ದೇಶ
Horoscope Today 05 September 2024: ಈ ಶುಭ ದಿನ ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ….

ಭವಿಷ್ಯ ನುಡಿಯುವುದು ಆ ಭಗವಂತನ ಅನುಗ್ರಹ. ದಿನ ಬೆಳಗಾಗೆದ್ದು ಭಗವಂತನ ನೆನೆದು ನಿತ್ಯದ ಕಾಯಕದಲ್ಲಿ ತೊಡಗಿಕೊಳ್ಳುವ ಮುನ್ನ ಈ ಭವಿಷ್ಯವನ್ನೊಮ್ಮೆ ನೋಡಿಕೊಳ್ಳಿ. ಇಲ್ಲಿ ಹೇಳುವ ಎಚ್ಚರಿಕೆಯ ಮಾತುಗಳನ್ನೊಮ್ಮೆ ಗಮನದಲ್ಲಿ ಇಟ್ಟುಕೊಳ್ಳಿ. ಸಾಧ್ಯವಾದಷ್ಟೂ ಸಲಹೆಗಳನ್ನು ಅನುಸರಿಸಿ. ಜೀವನದಲ್ಲಿ ಸಮಸ್ಯೆಗಳು ಬಂದು ಹೋಗುವ ನೆಂಟರಂತೆ.
ಮೇಷ ರಾಶಿ
ನಿಮ್ಮ ಸ್ವಾರ್ಥರಹಿತವಾದ ಆಲೋಚನೆಗೆ ಕುಟುಂಬದವರು ಬಹಳ ಸಂತೋಷ ಪಡುತ್ತಾರೆ. ಇತರರ ಬಗ್ಗೆ ಕರುಣೆ ಹೆಚ್ಚಾಗಿರುತ್ತದೆ. ಪ್ರೀತಿಪಾತ್ರರ ಭೇಟಿ ಹಾಗೂ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದೀರಿ. ಕೌಟುಂಬಿಕ ಸಮಸ್ಯೆಗಳಿದ್ದಲ್ಲಿ ಸರಳವಾದ ಪರಿಹಾರ ಕಂಡುಕೊಳ್ಳುವಿರಿ.
ವೃಷಭ
ನಿಮ್ಮ ಬಗ್ಗೆ ಇತರರು ಏನೆಂದುಕೊಳ್ಳುತ್ತಾರೆ ಎಂದು ಬಹಳ ಆತಂಕಕ್ಕೆ ಒಳಗಾಗುತ್ತೀರಿ. ಸಾರ್ವಜನಿಕ ಜೀವನದ ವರ್ತನೆ ಬಗ್ಗೆ ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳುತ್ತೀರಿ. ಹಣ ಹೂಡಿಕೆ ವಿಚಾರದಲ್ಲಿ ಯಾರ ಪರವಾಗಿಯೂ ವಕಾಲತ್ತು ವಹಿಸಬೇಡಿ. ಸಲಹೆ- ಸೂಚನೆಯಂತೂ ಬೇಡವೇ ಬೇಡ.
ಮಿಥುನ
ಜಮೀನು ವ್ಯಾಜ್ಯಗಳು ಇದ್ದಲ್ಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿದೆ. ತಂದೆಯ ಕಡೆ ಸಂಬಂಧಿಗಳಿಂದ ನೆರವು ಸಿಗಲಿದೆ. ನೀವು ನೀಡಿದ್ದ ಮಾತಿಗೆ ಬದ್ಧವಾಗಿರಬೇಕು ಎಂಬುದನ್ನು ನೆನಪಿಟ್ಟುಕೊಳ್ಳಿ. ಕಾಲು, ಭುಜದ ನೋವು ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮನ್ನು ಕಾಡಬಹುದು.
ಕರ್ಕಾಟಕ
ಮನೆ ಬದಲಿಸಬೇಕು ಅಂದುಕೊಳ್ಳುತ್ತಿರುವವರಿಗೆ ಒಂದು ಬಗೆಯ ಅನಿಶ್ಚಿತತೆ ಕಾಡಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಆಲೋಚನೆ ಮಾಡಿಯೇ ಈ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಕಾರಣಕ್ಕೆ ಈ ಗೊಂದಲ ಸೃಷ್ಟಿಯಾಗುತ್ತದೆ. ಈ ದಿನ ನಿಮಗೆ ವಿಶ್ರಾಂತಿಯ ಅಗತ್ಯ ಹೆಚ್ಚಿದೆ. ಆತುರದ ತೀರ್ಮಾನ ಬೇಡ.
ಸಿಂಹ
ಯಾರಿಗೋ ಬಂದ ಅವಕಾಶವೊಂದು ನಿಮ್ಮ ಪಾಲಿಗೆ ಬರಬಹುದು. ನಿಮ್ಮ ಅನುಮಾನ- ಗುಮಾನಿಯನ್ನು ಬಿಟ್ಟು ಇದನ್ನು ನೋಡಬೇಕು. ರಕ್ತಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಾಣಿಸಿಕೊಳ್ಳಬಹುದು. ಇದು ಇನ್ನೂ ಕೆಲ ಸಮಯ ಮುಂದುವರಿಯಬಹುದು. ಹಿತಶತ್ರುಗಳ ಕಾಟ ಇರುತ್ತದೆ.
ಕನ್ಯಾ
ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿಯನ್ನು ಕೇಳುವ ಯೋಗ ಇದೆ. ಮಕ್ಕಳಿಗೆ ವಿವಾಹಕ್ಕೆ ಸೂಕ್ತ ಸಂಬಂಧ ದೊರೆಯುವ ಅವಕಾಶ ಇದೆ. ನಿಮ್ಮ ಸಮತೋಲಿತ ಮಾತುಗಳಿಗೆ ಮೆಚ್ಚುಗೆ ವ್ಯಕ್ತವಾಗಲಿದೆ. ಪ್ರೀತಿಪಾತ್ರರಿಗೆ ಬೆಲೆ ಬಾಳುವ ವಸ್ತುವನ್ನು ನೀಡುವ ಬಗ್ಗೆ ಆಲೋಚನೆ ಮಾಡುತ್ತೀರಿ.
ತುಲಾ
ನಿಮ್ಮಿಂದ ನೆರವು ಪಡೆದವರು ಈ ದಿನ ನಿಮಗೇ ಕೈ ಕೊಡಬಹುದು. ಅವಲಂಬನೆ, ನಿರೀಕ್ಷೆ ಒಳ್ಳೆಯದಲ್ಲ. ಹಳೆ ದ್ವೇಷ ಸಾಧನೆ ಮಾಡಲು ಹೋಗಿ ನಿಮ್ಮ ವರ್ಚಸ್ಸಿಗೆ ಹಾನಿ ಮಾಡಿಕೊಳ್ಳುವಿರಿ. ಸನ್ನಿವೇಶವನ್ನು ತಾಳ್ಮೆಯಿಂದ ಅವಲೋಕಿಸಿದ ನಂತರವೇ ಯಾವುದೇ ನಿರ್ಣಯವನ್ನು ಕೈಗೊಳ್ಳಿ.
ವೃಶ್ಚಿಕ
ಖರ್ಚು ವಿಪರೀತ ಹೆಚ್ಚಾಗಲಿದೆ. ಊಟ- ತಿಂಡಿ, ಮನರಂಜನೆ, ಕುಟುಂಬದವರ ಸಂತೋಷಕ್ಕಾಗಿ ಖರ್ಚಾಗಲಿದೆ. ನಿಮ್ಮ ಪಾಲಿನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಿದ್ದೀರಿ. ಭವಿಷ್ಯದಲ್ಲಿ ಹೀಗೇ ಆಗಬಹುದು ಎಂದು ನೀವು ಊಹಿಸಿದ್ದ ಸಂಗತಿಗಳು ನಿಜವಾಗುತ್ತಾ ಬರುತ್ತವೆ.
ಧನು
ವ್ಯಾಮೋಹದ ಕಾರಣಕ್ಕೆ ಅವಮಾನಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಪ್ರೀತಿ- ಪ್ರೇಮ ಪ್ರಕರಣಗಳಿಂದ ಈಗಾಗಲೇ ಹೊರಬಂದಿದ್ದರೆ ಅಥವಾ ಅದೇ ನೆನಪಿನಲ್ಲಿ ಇರುವವರಿಗೆ ಮಾನಸಿಕವಾಗಿ ಒತ್ತಡದ ದಿನ. ಹೇಳಿಕೊಳ್ಳಲಾಗದ ಮಾನಸಿಕ ನೋವು ನಿಮ್ಮನ್ನು ಬೆಂಬಿಡದೆ ಕಾಡಲಿದೆ.
ಮಕರ
ಮಿತ್ರರು- ಸಂಬಂಧಿಗಳ ಮಾತನ್ನು ಕೇಳಿಸಿಕೊಳ್ಳಿ. ಅಗತ್ಯ ಕಂಡುಬಂದಲ್ಲಿ ಅವರ ಸಲಹೆಯನ್ನು ಪಾಲಿಸಿ. ನಿಮ್ಮ ಅನುಭವ ಹಾಗೂ ಬುದ್ಧಿವಂತಿಕೆ ಮೇಲೆ ಅವಲಂಬನೆ ಸರಿ. ಆದರೆ ಎಲ್ಲರಿಗೆ ಎಲ್ಲವೂ ಗೊತ್ತಿರುವುದಿಲ್ಲ. ಆ ಕಾರಣದಿಂದ ಇತರರ ಸಲಹೆಯನ್ನೂ ಗಂಭೀರವಾಗಿ ಪರಿಗಣಿಸಿ.
ಮೀನ
ನಿಮ್ಮ ಬೆಳವಣಿಗೆ ಕಂಡು ಇತರರು ಹೊಟ್ಟೆ ಕಿಚ್ಚು ಪಡುತ್ತಾರೆ. ಸ್ವಂತ ವಿಷಯಗಳನ್ನು, ಗುಟ್ಟಿನ ಸಂಗತಿಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ. ಔಷಧ- ಮಾತ್ರೆ ಸೇವನೆ ಮಾಡುವಾಗ ಸರಿಯಾಗಿ ಪರೀಕ್ಷೆ ಮಾಡಿ. ಔಷಧ- ವೈದ್ಯರನ್ನು ಬದಲಿಸುವ ನಿರ್ಧಾರ ಮಾಡಿದ್ದರೆ ಈ ದಿನ ಬೇಡ.
ದೇಶ
ನವರಾತ್ರಿ ಸಮಯದಲ್ಲಿ ವಿಮಾನ ನಿಲ್ದಾಣಗಳಲ್ಲಿ ಭಯೋತ್ಪಾದಕ ದಾಳಿ ಎಚ್ಚರಿಕೆ – ಭದ್ರತೆ ಬಿಗಿ ಕ್ರಮ

ಭಾರತದ ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ನವರಾತ್ರಿಯ ವೇಳೆ ಭಯೋತ್ಪಾದಕ ದಾಳಿಯ ಅಪಾಯವಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದು, ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮ ಜಾರಿಯಲ್ಲಿದೆ.
ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ಆಗಸ್ಟ್ 4ರಂದು ಎಚ್ಚರಿಕೆ ಪ್ರಕಟಿಸಿ, ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಭಯೋತ್ಪಾದನೆ ಅಥವಾ ಸಮಾಜ ವಿರೋಧಿ ಶಕ್ತಿಗಳಿಂದ ದಾಳಿ ಸಂಭವಿಸಬಹುದೆಂದು ಸೂಚಿಸಿದೆ.
🕵️ ಗುಪ್ತಚರ ಮೂಲದ ಮಹತ್ವದ ಎಚ್ಚರಿಕೆ:
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ದಾಳಿಗೆ ಸಿದ್ಧತೆ ನಡೆಸುತ್ತಿವೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳು, ಏರ್‌ಸ್ಟ್ರಿಪ್‌ಗಳು, ಹೆಲಿಪ್ಯಾಡ್‌ಗಳು ಮತ್ತು ತರಬೇತಿ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳಾಗಿ ಈ ಕೆಳಗಿನ ಕ್ರಮಗಳು ಜಾರಿಗೆ ಬಂದಿವೆ:
- ಸಿಬ್ಬಂದಿ ಮತ್ತು ಸಂದರ್ಶಕರ ಗುರುತಿನ ಪರಿಶೀಲನೆ
- ಸಿಸಿಟಿವಿ ಕಣ್ಗಾವಲು ಬಿಗಿತ
- ಸರಕು, ಪಾರ್ಸೆಲ್ ಮತ್ತು ಮೇಲ್‌ಗಳ ತಪಾಸಣೆ
- ಸ್ಥಳೀಯ ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಸಹಕಾರ
🇮🇳 ರಾಷ್ಟ್ರೀಯ ಭದ್ರತೆಗೆ ಒತ್ತು:
ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳು ಈ ಕ್ರಮಗಳನ್ನು ಜಾರಿಗೊಳಿಸುತ್ತಿದ್ದು, ಪ್ರಯಾಣಿಕರು ತಮ್ಮ ಗುರುತಿನ ದಾಖಲೆಗಳನ್ನು ಸಿದ್ಧವಾಗಿಡಬೇಕು. ತಪಾಸಣೆ ವಿಳಂಬದ ಸಾಧ್ಯತೆಯಿರುವುದರಿಂದ ಸಹಕಾರ ನೀಡುವಂತೆ BCAS ಮನವಿ ಮಾಡಿದೆ.
ದೇಶ
ಅಮೆರಿಕ-ರಷ್ಯಾ ವ್ಯವಹಾರ: ಭಾರತದ ಟೀಕೆಗೆ ಟ್ರಂಪ್ ನುಣುಚು ಪ್ರತಿಕ್ರಿಯೆ

ವಾಷಿಂಗ್ಟನ್: ರಷ್ಯಾದಿಂದ ಈಗಲೂ ವ್ಯವಹಾರ ನಡೆಸುತ್ತಿರುವ ಅಮೆರಿಕದ ಕುರಿತಾಗಿ ಭಾರತ ಮಾಡಿರುವ ಗಂಭೀರ ಆರೋಪಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನುಣುಚು ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ ಆರೋಪಿಸಿದಂತೆ, ಅಮೆರಿಕ 2024ರಲ್ಲಿ 1.1 ಶತಕೋಟಿ ಡಾಲರ್ ಮೌಲ್ಯದ ರಸಗೊಬ್ಬರ, 878 ಮಿಲಿಯನ್ ಡಾಲರ್ ಮೌಲ್ಯದ ಪಲ್ಲಾಡಿಯಮ್ ಸೇರಿದಂತೆ ಹಲವು ಅಮೂಲ್ಯ ಲೋಹಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಯುರೇನಿಯಂ ಹೆಕ್ಸಾಫ್ಲೋರೈಡ್‌ನಂತಹ ಪರಮಾಣು ಉತ್ಪನ್ನಗಳ ಆಮದು ಕೂಡ ಮುಂದುವರಿದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಟ್ರಂಪ್, “ನನಗೆ ಈ ವ್ಯಾಪಾರದ ವಿವರಗಳು ತಿಳಿದಿಲ್ಲ, ನಾನು ಪರಿಶೀಲನೆ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
ಭಾರತದ ಖಡಕ್ ಪ್ರತಿಕ್ರಿಯೆ:
ಭಾರತ, ತನ್ನ ರಷ್ಯಾ ತೈಲ ಆಮದು ಬಗ್ಗೆ ಅಮೆರಿಕದ ಟೀಕೆಗೆ ಅಂಕಿ-ಅಂಶಗಳೊಂದಿಗೆ ತಿರುಗೇಟು ನೀಡಿದೆ. ಯುರೋಪ್ ದೇಶಗಳೇ ರಷ್ಯಾದಿಂದ ಭಾರಿ ಪ್ರಮಾಣದಲ್ಲಿ ಎಲ್‌ಎನ್‌ಜಿ, ರಸಗೊಬ್ಬರ, ಲೋಹಗಳನ್ನು ಆಮದು ಮಾಡಿಕೊಳ್ಳುತ್ತಿವೆ. 2024ರಲ್ಲಿ ಯುರೋಪಿಯನ್ ಒಕ್ಕೂಟವು 67.5 ಬಿಲಿಯನ್ ಯುರೋಗಳಷ್ಟು ಸರಕು ವ್ಯಾಪಾರ ಹಾಗೂ 17.2 ಬಿಲಿಯನ್ ಯುರೋಗಳಷ್ಟು ಸೇವಾ ವ್ಯಾಪಾರವನ್ನು ರಷ್ಯಾ ಜೊತೆ ನಡೆಸಿದೆ.
ಟ್ರಂಪ್ ಅವರ ಆರೋಪ:
ಟ್ರಂಪ್ ಹೇಳುವಂತೆ, ಭಾರತ ರಷ್ಯಾದ ತೈಲವನ್ನು ಖರೀದಿ ಮಾಡುತ್ತಿದ್ದು, ಅದನ್ನು ಮುಕ್ತ ಮಾರುಕಟ್ಟೆಯಲ್ಲಿ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ. ಅವರು ಈ ಕಾರಣಕ್ಕಾಗಿ ಭಾರತದಿಂದ ಸಂಗ್ರಹಿಸಬೇಕಾದ ಸುಂಕವನ್ನು ಹೆಚ್ಚಿಸುವುದಾಗಿ ಹೇಳಿದ್ದಾರೆ.
ಭಾರತದ ನಿಲುವು:
ಭಾರತ, ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇಂಧನದ ದರಗಳನ್ನು ಜನತೆಗೆ ಕೈಗೆಟುಕುವಂತೆ ಇರಿಸಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕ್ರೀಡೆ
ರಿಷಭ್ ಪಂತ್ ಮಾನವೀಯತೆ: ಬಡ ವಿದ್ಯಾರ್ಥಿನಿಗೆ BCA ಪ್ರವೇಶಕ್ಕೆ ₹40,000 ನೆರವು!

ಬಾಗಲಕೋಟೆ: ಟೀಂ ಇಂಡಿಯಾದ ವಿಕೆಟ್ ಕೀಪರ್ ಹಾಗೂ ತೀಕ್ಷ್ಣ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಕ್ರೀಡಾಕ್ಷೇತ್ರದಷ್ಟೇ ದಾನಶೀಲತೆಯಲ್ಲೂ ಮಾದರಿಯಾಗಿದ್ದಾರೆ. ಇತ್ತೀಚೆಗೆ ಅವರು ಬಾಗಲಕೋಟೆ ಜಿಲ್ಲೆಯ ಬಡ ವಿದ್ಯಾರ್ಥಿನಿಯೊಬ್ಬಳಿಗೆ ಆರ್ಥಿಕ ನೆರವು ನೀಡಿ ಜನಮನ ಗೆದ್ದಿದ್ದಾರೆ.
ಬೀಳಗಿ ತಾಲ್ಲೂಕಿನ ರಬಕವಿ ಗ್ರಾಮದ ಜ್ಯೋತಿ ಕಣಬೂರಮಠ ದ್ವಿತೀಯ ಪಿಯುಸಿಯಲ್ಲಿ 85% ಅಂಕ ಗಳಿಸಿದ್ದರೂ, ಮನೆ ಪರಿಸ್ಥಿತಿಯಿಂದ BCA ಕೋರ್ಸ್‌ಗೆ ಸೇರುವ ಕನಸು ತೊಡೆತಗೊಂಡಿತ್ತು. ತಂದೆ ಚಿಕ್ಕ ಟೀ ಅಂಗಡಿ ನಡೆಸುವವರಾಗಿದ್ದು ಶುಲ್ಕ ಪಾವತಿಸಲು ಸಾಧ್ಯವಾಗಿರಲಿಲ್ಲ.
ಇದನ್ನು ಗುತ್ತಿಗೆದಾರ ಅನಿಲ್ ಹುಣಸಿಕಟ್ಟಿ ಅವರು ಗಮನಿಸಿ, ತಮ್ಮ ಸಂಪರ್ಕಗಳಿಂದ ರಿಷಭ್ ಪಂತ್ ಅವರ ಗಮನಕ್ಕೆ ತಂದರು. ಇದನ್ನು ಕೇಳಿದ ಪಂತ್, ಜುಲೈ 17ರಂದು ₹40,000 ನೇರವಾಗಿ BLDE ಕಾಲೇಜಿನ ಖಾತೆಗೆ ವರ್ಗಾಯಿಸಿ, ಜ್ಯೋತಿಯ ಮೊದಲ ಸೆಮಿಸ್ಟರ್ ಶುಲ್ಕವನ್ನು ಭರಿಸಿದರು.
ಜ್ಯೋತಿ ಎಮೋಶನಲ್ ಆಗಿ, “ರಿಷಭ್ ಪಂತ್ ಸಹಾಯದಿಂದ ನನ್ನ ಕನಸು ಸಾಧ್ಯವಾಯಿತು. ಅವರಿಗೆ ದೇವರು ಆಯುಷ್ಯ ಕೊಡಲಿ,” ಎಂದಿದ್ದಾರೆ.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ