Connect with us

ರಾಜ್ಯ

ಅಭಿನಯ ಸರಸ್ವತಿ ಬಿ. ಸರೋಜಾ ದೇವಿ ನಟಿಸಿದ ಕನ್ನಡ ಕೊನೆಯ ಸಿನಿಮಾ ಇದು

ಬೆಂಗಳೂರು: ಕನ್ನಡ ಚಿತ್ರರಂಗದ ಸುವರ್ಣಯುಗದ ದಂತಕತೆ, ‘ಅಭಿನಯ ಸರಸ್ವತಿ’ ಬಿ. ಸರೋಜಾ ದೇವಿ (87) ಅವರು  ಇಂದು ಕೊನೆಯುಸಿರೆಳೆದಿದ್ದಾರೆ. ಅವರ ನಿಧನದಿಂದ ಕನ್ನಡ ಚಿತ್ರರಂಗ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಒಂದು ಯುಗವೇ ಕೊನೆಗೊಂಡಂತಾಗಿದೆ. 1955ರಲ್ಲಿ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸರೋಜಾ ದೇವಿ, ಕನ್ನಡ, ತಮಿಳು, ತೆಲುಗು, ಮತ್ತು ಹಿಂದಿ ಚಿತ್ರರಂಗವನ್ನು ತಮ್ಮ ಅದ್ಭುತ ಅಭಿನಯದಿಂದ ಆಳಿದರು.

ಸರೋಜಾ ದೇವಿ ಅವರು ಕೊನೆಯದಾಗಿ ಕನ್ನಡದಲ್ಲಿ 2019ರಲ್ಲಿ ತೆರೆಕಂಡ ‘ನಟ ಸಾರ್ವಭೌಮ’ ಚಿತ್ರದಲ್ಲಿ ದಿವಂಗತ ನಟ ಡಾ. ಪುನೀತ್ ರಾಜ್‌ಕುಮಾರ್ ಜೊತೆಗೆ ನಟಿಸಿದ್ದರು. ಈ ಚಿತ್ರದಲ್ಲಿ ಅವರ ಕಿರು ಪಾತ್ರವು ಅಭಿಮಾನಿಗಳಿಗೆ ಭಾವನಾತ್ಮಕ ಕ್ಷಣವಾಗಿತ್ತು. ಆದರೆ, ಈಗ ಈ ಇಬ್ಬರೂ ದಿಗ್ಗಜ ಕಲಾವಿದರು ನಮ್ಮನ್ನು ಅಗಲಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಪುನೀತ್ ರಾಜ್‌ಕುಮಾರ್ ಅವರ ಅಗಲಿಕೆಯ ನೋವಿನಿಂದ ಚೇತರಿಸಿಕೊಳ್ಳುವ ಮೊದಲೇ ಸರೋಜಾ ದೇವಿ ಅವರ ನಿಧನವು ಅಭಿಮಾನಿಗಳಿಗೆ ಮತ್ತೊಂದು ಆಘಾತವಾಗಿದೆ.

ಕನ್ನಡ ಚಿತ್ರರಂಗದಲ್ಲಿ ಸರೋಜಾ ದೇವಿ ಅವರ ಜೋಡಿ ವರನಟ ಡಾ. ರಾಜ್‌ಕುಮಾರ್ ಜೊತೆಗೆ ಒಂದು ಗೆಲುವಿನ ಸೂತ್ರವಾಗಿತ್ತು. ‘ಕಿತ್ತೂರು ಚೆನ್ನಮ್ಮ’ ಚಿತ್ರದಲ್ಲಿ ಅವರ ಗಂಭೀರ ಅಭಿನಯ, ‘ಸ್ಕೂಲ್ ಮಾಸ್ಟರ್’ ಚಿತ್ರದ ಮುಗ್ಧತೆ, ಮತ್ತು ‘ಅಮರಶಿಲ್ಪಿ ಜಕಣಾಚಾರಿ’ಯ ಸೌಂದರ್ಯವು ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚೊತ್ತಿದೆ. ಈ ಚಿತ್ರಗಳು ಅವರ ವೈವಿಧ್ಯಮಯ ಪಾತ್ರಗಳಿಗೆ ಸಾಕ್ಷಿಯಾಗಿವೆ.

ಸರೋಜಾ ದೇವಿ ಅವರ ಯಶಸ್ಸಿನ ರಹಸ್ಯ ಕೇವಲ ಅವರ ಸೌಂದರ್ಯವಲ್ಲ, ಬದಲಿಗೆ ಪಾತ್ರಗಳಿಗೆ ಜೀವ ತುಂಬುವ ಅವರ ಅನನ್ಯ ಸಾಮರ್ಥ್ಯವಾಗಿತ್ತು. ದುಃಖದ ದೃಶ್ಯಗಳಲ್ಲಿ ಕಣ್ಣೀರು ಹಾಕದೆ, ಕೇವಲ ಕಣ್ಣಿನ ನೋಟದಿಂದಲೇ ಭಾವನೆಗಳನ್ನು ವ್ಯಕ್ತಪಡಿಸುವ ಅವರ ಕಲೆಗೆ ‘ಅಭಿನಯ ಶಾರದೆ’ ಎಂಬ ಬಿರುದು ಒಲಿದಿತ್ತು. ಅವರ ನಗು, ನಾಟ್ಯ, ಮತ್ತು ಸಂಭಾಷಣೆಯ ಶೈಲಿಯು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತಿತ್ತು. ಅವರು ಕೇವಲ ನಟಿಯಾಗಿರದೆ, ಅನೇಕ ಯುವತಿಯರಿಗೆ ಸ್ಫೂರ್ತಿಯ ಮೂಲವಾಗಿದ್ದರು.

ರಾಜಕೀಯ

DK Shivakumar ಸಿಎಂ ಆಗಬೇಕು: ರಾಮನಗರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷ ಆಗ್ರಹ

ರಾಮನಗರ:
ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಸಿಎಂ ಸ್ಥಾನ ಸಿಗಬೇಕು ಎಂಬ ಆಗ್ರಹವನ್ನು ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “DK Shivakumar ನಮ್ಮ ನಾಯಕರು. ಅವರ ಶ್ರಮ ಹಾಗೂ ಹೋರಾಟಕ್ಕೆ ಪ್ರತಿಫಲ ಸಿಗಬೇಕು. ನಾನು ಈ ಜಿಲ್ಲೆಯಲ್ಲಿ ಹುಟ್ಟಿದ್ದು, ಅವರು ಕೂಡ ನಮ್ಮ ಜನರು. ಅವರಿಗೆ ಗೌರವ ಸಿಗಬೇಕು ಎಂದು ಹೇಳುವುದು ನನ್ನ ಹಕ್ಕು,” ಎಂದು ಸ್ಪಷ್ಟಪಡಿಸಿದರು.

“ನಾನು ಈಗಲೂ ನನ್ನ ಹಿಂದಿನ ಹೇಳಿಕೆಗೆ ಬದ್ಧನಾಗಿದ್ದೇನೆ. DK Shivakumar ಸಿಎಂ ಆಗಬೇಕು ಎಂಬ ಮಾತು ಹಿಂದೆ ಹೇಳಿದ್ದೆ, ಈಗಲೂ ನಿಂತಿದ್ದೇನೆ,” ಎಂದರು.

ಆ.8ರಂದು ಕಾಂಗ್ರೆಸ್ ಹೋರಾಟ:
ಆಗಸ್ಟ್ 8ರಂದು ನಡೆಯಲಿರುವ ಚುನಾವಣಾ ಅಕ್ರಮದ ವಿರುದ್ಧದ ಕಾಂಗ್ರೆಸ್ ಹೋರಾಟ ಕುರಿತು ಮಾತನಾಡಿದ ಅವರು, “ಈ ಹೋರಾಟಕ್ಕೆ ಹೈಕಮಾಂಡ್ ರೂಪುರೇಷೆ ನೀಡಿದೆ. ರಾಷ್ಟ್ರೀಯ ನಾಯಕರು ನೇತೃತ್ವ ವಹಿಸುತ್ತಿದ್ದಾರೆ. ನಮ್ಮ ಜಿಲ್ಲೆಯಿಂದ 20,000 ಮಂದಿ ಪಾಲ್ಗೊಳ್ಳುತ್ತಾರೆ,” ಎಂದು ಹೇಳಿದರು.

ಇವಿಎಂ ಅಕ್ರಮ ಕುರಿತು ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲವಾದರೂ, “ನಮ್ಮ ರಾಷ್ಟ್ರ ನಾಯಕರು ಎಲ್ಲಾ ವಿವರಗಳನ್ನು ಬಹಿರಂಗಪಡಿಸುತ್ತಾರೆ,” ಎಂದು ತಿಳಿಸಿದರು.

Continue Reading

ಬೆಂಗಳೂರು

ಅಲ್ಪಸಂಖ್ಯಾತರ ಸಾಮೂಹಿಕ ವಿವಾಹಕ್ಕೆ ₹50,000 ಸಹಾಯಧನ: ಜಮೀರ್ ಅಹ್ಮದ್ ಘೋಷಣೆ

ಬೆಂಗಳೂರು:
ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ಸಾಮೂಹಿಕ ವಿವಾಹಗಳಿಗೆ ಇನ್ಮುಂದೆ ಸರ್ಕಾರದಿಂದ ₹50,000 ಸಹಾಯಧನ ಸಿಗಲಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಘೋಷಿಸಿರುವ ಬಜೆಟ್ ಯೋಜನೆಗೆ ಈಗ ಅನುಮೋದನೆ ಲಭಿಸಿದ್ದು, ಈ ನಿಟ್ಟಿನಲ್ಲಿ ಬಡ ಅಲ್ಪಸಂಖ್ಯಾತರಿಗೆ ಸಹಾಯ ಮಾಡಲು ಸರ್ಕಾರ ಸಜ್ಜಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು:
ಮೌಲಾನಾ ಅಬ್ದುಲ್ ಕಲಾಂ ಸ್ಕೂಲ್‌ ಸೇರಿದಂತೆ ಪ್ರತಿಭಾವಂತ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಗುತ್ತಿದೆ. ಈಗಾಗಲೇ 214 ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಲ್ಯಾಪ್‌ಟಾಪ್ ವಿತರಣೆ ನಡೆಸಲಾಗಿದೆ.

ಮದರಸಾಗಳಲ್ಲಿ ಕನ್ನಡ ಕಲಿಕೆ:
ಮದರಸಾಗಳಲ್ಲಿ ಕನ್ನಡ ಕಲಿಕೆ ಆರಂಭಿಸುವ ಯೋಜನೆಯೊಂದಿಗೆ, ಮೊದಲ ಹಂತದಲ್ಲಿ 200 ಮೌಲ್ವಿಗಳನ್ನು ಆಯ್ಕೆ ಮಾಡಲಾಗಿದೆ. ಮೂವರು ತಿಂಗಳಲ್ಲಿ ಅವರಿಗೆ ಕನ್ನಡ ಭಾಷಾ ತರಬೇತಿ ನೀಡಲಾಗುವುದು.

2,000 ಮದರಸಾಗಳಿಗೆ ಕನ್ನಡ ಪಾಠ್ಯಕ್ರಮ:
ರಾಜ್ಯದಲ್ಲಿ 2 ಸಾವಿರ ಮದರಸಾಗಳಿಗೆ ಕನ್ನಡ ಕಲಿಕೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಅಲ್ಪಸಂಖ್ಯಾತ ಆಯೋಗ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅಧ್ಯಕ್ಷ ಯು. ನಿಸಾರ್ ಅಹಮದ್ ಹೇಳಿದ್ದಾರೆ. very soon ಈ ಪಾಠ್ಯಕ್ರಮ ಮುದ್ರಣಕ್ಕೂ ಕ್ರಮ ಜರಗಲಿದೆ.

Continue Reading

ಅಪರಾಧ

ಧರ್ಮಸ್ಥಳ ಶವ ಹೂತು ಪ್ರಕರಣ: ಮೂರು ಅಸ್ಥಿಪಂಜರ ಪತ್ತೆ, ಎಸ್‌ಐಟಿ ತನಿಖೆಗೆ ಹೊಸ ತಿರುವು!

ದಕ್ಷಿಣ ಕನ್ನಡ, ಆಗಸ್ಟ್ 5 – ಧರ್ಮಸ್ಥಳದ ಸುತ್ತಮುತ್ತಲ ಶವ ಹೂತು ಪ್ರಕರಣಕ್ಕೆ ದಿನೇ ದಿನೆ ನ್ಯೂ ಟ್ವಿಸ್ಟ್ ಸಿಗುತ್ತಿದ್ದು, ಇದೀಗ ಮೂರು ಅಸ್ಥಿಪಂಜರಗಳು ಪತ್ತೆಯಾಗಿವೆ ಎಂಬ ಸುದ್ದಿ ಚಕ್ಕರಿಗೊಳ್ಳುತ್ತಿದೆ. ಈ ಕುರಿತು ದೂರುದಾರ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಎಸ್‌ಐಟಿ ತಂಡದ ಶೋಧ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿನ್ನೆ ನಡೆದ ಉತ್ಖನನದ ವೇಳೆ:

  • ಸ್ಟಾಟ್ ನಂಬರ್ 12ರ ಬಳಿ ಕಾರ್ಮಿಕರಿಂದ ಅಗೆಸಿದಾಗ, ಮೂರು ಅಸ್ಥಿಪಂಜರಗಳು ಹಾಗೂ ಮಹಿಳೆಯ ಸೀರೆ ಪತ್ತೆಯಾಗಿವೆ.
  • ಸುಮಾರು 140 ಮೂಳೆಗಳ ತುಂಡುಗಳು ಪತ್ತೆಯಾದ ಕುರಿತು ವರದಿ ಇದೆ.
  • ಅಸ್ಥಿಪಂಜರಗಳನ್ನು ತಕ್ಷಣವೇ ಕೆಎಂಸಿ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ.

ಇಂದಿನ ಉತ್ಖನನ:

  • ನೇತ್ರಾವತಿ ನದಿಯ ದಡದ ಬಳಿ 11ನೇ ಪಾಯಿಂಟ್‌ನಲ್ಲಿ ಅಗೆತ ಕೆಲಸ ನಡೆಯುತ್ತಿದೆ.
  • 6 ಅಡಿಯವರೆಗೆ ಶೋಧ ನಡೆದ ಬಳಿಕ ಸಾಕ್ಷ್ಯ ಸಿಕ್ಕದರೆ ಮುಂದಿನ ಪಾಯಿಂಟ್‌ಗೆ ಹೋಗುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಪೂರ್ವ ಘಟನೆ:

  • ಜುಲೈ 31ರಂದು 6ನೇ ಗುರುತುಸ್ಥಳದಲ್ಲಿ ಅಸ್ಥಿಪಂಜರ ಪತ್ತೆಯಾದ ಹಿನ್ನೆಲೆ, ಎಸ್‌ಐಟಿ ಅಧಿಕಾರಿಗಳಾದ ಐಪಿಎಸ್ ಜಿತೇಂದ್ರ ಕುಮಾರ್ ದಯಾಮ ಅವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು, ಆಧಾರದ ಮೇಲೆ UDR ಪ್ರಕರಣ ದಾಖಲಾಗಿದೆ.
Continue Reading

Trending