Connect with us

ಬಿಬಿಎಂಪಿ

ಬೆಂಗಳೂರಿನ ಮಂದಿಗೆ ಇನ್ನೊಂದು ತೆರಿಗೆ! ಕಸ ವಿಲೇವಾರಿಗೂ ಕೊಡಬೇಕಿದೆ ಟ್ಯಾಕ್ಸ್

ಬೆಂಗಳೂರು: ದಿನ ಸಾಗಿದಂತೆ ದುನಿಯಾ ದುಬಾರಿಯಾಗ್ತಿದೆ. ತಿನ್ನೋ ಅನ್ನದಿಂದ ಹಿಡಿದು ಧರಿಸೋ ಚಪ್ಪಲಿವರೆಗೂ ಎಲ್ಲವೂ ದಿನೇ ದಿನೇ ತುಟ್ಟಿಯಾಗುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿದೆ. ತರಕಾರಿ ದರವೂ ಗಗನಕ್ಕೆ ಮುಟ್ಟಿದೆ. ಇದೀಗ ಹಾಲಿನ ಬೆಲೆಯೂ ಹೆಚ್ಚಳವಾಗಿದೆ. ಇದರ ಜೊತೆಗೆ ಬೆಂಗಳೂರಿಗರ ಜೇಬಿಗೆ ಬಿಬಿಎಂಪಿ ಕಸದ ಹೆಸರಲ್ಲಿ ಕತ್ತರಿ (BBMP Garbege Tax) ಹಾಕಲು ಹೊರಟಿದೆ. 

ಕೆಎಂಎಫ್​​ ಪ್ರತಿ ಪ್ಯಾಕೇಟಿನಲ್ಲಿ 50 ಎಂಎಲ್​​ ಹೆಚ್ಚುವರಿ ಹಾಲು ನೀಡಿ 2 ರೂಪಾಯಿ ಏರಿಕೆ ಮಾಡಿದೆ. ಇದು ಬೆಂಗಳೂರಿನ ಶ್ರೀಸಾಮಾನ್ಯರ ಕೈ ಸುಡುವಂತೆ ಮಾಡಿದೆ. ಇಂದು ಬೆಳ್ಳಂಬೆಳಗ್ಗೆ ಹಾಲು ಖರೀದಿಗೆ ನಂದಿನಿ ಬೂತ್‌ ಗೆ ಆಗಮಿಸಿದ ಜನರು ಬೆಲೆ ಏರಿದ್ದು ಕಂಡು ಅವಾಕ್ ಆದರೂ. ಇದು ಕಾಂಗ್ರೆಸ್​​ ಅಧಿಕಾರಕ್ಕೆ ಬಂದ ಬಳಿಕ ಎರಡನೇ ಬಾರಿ ಹಾಲಿನ ಬೆಲೆ ಏರಿಕೆಯಾಗಿದ್ದು, ಒಟ್ಟು 5 ರೂಪಾಯಿ ಏರಿಕೆಯಾಗಿದೆ. ಸರ್ಕಾರದ ಈ ನಡೆಗೆ ಬೆಂಗಳೂರು ಜನರು ಅಸಮಾಧಾನಗೊಂಡಿದ್ದಾರೆ.

ಕಸಕ್ಕೆ ಸೆಸ್ ಹಾಕಿದ ಪಾಲಿಕೆಗೆ ಜನರಿಂದ ಛೀಮಾರಿ
ಒಂದೆಡೆ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದ್ದು, ಜನರು ಪ್ರತಿದಿನ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಹಾಲು, ತರಕಾರಿ, ಸೊಪ್ಪು ಸೇರಿದಂತೆ ಎಲ್ಲವೂ ದುಬಾರಿಯಾಗ್ತಿರುವ ಹೊತ್ತಲ್ಲೇ ಬಿಬಿಎಂಪಿ ಬೆಂಗಳೂರು ಜನರ ಮೇಲೆ ಮತ್ತೊಂದು ಹೊರೆ ಹೊರೆಸಲು ಮುಂದಾಗಿದೆ. ಶೀಘ್ರವೇ ಬಿಬಿಎಂಪಿ ಬೆಂಗಳೂರು ಜನರಿಂದ ಗಾರ್ಬೇಜ್​ ಸೆಸ್​ ಕಲೆಕ್ಟ್ ಮಾಡಲು ಮುಂದಾಗ್ತಿದೆ. ಈ ಮೂಲಕ ಸಿಲಿಕಾನ್ ಸಿಟಿ ಮಂದಿ ಪ್ರತಿ ತಿಂಗಳು ಬಿಬಿಎಂಪಿಗೆ 100 ರೂಪಾಯಿ ಹೆಚ್ಚುವರಿಯಾಗಿ ಪಾವತಿ ಮಾಡಬೇಕಿದೆ.

ಹೀಗಾಗಿ ಇದನ್ನು ವಿರೋಧಿಸಿ ಬಿಬಿಎಂಪಿ ಕಚೇರಿಯಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಗಾರ್ಬೇಜ್ ಸೆಸ್​ ಅನ್ನು ರದ್ದು ಮಾಡುವಂತೆ ಈ ವೇಳೆ ಆಗ್ರಹಿಸಿದ್ದಾರೆ.

ಗಾರ್ಬೇಜ್ ಸೆಸ್‌ನಿಂದ ಪಾಲಿಕೆಗೆ ಕೋಟಿ ಕೋಟಿ ಆದಾಯ !!
ಬಿಬಿಎಂಪಿ ಹೊಸದಾಗಿ ಜಾರಿ ಮಾಡಲು ಹೊರಟಿರುವ ಗಾರ್ಬೇಜ್​ ಸೆಸ್​​ ಯೋಜನೆಯಿಂದ ಪಾಲಿಕೆ ಖಜಾನೆಗೆ ಕೋಟ್ಯಾಂತರ ರೂಪಾಯಿ ಹರಿದು ಬರಲಿದೆ. ಬೆಂಗಳೂರಲ್ಲಿ ಅಂದಾಜು 35 ಲಕ್ಷಕ್ಕೂ ಅಧಿಕ ಪ್ರಾಪರ್ಟಿಗಳಿವೆ. ಇದರಲ್ಲಿ ವಸತಿ ಹಾಗೂ ವಾಣಿಜ್ಯ ಯೋಗ್ಯವಾದ ಕಟ್ಟಡಗಳಿವೆ. ಇದರಿಂದ ತಿಂಗಳಿಗೆ 100 ರೂಪಾಯಿಯಂತೆ ಮನೆಗಳಿಂದ ಹಾಗೂ ವಿಲೇವಾರಿಗೆ ತಕ್ಕಂತೆ ವಾಣಿಜ್ಯ ಕಟ್ಟಡಗಳಿಂದ ಕಸದ ಸೆಸ್​​​​​​​​​ ಪಾಲಿಕೆ ವಸೂಲಿ ಮಾಡಿದರೆ, ತಿಂಗಳಿಗೆ ಬರೋಬ್ಬರಿ 100 ಕೋಟಿಯಷ್ಟು ಹೆಚ್ಚುವರಿ ಆದಾಯ ಬಿಬಿಎಂಪಿ ಕೈ ಸೇರಿಲಿದೆ. ಆದರೆ ಇದು ಜನ ಸಾಮಾನ್ಯರ ಮೇಲೆ ಭಾರೀ ಹೊರೆಯಾಗಲಿದೆ.

ಸಿಲಿಕಾನ್ ಸಿಟಿ ಜನರ ಮೇಲೆ ಗಾರ್ಬೇಜ್​​​ ಹೊರೆ 
ಒಟ್ಟಾರೆ ದುಬಾರಿ ದುನಿಯಾದ ಬದುಕುಳಿದವನೇ ರಾಜ ಎಂಬಂತಾಗಿದೆ ಶ್ರೀಸಾಮಾನ್ಯರ ಪರಿಸ್ಥಿತಿ. ಅತ್ತ ರಾಕೆಟ್​ ನಂತೆ ಏರುತ್ತಿರುವ ಹಾಲು ಸೇರಿದಂತೆ ದಿನ ಬಳಕೆಯ ವಸ್ತುಗಳ ಬೆಲೆ. ಇತ್ತ ಕಸದ ಹೆಸರಲ್ಲೂ ಬಿಬಿಎಂಪಿ ಜನರ ಜೇಬಿಗೆ ಕೈ ಹಾಕಿ 100 ರೂಪಾಯಿ ಪ್ರತಿ ತಿಂಗಳು ವಸೂಲಿ ಮಾಡುತ್ತಿರುವುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಬಿಬಿಎಂಪಿ

ಜಿಬಿಎ ಚುನಾವಣೆ ಪೂರ್ವಸಿದ್ಧತೆ: ನವೆಂಬರ್ 1ರೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ – ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದ ಪೂರ್ವಸಿದ್ಧತೆಗಳನ್ನು ನವೆಂಬರ್ 1ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಹಿರಿಯ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಚುನಾವಣೆಗಾಗಿ ಮತದಾರರ ನೋಂದಣಿ ನಿಯಮಗಳನ್ನು ಹೇಗೆ ರೂಪಿಸಬೇಕು ಎಂಬ ಕುರಿತು ಚುನಾವಣಾ ಆಯೋಗದ ಅಭಿಪ್ರಾಯವನ್ನು ಕೇಳಲಾಗುವುದು,” ಎಂದು ಸ್ಪಷ್ಟಪಡಿಸಿದರು.

ಚುನಾವಣೆ ಹಕ್ಕು ಕಾಪಾಡುವ ಕುರಿತು ಮಾರ್ಗದರ್ಶನ:
ಪಕ್ಷದ ಕಾರ್ಯಕರ್ತರು ಮತ್ತು ಬ್ಲಾಕ್ ಅಧ್ಯಕ್ಷರಿಗೆ, ತಮ್ಮ ಮತದಾನದ ಹಕ್ಕನ್ನು ಕಾಪಾಡಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಲಾಗಿದೆ. “ಶಾಸಕರನ್ನು ಹಾಗೂ ಬ್ಲಾಕ್ ಲೆವಲ್ ನಾಯಕರನ್ನು ಮತ್ತೊಮ್ಮೆ ಸಭೆಗೆ ಕರೆದು ಸಿದ್ಧತೆ ಕುರಿತ ಚರ್ಚೆ ನಡೆಯಲಿದೆ,” ಎಂದರು.

ಇಂಡಿಯಾ ಒಕ್ಕೂಟ ಮತ್ತು ಪ್ರತಿಭಟನೆ ಕುರಿತು ಸ್ಪಷ್ಟನೆ:
ಮುಖ್ಯಮಂತ್ರಿಗಳಿಗೆ ಇಂಡಿಯಾ ಒಕ್ಕೂಟದ ಸಭೆಗೆ ಆಹ್ವಾನ ಇದೆ. ನಾನು ಇಲ್ಲಿ ಪ್ರತಿಭಟನಾ ಸಭೆಗಾಗಿ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿದ್ದೇನೆ,” ಎಂದು ಡಿಸಿಎಂ ಹೇಳಿದರು. “ಸ್ವಾತಂತ್ರ ಉದ್ಯಾನದಲ್ಲಿ ಮತಚೂರಿ ವಿರುದ್ಧsymbolic ಪ್ರತಿಭಟನೆ ನಡೆಯಲಿದ್ದು, ಇದು ನ್ಯಾಯಾಲಯದ ಆದೇಶದಂತೆ ಹಮ್ಮಿಕೊಳ್ಳಲಾಗಿದೆ,” ಎಂದು ಹೇಳಿದರು.

ರಾಜ್ಯಮಟ್ಟದ ಪ್ರತಿಭಟನೆ:
ಪ್ರತಿಯೊಬ್ಬ ಜಿಲ್ಲೆಯಿಂದ ಕನಿಷ್ಠ 50 ನಾಯಕರು, ಕಾರ್ಯಕರ್ತರು, ಪರಾಜಿತ ಅಭ್ಯರ್ಥಿಗಳು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಲಾಗಿದೆ. “ಬೆಂಗಳೂರು ಮಾತ್ರವಲ್ಲ, ಇಡೀ ಕರ್ನಾಟಕದಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ,” ಎಂದು ಅವರು ಹೇಳಿದ್ದಾರೆ.

Continue Reading

ಬಿಬಿಎಂಪಿ

2025ರ ಅಂತ್ಯಕ್ಕೆ ಬಿಬಿಎಂಪಿ ಚುನಾವಣೆ ಸಾಧ್ಯತೆ: ಆರು ವರ್ಷದ ನಿರೀಕ್ಷೆಗೆ ತೆರೆ ಹಾಕಲು ಕಾಂಗ್ರೆಸ್ ಸಿದ್ಧತೆ

ಬೆಂಗಳೂರು, ಜುಲೈ 27 – ಬೆಂಗಳೂರಿನ ಬೃಹತ್ ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕಳೆದ ಆರು ವರ್ಷಗಳಿಂದ ಚುನಾವಣೆ ನಡೆಯದೇ ಇರುವ ಸ್ಥಿತಿಗೆ ಕೊನೆಗೂ ತೆರೆ ಬೀಳುವ ಸೂಚನೆ ನೀಡಲಾಗಿದೆ. ಈ ವರ್ಷದ ಅಂತ್ಯದಲ್ಲಿ ಬಿಬಿಎಂಪಿ ಹಾಗೂ ಹೊಸದಾಗಿ ರಚಿಸಲಾಗಿರುವ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಸರ್ಕಾರ ಸ್ಪಷ್ಟಪಡಿಸಿದೆ.

ಸರ್ಕಾರದ ಶ್ರದ್ಧೆ ಹಾಗೂ ಕೋರ್ಟ್‌ನಲ್ಲಿ ಮುಂದುವರಿದಿರುವ ವಿಚಾರಣೆ:

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದು, ಅವರ ಪರವಾಗಿ ವಕೀಲ ಡಿ.ಎಲ್. ಚಿದಾನಂದ ಪ್ರತಿನಿಧಿಸಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳು ಸೂರ್ಯಕಾಂತ್ ಮತ್ತು ಜೋಯ್ ಮಾಲ್ಯ ಬಾಗ್ಚಿ ಅವರ ಪೀಠ ಸೋಮವಾರ ನಡೆಸಲಿದೆ.

ಚುನಾವಣೆಯ ಹಿನ್ನಲೆ – ಏಳು ವರ್ಷದ ವಿಳಂಬ:

  • ಬಿಬಿಎಂಪಿ ಸದಸ್ಯರ ಅವಧಿ 2019ರಲ್ಲೇ ಕೊನೆಗೊಂಡಿತ್ತು.
  • ಹೈಕೋರ್ಟ್ 6 ವಾರಗಳಲ್ಲಿ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದರೂ, ಸುಪ್ರೀಂ ಕೋರ್ಟ್ ಆ ಆದೇಶವನ್ನು ಅಮಾನತುಗೊಳಿಸಿತು.
  • 2023 ರಲ್ಲಿ ವಾರ್ಡ್ ಮರುರಚನೆ ನಡೆಸಿ ವಾರ್ಡ್‌ಗಳ ಸಂಖ್ಯೆ 198 ರಿಂದ 225 ಕ್ಕೆ ಹೆಚ್ಚಿಸಲಾಯಿತು.
  • ಈ ಮರುರಚನೆಯ ವಿರುದ್ಧ ಸಾರ್ವಜನಿಕ ಹಾಗೂ ಪ್ರತಿಪಕ್ಷಗಳಿಂದ ಗಂಭೀರ ವಿರೋಧ ವ್ಯಕ್ತವಾಯಿತು.
  • ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ ಮತ್ತು ಮುಂದಿನ ಆಯೋಜನೆ:
  • 2025 ರಲ್ಲಿ ಕಾಂಗ್ರೆಸ್ ಸರ್ಕಾರ ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ ಮಂಡಿಸಿದ್ದು, ಬೆಂಗಳೂರನ್ನು ಐದು ಹೊಸ ನಗರ ಪಾಲಿಕೆಗಳಾಗಿ ವಿಭಜಿಸಿ “ಗ್ರೇಟರ್ ಬೆಂಗಳೂರು” ಎಂದು ಹೆಸರಿಸಲಾಗಿದೆ. ಈ ಹೊಸ ಪಾಲಿಕೆಗಳಿಗೆ ಸಂಬಂಧಿಸಿದ ವಾರ್ಡ್‌ಗಳ ಗಡಿ ಹಾಗೂ ರೂಪರೇಖೆಯ ಕರಡು ಅಧಿಸೂಚನೆ ಹೊರಬಿದ್ದಿದ್ದು, ನವೆಂಬರ್ 2024 ವೇಳೆಗೆ ಅಂತಿಮ ಅಧಿಸೂಚನೆ ಹೊರಬರುವ ಸಾಧ್ಯತೆ ಇದೆ.
  • ರಾಜಕೀಯ ಬಿಕ್ಕಟ್ಟು ಮತ್ತು ಸಾರ್ವಜನಿಕ ಒತ್ತಡ:
  • ಬಿಬಿಎಂಪಿ ಚುನಾವಣೆ ಮುಂದೂಡುತ್ತಿರುವ ಬಗ್ಗೆ ಕೆಲವು ಶಾಸಕರ ನಿರಾಸಕ್ತಿ ಹಾಗೂ ಅಧಿಕಾರದಲ್ಲಿ ಮುಂದುವರಿಯುವ ಔತ್ಸುಕರತೆ ಕಾರಣಗಳಾಗಿದ್ದವು. ಹಲವಾರು ಪ್ರಭಾವಿ ಮುಖಂಡರು ಈ ಹಿನ್ನೆಲೆಯಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
Continue Reading

ಬಿಬಿಎಂಪಿ

ವರ್ಗಾವಣೆಯಲ್ಲಿಯೂ ಬಿಬಿಎಂಪಿ ಭ್ರಷ್ಟಾಚಾರ – ಒಲ್ಲದವರಿಗೆ ಗೇಟ್‌ ಪಾಸ್‌, ಬೇಕಾದವರಿಗೆ ಸ್ಟೇಟಸ್‌!

ಬೆಂಗಳೂರು : ಬಿಬಿಎಂಪಿಯ ಹಲವು ಭ್ರಷ್ಟಾಚಾರಗಳ ಪೈಕಿ ಈಗ ಸಾರ್ವತ್ರಿಕ ವರ್ಗಾವಣೆಯಲ್ಲಿ ದಂಧೆ ನಡೆದಿರುವ ಆರೋಪ ಕೇಳಿಬಂದಿದೆ. ಯಾವುದೇ ಸೇವಾಜೇಷ್ಟತೆ, ಅರ್ಹತೆ, ಅನುಭವಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಬೇಕಾಬಿಟ್ಟಿ ವರ್ಗಾವಣೆ ಮಾಡಿದ್ದಾರೆಂದು ಸ್ವತಃ ಸಿಬ್ಬಂದಿಗಳೇ ಆಕ್ರೋಶ ಹೊರಹಾಕಿದ್ದಾರೆ.

ಒಂದೇ ಕಚೇರಿಯಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವವರನ್ನು ವರ್ಗಾಯಿಸಬೇಕೆಂಬ ನಿಯಮವಿದ್ದರೂ ಇತ್ತೀಚೆಗೆ ನೇಮಕವಾದವರನ್ನು ವರ್ಗಾಯಿಸಿ ಹಳೆಯ ತಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳು ವ್ಯಾಪಕವಾಗಿ ನಡೆದಿದೆ. ಇದಕ್ಕೆ ಬಲಿಪಶುಗಳಾಗಿರುವ ಸಿಬ್ಬಂದಿಗಳು ವರ್ಗಾವಣೆಗೆ ಆಕ್ಷೇಪ ಸಲ್ಲಿಸಿದ್ದಾರೆ.

ನೇಮಕವಾಗಿರುವ ದಿನಾಂಕಕ್ಕೂ ಹಾಗೂ ಎಚ್‌ಆರ್‌ಎಂಎಸ್‌ ನಲ್ಲಿ ದಾಖಲಾಗಿರುವ ದಿನಾಂಕಕ್ಕೂ ವ್ಯತ್ಯಾಸವಿರುದು ದೋಷಪೂರಿತವೆಂದೆ ಸ್ವತಃ ಬಿಬಿಎಂಪಿ ಒಳಾಡಳಿತವೇ ಒಪ್ಪಿಕೊಂಡಿದೆ .ಆದರೂ ಸಹ ಎಚ್‌ಆರ್‌ಎಂಎಸ್‌ ದಾಖಲೆಗೆ ಅನುಸಾರವಾಗಿ ಬಿಬಿಎಂಪಿ ವರ್ಗಾವಣೆ ಮಾಡಿದೆ.

ಅಲ್ಲದೇ ಎಂಟೂ ವಲಯಗಳಲ್ಲಿಯೂ ವರ್ಗಾವಣೆಯಲ್ಲಿ ಪಕ್ಷಪಾತ ತೋರಲಾಗಿದ್ದು, ಕೇವಲ ಎರಡು ವಲಯಗಳ ಸಿಬ್ಬಂದಿಗೆ ಮಾತ್ರ ಈ ವರ್ಗಾವಣೆ ಜಾರಿಯಾಗಿದೆ. ಮಿಕ್ಕವರು ಹಣಬಲ, ಅಧಿಕಾರಿಗಳ ಬೆಂಬಲ, ಜಾತಿಬಲ ಗಳಿಂದ ಪಾರಾಗಿದ್ದಾರೆಂದು ಸಿಬ್ಬಂದಿ ವರ್ಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರ್ಗಾವಣೆ ನಿಯಮ ಪಾರದರ್ಶಕವಾಗಿರಲಿ, ಎಲ್ಲರಿಗೂ ಸಮಾನವಾಗಿ ಜಾರಿಯಾಗಲಿ ಎಂದು ಸಿಬ್ಬಂದಿಗಳು ಆಗ್ರಹಿಸಿದ್ದಾರೆ.

Continue Reading

Trending