Connect with us

ಬೆಂಗಳೂರು

ಡಿಕೆಶಿ ಮಾಸ್ಟರ್‌ ಪ್ಲ್ಯಾನ್ ಬಿಬಿಎಂಪಿ ವಿಭಜನೆ; ಬೆಂಗಳೂರು ದಕ್ಷಿಣದತ್ತ ರಾಮನಗರ

ಕಾವೇರಿ ನೀರು ಹರಿಸುವ ಪರಿಸ್ಧಿತಿಯಲ್ಲಿ ನಾವಿಲ್ಲ ಡಿಕೆ ಶಿವಕುಮಾರ್
ಡಿಕೆಶಿ ಮಾಸ್ಟರ್‌ ಪ್ಲ್ಯಾನ್! ಬಿಬಿಎಂಪಿ ವಿಭಜನೆ; ಬೆಂಗಳೂರು ದಕ್ಷಿಣದತ್ತ ರಾಮನಗರ

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಕನಕಪುರವನ್ನು ಸರ‍್ಪಡೆ ಮಾಡುವ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ನೀಡಿರುವ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳು ಅಡಗಿದೆ ಎನ್ನಲಾಗಿದೆ. ಅಲ್ಲದೆ, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಚಿಂತನೆಯಲ್ಲಿದ್ದಾರಾ ಎಂಬ ಅನುಮಾನವನ್ನೂ ಮೂಡಿಸಿದೆ. ಕನಕಪುರವನ್ನು ಬೆಂಗಳೂರಿಗೆ ಸೇರಿಸಿ, ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಪ್ಲ್ಯಾನ್ ಅನ್ನು ಅವರು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ತನ್ನ ತಂತ್ರಗಾರಿಕೆಯನ್ನು ವಿರೋಧ ಮಾಡಿದೆ. ಇದಕ್ಕೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮರು ನಾಮಕರಣದ ಪ್ರಸ್ತಾಪದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಆಪ್ತ ವಲಯದಲ್ಲಿ ಈ ರ‍್ಚೆ ಜೋರಾಗಿದೆ. ಬಿಬಿಎಂಪಿ ಚುನಾವಣೆಯನ್ನು ಮುಂದೂಡುವುದರ ಜತೆಗೆ ಬಿಬಿಎಂಪಿ ವಿಭಜನೆ ಸಂರ‍್ಭದಲ್ಲಿ ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣದ ಚಿಂತನೆ ನಡೆಸಲಾಗಿದೆ.
ಒಂದು ವೇಳೆ ರ‍್ಕಾರ ಸಮಿತಿಯ ಶಿಫಾರಸನ್ನು ಒಪ್ಪಿದರೆ, ವರ‍್ಡ್ ಮರುವಿಂಗಡಣೆ ಆಗಬೇಕು. ಇದಕ್ಕಾಗಿ ಬಿಬಿಎಂಪಿ ಚುನಾವಣೆ ಸಹ ಮುಂದೂಡಿಕೆ ಆಗಲಿದೆ. ಹಾಗಾಗಿ ಬಿಬಿಎಂಪಿ ವಿಭಜನೆ ಸಂರ‍್ಭದಲ್ಲಿ ರಾಮನಗರಕ್ಕೆ ಮರು ನಾಮಕರಣ ಮಾಡುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಬಿಬಿಎಂಪಿ ವಿಭಜನೆಗೆ ಬಿ.ಎಸ್. ಪಾಟೀಲ್ ನೇತೃತ್ವದಲ್ಲಿ ಸಮಿತಿ ಈಗಾಗಲೇ ಒಂದು ಸುತ್ತಿನ ವರದಿಯನ್ನು ರ‍್ಕಾರಕ್ಕೆ ಸಲ್ಲಿಸಿಯಾಗಿದೆ. ಆ ವರದಿಗೆ ಪುರ‍್ಜನ್ಮ ನೀಡುವುದು ಡಿ.ಕೆ. ಶಿವಕುಮಾರ್ ಪ್ಲ್ಯಾನ್ ಆಗಿದೆ. ಬಿಬಿಎಂಪಿಯನ್ನು ನಾಲ್ಕು ಅಥವಾ ಐದು ಭಾಗಗಳಾಗಿ ವಿಂಗಡಿಸುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ರಾಮನಗರ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಿ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡುವ ಚಿಂತನೆಯನ್ನು ನಡೆಸಲಾಗಿದೆ. ಐದು ವಲಯಗಳಾದರೆ ಐವರು ಮೇಯರ್, ಐವರು ಆಯುಕ್ತರನ್ನು ನೇಮಕ ಮಾಡುವ ಪ್ಲ್ಯಾನ್ ಅನ್ನೂ ಹೊಂದಲಾಗಿದೆ.
ಐದು ವಲಯಗಳಲ್ಲೂ ಕನಿಷ್ಠ ೭೦ ಹಾಗೂ ಗರಿಷ್ಠ ೧೦೦ ವರ‍್ಡ್ ಇರುವಂತೆ ನೋಡಿಕೊಳ್ಳುವುದು. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಸರ‍್ಪಡೆ ಆಗುತ್ತಿರುವ ಮಾಜಿ ಕರ‍್ಪೊರೇರ‍್ಗಳಿಗೆ ಎಲ್ಲರಿಗೂ ಅವಕಾಶ ಸಿಗಲಿದೆ ಎಂದು ಡಿ.ಕೆ. ಶಿವಕುಮಾರ್ ಅಭಯ ನೀಡುತ್ತಿದ್ದಾರೆ.
ಒಂದು ವೇಳೆ ಬಿಬಿಎಂಪಿ ವಿಭಜನೆ ಪ್ರಕ್ರಿಯೆಗೆ ರಾಜ್ಯ ರ‍್ಕಾರ ಮುಂದಾದರೆ ಸದ್ಯಕ್ಕೆ ಬಿಬಿಎಂಪಿ ಚುನಾವಣೆ ನಡೆಯುವುದಿಲ್ಲ. ಬಿಬಿಎಂಪಿ ಚುನಾವಣೆ ಮುಂದೂಡುವ ಭಾಗವಾಗಿ ಬಿ.ಎಸ್. ಪಾಟೀಲ್ ವರದಿ ಅನುಷ್ಠಾನ ಮಾಡಲು ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಬಿಬಿಎಂಪಿ

ಜಿಬಿಎ ಚುನಾವಣೆ ಪೂರ್ವಸಿದ್ಧತೆ: ನವೆಂಬರ್ 1ರೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ – ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದ ಪೂರ್ವಸಿದ್ಧತೆಗಳನ್ನು ನವೆಂಬರ್ 1ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಹಿರಿಯ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಚುನಾವಣೆಗಾಗಿ ಮತದಾರರ ನೋಂದಣಿ ನಿಯಮಗಳನ್ನು ಹೇಗೆ ರೂಪಿಸಬೇಕು ಎಂಬ ಕುರಿತು ಚುನಾವಣಾ ಆಯೋಗದ ಅಭಿಪ್ರಾಯವನ್ನು ಕೇಳಲಾಗುವುದು,” ಎಂದು ಸ್ಪಷ್ಟಪಡಿಸಿದರು.

ಚುನಾವಣೆ ಹಕ್ಕು ಕಾಪಾಡುವ ಕುರಿತು ಮಾರ್ಗದರ್ಶನ:
ಪಕ್ಷದ ಕಾರ್ಯಕರ್ತರು ಮತ್ತು ಬ್ಲಾಕ್ ಅಧ್ಯಕ್ಷರಿಗೆ, ತಮ್ಮ ಮತದಾನದ ಹಕ್ಕನ್ನು ಕಾಪಾಡಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಲಾಗಿದೆ. “ಶಾಸಕರನ್ನು ಹಾಗೂ ಬ್ಲಾಕ್ ಲೆವಲ್ ನಾಯಕರನ್ನು ಮತ್ತೊಮ್ಮೆ ಸಭೆಗೆ ಕರೆದು ಸಿದ್ಧತೆ ಕುರಿತ ಚರ್ಚೆ ನಡೆಯಲಿದೆ,” ಎಂದರು.

ಇಂಡಿಯಾ ಒಕ್ಕೂಟ ಮತ್ತು ಪ್ರತಿಭಟನೆ ಕುರಿತು ಸ್ಪಷ್ಟನೆ:
ಮುಖ್ಯಮಂತ್ರಿಗಳಿಗೆ ಇಂಡಿಯಾ ಒಕ್ಕೂಟದ ಸಭೆಗೆ ಆಹ್ವಾನ ಇದೆ. ನಾನು ಇಲ್ಲಿ ಪ್ರತಿಭಟನಾ ಸಭೆಗಾಗಿ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿದ್ದೇನೆ,” ಎಂದು ಡಿಸಿಎಂ ಹೇಳಿದರು. “ಸ್ವಾತಂತ್ರ ಉದ್ಯಾನದಲ್ಲಿ ಮತಚೂರಿ ವಿರುದ್ಧsymbolic ಪ್ರತಿಭಟನೆ ನಡೆಯಲಿದ್ದು, ಇದು ನ್ಯಾಯಾಲಯದ ಆದೇಶದಂತೆ ಹಮ್ಮಿಕೊಳ್ಳಲಾಗಿದೆ,” ಎಂದು ಹೇಳಿದರು.

ರಾಜ್ಯಮಟ್ಟದ ಪ್ರತಿಭಟನೆ:
ಪ್ರತಿಯೊಬ್ಬ ಜಿಲ್ಲೆಯಿಂದ ಕನಿಷ್ಠ 50 ನಾಯಕರು, ಕಾರ್ಯಕರ್ತರು, ಪರಾಜಿತ ಅಭ್ಯರ್ಥಿಗಳು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಲಾಗಿದೆ. “ಬೆಂಗಳೂರು ಮಾತ್ರವಲ್ಲ, ಇಡೀ ಕರ್ನಾಟಕದಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ,” ಎಂದು ಅವರು ಹೇಳಿದ್ದಾರೆ.

Continue Reading

ಬೆಂಗಳೂರು

ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: ಕಿತ್ತೂರು ಕೋಟೆ ಮತ್ತು ರಾಣಿ ಚೆನ್ನಮ್ಮನ ಆಕರ್ಷಕ ಪ್ರತಿಕೃತಿಗಳು

ಬೆಂಗಳೂರು: ಲಾಲ್‌ಬಾಗ್ ಉದ್ಯಾನದಲ್ಲಿ ನಾಳೆ ಆಗಸ್ಟ್ 7ರಿಂದ 18ರವರೆಗೆ ನಡೆಯಲಿರುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಈ ವರ್ಷದ ಪ್ರಮುಖ ಆಕರ್ಷಣೆ ಎಂದರೆ ಗಾಜಿನ ಮನೆಯಲ್ಲಿ ಸ್ಥಾಪಿಸಿರುವ ಕಿತ್ತೂರು ಕೋಟೆ ಮತ್ತು ರಾಣಿ ಚೆನ್ನಮ್ಮನವರ ಐಕ್ಯ ಮಂಟಪದ ಪ್ರತಿಕೃತಿಗಳು.

ತೋಟಗಾರಿಕೆ ಇಲಾಖೆ ವಿವಿಧ ರೀತಿಯ ಆಕರ್ಷಕ ಹೂವುಗಳಿಂದ ಗಾಜಿನ ಮನೆಯನ್ನು ಅಲಂಕಾರಗೊಳಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳು ಬಣ್ಣ ಬಣ್ಣದ ಹೂಸಸಿಗಳೊಂದಿಗೆ ಶೃಂಗಾರಗೊಂಡಿವೆ. ಈ ಪ್ರದರ್ಶನದಲ್ಲಿ ಆಂಥೋರಿಯಂ, ಗುಲಾಬಿ, ಆರ್ಕಿಡ್, ಜರ್ಬೇರಾ ಮತ್ತು ಸುಗಂಧ ರಾಜ ಸೇರಿದಂತೆ ಹಲವಾರು ಶೀತ ವಲಯದ ಹೂಗಳು ನೋಡುಗರ ಕಣ್ಮನ ಸೆಳೆಯಲಿವೆ.

ಬೋನ್ಸಾಯ್ ವನವನ್ನು ನವೀಕರಿಸಿ ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ವಿಶೇಷ ಬೋನ್ಸಾಯ್ ಸಸಿಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಜೊತೆಗೆ ಇಕೆಬಾನಾ, ತರಕಾರಿ ಕೆತ್ತನೆ ಪ್ರದರ್ಶನ, ತೋಟಗಳ ಸ್ಪರ್ಧೆ ಮತ್ತು ನಾನಾ ಹೂವಿನ ಜೋಡಣೆ ಕಲೆಯ ಪ್ರದರ್ಶನವೂ ಈ ಶೋನಲ್ಲಿ ಒಳಗೊಂಡಿವೆ.

ಸುಮಾರು 2.5 ಲಕ್ಷದಿಂದ 3 ಲಕ್ಷ ಹೂವುಗಳಿಂದ ನಿರ್ಮಿತವಾಗಿರುವ ಗಾಜಿನ ಮನೆಯಲ್ಲಿ, 18 ಅಡಿ ಎತ್ತರ ಮತ್ತು 32 ಅಡಿ ಅಗಲದ ಕಿತ್ತೂರಿನ ಕೋಟೆ ಪ್ರತಿಕೃತಿ ಸ್ಥಾಪಿಸಲಾಗಿದೆ. ಇದರ ಮುಂಭಾಗದಲ್ಲಿ ಅಶ್ವಾರೂಢ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳು ಹಾಗೂ ಹಿಂಭಾಗದಲ್ಲಿ ಐಕ್ಯ ಮಂಟಪದ ಪ್ರತಿಕೃತಿ ಇದೆ.

ಪ್ರವೇಶ ಶುಲ್ಕ:

  • ಸಾಮಾನ್ಯ ದಿನ: ₹80
  • ರಜಾದಿನಗಳು ಮತ್ತು ವಾರಾಂತ್ಯ: ₹100

ಈ ಪ್ರದರ್ಶನವು ನೈಸರ್ಗಿಕ ಸೌಂದರ್ಯ ಹಾಗೂ ಐತಿಹಾಸಿಕ ಮಹತ್ವವನ್ನು ಒಗ್ಗೂಡಿಸುವ ಅತ್ಯುತ್ತಮ ವೇದಿಕೆಯಾಗಿದ್ದು, ಸಾರ್ವಜನಿಕರು ಹೆಚ್ಚಾಗಿ ಭಾಗವಹಿಸುವ ನಿರೀಕ್ಷೆಯಿದೆ.

Continue Reading

ಬೆಂಗಳೂರು

ಅಲ್ಪಸಂಖ್ಯಾತರ ಸಾಮೂಹಿಕ ವಿವಾಹಕ್ಕೆ ₹50,000 ಸಹಾಯಧನ: ಜಮೀರ್ ಅಹ್ಮದ್ ಘೋಷಣೆ

ಬೆಂಗಳೂರು:
ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ಸಾಮೂಹಿಕ ವಿವಾಹಗಳಿಗೆ ಇನ್ಮುಂದೆ ಸರ್ಕಾರದಿಂದ ₹50,000 ಸಹಾಯಧನ ಸಿಗಲಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಘೋಷಿಸಿರುವ ಬಜೆಟ್ ಯೋಜನೆಗೆ ಈಗ ಅನುಮೋದನೆ ಲಭಿಸಿದ್ದು, ಈ ನಿಟ್ಟಿನಲ್ಲಿ ಬಡ ಅಲ್ಪಸಂಖ್ಯಾತರಿಗೆ ಸಹಾಯ ಮಾಡಲು ಸರ್ಕಾರ ಸಜ್ಜಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು:
ಮೌಲಾನಾ ಅಬ್ದುಲ್ ಕಲಾಂ ಸ್ಕೂಲ್‌ ಸೇರಿದಂತೆ ಪ್ರತಿಭಾವಂತ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಗುತ್ತಿದೆ. ಈಗಾಗಲೇ 214 ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಲ್ಯಾಪ್‌ಟಾಪ್ ವಿತರಣೆ ನಡೆಸಲಾಗಿದೆ.

ಮದರಸಾಗಳಲ್ಲಿ ಕನ್ನಡ ಕಲಿಕೆ:
ಮದರಸಾಗಳಲ್ಲಿ ಕನ್ನಡ ಕಲಿಕೆ ಆರಂಭಿಸುವ ಯೋಜನೆಯೊಂದಿಗೆ, ಮೊದಲ ಹಂತದಲ್ಲಿ 200 ಮೌಲ್ವಿಗಳನ್ನು ಆಯ್ಕೆ ಮಾಡಲಾಗಿದೆ. ಮೂವರು ತಿಂಗಳಲ್ಲಿ ಅವರಿಗೆ ಕನ್ನಡ ಭಾಷಾ ತರಬೇತಿ ನೀಡಲಾಗುವುದು.

2,000 ಮದರಸಾಗಳಿಗೆ ಕನ್ನಡ ಪಾಠ್ಯಕ್ರಮ:
ರಾಜ್ಯದಲ್ಲಿ 2 ಸಾವಿರ ಮದರಸಾಗಳಿಗೆ ಕನ್ನಡ ಕಲಿಕೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಅಲ್ಪಸಂಖ್ಯಾತ ಆಯೋಗ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅಧ್ಯಕ್ಷ ಯು. ನಿಸಾರ್ ಅಹಮದ್ ಹೇಳಿದ್ದಾರೆ. very soon ಈ ಪಾಠ್ಯಕ್ರಮ ಮುದ್ರಣಕ್ಕೂ ಕ್ರಮ ಜರಗಲಿದೆ.

Continue Reading

Trending