ಕ್ರೀಡೆ
ಟೀಂ ಇಂಡಿಯಾ ಹೊಸ ಕೋಚ್ಗೆ ಬಿಗ್ ಸರ್ಪ್ರೈಸ್ ಕೊಟ್ಟ ರಾಹುಲ್ ದ್ರಾವಿಡ್.. ಗಂಭೀರ್ ಹೇಳಿದ್ದೇನು?

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಗೌತಮ್ ಗಂಭೀರ್ ಅವರು ಭಾರತ ತಂಡದ ಮುಖ್ಯ ಕೋಚ್ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಇದೇ ಮೊದಲ ಬಾರಿಗೆ ಕೋಚ್ ಹುದ್ದೆ ನಿರ್ವಹಿಸುತ್ತಿರುವ ಗೌತಮ್ ಗಂಭೀರ್ಗೆ ಮಾಜಿ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಅವರು ವಿಡಿಯೋ ಸಂದೇಶ ಕಳುಹಿಸಿ ಸರ್ಪ್ರೈಸ್ ನೀಡಿದ್ದಾರೆ.
ಸದ್ಯ ಶ್ರೀಲಂಕಾದ ವಿರುದ್ಧದ ಮೊದಲ ಟಿ20 ಪಂದ್ಯಕ್ಕೂ ಮೊದಲು ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿದೆ. ವಿಡಿಯೋದಲ್ಲಿ ರಾಹುಲ್ ದ್ರಾವಿಡ್ ಅವರು ಗೌತಮ್ ಅವರಿಗೆ ಪ್ರೋತ್ಸಾಹದ ಮಾತುಗಳು ಹಾಗೂ ಮುಂದಿನ ದಾರಿ ಹೇಗೆಲ್ಲ ಇರುತ್ತದೆ ಎಂಬುದರ ಕುರಿತು ಮನನ ಮಾಡಿದ್ದಾರೆ. ಟಿ20 ವರ್ಲ್ಡ್ಕಪ್ ಗೆದ್ದಾಗ ಬಾರ್ಬಡೋಸ್ನಿಂದ ಪ್ರಾರಂಭವಾದ ಸಂಭ್ರಮ ಮುಂಬೈವರೆಗೆ ಹೇಗೆಲ್ಲ ಇತ್ತು ಎಂಬುದರ ಬಗ್ಗೆ ದ್ರಾವಿಡ್ ಮಾಹಿತಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್ ಅವರು, ಹಲೋ ಗೌತಮ್, ವಿಶ್ವದ ಅತ್ಯಾಕರ್ಷಕ ಹುದ್ದೆಯಾದ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಕೆಲಸಕ್ಕೆ ನಿಮಗೆ ಸ್ವಾಗತ. ಕಳೆದ 3 ವಾರಗಳ ಹಿಂದೆ ನನ್ನ ಕನಸನ್ನು ಮೀರಿದ ಜೀವನವನ್ನು ಭಾರತ ತಂಡದೊಂದಿಗೆ ಕಳೆದಿದ್ದೇನೆ. ಬಾರ್ಬಡೋಸ್ ಹಾಗೂ ಮುಂಬೈನಲ್ಲಿ ಮರೆಯಲಾರದ ಕ್ಷಣಗಳನ್ನು ಕಳೆದಿದ್ದೇನೆ. ತಂಡದ ಆಟಗಾರರೊಂದಿಗೆ ನನ್ನ ಸಮಯದಲ್ಲಿ ಮಾಡಿದ ನೆನಪು, ಸ್ನೇಹವನ್ನು ನಿಧಿಯಾಗಿ ಇಡುತ್ತೇನೆ. ಭಾರತ ತಂಡದ ಮುಖ್ಯ ಕೋಚ್ ಆದ ನಿಮಗೂ ಶುಭವಾಗಲಿ ಎಂದು ಹಾರೈಸುತ್ತೇನೆ ಎಂದು ದ್ರಾವಿಡ್ ಹೇಳಿದ್ದಾರೆ.
ಟೀಮ್ನ ಕೋಚ್ ಆದ ಮೇಲೆ ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಕಷ್ಟದ ಸಮಯಗಳು ಬಂದಾಗ ನೀವು ಏಕಾಂಗಿಯಾಗಲ್ಲ. ಏಕೆಂದರೆ ಪ್ಲೇಯರ್ಸ್, ಹಿಂದಿನ ನಾಯಕರು ಹಾಗೂ ಸಿಬ್ಬಂದಿಯಿಂದ ಬೆಂಬಲ ಸಿಗುತ್ತದೆ. ನೀವು ಯಾರಿಗಾಗಿ ಆ ಹುದ್ದೆ ನಿರ್ವಹಿಸುತ್ತೀರಿ ಎಂಬುದನ್ನು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಹೀಗಾಗಿ ನಿಮ್ಮ ಮೇಲೆ ಅಭಿಮಾನಿಳು ಕೂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಕೆಲವೊಮ್ಮೆ ಕಠಿಣ ಸಂದರ್ಭಗಳು ಬಂದಾಗ ಎಲ್ಲವನ್ನು ಎದುರಿಸಿ ಹಿಂದೆಜ್ಜೆ ಇಡಬೇಕಾಗುತ್ತೆ. ಆಗ ಕಷ್ಟವಾಗುತ್ತದೆ. ಆದರೂ ಇದು ತಪ್ಪಿದ್ದಲ್ಲ. ಜನರಿಗೆ ಶಾಕ್ ಆಗುವಂಥ ಸಣ್ಣದಾದ ಸ್ಮೈಲ್ ನೀವು ನೀಡಬೇಕು. ನಿಮಗೆ ಶುಭಾಶಯಗಳನ್ನು ತಿಳಿಸುತ್ತ, ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಇನ್ನಷ್ಟು ಶ್ರೇಷ್ಠ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತೀರಿ ಎಂದು ಭಾವಿಸುತ್ತೇನೆ ಎಂದು ರಾಹುಲ್ ದ್ರಾವಿಡ್ ಅವರು ಗೌತಮ್ ಗಂಭೀರ್ ಕುರಿತು ಹೇಳಿದ್ದಾರೆ. ಸದ್ಯ ಇದೆಲ್ಲವನ್ನೂ ಕೇಳಿದ ಗೌತಮ್ ಗಂಭೀರ್ ಅವರು ಭಾವುಕದಿಂದ ಏನು ಹೇಳಬೇಕು ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಕ್ರೀಡೆ
ರಿಷಭ್ ಪಂತ್ ಮಾನವೀಯತೆ: ಬಡ ವಿದ್ಯಾರ್ಥಿನಿಗೆ BCA ಪ್ರವೇಶಕ್ಕೆ ₹40,000 ನೆರವು!
ಬಾಗಲಕೋಟೆ: ಟೀಂ ಇಂಡಿಯಾದ ವಿಕೆಟ್ ಕೀಪರ್ ಹಾಗೂ ತೀಕ್ಷ್ಣ ಬ್ಯಾಟ್ಸ್ಮನ್ ರಿಷಭ್ ಪಂತ್ ಅವರು ಕ್ರೀಡಾಕ್ಷೇತ್ರದಷ್ಟೇ ದಾನಶೀಲತೆಯಲ್ಲೂ ಮಾದರಿಯಾಗಿದ್ದಾರೆ. ಇತ್ತೀಚೆಗೆ ಅವರು ಬಾಗಲಕೋಟೆ ಜಿಲ್ಲೆಯ ಬಡ ವಿದ್ಯಾರ್ಥಿನಿಯೊಬ್ಬಳಿಗೆ ಆರ್ಥಿಕ ನೆರವು ನೀಡಿ ಜನಮನ ಗೆದ್ದಿದ್ದಾರೆ.
ಬೀಳಗಿ ತಾಲ್ಲೂಕಿನ ರಬಕವಿ ಗ್ರಾಮದ ಜ್ಯೋತಿ ಕಣಬೂರಮಠ ದ್ವಿತೀಯ ಪಿಯುಸಿಯಲ್ಲಿ 85% ಅಂಕ ಗಳಿಸಿದ್ದರೂ, ಮನೆ ಪರಿಸ್ಥಿತಿಯಿಂದ BCA ಕೋರ್ಸ್ಗೆ ಸೇರುವ ಕನಸು ತೊಡೆತಗೊಂಡಿತ್ತು. ತಂದೆ ಚಿಕ್ಕ ಟೀ ಅಂಗಡಿ ನಡೆಸುವವರಾಗಿದ್ದು ಶುಲ್ಕ ಪಾವತಿಸಲು ಸಾಧ್ಯವಾಗಿರಲಿಲ್ಲ.
ಇದನ್ನು ಗುತ್ತಿಗೆದಾರ ಅನಿಲ್ ಹುಣಸಿಕಟ್ಟಿ ಅವರು ಗಮನಿಸಿ, ತಮ್ಮ ಸಂಪರ್ಕಗಳಿಂದ ರಿಷಭ್ ಪಂತ್ ಅವರ ಗಮನಕ್ಕೆ ತಂದರು. ಇದನ್ನು ಕೇಳಿದ ಪಂತ್, ಜುಲೈ 17ರಂದು ₹40,000 ನೇರವಾಗಿ BLDE ಕಾಲೇಜಿನ ಖಾತೆಗೆ ವರ್ಗಾಯಿಸಿ, ಜ್ಯೋತಿಯ ಮೊದಲ ಸೆಮಿಸ್ಟರ್ ಶುಲ್ಕವನ್ನು ಭರಿಸಿದರು.
ಜ್ಯೋತಿ ಎಮೋಶನಲ್ ಆಗಿ, “ರಿಷಭ್ ಪಂತ್ ಸಹಾಯದಿಂದ ನನ್ನ ಕನಸು ಸಾಧ್ಯವಾಯಿತು. ಅವರಿಗೆ ದೇವರು ಆಯುಷ್ಯ ಕೊಡಲಿ,” ಎಂದಿದ್ದಾರೆ.
ಕ್ರೀಡೆ
ಭಾರತೀಯ ತಂಡದ ಕೋಚ್ ಗೌತಮ್ ಗಂಭೀರ್ ವಿರುದ್ಧ ಟೀಕೆ, ಬಿಸಿಸಿಐ ಸಹಾಯಕ ಕೋಚ್ ಮಾರ್ನೆ ಮಾರ್ಕೆಲ್-ಟೆನ್ ಡೊಶ್ಕಾಟೆ ಬದಲಾವಣೆ ಸಾಧ್ಯತೆ
ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಭೀರ್ ಅವರ ಕೋಚಿಂಗ್ ಶೈಲಿಯನ್ನು ಮಾಜಿ ಕ್ರಿಕೆಟಿಗರು ಸೇರಿದಂತೆ ಸುನಿಲ್ ಗವಾಸ್ಕರ್, ರಿಕಿ ಪಾಂಟಿಂಗ್ ಸೇರಿದಂತೆ ಹಲವು ಹಿರಿಯರು ಭಾರೀ ಟೀಕೆ ಮಾಡಿದ್ದಾರೆ. ಈ ಟೀಕೆಗಳಿಗೆ ಸಂಬಂಧಿಸಿ, ಗಂಭೀರ್ ಮನವಿ ಮಾಡಿಕೊಂಡ ಸಹಾಯಕ ಕೋಚ್ಗಳಾದ ಮಾರ್ನೆ ಮಾರ್ಕೆಲ್ (ಬೌಲಿಂಗ್ ಕೋಚ್) ಮತ್ತು ರ್ಯಾನ್ ಟೆನ್ ಡೊಶ್ಕಾಟೆ ಶೀಘ್ರದಲ್ಲೇ ತಮ್ಮ ಹುದ್ದೆಯಿಂದ ವಜಾಗೊಳ್ಳುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತಿವೆ.
ಕಳೆದ ವರ್ಷ ಜುಲೈನಲ್ಲಿ ಗಂಭೀರ್ ಭಾರತದ ಕೋಚ್ ಆಗಿ ನೇಮಕಗೊಂಡಿದ್ದರು. ಅವರ ಮನವಿ ಮೇರೆಗೆ ಐಪಿಎಲ್ ತಂಡಗಳಲ್ಲಿ ಕಾರ್ಯನಿರ್ವಹಿಸಿದ್ದ ಅಭಿಷೇಕ್ ನಾಯರ್, ಮಾರ್ಕೆಲ್ ಮತ್ತು ಡೊಶ್ಕಾಟೆ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದರು. ಆದರೆ, ನ್ಯೂಜಿಲೆಂಡ್ ವಿರುದ್ಧ ವೈಟ್ ವಾಷ್ ಹಾಗೂ ಆಸ್ಟ್ರೇಲಿಯಾ ತಂಡದ ಸೋಲುಗಳು ಬಿಸಿಸಿಐನಲ್ಲಿ ಅಸಮಾಧಾನ ಮೂಡಿಸಿದ ಕಾರಣ, ಮೊದಲನೆಯದಾಗಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಹುದ್ದೆಯಿಂದ ವಜಾಗೊಂಡಿದ್ದರು.
ಇದೇ ಹಿನ್ನೆಲೆಯಲ್ಲಿ, ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಮತ್ತು ರ್ಯಾನ್ ಟೆನ್ ಡೊಶ್ಕಾಟೆ ಸಹ ಇನ್ನೂ ಸಹ ಹುದ್ದೆಯಿಂದ ವಜಾಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ತಂಡದ ಆಯ್ಕೆ ಪ್ರಕ್ರಿಯೆ, ಆಟಗಾರರ ಕಾರ್ಯದೊತ್ತಡ, ಪಿಚ್ ಅನ್ವಯ 11 ಆಟಗಾರರ ಆಯ್ಕೆ ಮತ್ತು ಸಮತೋಲನ ಕಾಯ್ದುಕೊಳ್ಳುವ ವಿಚಾರದಲ್ಲಿ ಕೋಚ್ಗಳ ಕಾರ್ಯವೈಖರಿಗೆ ಬಿಸಿಸಿಐ ಅತೃಪ್ತಿ ವ್ಯಕ್ತಪಡಿಸಿದೆ.
ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸ್ಥಾನಕ್ಕೂ ಸವಾಲು ಎದುರಾಗಿದೆ. 2023ರ ಜುಲೈನಲ್ಲಿ ನೇಮಕಗೊಂಡ ಈ ಸಮಿತಿ ಮುಖ್ಯಸ್ಥರ ನೇತೃತ್ವದಲ್ಲಿ ಭಾರತ ತಂಡದ ಪ್ರದರ್ಶನ ಕಳೆದ ಒಂದು ವರ್ಷದಿಂದ ತೀರಾ ಕಳಪೆಯಾಗಿದ್ದು, ಸಮರ್ಥ ಆಟಗಾರರ ಆಯ್ಕೆಯಲ್ಲಿ ನಿರಂತರ ಎಡವಾಟಗಳು ನಡೆದಿವೆ ಎಂದು ವಿಶ್ಲೇಷಣೆಗಳು ತಿಳಿಸುತ್ತಿವೆ.
ಕ್ರೀಡೆ
ಕನ್ನಡಿಗ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಮಹಾರಾಜ ಟ್ರೋಫಿ ಟಿ20 ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟ
ಕರ್ನಾಟಕದ ಪ್ರತಿಭಾವಂತ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಮಹಾರಾಜ ಟ್ರೋಫಿ ಟಿ20 ಹರಾಜಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅವರು ‘ಹುಬ್ಬಳ್ಳಿ ಟೈಗರ್ಸ್’ ತಂಡಕ್ಕೆ 13.20 ಲಕ್ಷ ರೂಪಾಯಿಗೆ ಮಾರಾಟ ಆಗಿದ್ದು, ಈ ಮೊತ್ತವು ಮಹಾರಾಜ ಟ್ರೋಫಿಯ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಯಾಗಿದೆ. ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪರ ಉತ್ತಮ ಪ್ರದರ್ಶನ ನೀಡಿ, ಅವರು ಈ ಯಶಸ್ಸಿಗೆ ಪಾತ್ರರಾಗಿದ್ದಾರೆ.
ಕಳೆದ ಐಪಿಎಲ್ ಪಂದ್ಯಾವಳಿಯಲ್ಲಿ ಗಾಯದಿಂದ ಕೆಲವು ಪಂದ್ಯಗಳಿಂದ ದೂರ ಉಳಿದರೂ, ದೇವದತ್ ಪಡಿಕ್ಕಲ್ ಅವರ ಸಾಮರ್ಥ್ಯ ಎಲ್ಲರ ಮನಸ್ಸಿಗೆ ತಲುಪಿತ್ತು. 2024ರ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ನಿಂದ ಹೊರಬಂದ ಬಳಿಕ ಆರ್ಸಿಬಿ ತಂಡವು ಅವರನ್ನು 3.20 ಕೋಟಿ ರೂಪಾಯಿಗೆ ಖರೀದಿಸಿದೆ. ಇದೀಗ ಮಹಾರಾಜ ಟ್ರೋಫಿ ಟಿ20 ಹರಾಜಿನಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು 13.20 ಲಕ್ಷ ರೂಪಾಯಿಗೆ ದೇವದತ್ ಪಡಿಕ್ಕಲ್ ಅವರನ್ನು ಪಡೆದಿದ್ದು, ಇದು ಟೂರ್ನಿಯ ದಾಖಲೆಯ ಬೆಲೆಯಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಜುಲೈ 15ರಂದು ಬೆಂಗಳೂರಿನಲ್ಲಿ ಆಯೋಜಿಸಿದ ಈ ಹರಾಜಿನಲ್ಲಿ ದೇವದತ್ ಪಡಿಕ್ಕಲ್ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಕನ್ನಡಿಗ ಕ್ರಿಕೆಟಿಗರಾಗಿದ್ದಾರೆ. ಮಹಾರಾಜ ಟ್ರೋಫಿಯಲ್ಲಿ ಪ್ರತಿ ಫ್ರಾಂಚೈಸಿಯು ಕನಿಷ್ಠ ಇಬ್ಬರು ಸ್ಥಳೀಯ ಆಟಗಾರರನ್ನು ತಂಡದಲ್ಲಿ ಇರಿಸಬೇಕು ಎಂಬ ನಿಯಮವಿದ್ದು, ಇದರಿಂದ ಸ್ಥಳೀಯ ಪ್ರತಿಭೆಗಳ ಪ್ರೋತ್ಸಾಹಕ್ಕೆ ದೊಡ್ಡ ಅವಕಾಶ ಸಿಗುತ್ತದೆ.
ಈ ವರ್ಷದ ಪಂದ್ಯಗಳು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಭಿಮಾನಿಗಳಿಗೆ ಮೈದಾನದಲ್ಲಿ ವೀಕ್ಷಣೆಗೆ ಅವಕಾಶ ಇಲ್ಲ. ಆದರೂ ದೇವದತ್ ಪಡಿಕ್ಕಲ್ ಅವರ ಸಾಧನೆ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ ಮತ್ತು ಯುವ ಕ್ರಿಕೆಟಿಗರಿಗೆ ಪ್ರೇರಣೆಯಾಗಿದೆ.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ಕ್ರೀಡೆ2 months ago
ಇಂದು ಐಪಿಎಲ್ ಫೈನಲ್- ಆರ್ಸಿಬಿಗೆ ಶುಭಕೋರಿದ ಎಸ್ಟಿಎಸ್!