ದೇಶ
ಆಂಬ್ಯುಲೆನ್ಸ್‌ನಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ: 150 ಅಡಿ ಎತ್ತರಕ್ಕೆ ಹಾರಿದ ವಾಹನ, ಕೂದಲೆಳೆ ಅಂತರದಲ್ಲಿ ಗರ್ಭಿಣಿ ಪಾರು
ಜಲಗಾಂವ್ (ಮಹಾರಾಷ್ಟ್ರ): ಗರ್ಭಿಣಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್‌ನ ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡು ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡ ಘಟನೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಗುಜರಾತ್ ಪೆಟ್ರೋಲ್ ಪಂಪ್ ಬಳಿಯ ಜಲಗಾಂವ್ ನಗರದ ರಾಷ್ಟ್ರೀಯ ಹೆದ್ದಾರಿ ಫ್ಲೈಓವರ್ ಮೇಲೆ ಬುಧವಾರ ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. MH14 CL0716 ಎಂಬ ಆಂಬ್ಯುಲೆನ್ಸ್ ಇದಾಗಿದ್ದು, ಮನೀಶಾ ಎಂಬ ಗರ್ಭಿಣಿಯನ್ನು ಕರೆದೊಯ್ಯುತ್ತಿತ್ತು. ಈ ವೇಳೆ ಈ ಘಟನೆ ನಡೆದಿದೆ.
ಬೆಂಕಿ ಹೊತ್ತಿಕೊಂಡಿರುವುದನ್ನು ಅರಿತ ಚಾಲಕ ಆಂಬ್ಯುಲೆನ್ಸ್ನಿಂದ ಕೆಳಗೆ ಜಿಗಿದಿದ್ದಾನೆ. ಸ್ಫೋಟದಲ್ಲಿ ಆಂಬ್ಯುಲೆನ್ಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಫೋಟದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದೆ. ಆಂಬ್ಯುಲೆನ್ಸ್ಗೆ ಬೆಂಕಿಹೊತ್ತಿಕೊಂಡ ಕೆಲವೇ ಹೊತ್ತಿನಲ್ಲಿ ಬೆಂಕಿ ಸುತ್ತಲೂ ಆವರಿಸುತ್ತಾ ಬಂದಿದ್ದು, ಬಳಿಕ ಆಂಬುಲೆನ್ಸ್ ಒಳಗಿದ್ದ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಸಮೀಪದಲ್ಲಿದ್ದ ಕೆಲವು ಮನೆಗಳ ಕಿಟಕಿ ಗಾಜುಗಳು ಒಡೆದು ಹೋಗಿರುವುದು ಸೆರೆಯಾಗಿದೆ. ಸ್ಫೋಟದ ತೀವ್ರತೆಗೆ ಬೆಂಕಿ ಭಾರೀ ಎತ್ತರಕ್ಕೆ ಚಿಮ್ಮಿದೆ. ವಾಹನ ತುಂಡಾಗಿ 150 ಅಡಿ ಎತ್ತರಕ್ಕೆ ಹಾರಿದೆ. ಸ್ಫೋಟದ ನಡುಕ ಸುಮಾರು 500 ಮೀಟರ್ ದೂರದವರೆಗೆ ಆವರಿಸಿತ್ತು. ಭಯದಲ್ಲಿ ಜನ ದಿಕ್ಕಾಪಾಲಾಗಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನೆಯಲ್ಲಿ ಯಾರಿಗೂ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಆಂಬ್ಯುಲೆನ್ಸ್ ಧರಂಗಾವ್‌ನಿಂದ ಜಲಗಾಂವ್‌ಗೆ ಬರುತ್ತಿತ್ತು. ಈ ವೇಳೆ ಆಂಬ್ಯುಲೆನ್ಸ್ ಇಂಜಿನ್‌ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಚಾಲಕ, ಆಂಬ್ಯುಲೆನ್ಸ್‌ನಲ್ಲಿದ್ದ ಗರ್ಭಿಣಿ ಮತ್ತು ಅವರ ಕುಟುಂಬಸ್ಥರನ್ನು ಸುರಕ್ಷಿತವಾಗಿ ಕೆಳಗಿಳಿಸಿ ಬೇರೊಂದು ಆಂಬ್ಯುಲೆನ್ಸ್ಗೆ ಹತ್ತಿಸಿದ್ದ. ಬಳಿಕ ಸ್ಪಲ್ಪ ಮುಂದೆ ಹೋಗುತ್ತಿದ್ದಂತೆ ಆಂಬುಲೆನ್ಸ್‌ನ ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ವಾಹನದಲ್ಲಿದ್ದ ಆಮ್ಲಜನಕ ಸಿಲಿಂಡರ್ ಸ್ಫೋಟಗೊಂಡಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಎಲ್ಲರ ಪ್ರಾಣ ಉಳಿದಿದೆ.
ಘಟನೆ ಕುರಿತು ಮಾಹಿತಿ ಪಡೆದ ನಗರಸಭೆ ಹಾಗೂ ಅಗ್ನಿಶಾಮಕ ದಳದವರು ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಒಡೆದ ಸಿಲಿಂಡರ್‌ಗಳು ರಸ್ತೆಯ ಇನ್ನೊಂದು ಬದಿಯಲ್ಲಿ ಬಿದ್ದಿದ್ದರೆ, ಖಾಲಿ ಸಿಲಿಂಡರ್ ವಾಹನದ ಬಳಿ ಬಿದ್ದಿದೆ. ಸೇತುವೆಯ ಕೆಳಗೆ ವಾಹನದ ಇತರೆ ತುಕಡಿಗಳು ಬಿದ್ದಿವೆ. ಸ್ಫೋಟ ತೀವ್ರತೆ ಎಷ್ಟಿತ್ತೆಂದರೆ ಸುತ್ತಲಿನ ಮನೆಗಳಿಗೂ ಇದರ ಬಿಸಿ ತಟ್ಟಿದ್ದು, ಮನೆಯ ಗೋಡೆಗಳು ಬಿರುಕುಬಿಟ್ಟಿವೆ. ಒಂದು ರೀತಿ ಭೂಕಂಪದಂತಹ ಅನುಭವ ತರಿಸಿತು. ಶಬ್ಧ ಕೇಳಿ ಮಲಗಿದ್ದವರೂ ಎದ್ದು ಕುಳಿತರು. ಘಟನೆಯಿಂದಾಗಿ ಹೆದ್ದಾರಿ ಬಂದ್ ಆಗಿತ್ತು. ಅರೆ ಕ್ಷಣ ಏನಾಯಿತೆಂದು ಯಾರಿಗೂ ಅರ್ಥವಾಗಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಘಟನೆಯ ವಿವರ ನೀಡಿದ್ದಾರೆ.
ಕ್ರೀಡೆ
ಕೊಹ್ಲಿಗೆ ಜೊತೆಯಾಗೋದು ಯಾರು? ಆರ್ಸಿಬಿ ಪ್ಲೇಯಿಂಗ್ ಇಲೆವೆನ್ ಗೊಂದಲ
ಐಪಿಎಲ್ 2026ರ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಧರ್ಮಶಾಲಾದ ಹೆಚ್‌ಪಿಸಿಎ ಮೈದಾನದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಆರ್ಸಿಬಿ ತಂಡದಲ್ಲಿ ಆರಂಭಿಕ ಬ್ಯಾಟರ್ ಆಯ್ಕೆಯೇ ದೊಡ್ಡ ಚರ್ಚೆಯ ವಿಷಯವಾಗಿದೆ.
ಗಾಯದ ಕಾರಣ ಕಳೆದ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದ ಇಂಗ್ಲೆಂಡ್ ಆಟಗಾರ ಫಿಲ್ ಸಾಲ್ಟ್ ಇದೀಗ ತಂಡಕ್ಕೆ ಮರಳಿದ್ದಾರೆ. ಆದರೆ ಅವರು ಗುಜರಾತ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವರೇ ಎಂಬುದರ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಈ ಬಗ್ಗೆ ಮಾತನಾಡಿರುವ ಆರ್ಸಿಬಿ ನಾಯಕ Rajat Patidar, “ಫಿಲ್ ಸಾಲ್ಟ್ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಅವರು ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ವೈದ್ಯಕೀಯ ತಂಡದ ನಿಗಾದಲ್ಲಿದ್ದು, ಪಿಚ್ ಪರಿಸ್ಥಿತಿ ನೋಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.
ಆರ್ಸಿಬಿ ಪರ ಆರಂಭಿಕನಾಗಿ Virat Kohli ಕಣಕ್ಕಿಳಿಯುವುದು ಖಚಿತವಾಗಿದೆ. ಆದರೆ ಅವರ ಜೊತೆಗೆ ಫಿಲ್ ಸಾಲ್ಟ್ ಅಥವಾ ವೆಂಕಟೇಶ್ ಅಯ್ಯರ್ ಯಾರಿಗೆ ಅವಕಾಶ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಜೇಕಬ್ ಬೆಥೆಲ್ ಗಾಯಗೊಂಡು ಹೊರಗುಳಿದ ಹಿನ್ನೆಲೆ, ಕಳೆದ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಉತ್ತಮ ಆರಂಭ ಒದಗಿಸಿದ್ದರು.
ಇದೀಗ ಸಾಲ್ಟ್‌ಗೆ ಅವಕಾಶ ನೀಡಬೇಕಾದರೆ ಇನ್‌ಫಾರ್ಮ್‌ನಲ್ಲಿರುವ ಅಯ್ಯರ್ ಅವರನ್ನು ಕೈಬಿಡಬೇಕಾಗಬಹುದು ಅಥವಾ ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಗೆ ಸೇರಿಸಬೇಕಾಗಬಹುದು. ಹೀಗಾಗಿ ಆರಂಭಿಕರ ಆಯ್ಕೆಯೇ ಆರ್ಸಿಬಿ ಮ್ಯಾನೇಜ್ಮೆಂಟ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಧರ್ಮಶಾಲಾ ಪಿಚ್ ಪರಿಸ್ಥಿತಿಯನ್ನಾಧರಿಸಿ ಅಂತಿಮ ಪ್ಲೇಯಿಂಗ್ ಇಲೆವೆನ್ ಪ್ರಕಟವಾಗಲಿದ್ದು, ಆರ್ಸಿಬಿ ಪರ ಕೊಹ್ಲಿ ಜೊತೆ ಇನಿಂಗ್ಸ್ ಆರಂಭಿಸುವ ಆಟಗಾರ ಯಾರು ಎಂಬುದೇ ಈಗ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ದೇಶ
‘ಡಾನ್ 3’ ತೊರೆದ ರಣವೀರ್ ಸಿಂಗ್‌ಗೆ ಸಂಕಷ್ಟ; FWICEನಿಂದ ಪರೋಕ್ಷ ಬ್ಯಾನ್?
ಮುಂಬೈ: ಬಾಲಿವುಡ್ ನಟ Ranveer Singh ಅವರಿಗೆ ಇದೀಗ ದೊಡ್ಡ ಸಂಕಷ್ಟ ಎದುರಾಗುವ ಸಾಧ್ಯತೆ ಕಾಣಿಸುತ್ತಿದೆ. ಬಹುನಿರೀಕ್ಷಿತ Don 3 ಸಿನಿಮಾದಿಂದ ದಿಢೀರನೆ ಹೊರನಡೆದ ಹಿನ್ನೆಲೆಯಲ್ಲಿ, ಸಿನಿಮಾ ನೌಕರರ ಒಕ್ಕೂಟವಾದ Federation of Western India Cine Employees ನಟನ ವಿರುದ್ಧ ಅಸಹಕಾರ ತೋರಲು ನಿರ್ಧರಿಸಿದೆ.
Farhan Akhtar ನಿರ್ದೇಶನದ ಈ ಚಿತ್ರವನ್ನು Excel Entertainment ನಿರ್ಮಿಸುತ್ತಿತ್ತು. ಶೂಟಿಂಗ್ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ ರಣವೀರ್ ಸಿಂಗ್ ಸಿನಿಮಾ ತೊರೆದಿರುವುದು ನಿರ್ಮಾಣ ಸಂಸ್ಥೆಗೆ ಭಾರೀ ಆರ್ಥಿಕ ನಷ್ಟ ಉಂಟುಮಾಡಿದೆ ಎಂದು ಹೇಳಲಾಗಿದೆ. ಚಿತ್ರದ ಪ್ರಿ-ಪ್ರೊಡಕ್ಷನ್ ಹಾಗೂ ಯೋಜನೆಗಳಿಗೆ ಈಗಾಗಲೇ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿತ್ತು ಎನ್ನಲಾಗಿದೆ.
FWICE ಮುಖ್ಯ ಸಲಹೆಗಾರ Ashoke Pandit ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, “ಚಿತ್ರೀಕರಣಕ್ಕೆ ಕೆಲವೇ ದಿನಗಳಿರುವಾಗ ನಟರು ಸಿನಿಮಾದಿಂದ ಹೊರನಡೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ಸರಿಯಾದ ಬೆಳವಣಿಗೆ ಅಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
FWICE ಅಧ್ಯಕ್ಷ ಬಿ.ಎನ್. ತಿವಾರಿ, ಪ್ರಧಾನ ಕಾರ್ಯದರ್ಶಿ ಅಶೋಕ್ ದುಬೆ ಹಾಗೂ ಖಜಾಂಚಿ ಗಂಗೇಶ್ವರಲಾಲ್ ಶ್ರೀವಾಸ್ತವ್ ಭಾಗವಹಿಸಿದ್ದ ಉನ್ನತ ಮಟ್ಟದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಮೊದಲು ವಿವಾದವನ್ನು ಪರಿಹರಿಸಲು ನಿರ್ಮಾಪಕರ ಸಂಘದ ಮಟ್ಟದಲ್ಲೂ ರಾಜಿ ಸಂಧಾನದ ಪ್ರಯತ್ನ ನಡೆದಿತ್ತು. ರಣವೀರ್ ಸಿಂಗ್ ಮತ್ತು ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ನಡುವೆ ನಷ್ಟ ಪರಿಹಾರ ಹಾಗೂ ಸೆಟಲ್ಮೆಂಟ್ ಕುರಿತು ಮಾತುಕತೆಗಳು ನಡೆದರೂ, ಅವು ಫಲಕಾರಿಯಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಇದೀಗ ಈ ಅಸಹಕಾರ ಕ್ರಮ ರಣವೀರ್ ಸಿಂಗ್ ಅವರ ಮುಂದಿನ ಸಿನಿಮಾಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇತ್ತೀಚೆಗೆ ಬಿಡುಗಡೆಯಾದ ‘ಧುರಂಧರ್’ ಚಿತ್ರದ ಯಶಸ್ಸಿನ ಬಳಿಕ ಅವರ ಬೇಡಿಕೆ ಹೆಚ್ಚಾಗಿದ್ದರೂ, ಈ ಬೆಳವಣಿಗೆ ಬಾಲಿವುಡ್‌ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ರಣವೀರ್ ಸಿಂಗ್ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಹೆಚ್ಚಾಗಿದೆ.
ದೇಶ
16 ವರ್ಷದ ಸೂಪರ್‌ಹಿಟ್ ಜೋಡಿಗೆ ಭವ್ಯ ಗೌರವ: ‘ಕ್ರೇಜಿ-ಬ್ರಹ್ಮ’ ಕಾರ್ಯಕ್ರಮ
ಬೆಂಗಳೂರು: ಕನ್ನಡ ಚಿತ್ರರಂಗದ ಅದ್ಭುತ ಜೋಡಿಯಾದ V. Ravichandran ಹಾಗೂ Hamsalekha ಅವರ ಸಿನಿ ಪಯಣವನ್ನು ಸಂಭ್ರಮಿಸುವ ಸಲುವಾಗಿ ಮೇ 30ರಂದು ‘ಕ್ರೇಜಿ-ಬ್ರಹ್ಮ’ ರೀಯೂನಿಯನ್ ಮೆಗಾ ಈವೆಂಟ್ ಆಯೋಜಿಸಲಾಗಿದೆ.
ಕೆಂಗೇರಿ ಬಳಿಯ ಜೆ.ಕೆ. ಗ್ರ್ಯಾಂಡ್ ಅರೆನಾದಲ್ಲಿ ಸಂಜೆ 6 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಭಾಗಿಯಾಗುವ ನಿರೀಕ್ಷೆಯಿದೆ. ಪ್ರಸ್ತುತ್ ಇನ್ನೋವೇಟಿವ್ ಕ್ರಿಯೇಷನ್ಸ್ ಮತ್ತು ಸೊಲ್ಯೂಷನ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿನಯ್ ಹಾಗೂ ಕಲಾಲೂಹ ಸಂಸ್ಥಾಪಕಿ ಡಾ. ಚೇತನಾ ಆರ್.ಎಸ್. ಈ ಅದ್ಧೂರಿ ಸಮಾರಂಭವನ್ನು ಆಯೋಜಿಸಿದ್ದಾರೆ.
1980 ಮತ್ತು 90ರ ದಶಕದಲ್ಲಿ ರವಿಚಂದ್ರನ್ ನಟನೆಯ ಹಾಗೂ ನಿರ್ದೇಶನದ ಸಿನಿಮಾಗಳಿಗೆ ಹಂಸಲೇಖ ಸಂಗೀತ ನೀಡಿದ್ದ ಹಾಡುಗಳು ಭಾರೀ ಜನಪ್ರಿಯತೆ ಪಡೆದಿದ್ದವು. ಸುಮಾರು 16 ವರ್ಷಗಳ ಕಾಲ ಈ ಜೋಡಿ ಕನ್ನಡ ಸಿನಿರಂಗದಲ್ಲಿ ಅಚ್ಚಳಿಯದ ಗುರುತು ಮೂಡಿಸಿತ್ತು.
ಕಾರ್ಯಕ್ರಮಕ್ಕೆ ಸಾಮಾನ್ಯ ಹಾಗೂ ವಿ.ಐ.ಪಿ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು, ಬುಕ್ ಮೈ ಶೋ ಮೂಲಕ ಟಿಕೆಟ್ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರೇಕ್ಷಕರಿಗೆ ಯಾವುದೇ ತೊಂದರೆ ಆಗದಂತೆ ಪಾರ್ಕಿಂಗ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸಮಾರಂಭದ ಕುರಿತು ಮಾತನಾಡಿದ ಹಂಸಲೇಖ, “ಇದು ಎಲ್ಲರಿಗೂ ಒಂದು ಈವೆಂಟ್ ಆಗಿರಬಹುದು. ಆದರೆ ನಮ್ಮಿಬ್ಬರಿಗೆ ಇದೊಂದು ವಿಶೇಷ ವಿದ್ಯಮಾನ. ರವಿಚಂದ್ರನ್ ಅವರ ಕಟೌಟ್ ನೋಡಿ ತುಂಬಾ ಖುಷಿಯಾಯಿತು. ಪಕ್ಕದಲ್ಲೇ ನನ್ನ ಕಟೌಟ್ ಕೂಡ ಹಾಕಿದ್ದಾರೆ. ಕಾರ್ಯಕ್ರಮ ಇನ್ನೂ ಅದ್ಭುತವಾಗಿರುತ್ತದೆ” ಎಂದು ಹೇಳಿದರು.
ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿ, “ನನ್ನ ಹಾಗೂ ಹಂಸಲೇಖ ಅವರ ಕಾಂಬಿನೇಶನ್‌ನಲ್ಲಿ ನೂರಾರು ಸೂಪರ್ ಹಿಟ್ ಹಾಡುಗಳು ಬಂದಿವೆ. ‘ಪ್ರೇಮಲೋಕ’ದಿಂದ ಆರಂಭವಾದ ನಮ್ಮ ಜೋಡಿ ಇಂದಿಗೂ ಜನಮನದಲ್ಲಿ ಜೀವಂತವಾಗಿದೆ. ನಾವು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡದೇ ಇರಬಹುದು. ಆದರೆ ನನ್ನ ಮನಸ್ಸಿನಲ್ಲಿ ಅವರು, ಅವರ ಮನಸ್ಸಿನಲ್ಲಿ ನಾನು ಸದಾ ಇರುತ್ತೇವೆ. ಒಂದೇ ದೇಹ ಎರಡು ಜೀವ ಇದ್ದ ಹಾಗೆ” ಎಂದು ಭಾವುಕರಾದರು.
ಇದೇ ವೇಳೆ, ಮೇ 30ರಂದು ತಮ್ಮ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಶಾಲು, ಕೇಕ್ ಹಾಗೂ ಹಾರಗಳನ್ನು ತರಬಾರದು ಎಂದು ರವಿಚಂದ್ರನ್ ಮನವಿ ಮಾಡಿದ್ದಾರೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ರವಿಚಂದ್ರನ್ ಮತ್ತು ಹಂಸಲೇಖ ಅವರ 80 ಅಡಿ ಕಟೌಟ್‌ಗಳನ್ನು ಅನಾವರಣಗೊಳಿಸಲಾಗಿದೆ.
-
ದೇಶ3 hours ago‘ಡಾನ್ 3’ ತೊರೆದ ರಣವೀರ್ ಸಿಂಗ್‌ಗೆ ಸಂಕಷ್ಟ; FWICEನಿಂದ ಪರೋಕ್ಷ ಬ್ಯಾನ್?
-
ದೇಶ3 hours ago16 ವರ್ಷದ ಸೂಪರ್‌ಹಿಟ್ ಜೋಡಿಗೆ ಭವ್ಯ ಗೌರವ: ‘ಕ್ರೇಜಿ-ಬ್ರಹ್ಮ’ ಕಾರ್ಯಕ್ರಮ
-
ದೇಶ3 hours ago“ತಮಿಳುನಾಡಿಗೆ ತಡೆಯುವ ಹಕ್ಕಿಲ್ಲ”: ಮೇಕೆದಾಟು ಬಗ್ಗೆ ಡಿಕೆ ಸ್ಪಷ್ಟನೆ
-
ದೇಶ3 hours agoದಿವಂಗತ ಧರ್ಮೇಂದ್ರರಿಗೆ ಪದ್ಮವಿಭೂಷಣ; ರಾಷ್ಟ್ರಪತಿಯಿಂದ ಹೇಮಾ ಮಾಲಿನಿಗೆ ಪ್ರಶಸ್ತಿ ಪ್ರದಾನ
-
ಕ್ರೀಡೆ9 minutes agoಕೊಹ್ಲಿಗೆ ಜೊತೆಯಾಗೋದು ಯಾರು? ಆರ್ಸಿಬಿ ಪ್ಲೇಯಿಂಗ್ ಇಲೆವೆನ್ ಗೊಂದಲ
-
ದೇಶ3 hours agoಕೃಷ್ಣಾ ನದಿಗೆ ಹೊಸ ಬ್ಯಾರೇಜ್? ಕರ್ನಾಟಕ-ತೆಲಂಗಾಣ ಸಚಿವರ ಮಹತ್ವದ ಸಭೆ
