ದೇಶ
50,000ದಿಂದ 60,000 ಕೋಟಿ ಸಂಗ್ರಹಿಸುವ ಒತ್ತಡದಲ್ಲಿ ಕಾಂಗ್ರೆಸ್ ಸರ್ಕಾರ, ಜವಾಬ್ದಾರಿ ಕೊಟ್ಟ ಸಂಸ್ಥೆಗೆ ಕೊಟ್ಟ ದುಡ್ಡೆಷ್ಟು ಗೊತ್ತಾ?

ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ತೀವ್ರ ಅನುದಾನದ ಕೊರತೆ ಎದುರಾಗುವ ಅಪಾಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವಿದೆ. ಈ ಅಪಾಯದಿಂದ ಪಾರಾಗಲು ಸರ್ಕಾರ ಖಾಸಗಿ ಸಂಸ್ಥೆಯೊಂದಕ್ಕೆ ಅನುದಾನ ಸಂಗ್ರಹಣೆಯ ಪ್ಲಾನ್ ನೀಡುವ ಜವಾಬ್ದಾರಿ ನೀಡಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮತ್ತು ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಲು ವರ್ಷಕ್ಕೆ 50,000 ಕೋಟಿಯಿಂದ 60,000 ಕೋಟಿಗಳನ್ನು ಸಂಗ್ರಹಿಸುವ ಒತ್ತಡದಲ್ಲಿದೆ. ಈ ಒತ್ತಡ ನಿವಾರಣೆಗೆ ಎಂದೇ ಕಾಂಗ್ರೆಸ್ ನೇತೃತ್ವದ (Karnataka Government) ಕರ್ನಾಟಕ ಸರ್ಕಾರ ಆದಾಯವನ್ನು ಹೆಚ್ಚಿಸಲು ಸಲಹೆ ನೀಡಲು “ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (BCG)” ಎಂಬ ಖಾಸಗಿ ಸಂಸ್ಥೆಯನ್ನು ನೇಮಿಸಿಕೊಂಡಿದೆ.
ಸರ್ಕಾರ ಖಾಸಗಿ ಸಲಹೆಗಾರರನ್ನು ಏಕೆ ನೇಮಿಸಿತು?
ಮಾರ್ಚ್ 2024 ರಲ್ಲಿ, ಕರ್ನಾಟಕ ಹಣಕಾಸು ಇಲಾಖೆಯು ರಾಜ್ಯದ ಆದಾಯದ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಪ್ರಮುಖ ಸಲಹಾ ಸಂಸ್ಥೆಗಳಿಂದ Expression of Interest (EoI) ಆಹ್ವಾನಿಸಿತು. ನೀರಾವರಿ, ಇಂಧನ, ಸಾರ್ವಜನಿಕ ಕೆಲಸಗಳು ಮತ್ತು ಗ್ರಾಮೀಣಾಭಿವೃದ್ಧಿ, ಹಾಗೆಯೇ ಇಲಾಖೆಗಳಲ್ಲಿ ಗಣಿಗಾರಿಕೆ ಮತ್ತು ಅರಣ್ಯಗಳಂತಹ ಹೊಸ ಆದಾಯ ಮೂಲಗಳನ್ನು ಹುಡುಕುವುದು ಖಾಸಗಿ ಸಲಹೆಗಾರ ಸಂಸ್ಥೆಯ ಜವಾಬ್ದಾರಿಯಾಗಿತ್ತು. ಅನಗತ್ಯ ದುಂದುವೆಚ್ಚಗಳನ್ನು ತಡೆಯುವುದು, ತೆರಿಗೆ ಮತ್ತು ತೆರಿಗೆಯೇತರ ಆದಾಯಗಳನ್ನು ಹೆಚ್ಚಿಸುವುದು ಸೇರಿ ಆದಾಯ ಹೆಚ್ಚಿಸುವ ಹಲವು ಜವಾಬ್ದಾರಿಗಳನ್ನು ಈ ಸಂಸ್ಥೆಗೆ ವಹಿಸಲಾಗಿತ್ತು.
ರಾಜ್ಯ ಸರ್ಕಾರದಿಂದ ಈ ಸಂಸ್ಥೆಗೆ ಎಷ್ಟು ಪೇಮೆಂಟ್?
ರಾಜ್ಯ ಸರ್ಕಾರದ ಈ ಪ್ರಸ್ತಾವನೆಯಲ್ಲಿ ಮೂರು ಖಾಸಗಿ ಸಂಸ್ಥೆಗಳಾದ BCG, KPMG, ಮತ್ತು E&Y-ಇ ಭಾಗವಹಿಸಿದ್ದವು. ಆದರೆ BCG ಮಾತ್ರ ಅಂತಿಮ ಟೆಂಡರ್‌ನಲ್ಲಿ ಭಾಗವಹಿಸಿತು ಪ್ರಸ್ತಾವನೆಯನ್ನು ತನ್ನದಾಗಿಸಿಕೊಂಡಿತು. BCG ಆರು ತಿಂಗಳ ಕಾಲ ರಾಜ್ಯ ಹಣಕಾಸು ಇಲಾಖೆಯೊಂದಿಗೆ ಕೆಲಸ ಮಾಡಲಿದ್ದು, ಸುಮಾರು 9.5 ಕೋಟಿ ರೂಪಾಯಿ ಶುಲ್ಕವನ್ನು ಪಡೆಯಲಿದೆ. ಸದ್ಯದ ಗ್ಯಾರಂಟಿ ಯೋಜನೆಗಳು ಮತ್ತು ಮುಂದಿನ ಬಜೆಟ್‌ನಲ್ಲಿ ಘೋಷಣೆಯಾಗುವ ಯೋಜನೆಗಳ ಅನುದಾನವನ್ನು ಹೊಂದಿಸಲು ಈ ಖಾಸಗಿ ಸಂಸ್ಥೆಯು ಹಣಕಾಸು ಇಲಾಖೆಯ ಜೊತೆ ಕೆಲಸ ಮಾಡಲಿದೆ.
ಸರ್ಕಾರದ ನಿರ್ಧಾರದ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ
ಖಾಸಗಿ ಸಲಹೆಗಾರರನ್ನು ನೇಮಿಸುವ ಸರ್ಕಾರದ ನಿರ್ಧಾರವನ್ನು ಹಲವರು ಟೀಕಿಸಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ.ದೇವಸಹಾಯಂ, “ಹೆಚ್ಚಿನ ಸಲಹೆಗಾರರು ಆಳವಾದ ಜ್ಞಾನವನ್ನು ಹೊಂದಿರುವುದಿಲ್ಲ. ಭಾರಿ ಶುಲ್ಕವನ್ನು ವಿಧಿಸುವಾಗ ಪೊಳ್ಳು ವರದಿಗಳನ್ನು ನೀಡುತ್ತಾರೆ” ಎಂದು ಮನಿ ಕಂಟ್ರೋಲ್‌ಗೆ ತಿಳಿಸಿದ್ದಾರೆ.
ಫ್ರೀ ಕರೆಂಟ್ ಅರ್ಥಹೀನ
“ಖಾಸಗಿ ಸಂಸ್ಥೆಯ ಬದಲಿಗೆ ಐಐಟಿ ಮತ್ತು ಐಐಎಂ ಪದವೀಧರರಾಗಿರುವ ಅನುಭವಿ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂಬುದು ಅವರ ಸಲಹೆ. ಅಲ್ಲದೇ, ಉಚಿತ ಮತ್ತು ಖಾತ್ರಿ ಯೋಜನೆಗಳು ರಾಜ್ಯದ ಆರ್ಥಿಕ ಆರೋಗ್ಯಕ್ಕೆ ಹಾನಿ ಮಾಡುತ್ತದೆ” ಎಂಬುದು ಅವರ ಅಂಬೋಣ. “ಪ್ರತಿಯೊಬ್ಬರಿಗೂ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ನೀಡುವುದು ಅರ್ಥಹೀನ. ಸರ್ಕಾರ ಮೊದಲು ಸಂಪನ್ಮೂಲ ಕ್ರೋಢೀಕರಣಗಳನ್ನು ಉತ್ತಮಗೊಳಿಸಬೇಕು” ಎಂದು ಅವರು ಹೇಳಿದರು.
ಹಣಕಾಸು ಇಲಾಖೆ ಬಳಿ ಆಗೋದಿಲ್ವಂತೆ ಏಕೆ?
“ಉತ್ತರ ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಸುತ್ತಮುತ್ತಲಿನ ಪಟ್ಟಣಗಳನ್ನು ಸೇರಿ ರಾಜ್ಯಾದ್ಯಂತ 10 ಮುನ್ಸಿಪಲ್ ಕಾರ್ಪೊರೇಷನ್‌ಗಳ ಅಭಿವೃದ್ಧಿಗೆ ಪ್ರತಿ ಆರ್ಥಿಕ ವರ್ಷಕ್ಕೆ ಹೆಚ್ಚುವರಿ 5,000 ಕೋಟಿ ರೂ.ಗಳನ್ನು ಸಂಗ್ರಹಿಸುವ ಯೋಜನೆ ಇದೆ” ಎಂದು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಖಾಸಗಿ ವೃತ್ತಿಪರ ಸಲಹೆಗಾರರು ನೀಡುವ ಹೊಸ ಆಲೋಚನೆಗಳಿಂದ ಈ ಯೋಜನೆಗೆ ಹಣ ಹೊಂದಿಸಲು ಸಾಧ್ಯ ಎಂಬ ಯೋಜನೆಯನ್ನು ಇಲಾಖೆ ಹೊಂದಿದೆ.
ರ್ನಾಟಕ ಸರ್ಕಾರಕ್ಕಾಗಿ BCG ಕೆಲಸ ಮಾಡುತ್ತಿರುವುದು ಇದೇ ಮೊದಲಲ್ಲ!
ಫೆಬ್ರವರಿ 2025 ರಂದು ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಭೆ, ‘ಇನ್ವೆಸ್ಟ್ ಕರ್ನಾಟಕ ಶೃಂಗಸಭೆ,’ ಗೂ BCG ಸಂಸ್ಥೆಯ ಜ್ಞಾನ ಭಾಗೀದಾರ (Knowledge Partner) ಆಗಿ ಕೆಲಸ ಮಾಡಲಿದೆ. ಅಲ್ಲದೇ, ಇದೇ ಸಂಸ್ಥೆ ಫೆಬ್ರವರಿ 2024 ರಲ್ಲಿ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಬೆಂಗಳೂರಿನ ಸಮೀಪವೇ KHIR (ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆ) ನಗರದ ಪ್ರಸ್ತಾವನೆಯಲ್ಲಿ ಸಲ್ಲಿಸಿತ್ತು. ಅಂದಹಾಗೆ BCG ಸಂಸ್ಥೆಯ ಜೊತೆ ಮೊದಲು ಒಪ್ಪಂದ ಮಾಡಿಕೊಂಡಿದ್ದು ಬಿಜೆಪಿ ಸರ್ಕಾರವೇ, ಹೂಡಿಕೆಗಳನ್ನು ಆಕರ್ಷಿಸಲು 2020 ರಲ್ಲಿ BCG ಯ ಸಹಕಾರ ಪಡೆದುಕೊಂಡಿತ್ತು. 2021 ರಲ್ಲಿ BCG ಸಂಸ್ಥೆಯ ಜೊತೆಗಿನ ಈ ಒಪ್ಪಂದ ಇನ್ನೂ ಒಂದು ವರ್ಷಕ್ಕೆ ವಿಸ್ತರಣೆಯಾಗಿತ್ತು. 2022 ರಲ್ಲಿ ಜಾಗತಿಕ ಹೂಡಿಕೆದಾರರ ಸಭೆಗೆ BCG ಜ್ಞಾನ ಪಾಲುದಾರರಾಗಿಯೂ ಕಾರ್ಯನಿರ್ವಹಿಸಿತ್ತು.
ದೇಶ
ನವರಾತ್ರಿ ಸಮಯದಲ್ಲಿ ವಿಮಾನ ನಿಲ್ದಾಣಗಳಲ್ಲಿ ಭಯೋತ್ಪಾದಕ ದಾಳಿ ಎಚ್ಚರಿಕೆ – ಭದ್ರತೆ ಬಿಗಿ ಕ್ರಮ
ಭಾರತದ ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ನವರಾತ್ರಿಯ ವೇಳೆ ಭಯೋತ್ಪಾದಕ ದಾಳಿಯ ಅಪಾಯವಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದು, ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮ ಜಾರಿಯಲ್ಲಿದೆ.
ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ಆಗಸ್ಟ್ 4ರಂದು ಎಚ್ಚರಿಕೆ ಪ್ರಕಟಿಸಿ, ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಭಯೋತ್ಪಾದನೆ ಅಥವಾ ಸಮಾಜ ವಿರೋಧಿ ಶಕ್ತಿಗಳಿಂದ ದಾಳಿ ಸಂಭವಿಸಬಹುದೆಂದು ಸೂಚಿಸಿದೆ.
🕵️ ಗುಪ್ತಚರ ಮೂಲದ ಮಹತ್ವದ ಎಚ್ಚರಿಕೆ:
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ದಾಳಿಗೆ ಸಿದ್ಧತೆ ನಡೆಸುತ್ತಿವೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳು, ಏರ್‌ಸ್ಟ್ರಿಪ್‌ಗಳು, ಹೆಲಿಪ್ಯಾಡ್‌ಗಳು ಮತ್ತು ತರಬೇತಿ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳಾಗಿ ಈ ಕೆಳಗಿನ ಕ್ರಮಗಳು ಜಾರಿಗೆ ಬಂದಿವೆ:
- ಸಿಬ್ಬಂದಿ ಮತ್ತು ಸಂದರ್ಶಕರ ಗುರುತಿನ ಪರಿಶೀಲನೆ
- ಸಿಸಿಟಿವಿ ಕಣ್ಗಾವಲು ಬಿಗಿತ
- ಸರಕು, ಪಾರ್ಸೆಲ್ ಮತ್ತು ಮೇಲ್‌ಗಳ ತಪಾಸಣೆ
- ಸ್ಥಳೀಯ ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಸಹಕಾರ
🇮🇳 ರಾಷ್ಟ್ರೀಯ ಭದ್ರತೆಗೆ ಒತ್ತು:
ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳು ಈ ಕ್ರಮಗಳನ್ನು ಜಾರಿಗೊಳಿಸುತ್ತಿದ್ದು, ಪ್ರಯಾಣಿಕರು ತಮ್ಮ ಗುರುತಿನ ದಾಖಲೆಗಳನ್ನು ಸಿದ್ಧವಾಗಿಡಬೇಕು. ತಪಾಸಣೆ ವಿಳಂಬದ ಸಾಧ್ಯತೆಯಿರುವುದರಿಂದ ಸಹಕಾರ ನೀಡುವಂತೆ BCAS ಮನವಿ ಮಾಡಿದೆ.
ದೇಶ
ಅಮೆರಿಕ-ರಷ್ಯಾ ವ್ಯವಹಾರ: ಭಾರತದ ಟೀಕೆಗೆ ಟ್ರಂಪ್ ನುಣುಚು ಪ್ರತಿಕ್ರಿಯೆ
ವಾಷಿಂಗ್ಟನ್: ರಷ್ಯಾದಿಂದ ಈಗಲೂ ವ್ಯವಹಾರ ನಡೆಸುತ್ತಿರುವ ಅಮೆರಿಕದ ಕುರಿತಾಗಿ ಭಾರತ ಮಾಡಿರುವ ಗಂಭೀರ ಆರೋಪಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನುಣುಚು ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ ಆರೋಪಿಸಿದಂತೆ, ಅಮೆರಿಕ 2024ರಲ್ಲಿ 1.1 ಶತಕೋಟಿ ಡಾಲರ್ ಮೌಲ್ಯದ ರಸಗೊಬ್ಬರ, 878 ಮಿಲಿಯನ್ ಡಾಲರ್ ಮೌಲ್ಯದ ಪಲ್ಲಾಡಿಯಮ್ ಸೇರಿದಂತೆ ಹಲವು ಅಮೂಲ್ಯ ಲೋಹಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಯುರೇನಿಯಂ ಹೆಕ್ಸಾಫ್ಲೋರೈಡ್‌ನಂತಹ ಪರಮಾಣು ಉತ್ಪನ್ನಗಳ ಆಮದು ಕೂಡ ಮುಂದುವರಿದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಟ್ರಂಪ್, “ನನಗೆ ಈ ವ್ಯಾಪಾರದ ವಿವರಗಳು ತಿಳಿದಿಲ್ಲ, ನಾನು ಪರಿಶೀಲನೆ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
ಭಾರತದ ಖಡಕ್ ಪ್ರತಿಕ್ರಿಯೆ:
ಭಾರತ, ತನ್ನ ರಷ್ಯಾ ತೈಲ ಆಮದು ಬಗ್ಗೆ ಅಮೆರಿಕದ ಟೀಕೆಗೆ ಅಂಕಿ-ಅಂಶಗಳೊಂದಿಗೆ ತಿರುಗೇಟು ನೀಡಿದೆ. ಯುರೋಪ್ ದೇಶಗಳೇ ರಷ್ಯಾದಿಂದ ಭಾರಿ ಪ್ರಮಾಣದಲ್ಲಿ ಎಲ್‌ಎನ್‌ಜಿ, ರಸಗೊಬ್ಬರ, ಲೋಹಗಳನ್ನು ಆಮದು ಮಾಡಿಕೊಳ್ಳುತ್ತಿವೆ. 2024ರಲ್ಲಿ ಯುರೋಪಿಯನ್ ಒಕ್ಕೂಟವು 67.5 ಬಿಲಿಯನ್ ಯುರೋಗಳಷ್ಟು ಸರಕು ವ್ಯಾಪಾರ ಹಾಗೂ 17.2 ಬಿಲಿಯನ್ ಯುರೋಗಳಷ್ಟು ಸೇವಾ ವ್ಯಾಪಾರವನ್ನು ರಷ್ಯಾ ಜೊತೆ ನಡೆಸಿದೆ.
ಟ್ರಂಪ್ ಅವರ ಆರೋಪ:
ಟ್ರಂಪ್ ಹೇಳುವಂತೆ, ಭಾರತ ರಷ್ಯಾದ ತೈಲವನ್ನು ಖರೀದಿ ಮಾಡುತ್ತಿದ್ದು, ಅದನ್ನು ಮುಕ್ತ ಮಾರುಕಟ್ಟೆಯಲ್ಲಿ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ. ಅವರು ಈ ಕಾರಣಕ್ಕಾಗಿ ಭಾರತದಿಂದ ಸಂಗ್ರಹಿಸಬೇಕಾದ ಸುಂಕವನ್ನು ಹೆಚ್ಚಿಸುವುದಾಗಿ ಹೇಳಿದ್ದಾರೆ.
ಭಾರತದ ನಿಲುವು:
ಭಾರತ, ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇಂಧನದ ದರಗಳನ್ನು ಜನತೆಗೆ ಕೈಗೆಟುಕುವಂತೆ ಇರಿಸಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕ್ರೀಡೆ
ರಿಷಭ್ ಪಂತ್ ಮಾನವೀಯತೆ: ಬಡ ವಿದ್ಯಾರ್ಥಿನಿಗೆ BCA ಪ್ರವೇಶಕ್ಕೆ ₹40,000 ನೆರವು!
ಬಾಗಲಕೋಟೆ: ಟೀಂ ಇಂಡಿಯಾದ ವಿಕೆಟ್ ಕೀಪರ್ ಹಾಗೂ ತೀಕ್ಷ್ಣ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಕ್ರೀಡಾಕ್ಷೇತ್ರದಷ್ಟೇ ದಾನಶೀಲತೆಯಲ್ಲೂ ಮಾದರಿಯಾಗಿದ್ದಾರೆ. ಇತ್ತೀಚೆಗೆ ಅವರು ಬಾಗಲಕೋಟೆ ಜಿಲ್ಲೆಯ ಬಡ ವಿದ್ಯಾರ್ಥಿನಿಯೊಬ್ಬಳಿಗೆ ಆರ್ಥಿಕ ನೆರವು ನೀಡಿ ಜನಮನ ಗೆದ್ದಿದ್ದಾರೆ.
ಬೀಳಗಿ ತಾಲ್ಲೂಕಿನ ರಬಕವಿ ಗ್ರಾಮದ ಜ್ಯೋತಿ ಕಣಬೂರಮಠ ದ್ವಿತೀಯ ಪಿಯುಸಿಯಲ್ಲಿ 85% ಅಂಕ ಗಳಿಸಿದ್ದರೂ, ಮನೆ ಪರಿಸ್ಥಿತಿಯಿಂದ BCA ಕೋರ್ಸ್‌ಗೆ ಸೇರುವ ಕನಸು ತೊಡೆತಗೊಂಡಿತ್ತು. ತಂದೆ ಚಿಕ್ಕ ಟೀ ಅಂಗಡಿ ನಡೆಸುವವರಾಗಿದ್ದು ಶುಲ್ಕ ಪಾವತಿಸಲು ಸಾಧ್ಯವಾಗಿರಲಿಲ್ಲ.
ಇದನ್ನು ಗುತ್ತಿಗೆದಾರ ಅನಿಲ್ ಹುಣಸಿಕಟ್ಟಿ ಅವರು ಗಮನಿಸಿ, ತಮ್ಮ ಸಂಪರ್ಕಗಳಿಂದ ರಿಷಭ್ ಪಂತ್ ಅವರ ಗಮನಕ್ಕೆ ತಂದರು. ಇದನ್ನು ಕೇಳಿದ ಪಂತ್, ಜುಲೈ 17ರಂದು ₹40,000 ನೇರವಾಗಿ BLDE ಕಾಲೇಜಿನ ಖಾತೆಗೆ ವರ್ಗಾಯಿಸಿ, ಜ್ಯೋತಿಯ ಮೊದಲ ಸೆಮಿಸ್ಟರ್ ಶುಲ್ಕವನ್ನು ಭರಿಸಿದರು.
ಜ್ಯೋತಿ ಎಮೋಶನಲ್ ಆಗಿ, “ರಿಷಭ್ ಪಂತ್ ಸಹಾಯದಿಂದ ನನ್ನ ಕನಸು ಸಾಧ್ಯವಾಯಿತು. ಅವರಿಗೆ ದೇವರು ಆಯುಷ್ಯ ಕೊಡಲಿ,” ಎಂದಿದ್ದಾರೆ.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ಕ್ರೀಡೆ2 months ago
ಇಂದು ಐಪಿಎಲ್ ಫೈನಲ್- ಆರ್ಸಿಬಿಗೆ ಶುಭಕೋರಿದ ಎಸ್ಟಿಎಸ್!