ಬಿಬಿಎಂಪಿ
ರಸ್ತೆ ಅವ್ಯವಹಾರಕ್ಕೆ ಬೀಳುತ್ತೆ ಬ್ರೇಕ್ ಗುಣಮಟ್ಟ ನಕಲಿ ಬಿಲ್ ದೂರಿಗೆ ಸಿದ್ಧವಾಗಿದೆ ಆ್ಯಪ್

ನಕಲಿ ಬಿಲ್ ದೂರಿಗೆ ಸಿದ್ಧವಾಗಿದೆ ಆ್ಯಪ್
ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ ಕೆಲವು ಮಹತ್ವದ ಬದಲಾವಣೆಯನ್ನು ತರಲು ಸಚಿವ ಸತೀಶ್ ಜಾರಕಿಹೊಳಿ ಮುಂದಾಗಿದ್ದಾರೆ. ಕರ್ನಾಟಕದ ರಸ್ತೆಗಳ ಬಗ್ಗೆ ದೂರುಗಳ ಮಹಾಪೂರವೇ ಬರುತ್ತಿರುತ್ತವೆ. ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ತಲತಲಾಂತರದ ಸಮಸ್ಯೆಯಾಗಿದೆ. ಇತ್ತ ರಸ್ತೆ ನಿರ್ಮಾಣವಾಗುತ್ತಿದ್ದಂತೆ ಅತ್ತ ಕಿತ್ತುಕೊಂಡು ಹೋಗಿರುತ್ತದೆ. ಈ ಮೂಲಕ ಜನರ ಕೋಟ್ಯಂತರ ರೂಪಾಯಿ ರಸ್ತೆಯಲ್ಲಿ ಹೋಮ ಮಾಡಿದಂತೆ ಆಗುತ್ತದೆ. ಅಲ್ಲದೆ, ಇದರಲ್ಲಿ ಸಾಕಷ್ಟು ಅವ್ಯವಹಾರಗಳೂ ನಡೆಯುತ್ತವೆ. ರಸ್ತೆಯನ್ನೇ ಮಾಡದೆ ನಕಲಿ ಬಿಲ್ ಸೃಷ್ಟಿಸಿ ದುಡ್ಡು ಹೊಡೆಯುವವರೂ ಇದ್ದಾರೆ. ಆದರೆ, ಇನ್ನು ಈ ಎಲ್ಲದಕ್ಕೂ ಬ್ರೇಕ್ ಬೀಳಲಿದೆ. ರಸ್ತೆ ಕಾಮಗಾರಿಗಳ ಗುಣಮಟ್ಟದ ಪರಿಶೀಲನೆ ಸೇರಿದಂತೆ ಸಾರ್ವಜನಿಕರಿಂದ ಬರುವ ದೂರುಗಳಿಗಾಗಿ ಆ್ಯಪ್‌ವೊಂದು ಸಿದ್ಧವಾಗುತ್ತಿದೆ. ಕಳಪೆ ಕಾಮಗಾರಿಗಳ ಮೇಲೆ ಸರ್ಕಾರದಿಂದ ಕಟ್ಟೆಚ್ಚರ ವಹಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯಿಂದ ನಿಗಾ ವಹಿಸಲು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಕಾಪಾಡುವ ಸಂಬಂಧ ಈಗ ಆ್ಯಪ್ ತಯಾರಿಕೆಗೆ ಮೊರೆ ಹೋಗಲಾಗಿದೆ. ಕಾಮಗಾರಿಗಳಲ್ಲಿ ಕಳಪೆ ಕಂಡು ಬಂದರೆ ಈ ಆ್ಯಪ್ ಮೂಲಕ ದೂರು ದಾಖಲು ಮಾಡಲು ಅವಕಾಶ ಇದೆ. ಈಗಾಗಲೇ ಆ್ಯಪ್ ಸಿದ್ಧತೆ ಕಾರ್ಯ ಶುರವಾಗಿದೆ. ಶೀಘ್ರದಲ್ಲೇ ಲೋಕೋಪಯೋಗಿ ಇಲಾಖೆಯಿಂದ ಆ್ಯಪ್ ಬಿಡುಗಡೆ ಮಾಡಲಾಗುತ್ತದೆ. ಆ್ಯಪ್ ಟ್ರಯಲ್ ನಡೆಯುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ. ಆ್ಯಪ್‌ನಲ್ಲಿ ನಕಲಿ ಬಿಲ್, ಕಳಪೆ ಕಾಮಗಾರಿ, ಡಬಲ್ ಬಿಲ್ ಸೇರಿದಂತೆ ವಿವಿಧ ದೂರುಗಳನ್ನು ದಾಖಲಿಸಲು ವ್ಯವಸ್ಥೆ ಮಾಡಲಾಗಿದೆ. ಕಳಪೆ ಕಾಮಗಾರಿಯ ಪೋಟೊ ಅಥಾವ ವಿಡಿಯೊ ಸಮೇತ ಇಲ್ಲಿ ದೂರು ದಾಖಲಿಸಬಹುದಾಗಿದೆ. ಆ ಮೂಲಕ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಮೇಲೆ ಕಟ್ಟೆಚ್ಚರ ವಹಿಸಬಹುದು. ಆ ನಿಟ್ಟಿನಲ್ಲಿ ಪಾರದರ್ಶಕ ಹಾಗೂ ಗುಣಮಟ್ಟದ ಕೆಲಸಕ್ಕೆ ಆದ್ಯತೆ ನೀಡಲು ಮುಂದಾಗಲಾಗಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ನಮ್ಮ ರಾಜ್ಯದ ರಸ್ತೆಗಳನ್ನು ನಿರ್ಮಾಣ ಮಾಡಿದ ಗುತ್ತಿಗೆದಾರರೇ ಐದು ವರ್ಷದವರೆಗೆ ನಿರ್ವಹಣೆ ಮಾಡಬೇಕು ಎಂಬ ಹೊಸ ನಿಯಮವನ್ನು ಜಾರಿಗೆ ತರುತ್ತಿದ್ದೇವೆ.
ಬಿಬಿಎಂಪಿ
ಜಿಬಿಎ ಚುನಾವಣೆ ಪೂರ್ವಸಿದ್ಧತೆ: ನವೆಂಬರ್ 1ರೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ – ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದ ಪೂರ್ವಸಿದ್ಧತೆಗಳನ್ನು ನವೆಂಬರ್ 1ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಹಿರಿಯ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಚುನಾವಣೆಗಾಗಿ ಮತದಾರರ ನೋಂದಣಿ ನಿಯಮಗಳನ್ನು ಹೇಗೆ ರೂಪಿಸಬೇಕು ಎಂಬ ಕುರಿತು ಚುನಾವಣಾ ಆಯೋಗದ ಅಭಿಪ್ರಾಯವನ್ನು ಕೇಳಲಾಗುವುದು,” ಎಂದು ಸ್ಪಷ್ಟಪಡಿಸಿದರು.
ಚುನಾವಣೆ ಹಕ್ಕು ಕಾಪಾಡುವ ಕುರಿತು ಮಾರ್ಗದರ್ಶನ:
ಪಕ್ಷದ ಕಾರ್ಯಕರ್ತರು ಮತ್ತು ಬ್ಲಾಕ್ ಅಧ್ಯಕ್ಷರಿಗೆ, ತಮ್ಮ ಮತದಾನದ ಹಕ್ಕನ್ನು ಕಾಪಾಡಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಲಾಗಿದೆ. “ಶಾಸಕರನ್ನು ಹಾಗೂ ಬ್ಲಾಕ್ ಲೆವಲ್ ನಾಯಕರನ್ನು ಮತ್ತೊಮ್ಮೆ ಸಭೆಗೆ ಕರೆದು ಸಿದ್ಧತೆ ಕುರಿತ ಚರ್ಚೆ ನಡೆಯಲಿದೆ,” ಎಂದರು.
ಇಂಡಿಯಾ ಒಕ್ಕೂಟ ಮತ್ತು ಪ್ರತಿಭಟನೆ ಕುರಿತು ಸ್ಪಷ್ಟನೆ:
“ಮುಖ್ಯಮಂತ್ರಿಗಳಿಗೆ ಇಂಡಿಯಾ ಒಕ್ಕೂಟದ ಸಭೆಗೆ ಆಹ್ವಾನ ಇದೆ. ನಾನು ಇಲ್ಲಿ ಪ್ರತಿಭಟನಾ ಸಭೆಗಾಗಿ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿದ್ದೇನೆ,” ಎಂದು ಡಿಸಿಎಂ ಹೇಳಿದರು. “ಸ್ವಾತಂತ್ರ ಉದ್ಯಾನದಲ್ಲಿ ಮತಚೂರಿ ವಿರುದ್ಧsymbolic ಪ್ರತಿಭಟನೆ ನಡೆಯಲಿದ್ದು, ಇದು ನ್ಯಾಯಾಲಯದ ಆದೇಶದಂತೆ ಹಮ್ಮಿಕೊಳ್ಳಲಾಗಿದೆ,” ಎಂದು ಹೇಳಿದರು.
ರಾಜ್ಯಮಟ್ಟದ ಪ್ರತಿಭಟನೆ:
ಪ್ರತಿಯೊಬ್ಬ ಜಿಲ್ಲೆಯಿಂದ ಕನಿಷ್ಠ 50 ನಾಯಕರು, ಕಾರ್ಯಕರ್ತರು, ಪರಾಜಿತ ಅಭ್ಯರ್ಥಿಗಳು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಲಾಗಿದೆ. “ಬೆಂಗಳೂರು ಮಾತ್ರವಲ್ಲ, ಇಡೀ ಕರ್ನಾಟಕದಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ,” ಎಂದು ಅವರು ಹೇಳಿದ್ದಾರೆ.
ಬಿಬಿಎಂಪಿ
2025ರ ಅಂತ್ಯಕ್ಕೆ ಬಿಬಿಎಂಪಿ ಚುನಾವಣೆ ಸಾಧ್ಯತೆ: ಆರು ವರ್ಷದ ನಿರೀಕ್ಷೆಗೆ ತೆರೆ ಹಾಕಲು ಕಾಂಗ್ರೆಸ್ ಸಿದ್ಧತೆ

ಬೆಂಗಳೂರು, ಜುಲೈ 27 – ಬೆಂಗಳೂರಿನ ಬೃಹತ್ ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕಳೆದ ಆರು ವರ್ಷಗಳಿಂದ ಚುನಾವಣೆ ನಡೆಯದೇ ಇರುವ ಸ್ಥಿತಿಗೆ ಕೊನೆಗೂ ತೆರೆ ಬೀಳುವ ಸೂಚನೆ ನೀಡಲಾಗಿದೆ. ಈ ವರ್ಷದ ಅಂತ್ಯದಲ್ಲಿ ಬಿಬಿಎಂಪಿ ಹಾಗೂ ಹೊಸದಾಗಿ ರಚಿಸಲಾಗಿರುವ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಸರ್ಕಾರ ಸ್ಪಷ್ಟಪಡಿಸಿದೆ.
ಸರ್ಕಾರದ ಶ್ರದ್ಧೆ ಹಾಗೂ ಕೋರ್ಟ್‌ನಲ್ಲಿ ಮುಂದುವರಿದಿರುವ ವಿಚಾರಣೆ:
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದು, ಅವರ ಪರವಾಗಿ ವಕೀಲ ಡಿ.ಎಲ್. ಚಿದಾನಂದ ಪ್ರತಿನಿಧಿಸಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳು ಸೂರ್ಯಕಾಂತ್ ಮತ್ತು ಜೋಯ್ ಮಾಲ್ಯ ಬಾಗ್ಚಿ ಅವರ ಪೀಠ ಸೋಮವಾರ ನಡೆಸಲಿದೆ.
ಚುನಾವಣೆಯ ಹಿನ್ನಲೆ – ಏಳು ವರ್ಷದ ವಿಳಂಬ:
- ಬಿಬಿಎಂಪಿ ಸದಸ್ಯರ ಅವಧಿ 2019ರಲ್ಲೇ ಕೊನೆಗೊಂಡಿತ್ತು.
- ಹೈಕೋರ್ಟ್ 6 ವಾರಗಳಲ್ಲಿ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದರೂ, ಸುಪ್ರೀಂ ಕೋರ್ಟ್ ಆ ಆದೇಶವನ್ನು ಅಮಾನತುಗೊಳಿಸಿತು.
- 2023 ರಲ್ಲಿ ವಾರ್ಡ್ ಮರುರಚನೆ ನಡೆಸಿ ವಾರ್ಡ್‌ಗಳ ಸಂಖ್ಯೆ 198 ರಿಂದ 225 ಕ್ಕೆ ಹೆಚ್ಚಿಸಲಾಯಿತು.
- ಈ ಮರುರಚನೆಯ ವಿರುದ್ಧ ಸಾರ್ವಜನಿಕ ಹಾಗೂ ಪ್ರತಿಪಕ್ಷಗಳಿಂದ ಗಂಭೀರ ವಿರೋಧ ವ್ಯಕ್ತವಾಯಿತು.
- ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ ಮತ್ತು ಮುಂದಿನ ಆಯೋಜನೆ:
- 2025 ರಲ್ಲಿ ಕಾಂಗ್ರೆಸ್ ಸರ್ಕಾರ ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ ಮಂಡಿಸಿದ್ದು, ಬೆಂಗಳೂರನ್ನು ಐದು ಹೊಸ ನಗರ ಪಾಲಿಕೆಗಳಾಗಿ ವಿಭಜಿಸಿ “ಗ್ರೇಟರ್ ಬೆಂಗಳೂರು” ಎಂದು ಹೆಸರಿಸಲಾಗಿದೆ. ಈ ಹೊಸ ಪಾಲಿಕೆಗಳಿಗೆ ಸಂಬಂಧಿಸಿದ ವಾರ್ಡ್‌ಗಳ ಗಡಿ ಹಾಗೂ ರೂಪರೇಖೆಯ ಕರಡು ಅಧಿಸೂಚನೆ ಹೊರಬಿದ್ದಿದ್ದು, ನವೆಂಬರ್ 2024 ವೇಳೆಗೆ ಅಂತಿಮ ಅಧಿಸೂಚನೆ ಹೊರಬರುವ ಸಾಧ್ಯತೆ ಇದೆ.
- ರಾಜಕೀಯ ಬಿಕ್ಕಟ್ಟು ಮತ್ತು ಸಾರ್ವಜನಿಕ ಒತ್ತಡ:
- ಬಿಬಿಎಂಪಿ ಚುನಾವಣೆ ಮುಂದೂಡುತ್ತಿರುವ ಬಗ್ಗೆ ಕೆಲವು ಶಾಸಕರ ನಿರಾಸಕ್ತಿ ಹಾಗೂ ಅಧಿಕಾರದಲ್ಲಿ ಮುಂದುವರಿಯುವ ಔತ್ಸುಕರತೆ ಕಾರಣಗಳಾಗಿದ್ದವು. ಹಲವಾರು ಪ್ರಭಾವಿ ಮುಖಂಡರು ಈ ಹಿನ್ನೆಲೆಯಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಬಿಬಿಎಂಪಿ
ವರ್ಗಾವಣೆಯಲ್ಲಿಯೂ ಬಿಬಿಎಂಪಿ ಭ್ರಷ್ಟಾಚಾರ – ಒಲ್ಲದವರಿಗೆ ಗೇಟ್ ಪಾಸ್, ಬೇಕಾದವರಿಗೆ ಸ್ಟೇಟಸ್!

ಬೆಂಗಳೂರು : ಬಿಬಿಎಂಪಿಯ ಹಲವು ಭ್ರಷ್ಟಾಚಾರಗಳ ಪೈಕಿ ಈಗ ಸಾರ್ವತ್ರಿಕ ವರ್ಗಾವಣೆಯಲ್ಲಿ ದಂಧೆ ನಡೆದಿರುವ ಆರೋಪ ಕೇಳಿಬಂದಿದೆ. ಯಾವುದೇ ಸೇವಾಜೇಷ್ಟತೆ, ಅರ್ಹತೆ, ಅನುಭವಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಬೇಕಾಬಿಟ್ಟಿ ವರ್ಗಾವಣೆ ಮಾಡಿದ್ದಾರೆಂದು ಸ್ವತಃ ಸಿಬ್ಬಂದಿಗಳೇ ಆಕ್ರೋಶ ಹೊರಹಾಕಿದ್ದಾರೆ.
ಒಂದೇ ಕಚೇರಿಯಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವವರನ್ನು ವರ್ಗಾಯಿಸಬೇಕೆಂಬ ನಿಯಮವಿದ್ದರೂ ಇತ್ತೀಚೆಗೆ ನೇಮಕವಾದವರನ್ನು ವರ್ಗಾಯಿಸಿ ಹಳೆಯ ತಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳು ವ್ಯಾಪಕವಾಗಿ ನಡೆದಿದೆ. ಇದಕ್ಕೆ ಬಲಿಪಶುಗಳಾಗಿರುವ ಸಿಬ್ಬಂದಿಗಳು ವರ್ಗಾವಣೆಗೆ ಆಕ್ಷೇಪ ಸಲ್ಲಿಸಿದ್ದಾರೆ.
ನೇಮಕವಾಗಿರುವ ದಿನಾಂಕಕ್ಕೂ ಹಾಗೂ ಎಚ್‌ಆರ್‌ಎಂಎಸ್ ನಲ್ಲಿ ದಾಖಲಾಗಿರುವ ದಿನಾಂಕಕ್ಕೂ ವ್ಯತ್ಯಾಸವಿರುದು ದೋಷಪೂರಿತವೆಂದೆ ಸ್ವತಃ ಬಿಬಿಎಂಪಿ ಒಳಾಡಳಿತವೇ ಒಪ್ಪಿಕೊಂಡಿದೆ .ಆದರೂ ಸಹ ಎಚ್‌ಆರ್‌ಎಂಎಸ್ ದಾಖಲೆಗೆ ಅನುಸಾರವಾಗಿ ಬಿಬಿಎಂಪಿ ವರ್ಗಾವಣೆ ಮಾಡಿದೆ.
ಅಲ್ಲದೇ ಎಂಟೂ ವಲಯಗಳಲ್ಲಿಯೂ ವರ್ಗಾವಣೆಯಲ್ಲಿ ಪಕ್ಷಪಾತ ತೋರಲಾಗಿದ್ದು, ಕೇವಲ ಎರಡು ವಲಯಗಳ ಸಿಬ್ಬಂದಿಗೆ ಮಾತ್ರ ಈ ವರ್ಗಾವಣೆ ಜಾರಿಯಾಗಿದೆ. ಮಿಕ್ಕವರು ಹಣಬಲ, ಅಧಿಕಾರಿಗಳ ಬೆಂಬಲ, ಜಾತಿಬಲ ಗಳಿಂದ ಪಾರಾಗಿದ್ದಾರೆಂದು ಸಿಬ್ಬಂದಿ ವರ್ಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರ್ಗಾವಣೆ ನಿಯಮ ಪಾರದರ್ಶಕವಾಗಿರಲಿ, ಎಲ್ಲರಿಗೂ ಸಮಾನವಾಗಿ ಜಾರಿಯಾಗಲಿ ಎಂದು ಸಿಬ್ಬಂದಿಗಳು ಆಗ್ರಹಿಸಿದ್ದಾರೆ.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ