ದೇಶ
ಬೆಳಕಿನ ಹಬ್ಬ ದೀಪಾವಳಿ

ದೀಪಾವಳಿ ಎಂದರೆ ಹೆಸರೇ ಹೇಳುವಂತೆ ಬೆಳಕಿನ ಹಬ್ಬ, ದೀಪಗಳ ಹಬ್ಬ. ದೀಪಾವಳಿ ಹಬ್ಬ ಐದು ದಿನಗಳು ಸಂಭ್ರಮದ ಸಡಗರದ ಹಬ್ಬ.ದೀಪಾವಳಿ ಹಬ್ಬದಂದು ಮನೆಯ ತುಂಬ ಮತ್ತು ಸುತ್ತ ಮುತ್ತಾ ಹಣತೆಗಳನ್ನು ಹಚ್ಚಿ ಅದರ ನಗುವಿನಲ್ಲಿ ಎಲ್ಲರೂ ನಗುತ್ತಾ ಸಂಭ್ರಮಿಸುವುದಾಗಿದೆ.
ದೀಪಯತಿ ಸ್ವಂ ಪರಚ ಇತಿ ದೀಪ: ಅಂದರೆ ತಾನು ಬೆಳಗಿ ಇತರರನ್ನು ಬೆಳಗಿಸುವ ಶಕ್ತಿ ಕೇವಲ ದೀಪಕ್ಕೆ ಮಾತ್ರವಿದೆ.
ʻʻತಮಸೋಮಾ ಜ್ಯೋತಿರ್ಗಮಯʻʻ ಎಂಬ ಅರ್ಥದಂತೆ ಅಜ್ಞಾನದ ಕತ್ತಲೆಯಿಂದ ಜ್ಞಾನದ ದಿಕ್ಕಿಗೆ ನಮ್ಮನ್ನು ಕೊಂಡೊಯ್ಯುವುದೇ ದೀಪವಾಗಿದೆ.ಆಶ್ವಯುಜದ ಮಾಸದ ಕಡೇ ಮೂರು ದಿನಗಳು ಮತ್ತು ಕಾರ್ತಿಕ ಮಾಸದ ಆರಂಭದ ಎರಡು ದಿನಗಳ ಅದ್ಧೂರಿಯ ಆಚರಣೆಯೇ ದೀಪಾವಳಿ
ಮೊದಲನೆಯ ದಿನ: ನೀರು ತುಂಬುವ ಹಬ್ಬ
ದೀಪಾವಳಿ ಹಬ್ಬದ ಆರಂಭವಾಗುವುದೇ ಆಶ್ವಯುಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನದಂದು. ಹಳೆ ಮೈಸೂರು ಭಾಗದಲ್ಲಿ ಇದನ್ನು ನೀರು ತುಂಬುವ ಹಬ್ಬ ಎನ್ನುತ್ತಾರೆ. ಈ ದಿನದಂದು ಮನೆಯ ಹೆಂಗಳೆಯರು ತಮ್ಮ ಸ್ನಾನಗೃಹಗಳಲ್ಲಿ ಇರುವ ಹಂಡೆ, ಕೊಳಗಗಳನ್ನು ಚೆನ್ನಾಗಿ ಶುಭ್ರಗೊಳಿಸಿ ಅದಕ್ಕೆ ಸುದ್ದೇ ಮತ್ತು ಕೆಮ್ಮಣ್ಣುಗಳಿಂದ ಅಲಂಕರಿಸಿದರೆ, ಗಂಡು ಮಕ್ಕಳು ಸ್ನಾನಗೃಹದಲ್ಲಿ ಇರುವ ಎಲ್ಲಾ ಪಾತ್ರೆಗಳಿಗೂ ನೀರು ತುಂಬಿಸಿಡುತ್ತಾರೆ.
ಇನ್ನು ಉತ್ತರದ ಭಾರತಾದ್ಯಂತ ಈ ದಿನವನ್ನು ಧನ್ವಂತರಿ ತ್ರಯೋದಶಿ ಅಥವಾ ಧನ್ ತೆರಸ್ ಎಂದು ಕರೆಯಲಾಗುತ್ತದೆ. ಈ ದಿನ ಗುರು ಧನ್ವಂತರಿಯವರ ಹುಟ್ಟಿದ ದಿನವಾಗಿರುವುದರಿಂದ ವಿಶೇಷವಾಗಿ ಸಮೃದ್ಧಿ ಮತ್ತು ಬುದ್ಧಿಯ ಪ್ರತೀಕವಾದ ಲಕ್ಷ್ಮೀ ಮತ್ತು ಗಣೇಶನನ್ನು ಪೂಜಿಸಿ ಹೊಸ ಬಟ್ಟೆ, ಪಾತ್ರೆ, ಬಂಗಾರ, ಬೆಳ್ಳಿಯನ್ನು ಖರೀದಿಸಿದರೆ , ಜೀವನ ಸುಖಮಯವಾಗಿರುತ್ತದೆ ಎಂಬ ನಂಬಿಕೆಯಿದೆ.
ಎರಡನೇ ದಿನ: ನರಕ ಚತುರ್ದಶಿ
ದೀಪಾವಳಿಯ ಎರಡನೇ ದಿನವಾದ ನರಕ ಚತುರ್ದಶಿಯಂದು, ಶ್ರೀಕೃಷ್ಣ ಪರಮಾತ್ಮ ನರಕಾಸುರನನ್ನು ವಧಿಸಿ, ಜಗತ್ತನ್ನು ಕಾಪಾಡಿದ ದಿನವೆಂದು ಆಚರಿಸಲಾಗುತ್ತದೆ. ಹಿಂದಿನ ದಿನ ಸಿಂಗಾರಗೊಂಡ ಹಂಡೆಗಳಿಗೆ ಬೆಳಗಿನ ಜಾವವೇ ಉರಿ ಹಾಕಿ ನೀರನ್ನು ಕೊತ ಕೊತನೆ ಕುದಿಸಿ ಮನೆಯಲ್ಲಿ ಎಲ್ಲರಿರು ಅಭ್ಯಂಜನ ಮಾಡಿ ಬೆಳಗಿನ ಜಾವವೇ ಪಟಾಕಿಗಳನ್ನು ಮನೆಯ ಮುಂದೆ ಹೊಡೆಯುವುದರ ಮೂಲಕ ನೆರೆಹೊರೆಯವರೊಂದಿಗೆ ನರಕಾಸುರನನ್ನು ವಧಿಸಿ ಲೋಕವನ್ನು ಕಾಪಾಡಿದ ಶ್ರೀಕೃಷ್ಣನ ಸಾಹಸವನ್ನು ಕೊಂಡಾಡುತ್ತಾರೆ. ಇಂದಿನಿಂದ ಮನೆಯ ಮುಂದೆ ಮತ್ತು ಸುತ್ತ ಮುತ್ತ ಹಣತೆಗಳೊಂದಿಗೆ ದೀಪವನ್ನು ಬೆಳಗಿ ಬಂಧು ಮಿತ್ರರಿಗೆ ಉಡುಗೊರೆಗಳೊಂದಿಗೆ ಸಿಹಿಯನ್ನು ಹಂಚುತ್ತಾ ಸಂಭ್ರಮಿಸುತ್ತಾರೆ.
ಮೂರನೇ ದಿನ: ಅಮಾವಾಸ್ಯೆ
ಪಿತೃ ಪಕ್ಷದಲ್ಲಿ ಪಿತೃತರ್ಪಣ ಕೊಡಲು ಸಾಧ್ಯವಾಗದಿದ್ದವರು ಈ ದಿನ ತಮ್ಮ ಪಿತೃಗಳಿಗೆ ತರ್ಪಣ ಕೊಟ್ಟು ತಮ್ಮ ಪಿತೃ ಋಣವನ್ನು ತೀರಿಸಿಕೊಳ್ಳುತ್ತಾರೆ. ಈ ದಿನ ಬಹುತೇಕರ ಮನೆಗಳಲ್ಲಿ ಕಜ್ಜಾಯವನ್ನು ಮಾಡಿ ದೇವರ ನೈವೇದ್ಯ ಮಾಡಿದರೆ, ಯಥಾ ಪ್ರಕಾರ ಮಕ್ಕಳು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ.ಈ ಅಮವಾಸ್ಯೆ ಉತ್ತರ ಭಾರತೀಯರು ಅದರಲ್ಲೂ ವ್ಯಾಪಾರಿಗಳಿಗೆ ಬಹಳ ವೀಶೇಷ. ಅಂದಿನ ರಾತ್ರಿ ಮನೆಯಲ್ಲಿನ ದರಿದ್ರ ಲಕ್ಷ್ಮಿಯನ್ನು ಹೊರಹಾಕುವ ಉದ್ದೇಶದಿಂದ ಲಕ್ಷ್ಮೀ ಪೂಜೆಯನ್ನು ಮಾಡಿ, ತಮ್ಮ ಮನೆಯಲ್ಲಿ ಹಾಗೂ ತಮ್ಮ ಅಂಗಡಿಗಳಲ್ಲಿ ಲಕ್ಷ್ಮಿಯ ವಿಗ್ರಹವನ್ನಿಟ್ಟು ಅದಕ್ಕೆ ತಮ್ಮಲ್ಲಿದ್ದ ಎಲ್ಲಾ ರೀತಿಯ ಆಭರಣಗಳು ಮತ್ತು ಧನಕನಕಾದಿಗಳಿಂದ ಸಿಂಗರಿಸಿ ಪೂಜಿಸಿ ಬಗೆ ಬಗೆಯ ಸಿಹಿ ತಿಂಡಿಗಳನ್ನು ಎಲ್ಲರಿಗೂ ಹಂಚಿ ಸಂಭ್ರಮಿಸುತ್ತಾರೆ. ಅನೇಕ ವ್ಯಾಪಾರಿಗಳು ತಮ್ಮ ವ್ಯವಹಾರದ ಲೆಕ್ಕ ಪತ್ರಗಳನ್ನು ಅಂದಿನಿಂದ ಪುನರಾರಂಭಿಸುವುದು ನಡೆದುಕೊಂಡು ಬಂದಿರುವುದು ವಾಡಿಕೆಯಾಗಿದೆ .
ಇದೇ ದಿನ ಶ್ರೀ ಕೃಷ್ಣನು ದೇಹತ್ಯಾಗ ಮಾಡಿದ ದಿನವೆಂದೂ ಮತ್ತು ತನ್ನ ಪರಮ ಶಿಷ್ಯ ನಚೀಕೇತನಿಗೆ ಆತ್ಮ ಸಾಕ್ಷಾತ್ಕಾರವಾದ ದಿನವೆಂದೂ ಪ್ರತೀತೆಯಲ್ಲಿದೆ.
ನಾಲ್ಕನೇ ದಿನ: ಬಲಿಪಾಡ್ಯಮಿ
ದೀಪಾವಳಿಯ ನಾಲ್ಕನೇ ದಿನವೇ ಬಲಿಪಾಡ್ಯಮಿ. ಪುರಾಣದ ಪ್ರಕಾರ ರಾಕ್ಷಸರ ರಾಜ ಬಲಿಯ ಉಪಟಳವನ್ನು ತಾಳಾಲಾರದೆ, ಭಗವಾನ್ ವಿಷ್ಣು ಪುಟ್ಟ ವಾಮನಾವತಾರದಲ್ಲಿ ಬಂದು ಮೂರು ಹೆಜ್ಜೆಗಳಷ್ಟು ಜಾಗವನ್ನು ಬೇಡಿ, ವಾಮನ ಮೂರ್ತಿ ಬೃಹದಾಕಾರವಾಗಿ ಒಂದು ಹೆಜ್ಜೆಯನ್ನು ಇಡೀ ಭೂಮಂಡಲದ ಮೇಲೂ ಮತ್ತೊಂದನ್ನು ಆಕಾಶದ ಮೇಲೆ ಇಟ್ಟು ಮೂರನೇಯದನ್ನು ಎಲ್ಲಿ ಇಡಲಿ? ಎಂದು ಬಲಿ ಚಕ್ರವರ್ತಿಯನ್ನೇ ಕೇಳಿದಾಗ, ಈತ ಸಾಮಾನ್ಯ ಬಾಲಕನಲ್ಲ. ಸಾಕ್ಷಾತ್ ಭಗವಂತನೇ ಈ ರೂಪದಲ್ಲಿ ಬಂದಿರುವುದನ್ನು ಅರಿತು, ಭಗವಂತನ ಲೀಲೆಯ ಪ್ರಕಾರವೇ ಎಲ್ಲವೂ ನಡೆಯಲಿ ಎಂಬ ಇಚ್ಛೆಯಿಂದ, ಮೂರನೇ ಹೆಜ್ಜೆಯನ್ನು ತನ್ನ ತಲೆಯ ಮೇಲೆ ಇಡಲು ಕೋರಿಕೊಳ್ಳುತ್ತಾನೆ. ಆಗ ಬೃಹದಾಕಾರದ ವಾಮನ ಬಲಿ ತಲೆಯಮೇಲೆ ಪಾದವನ್ನಿಟ್ಟು ಬಲಿಯನ್ನು ಪಾತಾಳ ಲೋಕ್ಕೆಕ್ಕೆ ತಳ್ಳಿದ ದಿನವಿದು. ರಾಕ್ಷಸ ರಾಜನಾದರೂ ವಿಷ್ಣುವಿನ ಪರಮ ಭಕ್ತನಾಗಿದ್ದ ಕಾರಣ, ಕಾರ್ತಿಕ ಮಾಸದ ಮೊದಲ ದಿನದಂದು ಮಾತ್ರವೇ ಪಾತಾಳ ಲೋಕದಿಂದ ಬಲಿ ಭೂಲೋಕಕ್ಕೆ ಬಂದು ತನ್ನ ಪ್ರಜೆಗಳ ಸುಖಃ ದುಃಖಗಳನ್ನು ವಿಚಾರಿಸಿ ರಾಜ್ಯವನ್ನಾಳುವ ವರವನ್ನು ಭಗವಾನ್ ವಿಷ್ಣು ಬಲಿ ಚಕ್ರವರ್ತಿಗೆ ದಯಪಾಲಿಸುತ್ತಾರೆ. ಅದರ ಪ್ರಯುಕ್ತವೇ ಜನರು ದೀಪಾವಳಿಯ ನಾಲ್ಕನೇಯ ದಿನದಂದು ಬಲಿಚಕ್ರವರ್ತಿಯನ್ನು ಪೂಜಿಸಿ ಮನೆ ಮನೆಗಳಲ್ಲಿ ದೀಪದಿಂದ ಅಲಂಕರಿಸಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ.
ಹಳೆಯ ಮೈಸೂರಿನ ಬಹುತೇಕ ಮನೆಗಳಲ್ಲಿ ಅಂದು ಗೋವಿನ ಸಗಣಿಯಿಂದ ದೇವರ ಮನೆಯಲ್ಲಿ ಬಲೀಂದ್ರನ ಕೋಟೆ ಕಟ್ಟಿ, ಅದರ ಮೇಲೆ ಕುಂಬಳ ಹೂವು, ಇಲ್ಲವೇ ಚೆಂಡು ಹೂವು, ಅಥವಾ ಹುಚ್ಚೆಳ್ಳು ಹೂವು ಅದೂ ಇಲ್ಲದಿದ್ದಲ್ಲಿ ಕಾಸ್ಮಾಲ್ಸು ಹೂವು. ಒಟ್ಟಿನಲ್ಲಿ ಕೇಸರೀ ಬಣ್ಣದ ಯಾವುದಾದರೂ ಹೂವಿನ ಅಲಂಕಾರದ ಜೊತೆ ರಾಗಿ ತೆನೆಯನ್ನು ಸಗಣಿ ಕೋಟೆಯ ಸುತ್ತಲೂ ಇರಿಸಿ ಪೂಜೆಮಾಡುವುದು ಸಂಪ್ರದಾಯವಾಗಿದೆ. ಪುರಾಣದ ಪ್ರಕಾರ ಇದೇ ದಿನ ಶ್ರೀ ಕೃಷ್ಣನು ತನ್ನ ಕಿರು ಬೆರಳಿನಲ್ಲಿ ಗೋವರ್ಧನಗಿರಿಯನ್ನು ಎತ್ತಿದ್ದಾಗಿ ನಂಬಿರುವುದರಿಂದ, ಈ ದಿನ ಗೋವಿನ ಪೂಜೆ ಹಾಗೂ ಗೋವರ್ಧನನ ಪೂಜೆಗೆ ಹೆಚ್ಚಿನ ಮಹತ್ವವಿದ್ದು ಮನೆಗಳ್ಳಲ್ಲಿರುವ ದನಕರುಗಳಿಗೆ ಸ್ನಾನ ಮಾಡಿಸಿ, ಕೊಂಬಿಗೆ ಸೇವಂತಿಗೆ, ಚಂಡು ಹೂಗಳಿಂದ ಅಲಂಕರಿಸಿ ಪೂಜಿಸುವುದು ವಾಡಿಕೆ. ಹಲವಾರು ಕಡೆ ಎತ್ತುಗಳ ಮೆರವಣಿಗೆಯನ್ನೂ ಮಾಡುವ ಸಂಪ್ರದಾಯವಿದೆ.
ಐದನೇ ದಿನ: ಸೋದರ ಬಿದಿಗೆ ಅಥವಾ ಬಾಯಿ ದೂಜ್
ಈ ದಿನ ಯಮ ತನ್ನ ತಂಗಿ ಯಮಿಯ ಮನೆಗೆ ಭೇಟಿ ಕೊಡುತ್ತಾನೆಂಬ ನಂಬಿಕೆ ಇರುವುದರಿಂದ, ಬಹುತೇಕ ಸಹೋದರರು ಎಲ್ಲೇ ಇದ್ದರೂ ಈ ದಿನ ತಮ್ಮ ಸಹೋದರಿಯರ ಮನೆಗೆ ಭೇಟಿ ನೀಡುತ್ತಾರೆ. ಹಾಗೆ ಮನೆಗೆ ಬಂದ ಸಹೋದರನಿಗೆ, ಸಹೋದರ ತಿಲಕವಿಟ್ಟು, ಸಿಹಿ ತಿನ್ನಿಸಿ, ಆರತಿ ಎತ್ತುವ ಸಂಪ್ರದಾಯವಿದೆ.ಇನ್ನು ಮಹಾರಾಷ್ಟ ಮತ್ತು ಅನೇಕ ಉತ್ತರ ಭಾರತದಲ್ಲಿ ಇದೇ ಹಬ್ಬವನ್ನು ಭಾಯಿ ದೂಜ್ ಎಂದು ಕರೆದು ಮೇಲೆ ತಿಳಿಸಿದಂತೆಯೇ ಸಹೋದರನನ್ನು ಸತ್ಕರಿಸುವ ಸಂಪ್ರದಾಯವಿದೆ.
ನಾವುಗಳು ಈ ಸಂಸ್ಕೃತಿಯ ಸೊಬಗನ್ನು ಅರಿತು ಶ್ರದ್ಧಾಭಕ್ತಿಯಿಂದ ಆಚರಿಸಿದರೆ ಈ ಸಂಭ್ರಮ ಸಡಗರದ ಹಬ್ಬಗಳು ಅರ್ಥಪೂರ್ಣವೆನಿಸುತ್ತವೆ ಮತ್ತು ಸಂಭ್ರಮದ, ಸಡಗರದ ವಾತಾವರಣ ಮನಗಳಲ್ಲಿ ಮತ್ತು ಮನೆಗಳಲ್ಲಿ ಧನಾತ್ಮಕ ತರಂಗಗಳನ್ನು ಹೆಚ್ಚಿಸುತ್ತವೆ.
ದೇಶ
ನವರಾತ್ರಿ ಸಮಯದಲ್ಲಿ ವಿಮಾನ ನಿಲ್ದಾಣಗಳಲ್ಲಿ ಭಯೋತ್ಪಾದಕ ದಾಳಿ ಎಚ್ಚರಿಕೆ – ಭದ್ರತೆ ಬಿಗಿ ಕ್ರಮ

ಭಾರತದ ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ನವರಾತ್ರಿಯ ವೇಳೆ ಭಯೋತ್ಪಾದಕ ದಾಳಿಯ ಅಪಾಯವಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದು, ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮ ಜಾರಿಯಲ್ಲಿದೆ.
ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ಆಗಸ್ಟ್ 4ರಂದು ಎಚ್ಚರಿಕೆ ಪ್ರಕಟಿಸಿ, ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಭಯೋತ್ಪಾದನೆ ಅಥವಾ ಸಮಾಜ ವಿರೋಧಿ ಶಕ್ತಿಗಳಿಂದ ದಾಳಿ ಸಂಭವಿಸಬಹುದೆಂದು ಸೂಚಿಸಿದೆ.
🕵️ ಗುಪ್ತಚರ ಮೂಲದ ಮಹತ್ವದ ಎಚ್ಚರಿಕೆ:
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ದಾಳಿಗೆ ಸಿದ್ಧತೆ ನಡೆಸುತ್ತಿವೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳು, ಏರ್‌ಸ್ಟ್ರಿಪ್‌ಗಳು, ಹೆಲಿಪ್ಯಾಡ್‌ಗಳು ಮತ್ತು ತರಬೇತಿ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳಾಗಿ ಈ ಕೆಳಗಿನ ಕ್ರಮಗಳು ಜಾರಿಗೆ ಬಂದಿವೆ:
- ಸಿಬ್ಬಂದಿ ಮತ್ತು ಸಂದರ್ಶಕರ ಗುರುತಿನ ಪರಿಶೀಲನೆ
- ಸಿಸಿಟಿವಿ ಕಣ್ಗಾವಲು ಬಿಗಿತ
- ಸರಕು, ಪಾರ್ಸೆಲ್ ಮತ್ತು ಮೇಲ್‌ಗಳ ತಪಾಸಣೆ
- ಸ್ಥಳೀಯ ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಸಹಕಾರ
🇮🇳 ರಾಷ್ಟ್ರೀಯ ಭದ್ರತೆಗೆ ಒತ್ತು:
ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳು ಈ ಕ್ರಮಗಳನ್ನು ಜಾರಿಗೊಳಿಸುತ್ತಿದ್ದು, ಪ್ರಯಾಣಿಕರು ತಮ್ಮ ಗುರುತಿನ ದಾಖಲೆಗಳನ್ನು ಸಿದ್ಧವಾಗಿಡಬೇಕು. ತಪಾಸಣೆ ವಿಳಂಬದ ಸಾಧ್ಯತೆಯಿರುವುದರಿಂದ ಸಹಕಾರ ನೀಡುವಂತೆ BCAS ಮನವಿ ಮಾಡಿದೆ.
ದೇಶ
ಅಮೆರಿಕ-ರಷ್ಯಾ ವ್ಯವಹಾರ: ಭಾರತದ ಟೀಕೆಗೆ ಟ್ರಂಪ್ ನುಣುಚು ಪ್ರತಿಕ್ರಿಯೆ

ವಾಷಿಂಗ್ಟನ್: ರಷ್ಯಾದಿಂದ ಈಗಲೂ ವ್ಯವಹಾರ ನಡೆಸುತ್ತಿರುವ ಅಮೆರಿಕದ ಕುರಿತಾಗಿ ಭಾರತ ಮಾಡಿರುವ ಗಂಭೀರ ಆರೋಪಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನುಣುಚು ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ ಆರೋಪಿಸಿದಂತೆ, ಅಮೆರಿಕ 2024ರಲ್ಲಿ 1.1 ಶತಕೋಟಿ ಡಾಲರ್ ಮೌಲ್ಯದ ರಸಗೊಬ್ಬರ, 878 ಮಿಲಿಯನ್ ಡಾಲರ್ ಮೌಲ್ಯದ ಪಲ್ಲಾಡಿಯಮ್ ಸೇರಿದಂತೆ ಹಲವು ಅಮೂಲ್ಯ ಲೋಹಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಯುರೇನಿಯಂ ಹೆಕ್ಸಾಫ್ಲೋರೈಡ್‌ನಂತಹ ಪರಮಾಣು ಉತ್ಪನ್ನಗಳ ಆಮದು ಕೂಡ ಮುಂದುವರಿದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಟ್ರಂಪ್, “ನನಗೆ ಈ ವ್ಯಾಪಾರದ ವಿವರಗಳು ತಿಳಿದಿಲ್ಲ, ನಾನು ಪರಿಶೀಲನೆ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
ಭಾರತದ ಖಡಕ್ ಪ್ರತಿಕ್ರಿಯೆ:
ಭಾರತ, ತನ್ನ ರಷ್ಯಾ ತೈಲ ಆಮದು ಬಗ್ಗೆ ಅಮೆರಿಕದ ಟೀಕೆಗೆ ಅಂಕಿ-ಅಂಶಗಳೊಂದಿಗೆ ತಿರುಗೇಟು ನೀಡಿದೆ. ಯುರೋಪ್ ದೇಶಗಳೇ ರಷ್ಯಾದಿಂದ ಭಾರಿ ಪ್ರಮಾಣದಲ್ಲಿ ಎಲ್‌ಎನ್‌ಜಿ, ರಸಗೊಬ್ಬರ, ಲೋಹಗಳನ್ನು ಆಮದು ಮಾಡಿಕೊಳ್ಳುತ್ತಿವೆ. 2024ರಲ್ಲಿ ಯುರೋಪಿಯನ್ ಒಕ್ಕೂಟವು 67.5 ಬಿಲಿಯನ್ ಯುರೋಗಳಷ್ಟು ಸರಕು ವ್ಯಾಪಾರ ಹಾಗೂ 17.2 ಬಿಲಿಯನ್ ಯುರೋಗಳಷ್ಟು ಸೇವಾ ವ್ಯಾಪಾರವನ್ನು ರಷ್ಯಾ ಜೊತೆ ನಡೆಸಿದೆ.
ಟ್ರಂಪ್ ಅವರ ಆರೋಪ:
ಟ್ರಂಪ್ ಹೇಳುವಂತೆ, ಭಾರತ ರಷ್ಯಾದ ತೈಲವನ್ನು ಖರೀದಿ ಮಾಡುತ್ತಿದ್ದು, ಅದನ್ನು ಮುಕ್ತ ಮಾರುಕಟ್ಟೆಯಲ್ಲಿ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ. ಅವರು ಈ ಕಾರಣಕ್ಕಾಗಿ ಭಾರತದಿಂದ ಸಂಗ್ರಹಿಸಬೇಕಾದ ಸುಂಕವನ್ನು ಹೆಚ್ಚಿಸುವುದಾಗಿ ಹೇಳಿದ್ದಾರೆ.
ಭಾರತದ ನಿಲುವು:
ಭಾರತ, ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇಂಧನದ ದರಗಳನ್ನು ಜನತೆಗೆ ಕೈಗೆಟುಕುವಂತೆ ಇರಿಸಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕ್ರೀಡೆ
ರಿಷಭ್ ಪಂತ್ ಮಾನವೀಯತೆ: ಬಡ ವಿದ್ಯಾರ್ಥಿನಿಗೆ BCA ಪ್ರವೇಶಕ್ಕೆ ₹40,000 ನೆರವು!

ಬಾಗಲಕೋಟೆ: ಟೀಂ ಇಂಡಿಯಾದ ವಿಕೆಟ್ ಕೀಪರ್ ಹಾಗೂ ತೀಕ್ಷ್ಣ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಕ್ರೀಡಾಕ್ಷೇತ್ರದಷ್ಟೇ ದಾನಶೀಲತೆಯಲ್ಲೂ ಮಾದರಿಯಾಗಿದ್ದಾರೆ. ಇತ್ತೀಚೆಗೆ ಅವರು ಬಾಗಲಕೋಟೆ ಜಿಲ್ಲೆಯ ಬಡ ವಿದ್ಯಾರ್ಥಿನಿಯೊಬ್ಬಳಿಗೆ ಆರ್ಥಿಕ ನೆರವು ನೀಡಿ ಜನಮನ ಗೆದ್ದಿದ್ದಾರೆ.
ಬೀಳಗಿ ತಾಲ್ಲೂಕಿನ ರಬಕವಿ ಗ್ರಾಮದ ಜ್ಯೋತಿ ಕಣಬೂರಮಠ ದ್ವಿತೀಯ ಪಿಯುಸಿಯಲ್ಲಿ 85% ಅಂಕ ಗಳಿಸಿದ್ದರೂ, ಮನೆ ಪರಿಸ್ಥಿತಿಯಿಂದ BCA ಕೋರ್ಸ್‌ಗೆ ಸೇರುವ ಕನಸು ತೊಡೆತಗೊಂಡಿತ್ತು. ತಂದೆ ಚಿಕ್ಕ ಟೀ ಅಂಗಡಿ ನಡೆಸುವವರಾಗಿದ್ದು ಶುಲ್ಕ ಪಾವತಿಸಲು ಸಾಧ್ಯವಾಗಿರಲಿಲ್ಲ.
ಇದನ್ನು ಗುತ್ತಿಗೆದಾರ ಅನಿಲ್ ಹುಣಸಿಕಟ್ಟಿ ಅವರು ಗಮನಿಸಿ, ತಮ್ಮ ಸಂಪರ್ಕಗಳಿಂದ ರಿಷಭ್ ಪಂತ್ ಅವರ ಗಮನಕ್ಕೆ ತಂದರು. ಇದನ್ನು ಕೇಳಿದ ಪಂತ್, ಜುಲೈ 17ರಂದು ₹40,000 ನೇರವಾಗಿ BLDE ಕಾಲೇಜಿನ ಖಾತೆಗೆ ವರ್ಗಾಯಿಸಿ, ಜ್ಯೋತಿಯ ಮೊದಲ ಸೆಮಿಸ್ಟರ್ ಶುಲ್ಕವನ್ನು ಭರಿಸಿದರು.
ಜ್ಯೋತಿ ಎಮೋಶನಲ್ ಆಗಿ, “ರಿಷಭ್ ಪಂತ್ ಸಹಾಯದಿಂದ ನನ್ನ ಕನಸು ಸಾಧ್ಯವಾಯಿತು. ಅವರಿಗೆ ದೇವರು ಆಯುಷ್ಯ ಕೊಡಲಿ,” ಎಂದಿದ್ದಾರೆ.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ