಿದ್ದರೂ, ಇದೀಗ ಯುವಜನತೆಯ ದೊಡ್ಡ ವೇದಿಕೆಯಾಗಿ ಬೆಳೆದಿದೆ. “ಯುವಕರಿಗಾಗಿ, ಯುವಕರಿಂದ, ಯುವಕರ ರಾಜಕೀಯ ವೇದಿಕೆ” ಎಂಬ ಘೋಷಣೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ಸಂಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಜನಪ್ರಿಯತೆ ಗಳಿಸಿದೆ.
ಸಂಘಟನೆಯ ಇನ್‌ಸ್ಟಾಗ್ರಾಂ ಖಾತೆಗೆ 22 ಮಿಲಿಯನ್‌ಗಿಂತ ಹೆಚ್ಚು ಅನುಯಾಯಿಗಳಿದ್ದು, ಇದು ಅನೇಕ ಪ್ರಮುಖ ರಾಜಕೀಯ ಪಕ್ಷಗಳ ಸಾಮಾಜಿಕ ಜಾಲತಾಣದ ಅನುಯಾಯಿಗಳ ಸಂಖ್ಯೆಯನ್ನು ಮೀರಿಸಿದೆ.
ಅಭಿಜೀತ್ ದೀಪ್ಕೆ ಯಾರು?
30 ವರ್ಷದ ಅಭಿಜೀತ್ ದೀಪ್ಕೆ ಮಹಾರಾಷ್ಟ್ರ ಮೂಲದವರಾಗಿದ್ದು, ಪುಣೆಯಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. ನಂತರ ಅಮೆರಿಕದ Boston Universityಯಲ್ಲಿ ಸಾರ್ವಜನಿಕ ಸಂಪರ್ಕ (Public Relations) ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ.
2020ರಿಂದ 2023ರವರೆಗೆ ಅವರು Aam Aadmi Partyಯೊಂದಿಗೆ ಸಾಮಾಜಿಕ ಜಾಲತಾಣ ನಿರ್ವಹಣೆ ಹಾಗೂ ಚುನಾವಣಾ ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಬಿಗಿ ಭದ್ರತೆ
ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಜೊತೆಗೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ಅಭಿಜೀತ್ ದೀಪ್ಕೆ ನಿವಾಸದ ಸುತ್ತಲೂ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿಕ್ಷಣ ವ್ಯವಸ್ಥೆಯ ಪಾರದರ್ಶಕತೆ, ಪರೀಕ್ಷಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ನಡೆದ ಈ ಪ್ರತಿಭಟನೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ.
ದೇಶ
ಎಸ್‌ಐಆರ್‌ಗೆ ಮುನ್ನ ಆತಂಕ: 2.06 ಲಕ್ಷ ಮತದಾರರ ವಿವರಗಳು ಇನ್ನೂ ದಾಖಲಾಗಿಲ್ಲ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಲು ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ, ಎರಡು ಲಕ್ಷಕ್ಕೂ ಅಧಿಕ ಮತದಾರರ ಮಾಹಿತಿ ಇನ್ನೂ ಮ್ಯಾಪಿಂಗ್ ಆಗದಿರುವುದು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಜಿಲ್ಲೆಯ ಒಟ್ಟು 18,05,189 ಮತದಾರರ ಪೈಕಿ 15,98,723 ಮತದಾರರ ಮಾಹಿತಿ ಮಾತ್ರ ಮ್ಯಾಪಿಂಗ್ ಆಗಿದ್ದು, ಇನ್ನೂ 2,06,466 ಮತದಾರರ ಮಾಹಿತಿ ಡಿಜಿಟಲ್ ವ್ಯವಸ್ಥೆಗೆ ಜೋಡಣೆಯಾಗಿಲ್ಲ. ಜಿಲ್ಲಾಡಳಿತದ ಪ್ರಕಾರ, ಮ್ಯಾಪಿಂಗ್ ಕಾರ್ಯದಲ್ಲಿ ಶೇ.88.56ರಷ್ಟು ಪ್ರಗತಿ ಸಾಧನೆಯಾಗಿದೆ.
ಮಂಗಳೂರು ದಕ್ಷಿಣ ಮತ್ತು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಮ್ಯಾಪಿಂಗ್ ಆಗದ ಮತದಾರರ ಸಂಖ್ಯೆ ಹೆಚ್ಚಿರುವುದು ಗಮನ ಸೆಳೆದಿದೆ. ಮಂಗಳೂರು ದಕ್ಷಿಣದಲ್ಲಿ 63,853 ಹಾಗೂ ಮಂಗಳೂರು ಉತ್ತರದಲ್ಲಿ 50,558 ಮತದಾರರ ಮಾಹಿತಿ ಇನ್ನೂ ದಾಖಲಾಗಿಲ್ಲ. ಉಳಿದಂತೆ ಮೂಡುಬಿದಿರೆ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಮತ್ತು ಸುಳ್ಯ ಕ್ಷೇತ್ರಗಳಲ್ಲಿಯೂ ಸಾವಿರಾರು ಮತದಾರರ ಮಾಹಿತಿ ಬಾಕಿಯಿದೆ.
ಜಿಲ್ಲಾಡಳಿತದ ಸ್ಪಷ್ಟನೆ
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ H. V. Darshan ಅವರು ಈ ಬಗ್ಗೆ ಸ್ಪಷ್ಟನೆ ನೀಡಿ, ಮ್ಯಾಪಿಂಗ್ ಆಗದಿರುವುದರಿಂದ ಮತದಾರರ ಹೆಸರು ಪಟ್ಟಿಯಿಂದ ಅಳಿಸಲಾಗಿದೆ ಎಂಬ ಅರ್ಥವಲ್ಲ ಎಂದು ಹೇಳಿದ್ದಾರೆ.
ಜೂನ್ 30ರಿಂದ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಲಿದ್ದು, ಬಿಎಲ್‌ಒಗಳು ಮನೆ-ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರ್ಮ್ ವಿತರಿಸಲಿದ್ದಾರೆ. ಜುಲೈ 29ರವರೆಗೆ ಮತದಾರರು ತಮ್ಮ ದಾಖಲೆಗಳನ್ನು ಸಲ್ಲಿಸಲು ಅವಕಾಶವಿದ್ದು, ನಂತರ ಪರಿಶೀಲನೆ, ಆಕ್ಷೇಪಣೆ ಹಾಗೂ ತಿದ್ದುಪಡಿ ಪ್ರಕ್ರಿಯೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 7ರಂದು ಪ್ರಕಟವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮತದಾರರ ಅನುಕೂಲಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವೋಟರ್ ಫೆಸಿಲಿಟೇಷನ್ ಸೆಂಟರ್‌ಗಳನ್ನು ತೆರೆಯಲಾಗುತ್ತಿದ್ದು, ಜಿಲ್ಲೆಯಲ್ಲಿ 206 ಬಿಎಲ್‌ಒಗಳು ಮತ್ತು 1,876 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.
ಕಾಂಗ್ರೆಸ್ ಅನುಮಾನ, ಬಿಜೆಪಿ ಎಚ್ಚರಿಕೆ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ Harish Kumar ಅವರು ಈ ಪ್ರಕ್ರಿಯೆ ಕುರಿತು ಅನುಮಾನ ವ್ಯಕ್ತಪಡಿಸಿದ್ದು, ಎನ್ಯುಮರೇಷನ್ ಫಾರ್ಮ್ ಸಲ್ಲಿಸದ ಮತದಾರರ ಹೆಸರು ಅಂತಿಮ ಪಟ್ಟಿಯಲ್ಲಿ ಕಾಣಿಸದಿರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಬಿಜೆಪಿ ಜಿಲ್ಲಾ ಅಧ್ಯಕ್ಷ Satish Kumpala ಅವರು, ಜಿಲ್ಲಾಡಳಿತ ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಇನ್ನೂ ಉತ್ತರ ಸಿಗದ ಪ್ರಶ್ನೆ
ಪ್ರಸ್ತುತ ಚರ್ಚೆಯ ಕೇಂದ್ರಬಿಂದುವಾಗಿರುವ ಪ್ರಶ್ನೆ ಎಂದರೆ, ಮ್ಯಾಪಿಂಗ್ ಆಗದ 2,06,466 ಮತದಾರರು ಯಾರು? ಅವರು ವಿದೇಶ ಅಥವಾ ಹೊರರಾಜ್ಯಗಳಲ್ಲಿ ವಾಸಿಸುತ್ತಿರುವವರೇ, ಡುಪ್ಲಿಕೇಟ್ ನೋಂದಣಿದಾರರೇ ಅಥವಾ ಮಾಹಿತಿ ಸಂಗ್ರಹಣೆಯ ವೇಳೆ ಕೈತಪ್ಪಿದವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಪ್ರಶ್ನೆಗಳಿಗೆ ಉತ್ತರ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಸಿಗುವ ಸಾಧ್ಯತೆ ಇದೆ.
-
ಕ್ರೀಡೆ24 hours agoಮುಂಬೈ ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ಎಬಿ ಡಿ ವಿಲಿಯರ್ಸ್! ಅಭಿಮಾನಿಗಳ ಹೃದಯ ಗೆದ್ದ RCB ದಿಗ್ಗಜ
-
ದೇಶ21 hours agoಶೈಕ್ಷಣಿಕ ಜಾಗ ದುರ್ಬಳಕೆ ಆರೋಪ: ಕೆಂಗೇರಿ ಟ್ರಸ್ಟ್ ವಿರುದ್ಧ PIL ವಿಚಾರಣೆ
-
ದೇಶ23 hours agoಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಎಸಿ ಹೆಲ್ಮೆಟ್! ಬಿಸಿಲಿನ ತಾಪದಿಂದ ರಕ್ಷಿಸಲು ಬಿಎನ್ಸಿಸಿಯ ಹೊಸ ಪ್ರಯೋಗ
-
ದೇಶ22 hours agoರಾಮಲಿಂಗಾರೆಡ್ಡಿ ಬಳಿಕ ಮುನಿಯಪ್ಪ ಬಂಡಾಯ! ಕಾಂಗ್ರೆಸ್ ಹೈಕಮಾಂಡ್ ತುರ್ತು ಸಭೆ
-
ದೇಶ3 hours agoBangalore : ಡಿಜಿಟಲ್ ಹಣಕಾಸು ಕ್ಷೇತ್ರದಲ್ಲಿ ಭಾರತದ ಸಾಧನೆ; ಸಹಮತಿ SRO ಆಗಿ ಗುರುತಿಸಿದ RBI
-
ದೇಶ3 hours agoಪೆಟ್ರೋಲ್ಗೆ ಪರ್ಯಾಯ E85 ಇಂಧನಕ್ಕೆ ಚಾಲನೆ; ಪರಿಸರ ಸ್ನೇಹಿ ಇಂಧನ ಕ್ರಾಂತಿ ಶುರು
-
ದೇಶ2 hours agoಭಾರತಕ್ಕೆ ಸಿಕ್ಕಿತು ಹೊಸ ಇಂಧನ ಸಂಪತ್ತು! ಅಂಡಮಾನ್ ಕಡಲಿನಲ್ಲಿ ಅನಿಲ ನಿಕ್ಷೇಪ ಪತ್ತೆ
-
ದೇಶ3 hours agoBengaluru : Major Boost for Digital Finance: Sahamati Gets RBI Approval as AA Ecosystem Regulator
