ಬೆಂಗಳೂರು

ರಾಜ್ಯದ ಜನರಿಗೆ ಮತ್ತೆ ಹೊರೆ-ಇಂದಿನಿಂದ ಕ್ಯಾಬ್,ಟ್ಯಾಕ್ಸಿ ದರವೂ ಹೆಚ್ಚಳ!

ಬೆಂಗಳೂರು: ರಾಜ್ಯ ಸರ್ಕಾರ ಒಂದಾದಮೇಲೊಂದರಂತೆ ಬೆಲೆ ಏರಿಕೆಗಳನ್ನು ಮಾಡಿ ರಾಜ್ಯದ ಜನರಿಗೆ ಶಾಕ್ ಮೇಲೆ ಶಾಕ್ ಕೊಡುತ್ತಿದೆ, ಇದೀಗ ಕ್ಯಾಬ್, ಟ್ಯಾಕ್ಸಿ ಪ್ರಯಾಣಿಕರಿಗೂ ಹೊರೆ ಬಿದ್ದಿದ್ದು, ಇಂದಿನಿಂದ ದರ ಹೆಚ್ಚಳಗೊಳಿಸಲಾಗಿದೆ,
ಉಕ್ಕು ಮತ್ತು ಆಟೋ ಮೊಬೈಲ್ ದರ ಹೆಚ್ಚಳದ ಹಿನ್ನೆಲೆ ಕಾರು ತಯಾರಿಕಾ ಕಂಪನಿಗಳ ದರ ಹೆಚ್ಚಳವಗಿದೆ, ಕೇಂದ್ರ ಸರ್ಕಾರ ಟೋಲ್ ದರ ಹೆಚ್ಚಳ ಮಾಡಿದ್ದು, ರಾಜ್ಯ ಸರ್ಕಾರ ಡಿಸೇಲ್ ಮೇಲಿನ ಮಾರಾಟ ತೆರಿಗೆಯನ್ನೂ ಹೆಚ್ಚಿಸಿದೆ, ಇದೀಗ ಇವುಗಳ ಎಫೆಕ್ಟ್ ಟ್ರಾವೆಲ್ಸ್ ಕ್ಯಾಬ್‌ಗಳ ಮೇಲೆ ಬಿದ್ದಿದ್ದು, ಇಂದಿನಿಂದಲೇ ದರವನ್ನು ಹೆಚ್ಚಳಗೊಳಿಸಲಾಗಿದೆ, ಪ್ರತಿ ಕಿಮೀ ಮೇಲೆ 2 ರಿಂದ 5 ರೂ ವರೆಗೆ ಹೆಚ್ಚಳ ಮಾಡಲಾಗುತ್ತಿದೆ,
ಈಗಾಗಲೇ ಕೇಂದ್ರ ಸರ್ಕಾರ ಟೋಲ್ ದರವನ್ನು 5 % ರಷ್ಟು ಹೆಚ್ಚಳ ಮಾಡಿದೆ, ವಾಹನ ತಯಾರಿಕಾ ಕಂಪನಿಗಳು ಪ್ರತಿ ಕಾರಿನ ಮೇಲೆ 3% ರಿಂದ 4% ರಷ್ಟು ದರ ಹೆಚ್ಚಳ ಮಾಡಿದೆ, ಇತ್ತ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಹತ್ತು ಲಕ್ಷದೊಳಗಿನ ಯೆಲ್ಲೋ ಬೋರ್ಡ್ ಕಾರುಗಳಿಗೆ ಬರೋಬ್ಬರಿ 5% ರಷ್ಟು ಲೈಫ್ ಟೈಮ್ ಟ್ಯಾಕ್ಸ್ 1% ರಷ್ಟು ಸೇಸ್ ವಿಧಿಸಿದೆ,
ಹೀಗೆ ಮೇಲಿಂದ ಮೇಲೆ ದರ ಹೆಚ್ಚಳದಿಂದ ಕಂಗಾಲಾಗಿರುವ ಟ್ರಾಮೆಲ್ಸ್ ಅಸೋಸಿಯೇಷನ್ ಕ್ಯಾಬ್ ಮಾಲೀಕರು ಮತ್ತು ಚಾಲಕರ ಅಸೋಸಿಯೇಷನ್ ಗಳು ಪ್ರತಿ ಕಿಮೀಗೆ 2 ರಿಂದ 5 ರೂ ವರೆಗೆ ಹೆಚ್ಚಳ ಮಾಡಿದ್ದಾರೆ,
ಇಲ್ಲದೇ ಹೋದರೆ ಉದ್ಯಮ ನಡೆಸೋದೇ ಕಷ್ಟ ಎನ್ನುತ್ತಿದ್ದಾರೆ,

Leave a Reply

Your email address will not be published. Required fields are marked *

Trending

Exit mobile version