ಬೆಂಗಳೂರು
ರಾಜ್ಯದ ಮದ್ಯಪ್ರಿಯರಿಗೆ ಬ್ಯಾಡ್ ನ್ಯೂಸ್

ಬೆಂಗಳೂರು: ಈಗಾಗಲೇ ಎರಡು ಬಾರಿ ಮದ್ಯದ ದರ ಹೆಚ್ಚಳ ಮಾಡಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಭಾರತೀಯ ಮದ್ಯಗಳ ಹಾಗೂ ಬಿಯರ್ ಮೇಲಿನ ಹೆಚ್ಚುವರಿ ಸುಂಕವನ್ನು ಹೆಚ್ಚಿಸಿ ಅಂತಿಮ ಅಧಿಸೂಚನೆ ಹೊರಡಿದ್ದು ಇಂದಿನಿAದಲೇ ಹೊಸ ದರ ಜಾರಿಗೆ ಬರಲಿದೆ,
ಅಬಕಾರಿ ಸುಂಕ ಹೆಚ್ಚಳದಿಂದ ಈ ಹಿಂದೆ ರಾಜ್ಯದಲ್ಲಿ ಅಗ್ಗದ ದರದಲ್ಲಿ ಸಿಗುತ್ತಿದ್ದ ಬ್ರಾö್ಯಂಡಿ, ಮಿಸ್ಕಿ ಜಿನ್, ರಮ್ ಗಳು ಇನ್ನು ಮುಂದೆ ದುಬಾರಿಯಾಗಿಲಿದ್ದು 180 ಎಂಎಲ್ ನ ಬಾಟಲಿ ಅಥವಾ ಸ್ಯಾಷೆಗಳ ಬೆಲೆ 18 ರೂಪಾಯಿಯಷ್ಟು ಏರಿಕೆ ಮಾಡಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ,
ಇನ್ನು ರಾಜ್ಯದಲ್ಲಿ ಪ್ರೀಮಿಯಂ ಬ್ರಾö್ಯಂಡ್ ಗಳ ಬಿಯರ್ ದರವು ಬಾಟಲಿಗೆ 10 ರೂ ಏರಿಕೆಯಾಗಲಿದೆ, ಮಧ್ಯಮ ಶ್ರೇಣಿಯ ಮತ್ತು ಅಗ್ಗದ ಸ್ಧಳೀಯ ಬ್ರಾö್ಯಂಡ್ ಗಳ ಬಿಯರ್ ದರ 5 ರೂ ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ, ಬೆಲೆ ಏರಿಕೆಯು ಬ್ರಾö್ಯಂಡ್ ನಿಂದ ಬ್ರಾö್ಯಂಡ್ ಗೆ ವ್ಯತ್ಯಾಸವಾಗಲಿದೆ,
ಇನ್ನು ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬಿಯರ್ ಮೇಲಿನ ತೆರಿಗೆಯನ್ನು 3 ನೇ ಬಾರಿಗೆ ಏರಿಕೆ ಮಾಡಲಾಗಿದೆ, 2023 ಜುಲೈನಲ್ಲಿ ರಾಜ್ಯ ಸರ್ಕಾರವು ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ. 175 ರಿಂದ ಶೇ. 185 ಕ್ಕೆ ಹೆಚ್ಚಿಸಿತ್ತು ಇದಾದ ನಂತರ 2025ರ ಜ.20 ರಂದು ಬಜೆಟ್ ಗೂ ಮುನ್ನವೇ ಹೆಚ್ಚುವರಿ ಅಬಕಾರಿ ಸುಂಕ ಪರಿಷ್ಕರಣೆ ಮಾಡಿತ್ತು..