Connect with us

ರಾಜಕೀಯ

ನಾನು ಟ್ವೆಂಟಿ ಫೋರ್ ಕ್ಯಾರೆಟ್ ಗೋಲ್ಡು- ಜಮೀರ್ ಅಹ್ಮದ್

Published

on

ಹುಬ್ಬಳ್ಳಿ: ನಾನು ಯಾವತ್ತು ಕೋಮುದ್ವೇಷ ಹರಡಿಸುವಂತಹ ಕೆಲಸ ಮಾಡಿಲ್ಲ, ನಾನು ಶುದ್ದ ಹಿಂದೂಸ್ಧಾನಿ ಭಾರತೀಯ, 24 ಕ್ಯಾರೆಟ್ ಗೋಲ್ಡ್ ನನ್ನನ್ನು ಹೇಗೆ ಕಿತ್ತು ಹಾಕುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ,
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಜೋಶಿಯವರು ಹಿಂದು ಮುಸ್ಲಿಂ ಬಿಟ್ಟರೆ ಏನೂ ಮಾತನಾಡಲ್ಲ, ಮುಸಲ್ಮಾನರು ಮತ ನೀಡಲ್ಲ ಅಂತ ಬಿಜೆಪಿಯವರು ಅವರನ್ನು ದ್ವೇಷ ಮಾಡುತ್ತಿದ್ದಾರೆ, ಒಂದು ವೇಳೆ ಮತ ಕೊಟ್ಟರೆ ಮುಸಲ್ಮಾನರು ಒಳ್ಳೆಯವರು ಎಂದು ಟಾಂಗ್ ನೀಡಿದರು,
ನಾನೊಬ್ಬ ಭಾರತೀಯ ನಂತರ ರಾಜಕಾರಣಿ, ನನಗೆ ಎಲ್ಲಾ ಜನಾಂಗದವರು ಬೇಕು, ಯಾವುದೇ ಕಾರಣಕ್ಕೂ ಜಾತಿ ರಾಜಕಾರಣ ಮಾಡುತ್ತಿಲ್ಲ, ರಾಜಕೀಯಕ್ಕೆ ಬಂದ ಮೇಲೆ ಅದನ್ನೆಲ್ಲ ಬಿಡಬೇಕು, ಇಲ್ಲವೇ ಮನೆಯಲ್ಲಿ ಕುಳಿತುಕೊಳ್ಳಬೇಕು ಎಂದು ಸಚಿವ ಜಮೀರ ಅಹ್ಮದ್ ಖಾನ್ ಕೌಂಟರ್ ನೀಡಿದ್ರು.
ಬಿಜೆಪಿಯವರು ರೈತರನ್ನು ಎತ್ತಿ ಕಟ್ಟುತ್ತಿದ್ದಾರೆ, ನಾನು ವಕ್ಫ್ ಸಚಿವನಾಗಿ ಹೇಳುತ್ತೇನೆ ಯಾವ ರೈತರಿಗೂ ತೊಂದರೆ ಆಗಲ್ಲ, ಮಹಾರಾಷ್ಟ್ರ ಇತರೆಡೆ ಚುನಾವಣೆ ಇರುವುದಕ್ಕಾಗಿ ಬಿಜೆಪಿಯವರು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು,

ದೇಶ

ಜಿಬಿಎ ಅಂತಿಮ ಮತದಾರರ ಪಟ್ಟಿ ರಿಲೀಸ್: 2,833 ಹೊಸ ಮತದಾರರ ಸೇರ್ಪಡೆ

Published

on

ಬೆಂಗಳೂರು: Bengaluru ನಗರದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ನಗರದಲ್ಲಿ ಒಟ್ಟು 88,95,361 ಮತದಾರರು ದಾಖಲಾಗಿದ್ದು, ಇದು ಹಿಂದಿನ ಪರಿಷ್ಕೃತ ಕರಡು ಪಟ್ಟಿಗಿಂತ 2,833ರಷ್ಟು ಹೆಚ್ಚಳವಾಗಿದೆ.

ಈ ಕುರಿತು ಮಾಹಿತಿ ನೀಡಿದ ಜಿಬಿಎ ಮುಖ್ಯ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರ ರಾವ್ ಅವರು, ಮಾ.9ರಂದು ಪ್ರಕಟಿಸಿದ್ದ ಕರಡು ಪಟ್ಟಿಗೆ ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳಿಂದ ಬಂದ ಆಕ್ಷೇಪಣೆಗಳನ್ನು ಪರಿಗಣಿಸಿ ತಿದ್ದುಪಡಿಗಳೊಂದಿಗೆ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಅಂತಿಮ ಪಟ್ಟಿಯ ಪ್ರಕಾರ 45,71,169 ಪುರುಷ ಮತದಾರರು, 43,22,557 ಮಹಿಳಾ ಮತದಾರರು ಹಾಗೂ 1,635 ಇತರೆ ಮತದಾರರು ಇದ್ದಾರೆ. ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 8,023 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ.

ಒಟ್ಟು 369 ವಾರ್ಡ್‌ಗಳ ಪೈಕಿ ಬೆಂಗಳೂರು ದಕ್ಷಿಣದ ಸುಬ್ರಮಣ್ಯಪುರ ವಾರ್ಡ್‌ನಲ್ಲಿ 53,660 ಮತದಾರರಿದ್ದು ಅತಿ ಹೆಚ್ಚು ಸಂಖ್ಯೆಯಾಗಿದೆ. ಇನ್ನೊಂದೆಡೆ ಬೆಂಗಳೂರು ಪೂರ್ವದ ವಿಜ್ಞಾನನಗರ ವಾರ್ಡ್‌ನಲ್ಲಿ 12,897 ಮತದಾರರಿದ್ದು ಅತಿ ಕಡಿಮೆ ಮತದಾರರಿರುವ ವಾರ್ಡ್‌ ಆಗಿದೆ.

ಸಾರ್ವಜನಿಕರು ಜಿಬಿಎ ಅಧಿಕೃತ ವೆಬ್‌ಸೈಟ್‌ನಲ್ಲಿ ವಾರ್ಡ್‌ವಾರು ಮತದಾರರ ಪಟ್ಟಿಯನ್ನು ಪರಿಶೀಲಿಸಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬಹುದು. ಹೆಸರು ಇಲ್ಲದಿದ್ದರೆ ಪೂರಕ ಪಟ್ಟಿಗೆ ಹೊಸದಾಗಿ ಅರ್ಜಿ ಸಲ್ಲಿಸುವ ಅವಕಾಶವಿದೆ.

ಇದೇ ವೇಳೆ, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ಬೂತ್‌ ಲೆವೆಲ್‌ ಏಜೆಂಟ್‌ಗಳನ್ನು ನೇಮಕ ಮಾಡಿ ಮತದಾರರ ನೋಂದಣಿ ಕಾರ್ಯದಲ್ಲಿ ಸಹಕರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Continue Reading

ದೇಶ

ಕನ್ಯಾಕುಮಾರಿಯಲ್ಲಿ ವಿಜಯ್ ರಾಜಕೀಯ ಸುನಾಮಿ?

Published

on

ಕನ್ಯಾಕುಮಾರಿ: ದಕ್ಷಿಣ ಭಾರತದ ಅಂತಿಮ ತುದಿಯಾದ ಕನ್ಯಾಕುಮಾರಿಯಲ್ಲಿ ಈ ಬಾರಿ ರಾಜಕೀಯ ಸಮೀಕರಣ ಸಂಪೂರ್ಣ ಬದಲಾಗುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ. ತಮಿಳು ನಟ Vijay ನೇತೃತ್ವದ Tamilaga Vettri Kazhagam (TVK) ಪಕ್ಷದ ಪ್ರವೇಶವು ಸಾಂಪ್ರದಾಯಿಕ ಪಕ್ಷಗಳಿಗೆ ಹೊಸ ಸವಾಲು ಒಡ್ಡಿದೆ.

ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಇದುವರೆಗೆ DMK-ಕಾಂಗ್ರೆಸ್ ಮೈತ್ರಿಕೂಟವೇ ಮೇಲುಗೈ ಸಾಧಿಸಿತ್ತು. ಆದರೆ ಈ ಬಾರಿ ಟಿವಿಕೆ ಪಕ್ಷದ ಪ್ರವೇಶದಿಂದ ತ್ರಿಕೋನ ಸ್ಪರ್ಧೆ ನಿರ್ಮಾಣವಾಗಿದ್ದು, ರಾಜಕೀಯ ಚಿತ್ರಣ ಕುತೂಹಲ ಮೂಡಿಸಿದೆ. ವಿಜಯ್ ನಡೆಸಿದ ರೋಡ್‌ಶೋಗಳಿಗೆ ಹರಿದುಬಂದ ಜನಸಾಗರ ಯುವಜನತೆ ಮತ್ತು ಮಹಿಳಾ ಮತದಾರರು ಬದಲಾವಣೆಯನ್ನು ಬಯಸುತ್ತಿರುವುದಕ್ಕೆ ಸೂಚನೆ ನೀಡುತ್ತಿದೆ.

ಕನ್ಯಾಕುಮಾರಿಯಲ್ಲಿ ಶೇ.46ರಷ್ಟು ಇರುವ ಕ್ರೈಸ್ತ ಸಮುದಾಯ, ಅದರಲ್ಲೂ ಮೀನುಗಾರ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಈ ಮತಗಳು ಇತ್ತೀಚೆಗೆ ಡಿಎಂಕೆ-ಕಾಂಗ್ರೆಸ್ ಪರವಾಗಿದ್ದರೂ, ಈಗ ಟಿವಿಕೆ ಕಡೆ ವಾಲುವ ಲಕ್ಷಣಗಳು ಕಂಡುಬರುತ್ತಿವೆ. ವಿಜಯ್ ಅವರ ಪೂರ್ಣ ಹೆಸರು ‘ಜೋಸೆಫ್ ವಿಜಯ್ ಚಂದ್ರಶೇಖರ್’ ಎಂಬ ವಿಚಾರವೂ ಅಲ್ಪಸಂಖ್ಯಾತರೊಂದಿಗೆ ಭಾವನಾತ್ಮಕ ಸಂಪರ್ಕ ಬೆಳೆಸಲು ಸಹಕಾರಿಯಾಗಿದೆ ಎನ್ನಲಾಗುತ್ತಿದೆ.

ಇತ್ತ Bharatiya Janata Party-ಎಐಎಡಿಎಂಕೆ ಮೈತ್ರಿಕೂಟವು ನಾಗರ್‌ಕೋಯಿಲ್ ಹಾಗೂ ಕನ್ಯಾಕುಮಾರಿ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಟಿವಿಕೆ ಪಕ್ಷ ಕ್ರೈಸ್ತ ಮತಗಳನ್ನು ವಿಭಜಿಸಿದರೆ ಅದು ತಮ್ಮ ಪರವಾಗಬಹುದು ಎಂಬ ಲೆಕ್ಕಾಚಾರ ಬಿಜೆಪಿ ಮಾಡುತ್ತಿದೆ.

ಇದೇ ವೇಳೆ, ತಮಿಳುನಾಡು ಮುಖ್ಯಮಂತ್ರಿ M. K. Stalin ಕೇಂದ್ರ ಸರ್ಕಾರದ ವಿರುದ್ಧ ವಿಷಯಗಳನ್ನು ಮುನ್ನೆಲೆಗೆ ತಂದು ಪ್ರಚಾರ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ, ವಿಜಯ್ ಅವರ ರಾಜಕೀಯ ಪ್ರವೇಶ ಅಲೆ ಮಾತ್ರವೋ ಅಥವಾ ಸುನಾಮಿಯೋ ಎಂಬುದು ಮೇ 4ರ ಫಲಿತಾಂಶದಲ್ಲಿ ಸ್ಪಷ್ಟವಾಗಲಿದೆ.

Continue Reading

ದೇಶ

“ನಾನು ಶಿಸ್ತು ಪಾಲಿಸಿದ್ದೇನೆ” – ಜಮೀರ್ ತಿರುಗೇಟು

Published

on

ಬೆಂಗಳೂರು: ಕರ್ನಾಟಕ ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಉದ್ಭವಿಸಿರುವ ಗೊಂದಲವು ಕಾಂಗ್ರೆಸ್ಸಿನ ಒಳಜಗಳವನ್ನು ಬಹಿರಂಗಪಡಿಸಿದೆ. ಈ ಹಿನ್ನೆಲೆಯಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಮ್ಮ ನಡೆಗೆ ಸ್ಪಷ್ಟನೆ ನೀಡಿದ್ದು, “ಪಾರ್ಟಿ ಹೇಳಿದ ಶಿಸ್ತನ್ನೇ ನಾನು ಕಟ್ಟುನಿಟ್ಟಾಗಿ ಪಾಲಿಸಿದ್ದೇನೆ” ಎಂದು ಹೇಳಿದ್ದಾರೆ.

ಅಲ್ಪಸಂಖ್ಯಾತ ಮುಖಂಡ ನಜೀರ್ ಅಹ್ಮದ್ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಜಮೀರ್, “ಪಕ್ಷವು ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿದ್ದೇನೆ. ಮುಖ್ಯಮಂತ್ರಿಗಳ ಸೂಚನೆಗಳನ್ನೂ ಪಾಲಿಸಿದ್ದೇನೆ” ಎಂದು ತಿಳಿಸಿದರು. ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಿಸ್ತು ಕುರಿತು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಜಮೀರ್, “ಅವರು ಹೇಳಿರುವುದು ಸರಿಯೇ, ನಾನು ಕೂಡ ಅದನ್ನೇ ಅನುಸರಿಸಿದ್ದೇನೆ” ಎಂದು ಹೇಳಿದರು.

ದಾವಣಗೆರೆ ದಕ್ಷಿಣ ಉಪಚುನಾವಣೆಯ ಟಿಕೆಟ್ ಗೊಂದಲವು ಪಕ್ಷದೊಳಗಿನ ಅಸಮಾಧಾನವನ್ನು ಹೆಚ್ಚಿಸಿದೆ. ಈ ಪ್ರಕರಣದಲ್ಲಿ ನಜೀರ್ ಅಹ್ಮದ್ ಮತ್ತು ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅಮಾನತು ಆಗಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ವೈರಲ್ ಆದ ಆಡಿಯೋ ವಿಚಾರದಲ್ಲಿ ಜಮೀರ್ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿದೆ.

ಕೇರಳ ಪ್ರಚಾರದ ವಿಚಾರದಲ್ಲೂ ಸ್ಪಷ್ಟನೆ ನೀಡಿದ ಜಮೀರ್, “ನಾನು ಕೇರಳಕ್ಕೆ ವೈಯಕ್ತಿಕ ಕಾರಣಕ್ಕಾಗಿ ಹೋಗಿರಲಿಲ್ಲ. ಹೈಕಮಾಂಡ್ ಸೂಚನೆಯ ಮೇರೆಗೆ ಪ್ರಚಾರ ಮಾಡಿದ್ದೇನೆ” ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ದಾವಣಗೆರೆ ಮತ್ತು ಬಾಗಲಕೋಟೆ ಕಡೆಗೆ ತೆರಳಿದ್ದಾಗಿ ಅವರು ವಿವರಿಸಿದರು.

ಒಟ್ಟಿನಲ್ಲಿ, ಟಿಕೆಟ್ ಗೊಂದಲದಿಂದ ಕಾಂಗ್ರೆಸ್ ಒಳರಾಜಕೀಯ ಮತ್ತಷ್ಟು ಗಂಭೀರ ಹಂತಕ್ಕೆ ತಲುಪಿದ್ದು, ಮುಸ್ಲಿಂ ಸಮುದಾಯವೂ ಇಬ್ಬಾಗವಾದ ಲಕ್ಷಣಗಳು ಕಾಣಿಸುತ್ತಿವೆ.

Continue Reading

Trending