Connect with us

ಅಪರಾಧ

ಪೂರ್ತಿ ಊಟ ಮಾಡಲ್ಲ.. ಸೆಲ್​ನಲ್ಲಿ ಏಕಾಂಗಿ.. 1 ಸೆಲ್​.. 1 ಚಾಪೆ.. 1 ಚೇರ್.. ದರ್ಶನ್ ಸ್ಟೇಷನ್ ಡೈರಿ..!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ದರ್ಶನ್, ಪೊಲಿಸ್ ಸ್ಟೇಷನ್​​ ಸೆಲ್​ನಲ್ಲಿ ಹೇಗಿದ್ದಾರೆ. ಇಷ್ಟು ದಿನಗಳ ಕಾಲ ದರ್ಶನ್‌ ಪೊಲೀಸ್‌ ಠಾಣೆಯಲ್ಲಿ ಹೇಗಿದ್ದಾರೆ? ಸರಿಯಾಗಿ ಊಟ ತಿಂಡಿ ಮಾಡ್ತಿದ್ದಾರೋ ಇಲ್ವೋ? ಕೊಲೆ ಆರೋಪಕ್ಕೆ ಪಶ್ಚಾತಾಪ ಪಡ್ತಿದ್ದಾರೋ ಇಲ್ವೋ? ತನಿಖಾಧಿಕಾರಿಗಳು ಕೇಳೋ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡ್ತಿದ್ದಾರೋ ಇಲ್ವೋ? ಅನ್ನೋ ಕುತೂಹಲ ಸಾಮಾನ್ಯ ಜನರಲ್ಲಿ ಇದ್ದೇ ಇರುತ್ತೆ.

ಪ್ರತ್ಯೇಕ ಸೆಲ್‌ನಲ್ಲಿ ವಾಸ, ಇತರೇ ಆರೋಪಿಗಳ ಭೇಟಿ ಇಲ್ಲ!
ದರ್ಶನ್‌ ಅವರನ್ನು ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ಪ್ರತ್ಯೇಕ ಸೆನ್‌ನಲ್ಲಿ ಇಡಲಾಗಿದೆ. ದರ್ಶನ್‌ಗೆ ಪ್ರತ್ಯೇಕ ಸೆಲ್‌. ಈ ಸೆಲ್‌ಗೆ ಬೇರೆ ಆರೋಪಿಗಳು ಬರಲು ಅವಕಾಶವಿಲ್ಲ. ಹಾಗೊಂದ್‌ ವೇಳೆ ಭೇಟಿಯಾದ್ರೆ ದರ್ಶನ್‌ ಏನಾದ್ರೂ ಕೋಪದಲ್ಲಿ ಬೆದರಿಸೋ ಸಾಧ್ಯತೆ ಇರುತ್ತೆ. ಹೀಗಾಗಿ ಪ್ರತ್ಯೇಕವಾಗಿ ಇಡಲಾಗಿದೆ. ಸ್ವತಃ ಪವಿತ್ರಾ ಗೌಡ ಕೂಡ ದರ್ಶನ್‌ ಮಾತಾಡಿಸಲು ಮುಂದಾಗುತ್ತಿಲ್ಲ ಅನ್ನೋದ್‌ ಮೂಲಗಳಿಂದ ತಿಳಿದು ಬರ್ತಿದೆ.

ಅನ್ನ ಸಾಂಬಾರ್‌.. ಪೂರ್ತಿ ಊಟ ಮಾಡ್ತಿಲ್ಲ!
ಆರಂಭದಲ್ಲಿ ದರ್ಶನ್‌ ಎರಡು ದಿನ ತನಗೆ ಊಟ ಬೇಡ ಜ್ಯೂಸ್‌ ಕೊಡಿ ಅಂತಾ ತರಿಸ್ಕೊಂಡ್‌ ಕುಡೀತಾ ಇದ್ರು. ಒಮ್ಮೆ ಇಡ್ಲಿ ಬೇಕು ಅಂತಾ ಹೇಳಿದ್ರು, ಪೊಲೀಸ್ರು ತರಿಸಿಕೊಟ್ಟಿದ್ರು. ಆನಂತರ ಮಧ್ಯಾಹ್ನ ಮತ್ತು ರಾತ್ರಿ ಊಟದ ವೇಳೆ ಅನ್ನ ಸಾಂಬಾರ್‌ ನೀಡಲಾಗ್ತಿದೆ. ಬಟ್‌, ದರ್ಶನ್‌ ಜೂನ್‌ 11 ರಂದು ಸ್ಟೇಷನ್‌ಗೆ ಹೋದಾಗಿಂದ ಇಲ್ಲಿಯವರೆಗೂ ಒಂದೇ ಒಂದು ಟೈಮ್‌ನಲ್ಲಿಯೂ ಪೂರ್ತಿ ಊಟ ಮಾಡಿದ್ದು ಇಲ್ಲವೇ ಇಲ್ಲವಂತೆ.

1 ಸೆಲ್​.. 1 ಚಾಪೆ.. 1 ಚೇರ್..ಈಗ ಲೈಫ್​ ಇಷ್ಟೇ!
ಆ ಸೆಲ್‌ನಲ್ಲಿ ದರ್ಶನ್‌ಗೆ ಏನೇನ್‌ ಇವೆ ಅಂದ್ರೆ ಕೇಳಿಬರ್ತಿರೋ ಉತ್ತರ 1 ಚಾಪೆ, ಒಂದು ಚೇರ್‌ ಅನ್ನೋ ಆನ್ಸರ್‌ ಬರ್ತಿದೆ. ಹೊರಗಡೆ ಸ್ಥಳ ಮಹಜರು, ನ್ಯಾಯಾಧೀಶರ ಮುಂದೆ ಹಾಜರು ಪಡ್ಸೋದು, ವಿಚಾರಣೆ… ಟೈಮ್‌ ಅನ್ನು ಹೊರತು ಪಡ್ಸಿ ದರ್ಶನ್‌ ದಿನ ನಿಡೀ ಇದೇ ರೂಮ್‌ನಲ್ಲಿ ಇರ್ತಾರೆ. ಸಂದರ್ಭದಲ್ಲಿ ಚೇರ್‌ ಮೇಲೆ ಕುಳಿತುಕೊಳ್ಳುವುದಕ್ಕಿಂತ ಚಾಪೆ ಮೇಲೆ ಜಾಸ್ತಿ ಕುಳಿತು ಜಾಸ್ತಿ ಟೈಮ್‌ ಕಳಿತಿರೋದ್‌ ಕಾಣಿಸ್ತಿದೆ. ಚಾಪೆ ಮೇಲೆ ಕುಳಿತಾಗ ದರ್ಶನ್‌ ಮೌನಕ್ಕೆ ಶರಣಾಗಿರುತ್ತಾರೆ.

ತಡರಾತ್ರಿ ನಿದ್ರೆ, ಬೇಗ ಏಳ್ತಾರೆ..!
ಆರಂಭದಲ್ಲಿ ಒಂದೆರಡು ದಿನ ದರ್ಶನ್‌ ಸರಿಯಾಗಿ ನಿದ್ರೆ ಮಾಡ್ತಿರಲಿಲ್ಲ. ಭಾರೀ ತಡ ರಾತ್ರಿ ನಿದ್ರೆಗೆ ಜಾರುತ್ತಿದ್ರು. ಬಟ್‌ ಬರ್ತಾ ಬರ್ತಾರಾ ಬೇಗ ನಿದ್ರೆಗೆ ಜಾರ್ತಿದ್ದಾರೆ. ಬೆಳಗ್ಗೆ ಬೇಗ ಎದ್ದೇಳುತ್ತಿದ್ದಾರೆ. ಬೆಳಗ್ಗೆ 7 ಗಂಟೆಯ ನಂತರ ವಿಚಾರಣೆ ಅನ್ನೋದು ಶುರುವಾಗುತ್ತೆ.

ಸಿಗರೇಟ್‌ಗೆ ಬೇಡಿಕೆ, ಆರೋಗ್ಯದ ಬಗ್ಗೆ ಚರ್ಚೆ!
ಅದೆಷ್ಟೋ ದೊಡ್ಡ ವ್ಯಕ್ತಿಯಾಗಿದ್ರೂ ಸ್ಟೇಷನ್‌ನಲ್ಲಿ ಸಿಗರೇಟ್‌ ಸಿಗೋದಿಲ್ಲ. ಹೀಗಾಗಿ ಚೈನ್‌ ಸ್ಮೋಕ್‌ ಮಾಡೋರು, ಸಿಗರೇಟ್‌ ಹ್ಯಾಬಿಟ್‌ ಇದ್ದವ್ರು ಒಂದ್‌ ಕ್ಷಣ ಸ್ಟೇಷನ್‌ ಮೆಟ್ಟಿಲು ಏರ್ತಾ ಇದ್ದಂತೆ ಕಂಗಾಲಾಗೋದು ಪಕ್ಕಾ. ಪೊಲೀಸರ ಬಳಿ ಸಿಗರೇಟ್‌ ಬೇಕು ಅಂತಾ ಪರಿಪರಿಯಾಗಿ ಕೇಳ್ಕೊಂಡಿದ್ದಾರೆ. ಆದ್ರೆ ಪೊಲೀಸರು ಸಿಗರೇಟ್‌ ವ್ಯವಸ್ಥೆ ಮಾಡಿಲ್ಲ.

ಅಪರಾಧ

ಧರ್ಮಸ್ಥಳ ಶವ ಹೂತು ಪ್ರಕರಣ: ಮೂರು ಅಸ್ಥಿಪಂಜರ ಪತ್ತೆ, ಎಸ್‌ಐಟಿ ತನಿಖೆಗೆ ಹೊಸ ತಿರುವು!

ದಕ್ಷಿಣ ಕನ್ನಡ, ಆಗಸ್ಟ್ 5 – ಧರ್ಮಸ್ಥಳದ ಸುತ್ತಮುತ್ತಲ ಶವ ಹೂತು ಪ್ರಕರಣಕ್ಕೆ ದಿನೇ ದಿನೆ ನ್ಯೂ ಟ್ವಿಸ್ಟ್ ಸಿಗುತ್ತಿದ್ದು, ಇದೀಗ ಮೂರು ಅಸ್ಥಿಪಂಜರಗಳು ಪತ್ತೆಯಾಗಿವೆ ಎಂಬ ಸುದ್ದಿ ಚಕ್ಕರಿಗೊಳ್ಳುತ್ತಿದೆ. ಈ ಕುರಿತು ದೂರುದಾರ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಎಸ್‌ಐಟಿ ತಂಡದ ಶೋಧ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿನ್ನೆ ನಡೆದ ಉತ್ಖನನದ ವೇಳೆ:

  • ಸ್ಟಾಟ್ ನಂಬರ್ 12ರ ಬಳಿ ಕಾರ್ಮಿಕರಿಂದ ಅಗೆಸಿದಾಗ, ಮೂರು ಅಸ್ಥಿಪಂಜರಗಳು ಹಾಗೂ ಮಹಿಳೆಯ ಸೀರೆ ಪತ್ತೆಯಾಗಿವೆ.
  • ಸುಮಾರು 140 ಮೂಳೆಗಳ ತುಂಡುಗಳು ಪತ್ತೆಯಾದ ಕುರಿತು ವರದಿ ಇದೆ.
  • ಅಸ್ಥಿಪಂಜರಗಳನ್ನು ತಕ್ಷಣವೇ ಕೆಎಂಸಿ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ.

ಇಂದಿನ ಉತ್ಖನನ:

  • ನೇತ್ರಾವತಿ ನದಿಯ ದಡದ ಬಳಿ 11ನೇ ಪಾಯಿಂಟ್‌ನಲ್ಲಿ ಅಗೆತ ಕೆಲಸ ನಡೆಯುತ್ತಿದೆ.
  • 6 ಅಡಿಯವರೆಗೆ ಶೋಧ ನಡೆದ ಬಳಿಕ ಸಾಕ್ಷ್ಯ ಸಿಕ್ಕದರೆ ಮುಂದಿನ ಪಾಯಿಂಟ್‌ಗೆ ಹೋಗುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಪೂರ್ವ ಘಟನೆ:

  • ಜುಲೈ 31ರಂದು 6ನೇ ಗುರುತುಸ್ಥಳದಲ್ಲಿ ಅಸ್ಥಿಪಂಜರ ಪತ್ತೆಯಾದ ಹಿನ್ನೆಲೆ, ಎಸ್‌ಐಟಿ ಅಧಿಕಾರಿಗಳಾದ ಐಪಿಎಸ್ ಜಿತೇಂದ್ರ ಕುಮಾರ್ ದಯಾಮ ಅವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು, ಆಧಾರದ ಮೇಲೆ UDR ಪ್ರಕರಣ ದಾಖಲಾಗಿದೆ.
Continue Reading

ಅಪರಾಧ

ಕೆಂಗೇರಿಯಲ್ಲಿ ಮಹಿಳೆಯ ಮೇಲೆ ಅಸಭ್ಯ ವರ್ತನೆ ಮತ್ತು ಹಲ್ಲೆ!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಮುಕರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಕೆಂಗೇರಿ ಉಪನಗರದಲ್ಲಿ ಮತ್ತೊಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ. ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳ ಮುಂದೆ ವ್ಯಕ್ತಿಯೊಬ್ಬ ಪ್ಯಾಂಟ್ ಜಿಪ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾಳೆ. ಇದೇ ಸಮಯದಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿದ ಆರೋಪಿಯು ಪೊಲೀಸರು ಬಂದಾಗ ಪರಾರಿಯಾಗಲು ಯತ್ನಿಸಿದರೂ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಸೂತ್ರಗಳ ಪ್ರಕಾರ, ಕೆಂಗೇರಿಯಲ್ಲಿರುವ ಮಾಲ್‌ನಲ್ಲಿ ವಾಚ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಾಹಸನ್ ಎಂಬಾತ, ಅಲ್ಲಿಗೆ ಬರುವ ಹೆಣ್ಣುಮಕ್ಕಳಿಗೆ ತೊಂದರೆ ಕೊಡುತ್ತಿದ್ದ. ಸಂತ್ರಸ್ತೆಯು ಈ ಬಗ್ಗೆ ಮ್ಯಾನೇಜರ್‌ಗೆ ದೂರು ನೀಡಲು ಹೋಗುತ್ತಿದ್ದಾಗ, ತನ್ನ ಪ್ಯಾಂಟ್‌ನ ಜಿಪ್‌ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದ. ನಂತರ ಆಕೆಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಈ ಘಟನೆಗೆ ತಕ್ಷಣ ಪ್ರತಿಕ್ರಿಯಿಸಿದ ಸಾರ್ವಜನಿಕರು ಮತ್ತು ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸದ್ಯ ಈ ಕುರಿತು ಕೆಂಗೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ. ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಆಕೆಗಾಗಿ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ.

ಇದೇ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆ ಯುವತಿಯರ ಮುಂದೆ ಅಸಭ್ಯವಾಗಿ ವರ್ತಿಸಿದ್ದ ಆಯುಬ್ ಎಂಬ ಕಾಮುಕನನ್ನು ಕೂಡ ಪೊಲೀಸರು ಬಂಧಿಸಿದ್ದರು. ಈತನ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಡಿದ್ದು, ಸಾರ್ವಜನಿಕ ಆಕ್ರೋಶ ಹೆಚ್ಚಿತ್ತು.

Continue Reading

ಅಪರಾಧ

ರೇಣುಕಾಸ್ವಾಮಿ ಪ್ರಕರಣ: ರಮ್ಯಾ ಪೋಸ್ಟ್‌ಗೆ ಅಸಭ್ಯ ಪ್ರತಿಕ್ರಿಯೆ – ಆರೋಪಿಗಳ ಬಂಧನ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ವಿರುದ್ಧ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನು ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಸಂಬಂಧ ಅವರು ತಮ್ಮ ಅಭಿಪ್ರಾಯವನ್ನು ಇನ್‌ಸ್ಟಾಗ್ರಾಂ ಹಾಗೂ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಕಟಿಸಿದ್ದರು.

ಈ ಪೋಸ್ಟ್ ನಂತರ, ಕೆಲ ಕಿಡಿಗೇಡಿಗಳು ರಮ್ಯಾ ವಿರುದ್ಧ ಅಶ್ಲೀಲ ಹಾಗೂ ಅಪಮಾನಕಾರಕ ಸಂದೇಶಗಳನ್ನು ಕಮೆಂಟ್‌ಗಳ ರೂಪದಲ್ಲಿ ಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಉಂಟಾಗಿದೆ. ಮಹಿಳಾ ವಿರುದ್ಧದ ಈ ರೀತಿಯ ಆನ್‌ಲೈನ್ ದೌರ್ಜನ್ಯಕ್ಕೆ ವಿರೋಧ ವ್ಯಕ್ತವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲದ ಸ್ಥಿತಿಯ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಈ ನಡುವೆ, ನಟಿ ರಮ್ಯಾ ಬೆಂಬಲಿಗರು ಹಾಗೂ ಮಹಿಳಾ ಹಕ್ಕು ಕಾರ್ಯಕರ್ತರು solchen ಅಭಿವ್ಯಕ್ತಿಗಳನ್ನು ಖಂಡಿಸಿದ್ದಾರೆ.

ಅಧಿಕೃತರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ವ್ಯಕ್ತವಾಗಿದೆ.

Continue Reading

Trending