ಅಪರಾಧ
ನನಗೂ ಅವನೇ ಬೇಕು..!-ಒಬ್ಬ ಹುಡುಗನಿಗಾಗಿ ಹುಡುಗಿಯರ ಫೈಟಿಂಗ್

ಉತ್ತರಪ್ರದೇಶ: ಹುಡುಗಿಯರು ತಾವು ಇಷ್ಟಪಟ್ಟಿದ್ದನ್ನು ಪಡೆಯಲು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ, ಇದಕ್ಕೆ ಉತ್ತಮ ಉದಾಹರಣೆಯಂತೆ ಉತ್ತರ ಪ್ರದೇಶದ ಬಾಗ್ಪತ್ನ ಶಾಲೆಯೊಂದರಲ್ಲಿ ಇಬ್ಬರು ಬಾಲಕಿಯರು ಒಬ್ಬ ಹುಟುಗನಿಗಾಗಿ ಪರಸ್ಪರ ಕೈ ಕೈ ಮಿಲಾಯಿಸುವ ಘಟನೆ ನಡೆದಿದೆ,
ಬಾಗ್ಪತ್ನಲ್ಲಿರುವ ಹೈ ಸ್ಕೂಲ್ ನ ಹತ್ತನೇ ತರಗತಿಯ ಇಬ್ಬರು ಬಾಲಕಿಯರು ಒಂದೇ ಹುಡುಗನನ್ನು ಪ್ರೀತಿಸುತ್ತಿದ್ದರು, ಇದನ್ನು ತಿಳಿಯದ ಹುಡುಗ ಇಬ್ಬರ ಪೈಕಿ ಒಬ್ಬಳ ಬಳಿ ಮಾತನಾಡಿದ್ದಾನೆ, ಇದನ್ನು ನೋಡಿ ಸಿಟ್ಟಾದ ಮತ್ತೋರ್ವ ಬಾಲಕಿ ಆಕೆಯೊಂದಿಗೆ ಗಲಾಟೆಗೆ ಇಳಿದಿದ್ದಾಳೆ.
ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಹುಡುಗಿಯರ ಗುದ್ದಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸ್ಧಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರು ಹುಡುಗಿಯರು, ಬಾಲಕ ಹಾಗೂ ಅವರ ಪೋಷಕರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ,